ರತಿಯಿಲ್ಲದ ಈ ಜಗತ್ತನ್ನೇ ಶೂನ್ಯ ನಶ್ವರ ರತಿ ಹುಟ್ಟಿದ್ದೇಗೆ ಗೊತ್ತಾ ? ಈಕೆಯ ಮೈಮಾಟಕ್ಕೆ ಬ್ರಹ್ಮನೇ ತಳಮಳನಾದ

ರತಿಯಿಲ್ಲದ ಈ ಜಗತ್ತನ್ನೇ ಶೂನ್ಯ ನಶ್ವರ ರತಿ ಹುಟ್ಟಿದ್ದೇಗೆ ಗೊತ್ತಾ ? ಈಕೆಯ ಮೈಮಾಟಕ್ಕೆ ಬ್ರಹ್ಮನೇ ತಳಮಳನಾದ

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ನಮ್ಮ ನಂಬಿಕೆಗೆ ಸ್ವಾಗತ ಸುಸ್ವಾಗತ ಸ್ನೇಹಿತರೆ ರತಿ ಈ ಹೆಸರಿಲ್ಲದೆ ಯಾವ ಪುರಾಣವಾಗಲಿ ದಂತ ಕಥೆಗಳಾಗಲಿ ಪೂರ್ಣವಾಗುವುದಿಲ್ಲ ರತಿ ಅಂದ್ರೆ ಇಚ್ಛೆಗಾರ್ತಿ ಎಂದರ್ಥ ಸಾಮಾನ್ಯವಾಗಿ ಮನ್ಮಥನ ಹೆಂಡತಿ ಅಂತ ಪುರಾಣಗಳು ಉಲ್ಲೇಖ ಮಾಡುತ್ತವೆ.

ಕಾಮಸೂತ್ರದಲ್ಲಿ ರತಿ ಸುಖದ ಬಗ್ಗೆ ವಿಸ್ತೃತ ವಿವರಣೆ ಸಿಗುತ್ತೆ ಆಕೆಯನ್ನ ಮಾದಕ ಕನ್ಯೆಯಾಗಿ ಅಂಗಾಂಗ ವಿಭೂಷಿತೆಯಾಗಿ ಸೃಷ್ಟಿ ಸ್ಥಿತಿ ಲಯಕಾರಿಣಿಯಾಗಿ ಬಿಂಬಿಸಲಾಗಿದೆ.

ಅಷ್ಟಕ್ಕೂ ರತಿದೇವಿ ಯಾರು ಆಕೆಯ ಜನನದ ಹಿಂದಿರುವ ಕುತೂಹಲದ ಕಥೆಗಳು ಎಂಥವು ಭಾರತೀಯ ಸಂಸ್ಕೃತಿಯಲ್ಲಿ ರತಿಯ ಪಾತ್ರ ಹಾಗೂ ಅಸ್ತಿತ್ವದ ಕುರಿತಾದ ಕೆಲವೊಂದಿಷ್ಟು ವಿಚಾರವನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮುನ್ನ ನಮ್ಮ ನಂಬಿಕೆಗೆ ನಿಮ್ಮ ಬೆಂಬಲವಿರಲಿ ಸ್ನೇಹಿತರೆ ರತಿಯು ಭಾರತೀಯ ಪುರಾಣಗಳಲ್ಲಿ ಅಂತಿಮ ಸುಂದರಿ ಎಂದು ವರ್ಣಿತವಾಗಿರುವ ಕಾಮದೇವನ ಹೆಂಡತಿ ಕಾಮನಿಗೆ ಸ್ಮರ ಅಂದ್ರೆ ಮನೋವಿಕಾರ ಉಂಟುಮಾಡುವವನು ಮನ್ಮಥ ಅಂದ್ರೆ ಮತ್ತು ಬರುವ.

