ತೂಗುದೀಪ ಶ್ರೀನಿವಾಸ ಅಂತಿಮ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದೇಕೆ..? ಪತಿಗೋಸ್ಕರ ಕಿಡ್ನಿ ಕೊಟ್ಟ ಮೀನಮ್ಮ
ತೂಗುದೀಪ ಶ್ರೀನಿವಾಸ ಅಂತಿಮ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದೇಕೆ…. ತೂಗುದೀಪ ಶ್ರೀನಿವಾಸ ತಕ್ಷಣವೇ ನಮಗೆ ಅವರ ಅದ್ಭುತವಾದ ನಟನೆಯ ತುಣುಕುಗಳು ಕಣ್ಣ ಮುಂದೆ ಬರುತ್ತದೆ ವಿಲನ್ ಪಾತ್ರದಲ್ಲಿಯೂ ಕೂಡ ಮಿಂಚಿತಂತಹ ನಟ ಮತ್ತೊಂದು ಕಡೆಯಿಂದ ಪೋಷಕ ಪಾತ್ರಗಳಲ್ಲಿ ಕೂಡ ಎಲ್ಲರ ಮನ ಗೆದ್ದಂತಹ ನಟ ಒಂದು ಕಡೆಯಿಂದ ಖಡಕ್ ವಿಲ್ಲನ್ ಮತ್ತೊಂದು ಕಡೆಯಿಂದ ಕ್ಯಾರೆಕ್ಟರ್ ಆರ್ಟಿಸ್ಟ್ ಯಾವುದಕ್ಕೂ ಕೂಡ ನಾನು ಸೈ ಎಂದು ಪ್ರೂ ಮಾಡಿದವರು ತೂಗುದೀಪ ಶ್ರೀನಿವಾಸ ಅವರು.
ನಾನು ಹಿಂದಿನ ವಜ್ರಮುನಿ ಅವರ ಕಥೆಯಲ್ಲಿ ಒಂದು ಮಾತನ್ನು ಹೇಳುತ್ತಾ ಇದ್ದೆ ಇಂದಿನ ವಿಲ್ಲನ್ಗಳು ಎಂದರೆ ಸಿಕ್ಸ್ ಪ್ಯಾಕ್ ಇರಬೇಕು ಮಸಲ್ಸ್ ಬೈಸಿಪ್ಸ್ ಇರಬೇಕು ಎಂದು ಎಲ್ಲಾ ಹೇಳುತ್ತಾ ಇರುತ್ತೇವೆ ಅದೇ ರೀತಿಯ ವಿಲನ್ಗಳಿಗೂ ಎಂಟ್ರಿ ಕೊಡುತ್ತಿದ್ದಾರೆ ಆದರೆ ತೂಗುದೀಪ್ ಶ್ರೀನಿವಾಸ್ ಅವರ ಕಾಲದಿಂದ ಹಿಡಿದು ಬಹುತೇಕ ವೀಲನ್ ಗಳಿಗೆ ಯಾವುದೇ ರೀತಿಯ ಸಿಕ್ಸ್ ಪ್ಯಾಕ್ ಬೈಸಿಪ್ಸ್ ಇರುತ್ತಾ ಇರಲಿಲ್ಲ ಆದರೆ ತಮ್ಮ ಕಣ್ಣುಗಳ ಮೂಲಕ ತಮ್ಮ ನಟನೆಯ ಮೂಲಕ ಎಲ್ಲರನ್ನು ಕೂಡ ಎದುರಿಸುತ್ತಾ ಇದ್ದರೂ.
ಖಡಕ್ ವಿಲನ್ ಎಂದು ಕೂಡ ಕರೆಸಿಕೊಳ್ಳುತ್ತಿದ್ದರು ಆ ಕಾಲದಲ್ಲಿ ವಿಲನ್ಗಳು ಎಂದು ಪಟ್ಟಿ ಮಾಡುತ್ತಾ ಹೋದರೆ ಆ ಸಾಲಿನಲ್ಲಿ ತೂಗುದೀಪ ಶ್ರೀನಿವಾಸ ಅವರು ಕೂಡ ನಿಲ್ಲುತ್ತಾರೆ ಆದರೆ ತೂಗುದೀಪ ಶ್ರೀನಿವಾಸ ಅವರಿಗೆ ವಿಲನ್ ಪಾತ್ರ ಇಷ್ಟವಾಗುತ್ತಾ ಇರಲಿಲ್ಲವಂತೆ ನಾನು ಒಬ್ಬ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟನೆಯನ್ನು ಮಾಡಬೇಕು ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಹೀರೋಯಿನ್ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಲ್ಲ ಅಂತಹ ಪಾತ್ರದಲ್ಲಿ ತಾನು ಕಾಣಿಸಿಕೊಳ್ಳಬೇಕು ಎಂದು ಬಹಳ ಇಷ್ಟಪಡುತ್ತಾ ಇದ್ದರಂತೆ.
