ಜಮೀರ್ ರಿಯಲ್ ಲೈಫ್ ಸ್ಟೋರಿ…ಬಕ್ರೀದ್ ಗೆ ಹೆಚ್ ಡಿ ಕೆ ಬರಲಿಲ್ಲ ಅಂತ ಮಾಡಿದ್ದೇನು ಗೊತ್ತಾ ? ದರ್ಶನ್ ಗೆ ಯಾವ ರೀತಿ ಗೆಳೆತನ ನೋಡಿ
ಬಿ ಝೆಡ್ ಜಮೀರ್ ಅಹಮದ್ ಖಾನ್ ರಾಜ್ಯದ ಪ್ರಸಿದ್ಧ ಮುಸ್ಲಿಂ ರಾಜಕಾರಣಿ. ಸಿದ್ದರಾಮಯ್ಯರ ಆಪ್ತ,ಇಂಥ ಜಮೀರ್ ಅಹಮದ್ ಖಾನ್ ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ? ಇವರ ಜೀವನದ ಹಾದಿ ಹೇಗಿದೆ? ರಾಜಕೀಯಕ್ಕೆ ಬರೋಕು ಮೊದಲು ಏನು ಮಾಡ್ತಿದ್ರು? ಪತ್ನಿ ಯಾರು? ಮಕ್ಕಳೆಷ್ಟು? ಎಲ್ಲವನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ.
ಜಮೀರ್ ಅಹಮದ್ ಖಾನ್ ಹುಟ್ಟಿದ್ದು 1966ರ ಆಗಸ್ಟ್ ಒಂದನೇ ತಾರೀಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 19 ವರ್ಷಗಳ ಬಳಿಕ ತುಮಕೂರಿನ ಕುಣಿಗಲ್ನಲ್ಲಿ, ತಂದೆ ಜಿಯಾ ಉಲ್ಲಾ ಖಾನ್ ನ್ಯಾಷನಲ್ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ಕಂಪನಿಯ ಓನರ್ ಆಗಿದ್ದರು, ತಾಯಿ ಸುಗ್ರಾ ಖಾನ್ ಇವರದ್ದು ಮುಸ್ಲಿಂ ಸಮುದಾಯ.
ಹುಟ್ಟೂರಿನಲ್ಲಿ ಆರಂಭಿಕ ಶಿಕ್ಷಣ ಎಸ್ಎಸ್ಎಲ್ಸಿ ಯಲ್ಲಿ ಶಾಲೆ ಬಿಟ್ಟ ಬಾಲಕ ಜಮೀರ್ ಅಹಮದ್ ಖಾನ್ ಆರಂಭಿಕ ಶಿಕ್ಷಣ ಪಡೆದಿದ್ದೆಲ್ಲ ತುಮಕೂರಿನಲ್ಲಿ. ಕುಣಿಗಲ್ನ ಸಿದ್ದಾರ್ಥ ಹೈ ಸ್ಕೂಲ್ನಲ್ಲಿ ಒಂಬತ್ತನೇ ಕ್ಲಾಸ್ ವರೆಗೆ ಓದಿ ಎಸ್ಎಸ್ಎಲ್ಸಿ ಯಲ್ಲಿ ಶಾಲೆ ಬಿಟ್ಟರು, ನಂತರ ತಂದೆ ಜೊತೆ ಟ್ರಾವೆಲ್ ಬಿಸಿನೆಸ್ ಗೆ ಇಳಿದು ತುಮಕೂರಿನಿಂದ ಬೆಂಗಳೂರಿಗೆ ಶಿಫ್ಟ್ ಆದ್ರೂ.
ಡಾನ್ ರಾಜಕಾರಣಿಗಳ ಜೊತೆ ಲಿಂಕ್ ಬೆಂಗಳೂರಿಗೆ ಬಂದ ಸಮೀರ್ ಅಹಮದ್ ಖಾನ್ ನಿಧಾನಕ್ಕೆ ಪಾದರಾಯನಪುರ ಗೋರಿಪಾಳ್ಯ ಮತ್ತು ಜೆ ಜೆ ನಗರದಲ್ಲಿ ಸಕ್ರಿಯರಾಗಿದ್ದ ಡಾನ್ ಗಳು ಮತ್ತು ಸ್ಥಳೀಯ ರಾಜಕಾರಣಿಗಳ ಸಂಪರ್ಕಕ್ಕೆ ಬಂದರು. ಅವರಲ್ಲಿ ಅಂದಿನ ಜೆಡಿಎಸ್ ನಾಯಕ ಆರಿಫ್ ಪಾಶಾ ಕೂಡ ಒಬ್ಬರು ಇವರು ಇಮ್ರಾನ್ ಪಾಶಾ ತಂದೆ 2004ರ ವಿಧಾನಸಭೆ ಚುನಾವಣೆ ಟೈಮಲ್ಲಿ ಇಬ್ಬರನ್ನ ಹತ್ಯೆ ಮಾಡಿದ ಆರೋಪ ಸೇರಿದಂತೆ ಹಲವು ಆರೋಪಗಳು ಆರಿಫ್ ಪಾಶಾ ಮತ್ತು ಮಗ ಇಮ್ರಾನ್ ಪಾಶಾ ಮೇಲಿತ್ತು.
