ಕಣ್ಣಲ್ಲೆ ಎಲ್ಲರ ಮನ ಗೆಲ್ಲುವ ಈ ಗೋಪಾಲ ಕೃಷ್ಣ ದೇಶ್ ಪಾಂಡೆ ಅವರ ಬ್ಯಾಕ್ ಗ್ರೌಂಡ್ ಏನು ಗೊತ್ತಾ ?

ಸಾಗರ ತಾಲೂಕಿನ ಜನಪ್ರಿಯ ನಾಟಕ ಶಾಲೆಯಾದಂತಹ ನೀನಾಸಂ ಸಮುದಾಯದಲ್ಲಿ‌ ತರಬೇತಿ ಪಡೆದು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಂತಹ ಹಲವು ಮೇರು ಕಲಾವಿದರಿದ್ದಾರೆ ದೇಶದಲ್ಲಿ ಅತ್ಯತ್ತಮ ನಾಟಕ ತಂಡ ಎನಿಸುಕೊಂಡಂತಹ ನೀಲಕಂಠೇಶ್ವರ ನಾಟಕ ಸಂಘ ಕನ್ನಡ ಸಿನಿ ರಂಗಕ್ಕೆ ಅದ್ಭುತವಾದ ಕಲಾವಿದರನ್ನು ಕೊಟ್ಟಿದೆ ಇವರ ಪೈಕಿ ಕನ್ನಡದ ಗೋಪಾಲಕೃಷ್ಣ ದೇಶಪಾಂಡೆ ಒಬ್ಬರು ಕಳೆದ ಏಳೆಂಟು ವರ್ಷಗಳಿಗೂ ಹೆಚ್ಚು ದಿನಗಳ ಕಾಲ ಮುಖ್ಯ ಹಾಗೂ ಗಂಭೀರ ಪಾತ್ರಗಳನ್ನು ನೀಡುತ್ತಾ ಪ್ರಮುಖ ಪೋಷಕನಾಗಿ ಇತ್ತೀಚಿನ ದಿನಗಳಲ್ಲಿ ಗರುಡಗಮನ ವೃಷಭವಾಗಿ ಹಾಗೂ ಟೋನಿ ಹಾಗೂ ಶಾಖಾಹಾರಿ ಚಿತ್ರಗಳು ಹೆಚ್ಚು ಸದ್ದನ್ನು ಮಾಡಿತು.

WhatsApp Group Join Now
Telegram Group Join Now

ಉತ್ತರ ಕರ್ನಾಟಕದವರಾದ ದೇಶಪಾಂಡೆ ಸಿನಿಮಾರಂಗಕ್ಕೆ ಬಂದಿದ್ದು ಬಹಳ ಆಕಸ್ಮಿಕವೆಂದೆ ಹೇಳಬಹುದು ಇವರ ತಂದೆಯು ಕೂಡ ಕಲಾವಿದರೇ ಉತ್ತರ ಕರ್ನಾಟಕ ಜನರು ಸಿನಿಮಾರಂಗವನ್ನು ಅಷ್ಟು ಖುಷಿಪಡುವುದಿಲ್ಲ ಅವರ ಕಡೆ ದೊಡ್ಡಾಟ ಹಾಗೂ ಬಯಲಾಟಗಳ ಹವಾ ಕೆಳಮಟ್ಟದ ಜನರು ಬಣ್ಣ ಹಚ್ಚುವುದು ಅಲ್ಲೆಲ್ಲ ವಾಡಿಕೆ ಎಂದು ಇತ್ತು ಹೀಗಿದ್ದರೂ ಸಹ ದೇಶಪಾಂಡೆ ಎಲ್ಲಾ ಕ್ರಾಂತಿಯ ಕಟ್ಟುಪಾಡುಗಳನ್ನು ದಾಟಿ ಸಿನಿಮಾರಂಗಕ್ಕೆ ಬಂದರು ಇದೀಗ ಕನ್ನಡ ನಟರುಗಳಲ್ಲಿ ಲೀಡಿಂಗ್ ಪೋಸ್ಟಿನಲ್ಲಿ ದೇಶಪಾಂಡೆ ಅವರಿದ್ದಾರೆ

ಇತ್ತೀಚಿಗೆ ಬಂದಂತಹ ಶಾಖಹಾರಿ ಸಿನಿಮಾದಲ್ಲಿ ರಂಗಾಯಣ ರಘು ಜೊತೆ ಸಿನಿಮಾ ಮಾಡಿದ್ದು ಇವರಿಬ್ಬರ ಜೊತೆಗೂಡಿಕೆಯ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ ಯಾರು ಈ ದೇಶಪಾಂಡೆ ಇವರ ಹಿನ್ನೆಲೆ ಏನು, ಯಾವುದೇ ಪಾತ್ರವನ್ನು ನೀಡಿದರು ಸಹ ನೀಲಾಜಾಲವಾಗಿ ನಿರ್ವಹಿಸುತ್ತಾರೆ ಹಾಗಾದರೆ ಇವರ ಪೂರ್ತಿ ವಿವರವನ್ನ ಇವತ್ತು ನಾವು ನಿಮಗೆ ತಿಳಿಸಿಕೊಡ್ತೀವಿ.

ನಟ ದೇಶಪಾಂಡೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯವರು ಇಲ್ಲಿ ಹೊನಗುಂಡ ಅವರ ಜನ್ಮಸ್ಥಳ ಮಧ್ಯಮ ಕುಟುಂಬದಲ್ಲಿ ಜನಿಸಿದ ಇವರು ಎಸ್ ವಿ ಎಂ ವಿದ್ಯಾ ಕೇಂದ್ರದಲ್ಲಿ 12ನೇ ತರಗತಿಯವರೆಗೆ ವ್ಯಾಸಂಗವನ್ನು ಮುಗಿಸಿದರು ಮುಂದೆ ಪದವಿಗಾಗಿ ಬಾಗಲು ಕೋಟೆ ಟೌನ್ ಗೆ ಬರುತ್ತಾರೆ ಅಲ್ಲಿ ಯಾರದ್ದೋ ಬಲವಂತಕ್ಕೆ ಪಿಸಿಎಂ ಕೋರ್ಸನ್ನು ಆರಿಸಿಕೊಳ್ಳುತ್ತಾರೆ ಮೊದಲಿನಿಂದಲೂ ಕೂಡ ಕಲೆ ಸಾಹಿತ್ಯ ನಟನೆ ಇಂತಹ ವಿಷಯಗಳಲ್ಲಿ ಆಸಕ್ತಿ ಹೊಂದಿದಂತಹ ದೇಶಪಾಂಡೆ ಅವರಿಗೆ ಪದವಿಯ ಸೈನ್ಸ್ ಒಪ್ಪಿ ಬರಲಿಲ್ಲ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಊರಿನಲ್ಲಿ ವಾಸವಿ, ಗುರುಸಿದ್ದೇಶ್ವರ, ಕೃಷ್ಣ, ಟಾಕೀಸ್ ಗಳಲ್ಲಿ ಯಾವುದೇ ಹೊಸ ಚಿತ್ರ ಬಿಡುಗಡೆಯಾದರೂ ಸಹ ಇವರು ಹಾಜರಾಗಿ ಸ್ನೇಹಿತರ ಜೊತೆ ಸಿನಿಮಾ ವೀಕ್ಷಣೆಯಲ್ಲಿ ಕಾಲವನ್ನು ಕಳೆದು ಬಿಡುತ್ತಿದ್ದರು ಒಂದು ರೀತಿ ಇವರು ತರಗತಿಯ ಕಡೆ ಹೋಗಿದ್ದಕ್ಕಿಂತ ಟಾಕೀಸ್ ಕಡೆ ಹೆಚ್ಚು ಹೋಗಿದ್ದರು ಎಂದು ಹೇಳಬಹುದು ಹಾಗೆಲ್ಲ ಆ ಜಾಗದಲ್ಲಿ ಕನ್ನಡಕ್ಕಿಂತ ಹಿಂದಿ ಸಿನಿಮಾಗಳೇ ಹೆಚ್ಚಾಗಿ ಬರುತ್ತಿದ್ದವು ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದ ದೇಶಪಾಂಡೆಯವರು ಅವರ ನಟನೆಯನ್ನು ಅಭಿನಂದಿಸುತಿದ್ದರು.

ದೇಶಪಾಂಡೆಯವರಿಗೆ ಎಷ್ಟೇ ಸಿನಿಮಾ ಹುಚ್ಚಿದ್ದರು ತಾವು ನಟರಾಗಬೇಕು ಎಂಬ ಯಾವುದೇ ಇಚ್ಚೆ ಇರಲಿಲ್ಲ 2005ರಲ್ಲಿ ಇವರಿಗೆ ಓದಿನ ಕಡೆ ಆಸಕ್ತಿ ಸಂಪೂರ್ಣವಾಗಿ ಕಡಿಮೆಯಾಗಿತ್ತು ಮನೆಯಲ್ಲೇ ಇದ್ದರೆ ಹಿರಿಯರಿಂದ ಬೈಗುಳವನ್ನು ಕೇಳಬೇಕು ಎಂದು ಸಾಗರದ ನೀನಾಸಂ ಕಡೆಗೆ ಹೆಜ್ಜೆ ಹಾಕಿದರು, ಯಾರಾದರೂ ಓದು ಅಥವಾ ದುಡಿಮೆಯನ್ನು ಬಿಟ್ಟು ನಾಟಕದ ಕಡೆ ಹೆಜ್ಜೆ ಹಾಕಿದರೆ ಅವರು ದಡ್ಡರು ಜೀವನದಲ್ಲಿ ಏನನ್ನು ಸಾಧನೆ ಮಾಡೋದಕ್ಕೆ ಸಾಧ್ಯವಿಲ್ಲದವರು ಕೊನೆಯದಾಗಿ ಬಣ್ಣ ಬಳೆದುಕೊಂಡು ಜೀವನ ನಡೆಸುತ್ತಾರೆ ಎಂಬ ಧೋರಣೆ ಇವತ್ತಿಗೂ ಕೂಡ ಉತ್ತರ ಕರ್ನಾಟಕದಲ್ಲಿ ಇದೆ

