ಮಾರ್ವಾಡಿಗಳನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ ಹತ್ತು ವಿಭಿನ್ನ ಹಾಗೂ ದೊಡ್ಡ ರಹಸ್ಯಗಳು ಇಲ್ಲಿವೆ ನೋಡಿ…
ಮಾರ್ವಾಡಿಗಳನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ 10 ರಹಸ್ಯಗಳು… ಈಗ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಎಲ್ಲಿಯಾದರೂ ಎರಡು ಅಥವಾ ಮೂರು ಬಿಲ್ಡಿಂಗ್ ಕಟ್ಟಲು ಪ್ರಾರಂಭಿಸಿದರೆ ತಕ್ಷಣ ಅಲ್ಲಿ ಒಂದು ಮಾರ್ವಾಡಿ ಅಂಗಡಿ ಕೂಡ ಬರುತ್ತದೆ ಅಂದರೆ ಅಲ್ಲಿ ಒಂದು ಕಾಲೋನಿ ಆ ಪ್ರದೇಶ ಅಭಿವೃದ್ಧಿ ಆಗುತ್ತಿದೆ ಎಂದು ಅವರು ಮೊದಲೇ ಕಂಡುಹಿಡಿಯುತ್ತಾರೆ.
ಈ ರೀತಿ ಆ ಪ್ರದೇಶ ಅಭಿವೃದ್ಧಿಯಾಗಲು ಶುರುವಾದ ತಕ್ಷಣ ಅಲ್ಲಿ ರೇಷನ್ ಅಂಗಡಿ ಹಾರ್ಡ್ವೇರ್ ಅಂಗಡಿ ಪೇಂಟಿಂಗ್ ಅಂಗಡಿ ಎಲೆಕ್ಟ್ರಿಕ್ ಅಂಗಡಿ ಕೂಡ ಬಂದು ಬಿಡುತ್ತದೆ ಇವರಿಗೆ ಸರಿಯಾಗಿ ವಿದ್ಯಾಭ್ಯಾಸವೇ ಇರುವುದಿಲ್ಲ ಆದರೂ ಸರಿಯಾಗಿ ಮಾರುಕಟ್ಟೆಯ ಬಗ್ಗೆ ರಿಸರ್ಚ್ ಮಾಡುತ್ತಾರೆ ಅಂದರೆ ಅವರು ಮಾಡಿರುವಂತಹ ಹೂಡಿಕೆಗೆ ಎಷ್ಟು ಲಾಭ ಬರುತ್ತದೆ ಎಂದು ಮೊದಲೇ ರಿಸರ್ಚ್ ಮಾಡುತ್ತಾರೆ ಈ ರೀತಿ ಇವರ ವ್ಯಾಪಾರವನ್ನು ಕೂಡ ವಿಸ್ತರಣೆ ಮಾಡುತ್ತಾರೆ.
ಈ ರೀತಿ ಸಣ್ಣ ವ್ಯಾಪಾರದಿಂದ ಹಿಡಿದು ದೊಡ್ಡ ವ್ಯಾಪಾರಗಳವರೆಗೆ ನಮ್ಮ ದೇಶದಲ್ಲಿ ಸಕ್ಸಸ್ ಆದ ವ್ಯಾಪಾರಿಗಳಲ್ಲಿ ಮಾರ್ವಾಡಿಗಳೆ ಹೆಚ್ಚಾಗಿ ಕಾಣಿಸುತ್ತಾರೆ ನಮ್ಮೆಲ್ಲರಿಗೂ ಗೊತ್ತಿರುವ ರೀತಿ ರೇಷನ್ ಅಂಗಡಿ ಹಾರ್ಡ್ವೇರ್ ಅಂಗಡಿ ಎಲೆಕ್ಟ್ರಿಕ್ ಅಂಗಡಿ ಚಿನ್ನದ ಅಂಗಡಿ ಈ ರೀತಿಯ ತುಂಬಾ ವ್ಯಾಪಾರಗಳನ್ನೆಲ್ಲ ಇವರೇ ಮಾಡುತ್ತಾರೆ.