ಹಾಗೆ ಮಾಡುವವನು ಮದನ ಅಂದ್ರೆ ಸೊಕ್ಕಿನವ ಅನಂಗ ಅಂದ್ರೆ ದೇಹವಿಲ್ಲದವನು ಎಂಬ ಅನೇಕ ಹೆಸರುಗಳಿವೆ ಧರ್ಮಪುರುಷನ ಮೂವರು ಮಕ್ಕಳಲ್ಲಿ ಕಾಮನು ಒಬ್ಬ ಕಾಮನ ಹುಟ್ಟು ಮತ್ತು ರತಿಯ ಜನಕ ಕಾಮರತಿಯರ ವಿವಾಹ ಈ ಸಂಗತಿಗಳು ಶಿವ ಪುರಾಣದಲ್ಲಿ ವರ್ಣಿತವಾಗಿವೆ.

ಬ್ರಹ್ಮನು ಮರೀಚಿ ಅತ್ರಿ ಪುಲಹ ಪುಲಸ್ತ್ಯ ಅಂಗೀರಸ ಕೃತುಮುನಿ ವಸಿಷ್ಠ ನಾರದ ದಕ್ಷ ಬೃಗು ಹೀಗೆ ಒಂಬತ್ತು ಜನ ಪ್ರಜಾಪತಿಗಳನ್ನು ಸೃಷ್ಟಿಸಿದ ಇವರೆಲ್ಲ ಬ್ರಹ್ಮನ ಮಾನಸ ಪುತ್ರರು ಈ ಸಂದರ್ಭದಲ್ಲಿಯೇ ಬ್ರಹ್ಮನ ಮನಸ್ಸಿನಿಂದ ಓರ್ವ ಸುಂದರ ಸ್ತ್ರೀ ಜನಿಸಿದಳು ಇವಳಿಗೆ ಹೆಸರುಗಳಿವೆ.

ಬ್ರಹ್ಮನಿಂದ ಹಿಡಿದು ಎಲ್ಲರೂ ಇವಳ ಸೌಂದರ್ಯಕ್ಕಾಗಿ ಮರುಳಾಗಿ ಕಾಮ ಪರವಶರಾದರು ಆ ಸಂದರ್ಭದಲ್ಲಿಯೇ ಬ್ರಹ್ಮನ ಮನಸ್ಸಿನಿಂದ ಅತ್ಯಂತ ಸುಂದರನಾದ ಪುರುಷನೊಬ್ಬ ಹುಟ್ಟಿದ.

ಅವನದು ಸುವರ್ಣದ ಶರೀರ ಕಾಂತಿ ಉನ್ನತ ಭುಜ ಹುಣ್ಣಿಮೆ ಚಂದ್ರನಂತಹ ಮುಖ ಅವನು ಮೀನ ಧ್ವಜ ಪಂಚಬಾಣಗಳುಳ್ಳವನು ಅವನು ಬ್ರಹ್ಮನನ್ನ ಕುರಿತು ತನ್ನ ಕರ್ತವ್ಯಗಳೇನು ತಾನು ಹುಟ್ಟಿದ್ದೇಕೆ ಎಂದು ಪ್ರಶ್ನಿಸಿದಾಗ.

ಜಗತ್ತಿನ ಎಲ್ಲಾ ಮನುಷ್ಯರು ಪ್ರಾಣಿಗಳು ದೇವತೆಗಳು ಎಲ್ಲರ ಮನಸ್ಸಿನಲ್ಲಿ ಕಾಮವನ್ನು ಹುಟ್ಟಿಸಿ ಸೃಷ್ಟಿಯನ್ನು ವೃದ್ಧಿಗೊಳಿಸು ಎಂದು ಬ್ರಹ್ಮ ಹೇಳಿದ ಆಗ ಋಷಿಮುನಿಗಳು ಆ ಸುಂದರ ಪುರುಷನಿಗೆ ಮನ್ಮಥ ಕಾಮ ಎಂಬ ಹೆಸರುಗಳನ್ನು ಇಟ್ಟರು.

ಮನ್ಮಥ ತನ್ನ ಪಂಚಬಾಣಗಳನ್ನು ಬ್ರಹ್ಮ ಮತ್ತು ಮರೀಚಿ ಮೊದಲಾದ ಮುನಿಗಳು ದಕ್ಷ ಮೊದಲಾದ ಪ್ರಜಾಪತಿಗಳ ಮೇಲೆ ಪ್ರಯೋಗಿಸಿದ ಆ ಸಂದರ್ಭದಲ್ಲಿ ಸಂಧ್ಯೆಯನ್ನು ಕಂಡು ಎಲ್ಲರೂ ಮೋಹಿತರಾದರು.