ಈ ರೀತಿಯ ಪರಿಸ್ಥಿತಿ ಇದ್ದರೂ ಕೂಡ ದೇಶಪಾಂಡೆ ಅವರು ನೀನಾಸಂ ಆಹ್ವಾನ ಪತ್ರವನ್ನು ನೋಡಿ ಒಂದು ಸಲ ಭೇಟಿ ಮಾಡಲು ಅಲ್ಲಿಗೆ ಹೋಗುತ್ತಾರೆ. ನೀನಾಸಂ ನಲ್ಲಿ ಶಿಸ್ತು ಬದ್ಧವಾದ ಬದುಕನ್ನು ಕಟ್ಟಿಕೊಳ್ಳುವಂತಹ ಜಾಗವಾಗಿರುತ್ತದೆ ಇಲ್ಲಿ ಬರಿ ಅಭಿನಯ ನಾಟಕ ಮಾತ್ರವಲ್ಲದೆ ಅವರು ಜೀವನದಲ್ಲಿ ಎಷ್ಟು ಶಿಸ್ತು ಬದ್ಧರಾಗಿರಬೇಕು ಎಂಬ ಪಾಠವನ್ನು ಸಹ ಕಲಿಸುತ್ತದೆ ನೀನಾಸಂ ಶಿಸ್ತಿಗೆ ಹೆಸರುವಾಸಿಯಾದಂತಹ ಶಾಲೆ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ನೀನಾಸಂನಲ್ಲಿ ಬೆಳಿಗ್ಗೆ ಆರು ಗಂಟೆಗೆ ದಿನಾಚರಣೆ ಶುರುವಾಗುತ್ತದೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕ್ರಮಕ್ಕಾಗಿ ಹಾಗೂ ಸದೃಢ ಕಲಿಕೆಗೆ ಬೇಕಾದಂತಹ ಕಲಿಕೆಯನ್ನು ಒದಗಿಸುತ್ತದೆ ಬೆಳಿಗ್ಗೆ 9:00ಯಿಂದ 10 ಗಂಟೆಯ ಒಳಗೆ ಬೆಳಗಿನ ತಿಂಡಿಯ ಸಮಯ 10 ಗಂಟೆಯ ಒಳಗೆ ತಮ್ಮ ದಿನಚರಿ ಕೆಲಸಗಳನ್ನು ಮುಗಿಸಿ ಸ್ನಾನ ಮುಗಿಸಿ ಶುದ್ಧವಾದ ಬಟ್ಟೆಯನ್ನು ಧರಿಸಿ ತಿಂಡಿ ತಿನಿಸನ್ನ ಮುಗಿಸಿ 10 ಗಂಟೆಗೆ ಕಲಿಕೆಗೆ ರೆಡಿಯಾಗಬೇಕಾಗಿತ್ತು ಅಲ್ಲಿಂದ ನಟನ ತರಬೇತಿ ಶುರುವಾಗುತ್ತದೆ ಅಲ್ಲಿಂದ ಶುರುವಾಗಿ ರಾತ್ರಿ 12 ಗಂಟೆಯವರೆಗೆ ಶಾಲಾ ತರಬೇತಿ ಇರುತ್ತದೆ ಇದು ಹೊಸಬರಿಗೆ ಹಿಂಸೆ ಎನಿಸಿದರು ಕೂಡ ಸೃಜನಾತ್ಮಕ ಕಲಾವಿದರನ್ನು ದಿನೇ ದಿನೇ ರೂಪಿಸುವುದಕ್ಕೆ ಸಹಾಯಮಾಡುತ್ತದೆ.