2005 ಚಾಮರಾಜಪೇಟೆ ಬೈ ಎಲೆಕ್ಷನ್ ಜೆಡಿಎಸ್ ನಿಂದ ಟಿಕೆಟ್ ಪಡೆದು ಜಯಭೇರಿ ಅದು 2004-5ರ ಸಮಯ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಮಾಜಿ ಸಿಎಂ ಎಸ್ ಎಂ ಕೃಷ್ಣರನ್ನ ಮಹಾರಾಷ್ಟ್ರ ಗವರ್ನರ್ ಆಗಿ ನೇಮಿಸಿತು. ಕೇಂದ್ರ ಸರ್ಕಾರ ಇದರ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ಎಸ್ ಎಂ ಕೆ ರಾಜೀನಾಮೆ ಕೊಟ್ಟಿದ್ದರಿಂದ ಚಾಮರಾಜಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ನಡೀತು. ಆಗ ಜೆಡಿಎಸ್ ಅಭ್ಯರ್ಥಿಯಾಗಿ ಜಮೀರ್ ಅಹಮದ್ ಖಾನ್ರನ್ನ ಆಯ್ಕೆ ಮಾಡಿದ್ರು ದೇವೇಗೌಡರು,
ಜೊತೆಗೆ ಭರ್ಜರಿ ಪ್ರಚಾರ ಮಾಡಿದ್ರು ಇದೆಲ್ಲದರ ಪರಿಣಾಮ ಎಂಬಂತೆ ಮೊದಲ ಎಲೆಕ್ಷನ್ ನಲ್ಲೇ ಗೆದ್ದು ಬೀಗಿದ ಜಮೀರ್.
ತಮ್ಮ 39ನೇ ವಯಸ್ಸಲ್ಲಿ ಎಂಎಲ್ಎ ಆಗಿ ವಿಧಾನಸಭೆ ಪ್ರವೇಶಿಸಿದರು 2006 ರಲ್ಲಿ ರಾಜಕೀಯ ಕ್ಷಿಪ್ರ ಕ್ರಾಂತಿ ಹೆಚ್ ಡಿಕೆ ಸರ್ಕಾರದಲ್ಲಿ ಸಿಕ್ತು ಮಂತ್ರಿಗಿರಿ 2006 ರಲ್ಲಿ ರಾಜಕೀಯ ಕ್ಷಿಪ್ರ ಕ್ರಾಂತಿ ನಡೆಸಿದ ಹೆಚ್ ಡಿ ಕುಮಾರಸ್ವಾಮಿ ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನ ಪತನಗೊಳಿಸಿದರು.
ಆ ಟೈಮಲ್ಲಿ ಹೆಚ್ ಡಿಕೆ ಗೆ ಬೆಂಬಲವಾಗಿ ನಿಂತು 42 ಶಾಸಕರು ರನ್ನ ಬಸ್ನಲ್ಲಿ ರೆಸಾರ್ಟ್ ಗೆ ಕರ್ಕೊಂಡು ಹೋಗಿದ್ದೆ ಜಮೀರ್ ಅಹಮದ್ ಖಾನ್. ಇದಕ್ಕೆ ಪ್ರತಿಫಲ ಎಂಬಂತೆ ನಂತರ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಿಜೆಪಿ 2020 ಸರ್ಕಾರದಲ್ಲಿ ಮಂತ್ರಿಗಿರಿ ಸಿಕ್ತು.
ಹಜ್ ಮತ್ತು ವಕ್ಫ್ ಬೋರ್ಡ್ ಸಚಿವರಾದರು ಜಮೀರ್ ಈ ಮೂಲಕ ಮೊದಲ ಬಾರಿ ಎಂಎಲ್ಎ ಆದಾಗಲೇ ಮಿನಿಸ್ಟರ್ ಪಟ್ಟ ಅಲಂಕರಿಸಿಕೊಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರೆನಿಸಿಕೊಂಡರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