ಆದರೆ ಜನ ಮಾತ್ರ ಅವರನ್ನು ವಿಲನ್ ಆಗಿ ಇಷ್ಟಪಟ್ಟ ಕಾರಣದಿಂದಾಗಿ ಅವರಿಗೆ ಹೆಚ್ಚು ಹೆಚ್ಚಾಗಿ ಖಳನಾಯಕನ ಪಾತ್ರಗಳು ಸಿಗುತ್ತಾ ಇತ್ತು ಇನ್ನು ತೂಗುದೀಪ ಶ್ರೀನಿವಾಸ ಅಷ್ಟು ದೊಡ್ಡ ನಟನಾದರೂ ಕೂಡ ಅವರ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಡುವುದಕ್ಕೆ ದರ್ಶನ್ ಆಗಿರಬಹುದು ಮತ್ತೊಂದು ಕಡೆಯಿಂದ ದಿನಕರ್ ಆಗಿರಬಹುದು ಯಾವ ಕಾರಣಕ್ಕಾಗಿ ಅಷ್ಟೊಂದು ಕಷ್ಟಪಡುವ ಪರಿಸ್ಥಿತಿ ಎದುರಾಯಿತು.
ನಟ ದರ್ಶನ್ ಅವರು ಹಾಲು ಮಾರಿ ಆರಂಭದ ದಿನಗಳಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಯಾಕೆ ಅವರಿಗೆ ಎದುರಾಯಿತು ತೂಗುದೀಪ ಶ್ರೀನಿವಾಸ್ ಅವರು ಕೊನೆಗಾಲದಲ್ಲಿ ಎದುರಿಸಿದ ಕಷ್ಟಗಳೇನು ಅವೆಲ್ಲವನ್ನು ಈಗ ಇವತ್ತಿನ ಕಥೆಯಲ್ಲಿ ನೋಡುತ್ತಾ ಹೋಗೋಣ. ತೂಗುದೀಪ ಶ್ರೀನಿವಾಸ ಅವರು ಮೂಲತಃ ಮೈಸೂರಿನವರು ಅಪ್ಪಟ ಕನ್ನಡದ ಕುಟುಂಬದವರೇ ಅವರು ನಾಯ್ಡು ಆದರೂ ಕೂಡ ಅಪ್ಪಟ ಕನ್ನಡ ಮಾತನಾಡುವ ಕುಟುಂಬದಲ್ಲಿ ಅವರು ಜನಿಸಿದ್ದು.
1943ರಲ್ಲಿ ಅವರು ಜನಿಸುತ್ತಾರೆ ತುಂಬಾ ಚಿಕ್ಕವಯಸ್ಸಿನಲ್ಲಿ ಅವರು ತಂದೆ ತಾಯಿ ಇಬ್ಬರನ್ನು ಕಳೆದುಕೊಳ್ಳುತ್ತಾರೆ ಹೀಗಾಗಿ ಬಹಳ ಕಷ್ಟದಲ್ಲಿ ಅವರು ಬೆಳೆಯುವಂತಹ ಪರಿಸ್ಥಿತಿ ಕೂಡ ಎದುರಾಗುತ್ತದೆ ಆ ಬಾಲ್ಯದ ದಿನಗಳಲ್ಲಿ ಅಲ್ಲಿ ಇಲ್ಲಿ ಎಂದು ಒಂದಷ್ಟು ಸಣ್ಣಪುಟ್ಟ ಕೆಲಸಗಳನ್ನು ಕೂಡ ಮಾಡುತ್ತಾ ಇದ್ದಾರಂತೆ ಒಂದು ಕಡೆಯಿಂದ ವಿದ್ಯಾಭ್ಯಾಸ ಮತ್ತೊಂದು ಕಡೆಯಿಂದ ಇಂತಹ ಸಣ್ಣಪುಟ್ಟ ಕೆಲಸಗಳನ್ನು ಕೂಡ ಮಾಡುತ್ತಾ ಇದ್ದಾರಂತೆ.
ಅವರಿಗೆ ನಾಟಕದ ಕಡೆ ವಿಪರೀತವಾದಂತಹ ಆಸಕ್ತಿ ಬಾಲ್ಯದಿಂದಲೂ ಕೂಡ ಈ ರಂಗಭೂಮಿ, ನಾಟಕ ಈ ಕಡೆಗೆ ಅವರ ಹೊಲವು ಹೆಚ್ಚಾಗಿ ಎಳೆಯುತ್ತಾ ಇತ್ತಂತೆ, ಅದರಲ್ಲಿಯೂ ಹಳೆ ಮೈಸೂರಿನ ಭಾಗದಲ್ಲಿ ಪ್ರಮುಖವಾಗಿ ಮೈಸೂರಿನ ಭಾಗದಲ್ಲಿ ಎಲ್ಲರಿಗೂ ಕೂಡ ಈ ನಾಟಕ ಕುರಿತಾಗಿ ಸಿನಿಮಾಗಳ ಕುರಿತಾಗಿ ವಿಶೇಷವಾದಂತಹ ಸೆಳೆತ ಇದ್ದೇ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.