ಅಲ್ಲಿ ಶುರುವಾಗಿದೆ ಅದೃಷ್ಟ ಕೀಟದ ಬೇಟೆ ಒಂದು ಹುಳಕ್ಕೆ 75 ಲಕ್ಷ ಅದನ್ನ ಮನೆಲಿಟ್ಕೊಂಡ್ರೆ ಅದೃಷ್ಟ ಬರುತ್ತಂತೆ..
ಅಲ್ಲಿ ಶುರುವಾಗಿದೆ ಅದೃಷ್ಟ ಕೀಟದ ಬೇಟೆ ಅದನ್ನ ಮನೇಲಿ ಇಟ್ಕೊಂಡ್ರೆ ಅದೃಷ್ಟ… ಈಸಿ ಮನೀ ಸುಲಭವಾಗಿ ಹಣ ಬಂದು ಬಿಡಬೇಕು ದಿಡೀರ್ ಎಂದು ಶ್ರೀಮಂತರಾಗಬೇಕು ಕೈಯಾಕಿದ ಎಲ್ಲದರಲ್ಲೂ ಯಶಸ್ಸು ಸಿಗಬೇಕು ಅದಕ್ಕಾಗಿ ಮನುಷ್ಯ ಏನೇನು ಮಾಡುವುದಕ್ಕೆ ಹೋಗುತ್ತಾನೆ ಕೆಲವರು ಮೋಸ ಕಪಟ ವಂಚನೆ ಬೆದರಿಕೆ ಹೀಗೆ ಕೆಟ್ಟ ಮಾರ್ಗಗಳನ್ನು ಹಿಡಿದರೆ ಇನ್ನು ಕೆಲವರು ದೇವರ ಮೊರೆ ಹೋಗುತ್ತಾರೆ.
ಬೇಡುತ್ತಾರೆ ಅರಕೆ ಕಟ್ಟುತ್ತಾರೆ ಚಾದ ಹಸುತ್ತಾರೆ ಕ್ಯಾಂಡಲ್ ಹಚ್ಚಿ ಬರುತ್ತಾರೆ ಇನ್ನೂ ಕೆಲವರು ಇದ್ದಾರೆ, ಅವರ ಕಲ್ಪನೆಗಳು ನಂಬಿಕೆಗಳೇ ವಿಚಿತ್ರ ಎರಡು ತಲೆಯ ಹಾವು 15 ಕಾಲಿನ ಆಮೆ ಪ್ಲಾಟಿನ ಕರಿಬೇಕು ಹೀಗೆ ಏನೇನು ಹುಡುಕಿಕೊಂಡು ಹೋಗುವವರು ಕೆಲವರಾದರೆ ಮತ್ತೆ ಕೆಲವರು ಕಂಟೇನರ್ ಗಟ್ಟಲೆ ಕ್ಯಾಶ್ ಬಂದೇಬಿಡ್ತು ಎಂದು ನೋಡುತ್ತಾ ಕುಳಿತಿರುತ್ತಾರೆ.
ಅದಕ್ಕಾಗಿ ಕೈಯಲ್ಲಿರುವ ಹಣವನ್ನು ಕೂಡ ಕಳೆದುಕೊಳ್ಳುತ್ತಾ ಹೋಗುತ್ತಾರೆ ಅವರದೊಂದು ರೀತಿ ತೇಲೋ ಮೋಡವನ್ನು ನೋಡಿ ಕುಡಿಯುವ ನೀರನ್ನು ಚೆಲ್ಲಿದರು ಎನ್ನುವಂತಹ ಪರಿಸ್ಥಿತಿ ಮತ್ತೊಂದು ವರ್ಗವಿದೆ ಅವರು ಐಶ್ವರ್ಯ ಸಿಗುತ್ತದೆ ಎಂದು ಮನೆಯಲ್ಲಿ ಏನೇನೋ ತಂದು ಇಟ್ಟುಕೊಳ್ಳುತ್ತಾರೆ ಗೋಡೆಗೆ ಕನ್ನಡಿಯನ್ನು ಹಾಕಿಸುತ್ತಾರೆ.
ಕ್ರಿಸ್ಟಲ್ ಚಂಡುಗಳನ್ನು ತೆಗೆದುಕೊಂಡು ಬಂದು ತೂಗು ಹಾಕುತ್ತಾರೆ ಕುದುರೆ ಫೋಟೋ ಆಮೆ ವಿಗ್ರಹ ಏನೇನೋ ಇದೆ, ಇದೆಲ್ಲಾ ಕೇವಲ ಭಾರತದಲ್ಲಿ ಮಾತ್ರ ಇದೆಯಾ ಖಂಡಿತವಾಗಿಯೂ ಇಲ್ಲ ಇಂತಹ ನಂಬಿಕೆಗಳು ಜಗತ್ತಿನ ನಾನಾ ದೇಶಗಳಲ್ಲಿ ನಾನಾ ರೂಪಗಳಲ್ಲಿ ಇವೆ ಈಗ ಇದೇ ರೀತಿಯ ಸುದ್ದಿ ಒಂದು ಪಶ್ಚಿಮದ ಕಡೆಯಿಂದ ಬರುತ್ತಾ ಇದೆ.