ಸಂಧ್ಯೆಯು ಕಾಮ ಪರವಶಾದಳು ಸಹೋದರರು ಸಹೋದರಿಯರಲ್ಲಿಯೂ ತಂದೆ ಮಗಳಲ್ಲಿಯೂ ಮೋಹಿತರಾದರು ಇದರಿಂದ ಭಯಭೀತರಾಗಿ ಅವರು ಶಿವನನ್ನು ಸ್ಮರಿಸಿದರು ಇದನ್ನು ಕಂಡ ಶಿವ ಹಾಸ್ಯ ಮಾಡಿದ.

ಅವರನ್ನು ಎಚ್ಚರಿಸಿದ ಕಾಮತಾಪವನ್ನು ನಿಗ್ರಹಿಸಿದ್ದರಿಂದ ಬ್ರಹ್ಮನ ಬೆವರು ಹನಿ ನೆಲಕ್ಕೆ ಬಿತ್ತು ಆದ್ದರಿಂದ ಪಿತೃಗಣಗಳು ಜನಿಸಿದವು ಪ್ರಜಾಪತಿ ಬ್ರಹ್ಮನ ಶರೀರದಿಂದ ಬಿದ್ದ ಬೆವರಿನ ಹನಿಯಿಂದ ಅಪ್ರತಿಮ ಸುಂದರಿಯಾದ.

ಒಬ್ಬ ಸ್ತ್ರೀ ಹುಟ್ಟಿದಳು ಇವಳೇ ರತಿ ವಿರಕ್ತ ರಾದ ಮುನಿಗಳನ್ನು ಮೋಹಗೊಳಿಸುವಂತಹ ಚೆಲುವು ಇವಳದ್ದು ಇವಳ ದೇಹ ಸೌಂದರ್ಯದ ವರ್ಣನೆ ಶಿವಪುರಾಣದಲ್ಲಿ ದೀರ್ಘವಾಗಿ ಬರುತ್ತದೆ ರತಿ ಮತ್ತು ಮನ್ಮಥರ ಮದುವೆಯಾಯಿತು.

ರತಿಯ ಸೌಂದರ್ಯದಿಂದ ಮನ್ಮಥ ಮೋಹಿತನಾದ ಗಂಗೆಯನ್ನು ಮಹಾದೇವ ಸ್ವೀಕರಿಸುವಂತೆ ರತಿಯನ್ನು ಮನ್ಮಥ ಸ್ವೀಕರಿಸಿದ ರತಿ ಸಕಲರನ್ನ ತನ್ನ ಸೌಂದರ್ಯದಿಂದ ಮೋಹಗೊಳಿಸುವಂತಿದ್ದು ತನ್ನ ಶರೀರದ ಕಾಂತಿಯಿಂದ ಹತ್ತು ದಿಕ್ಕುಗಳನ್ನು ಬೆಳಗುತ್ತಿದ್ದಳು.

ಕಾಮ ರತಿಯರಿಬ್ಬರು ಪರಸ್ಪರ ಗಾಡವಾಗಿ ಪ್ರೀತಿಸಿದರು ಮನ್ಮಥನ ಎಲ್ಲಾ ಕಾರ್ಯಗಳಲ್ಲಿಯೂ ರತಿ ಸಹಯೋಗಿಯಾದಳು ತಾರಕಾಸುರನ ಉಪಟಳವನ್ನು ತಡೆಯಲಾರದೆ ದೇವತೆಗಳು ಬ್ರಹ್ಮನ ಮಾತಿನಂತೆ ತಮ್ಮ ಸೈನ್ಯಕ್ಕೆ ತಕ್ಕ ಸೇನಾಪತಿಯನ್ನು ಪಡೆಯಲು ಧ್ಯಾನಸ್ಥಕನಾಗಿದ್ದ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