ಈ ರೀತಿ ಇವರ ವ್ಯಾಪಾರದ ರಹಸ್ಯದ ಬಗ್ಗೆ ಹಾಗೂ ಇವರ ಸಕ್ಸಸ್ ಬಗ್ಗೆ ಹತ್ತು ಆಸಕ್ತಿಕರ ವಿಷಯಗಳನ್ನು ಈಗ ನಾವು ತಿಳಿತಾ ಹೋಗೋಣ. ಅಕೌಂಟಿಂಗ್ ಇವರ ಅಕೌಂಟ್ ಎಷ್ಟು ಕ್ಲಿಯರ್ ಆಗಿರುತ್ತದೆ ಎಂದರೆ ಇದರ ಬಗ್ಗೆ ಒಂದು ಗಾದೆ ಕೂಡ ಇದೆ ಅದೇ ಚರ್ಮ ಸುಲಿದರು ಒಂದು ನಯಾಪೈಸ ಕೂಡ ಕಳೆದುಕೊಳ್ಳುವುದಿಲ್ಲ ಎಂದು ಅರ್ಧ ರಾತ್ರಿ ಒಂದು ಗಂಟೆ ಆದರೂ ಸರಿ ಆ ದಿನದ ಪ್ರತಿ ಖರ್ಚು ವೆಚ್ಚಗಳನ್ನು ಅಕೌಂಟ್ ಬುಕ್ಕಿನಲ್ಲಿ ಬರೆಯುತ್ತಾರೆ ಆ ದಿನ ಎಷ್ಟು ಸೆಲಾಯಿತು,
ಎಷ್ಟು ಲಾಭ ಬಂತು ಎಷ್ಟು ನಷ್ಟವಾಯಿತು ಎಂಬ ಲೆಕ್ಕಗಳನ್ನು ಹಾಕಿಕೊಂಡು ಆ ದಿನಕ್ಕೆ ಸಂಬಂಧಪಟ್ಟಂತಹ ಬ್ಯಾಲೆನ್ಸ್ ಶೀಟನ್ನು ತಯಾರು ಮಾಡುತ್ತಾರೆ ಸಾಮಾನ್ಯವಾಗಿ ಎಲ್ಲಾ ಕಂಪನಿಗಳು ಎಲ್ಲಾ ಅಂಗಡಿಗಳು ಕೆಲಸಗಾರರು ಎಲ್ಲರೂ ಕೂಡ ವರ್ಷಕ್ಕೆ ಒಂದು ಬಾರಿ ಬ್ಯಾಲೆನ್ಸ್ ಶೀಟನ್ನ ತಯಾರಿಸಿಕೊಂಡರೆ ಮಾರ್ವಾಡಿಗಳು ಮಾತ್ರ ಪ್ರತಿನಿತ್ಯ ಬ್ಯಾಲೆನ್ಸ್ ಶೀಟನ್ನು ರೆಡಿ ಮಾಡುತ್ತಾರೆ ಅಂದರೆ ಆ ದಿನಕ್ಕೆ ಸಂಬಂಧಪಟ್ಟಂತಹ ಲೆಕ್ಕಾಚಾರವನ್ನು ಆ ದಿನವೇ ಪೂರ್ತಿ ಮಾಡುತ್ತಾರೆ.
ಇದನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಮುಂದೂಡುವುದಿಲ್ಲ.ಮಾರ್ವಾಡಿಗಳ ಡಿಎನ್ಎ ಮಾರ್ವಾಡಿಗಳು ವ್ಯಾಪಾರದ ಡಿಎನ್ಎ ಇಂದ ಹುಟ್ಟುತ್ತಾರೆ ಎಂದು ಹೇಳುತ್ತಾರೆ ಆದ್ದರಿಂದಲೇ ಅವರ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವ್ಯಾಪಾರದ ಬಗ್ಗೆ ಕಲಿಸುತ್ತಾರೆ ಅದರ ಬಗ್ಗೆ ಪ್ರೇರೇಪಿಸುತ್ತಾರೆ ನಾವು ನಮ್ಮ ಮಕ್ಕಳು ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸಕ್ಕೆ ಸೇರಬೇಕು ಎಂದು ಅಂದುಕೊಳ್ಳುತ್ತೇವೆ ಆದರೆ ಮಾರ್ವಾಡಿಗಳು ಮಾತ್ರ ತಮ್ಮ ಮಕ್ಕಳು ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸಕ್ಕೆ ಸೇರಬೇಕು ಸರಕಾರಿ ಕೆಲಸಕ್ಕೆ ಹೋಗಬೇಕು ಎಂದು ಅಂದುಕೊಳ್ಳುವುದಿಲ್ಲ.
ಅವರ ಮಕ್ಕಳು ದೊಡ್ಡವರಾದ ಮೇಲೆ ದೊಡ್ಡ ದೊಡ್ಡ ವ್ಯಾಪಾರಗಳನ್ನು ಮಾಡಬೇಕು ಎಂದು ಬೆಳೆಸುತ್ತಾರೆ ಆದ್ದರಿಂದಲೇ ಒಳ್ಳೆಯ ವಿದ್ಯಾಭ್ಯಾಸ ಇದ್ದರು ಸರಿ ಕೆಲಸಕ್ಕೆ ಹೋಗುವ ಮಾರ್ವಾಡಿಗಳು ತುಂಬಾನೇ ಕಡಿಮೆ ಇನ್ನು ಹೆಚ್ಚಾಗಿ ಇವರು ಅಕೌಂಟ್ಗೆ ಸಂಬಂಧಪಟ್ಟಂತೆ ಕೆಲಸಕ್ಕೆ ಹೋಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.