ಅಲ್ಲಿ ಮನುಷ್ಯನ ದಿಢೀರ್ ಶ್ರೀಮಂತಿಕೆಯ ಆಸೆ ಇಂದಾಗಿ ಒಂದು ಕೀಟಕ್ಕೆ ಮತ್ತು ಅದನ್ನು ಹಿಡಿದು ಮಾರುವವರಿಗೆ ಅದೃಷ್ಟ ಕುಲಾಯಿಸುತ್ತಾ ಇದೆ ಅಲ್ಲಿನ ಕೀಟ ಒಂದನ್ನು ಮನೆಯಲ್ಲಿಟ್ಟುಕೊಂಡರೆ ಲಕ್ಷ್ಮಿ ತಾಂಡವ ಮಾಡುತ್ತಾಳೆ, ಅದೃಷ್ಟ ಎನ್ನುವುದು ಕಿತ್ತುಕೊಂಡು ಬರುತ್ತದೆ ಎನ್ನುವ ನಂಬಿಕೆ ಪರಿಣಾಮ ಆ ಕೀಟಗಳು ಹುಡುಕಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ.
ಮತ್ತು ಇವರ ನಂಬಿಕೆಯಿಂದ ಅವರು ಶ್ರೀಮಂತರಾಗುತ್ತಾ ಇದ್ದಾರೆ ಹಾಗಾದರೆ ಯಾವುದು ಆ ಕೀಟ ಅದಕ್ಕೆ ಇರುವ ಶಕ್ತಿ ಎಂತದ್ದು ಅದನ್ನು ಮನೆಯಲ್ಲಿ ಇಟ್ಟುಕೊಂಡಿರಿ ನಿಜಕ್ಕೂ ಏನಾದರೂ ಆಗುತ್ತದೆಯಾ ಎಂದು ನೋಡೋಣ. ಈ ನಂಬಿಕೆ ಎನ್ನುವುದೇ ಹಾಗೆ ಕೆಲವರಿಗೆ ಬೆಳಗ್ಗೆ ಎದ್ದು ಹೆಂಡತಿಯ ಮುಖ ನೋಡುವುದಕ್ಕಿಂತ ನರಿ ಅಥವಾ ಕತ್ತೆಯ ಮುಖ ನೋಡಿದರೆ ದಿನ ಚೆನ್ನಾಗಿರುತ್ತದೆ ಎನ್ನುವ ನಂಬಿಕೆ ಇದೆ.
ಹೀಗಾಗಿ ಅವುಗಳ ಫೋಟೋವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ನೇತಾಕುತ್ತಾರೆ ಇನ್ನು ಕೆಲವರು ಕೆಲಸ ಮಾಡಿದರೆ ಅದೃಷ್ಟ ಎಂದುಕೊಂಡು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ ಇಲ್ಲಿಯವರಿಗೆ ಯಶಸ್ಸು ಅನ್ನುವುದು ಮಾಡುವ ಕೆಲಸದಿಂದ ಬಂದ ಅಥವಾ ಅವರ ಅದೃಷ್ಟದಿಂದ ಬಂತಾ ಎನ್ನುವುದನ್ನು ಯೋಚನೆ ಮಾಡುವುದಕ್ಕೂ ಕೂಡ ಸಮಯ ಇರುವುದಿಲ್ಲ.
ಕೆಲಸದಲ್ಲಿ ಅವರು ಅಷ್ಟು ಮುಳುಗಿ ಹೋಗಿರುತ್ತಾರೆ, ಅವರ ಶ್ರದ್ಧೆ ಪರಿಶ್ರಮಗಳನ್ನು ನೋಡಿದ ಮೇಲೆ ಯಶಸ್ಸಿಗೂ ಕೂಡ ಅವರ ಕೈಯನ್ನು ಬಿಡಬೇಕು ಎಂದು ಅನಿಸುವುದಿಲ್ಲ ಆದರೆ ಈ ಶ್ರಮಕ್ಕಿಂತ ನಮ್ಮಲ್ಲಿ ಈಗ ಹೆಚ್ಚು ಆಗುತ್ತಾ ಇರುವುದು ಅದೃಷ್ಟದ ಮೇಲಿನ ನಂಬಿಕೆ ಈ ಅದೃಷ್ಟವನ್ನು ಹೊರಗಿನಿಂದ ತಂದು ಇಟ್ಟುಕೊಳ್ಳುವುದಕ್ಕೆ ನಾವು ಪಡುವುದು ಒಂದೆರಡು ಕಷ್ಟಗಳಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.