ತರಬೇತಿಯ ಒಂದು ಹಂತವನ್ನು ದಾಟಿದವರನ್ನ ಕಂಪನಿ ನಾಟಕಗಳಿಗೆ ಬಳಸಿಕೊಳ್ಳುತ್ತದೆ ಗಾಯನ ನಟನೆ ಭಾವವಿನಯ ಮೂಕನಟನೆ ನಟನೆಯ ಎಲ್ಲಾ ಆಯಾಮಗಳಲ್ಲೂ ಕೂಡ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಇಲಿ ಸಿಗುತ್ತದೆ ದೇಶಪಾಂಡೆ ಯಾವುದೇ ಸಿದ್ಧತೆ ಇಲ್ಲದೆ ಯಾವುದೋ ಒಂದು ಒತ್ತಡದಿಂದ ಪಾರಾಗಲು ಮಾತ್ರ ಬಂದಿದ್ದರು ಆರಂಭದಲ್ಲಿ ಅವರಿಗೂ ಸಹ ಸಾಕಷ್ಟು ಕಿರಿಕಿರಿಯಾಗಿತ್ತು ಕ್ರಮೇಣ ಕಂಪನಿಯ ನಾಟಕಗಳಲ್ಲಿ ಪಳಗಿದರು ಅಭಿನಯವನ್ನ ಮೈಗೂಡಿಸಿಕೊಂಡಿದ್ದರು ಅಲ್ಲಿ ಕಳೆದ ಒಂದು ವರ್ಷ ನಟನ ವೃತ್ತಿಗೆ ಭದ್ರತಾ ಹಾದಿಯನ್ನ ಒದಗಿಸಿತ್ತು ಈ ಒಂದು ವರ್ಷದಲ್ಲಿ ಅಲ್ಲಿ ಹೆಚ್ಚು ಅಂದರೆ 15ರಿಂದ 20 ದಿನ ಮಾತ್ರ ರಜೆ ಸಿಗುತ್ತದೆ.

See also  ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..

ಒಂದು ವರ್ಷದ ತರಬೇತಿಯ ನಂತರ ದೇಶಪಾಂಡೆ ಅವರು ಅವರ ಜೊತೆ ಬೆಂಗಳೂರಿಗೆ ಬಂದರು ಬೆಂಗಳೂರು ಅವರಿಗೆ ಹೊಸದಾಗಿತ್ತು ಇಲ್ಲಿ ಯಾರು ಸಹ ಅವರಿಗೆ ಪರಿಚಯದವರು ಇರಲಿಲ್ಲ ದೇಶಪಾಂಡೆ ಅವರ ಜೊತೆ ಬಂದಿದವರೆಲ್ಲ ಒಂದೊಂದು ದಿಕ್ಕು ಹೊರಟಾಗ ಇವರು ಒಬ್ಬರೇ ಆಗುತ್ತಾರೆ ಒಬ್ಬರೇ ಯೋಚಿಸುತ್ತಾ ಕುಳಿತಾಗ ಅವರಿಗೆ ಕಿರುತೆರೆಯಲ್ಲಿ ಪಾತ್ರ ನಿರ್ವಹಿಸಲು ಅವಕಾಶ ಸಿಗುತ್ತದೆ ತಿಕ್ಕ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಂಡು ಮುಂದುವರೆಯುತ್ತಾರೆ ಸಾಮಾನ್ಯವಾಗಿ ಅನೇಕರು ನಾಟಕ ಶಾಲೆಯಲ್ಲಿ ತರಬೇತಿ ಪಡೆದ ನಂತರ ರಂಗಭೂಮಿಗೆ ಇಳಿಯುತ್ತಾರೆ.

ದೇಶಪಾಂಡೆ ಅವರು ಒಂದು ವರ್ಷದ ತರಬೇತಿಯ ನಂತರ ಕಿರುತರೆಯಲ್ಲಿ ನಟಿಸಿಸಲು ಮುಂದಾಗುತ್ತಾರೆ ಕೆಲವು ಧಾರಾವಾಹಿಗಳಲ್ಲಿ ಅವರಿಗೆ ಪೋಷಕನ ಪಾತ್ರ ಸಿಗುತ್ತದೆ ಆ ಬಳಿಕ ಸಿನಿಮಾ ಅವಕಾಶಗಳು ಸಹ ಸಿಗುತ್ತದೆ ಉಳಿದವರು ಕಂಡಂತೆ, ಚಾರ್ಲಿ 777, ಅವನೇ ಶ್ರೀಮನ್ ನಾರಾಯಣ, ಟೋಬಿ, ಶಾಕಹಾರಿ ಯುವ ಹೀಗೆ ಅನೇಕ ಚಿತ್ರಗಳಲ್ಲಿ ವಿಶೇಷ ಹಾಗೂ ಗಂಭೀರ ನಟನೆಯನ್ನು ಮಾಡಿದ್ದಾರೆ ಹೀಗೆ ಅವರ ಜೀವನ ನೀನಾಸಂ ಶಾಲೆಯಿಂದ ಶುರುವಾಗಿ ರಂಗಭೂಮಿಯಲ್ಲಿ ಹೆಚ್ಚಿನ ಹೆಸರನ್ನು ಮಾಡಿದ್ದಾರೆ.crossorigin="anonymous">