ಸಿಂಕ್ ನಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಕಿ ನೋಡಿ ಜಿರಳೆ ಸೊಳ್ಳೆಗಳ ಕಾಟ ಇರುವುದಿಲ್ಲ..ಬಾರಿ ಬಣ ಉಳಿತಾಯ ಮಾಡಿ ಸೂಪರ್ ಟಿಪ್ಸ್..
ಸಿಂಕ್ ನಲ್ಲಿ ಪ್ಲಾಸ್ಟಿಕ್ ಬಾಟಲ್ ಅನ್ನು ಹಾಕಿ ನೋಡಿ ಆಶ್ಚರ್ಯ ಪಡುತ್ತೀರಾ… ನಾವು ಮನೆಯಲ್ಲಿ ಉಪಯೋಗಿಸುವಂತಹ ಸ್ಟೀಲ್ ಬಾಕ್ಸ್ ಆಗಿರಬಹುದು ಅಥವಾ ಪ್ಲಾಸ್ಟಿಕ್ ಬಾಕ್ಸ್ ಆಗಿರಬಹುದು ಅದರ ಮುಚ್ಚುಳ ಲೂಸಾಗಿದ್ದರೆ ಆ ಮುಚ್ಚಳವನ್ನು ನಾವು ಒಂದೇ ನಿಮಿಷದಲ್ಲಿ ಟೈಟ್ ಮಾಡಿಕೊಳ್ಳುವುದಕೋಸ್ಕರ ಮನೆಯಲ್ಲೇ ಇರುವ ಈ ಒಂದು ವಸ್ತು ಸಾಕು ಅದು ಏನೆಂದು ನೋಡುವುದಾದರೆ.
ಇದಕ್ಕಾಗಿ ನಾನು ಮನೆಯಲ್ಲಿರುವ ಸೆಲೋ ಟೇಪ್ ಅನ್ನು ತೆಗೆದುಕೊಂಡಿದ್ದೇನೆ ನಾನು ತೆಗೆದುಕೊಂಡಿರುವ ಟೇಪನ್ನು ನಾನು ಈಗ ಬಾಕ್ಸಿನ ಸುತ್ತ ಒಂದು ಸುತ್ತು ಸುತ್ತಿ ಕೊಳ್ಳುತ್ತೇನೆ ಅದು ನೀಟಾಗಿ ಕೂರುವುದಿಲ್ಲ ಎಂದರೆ ಮತ್ತೆ ಒಂದು ಸುತ್ತನ್ನು ಸುತ್ತಿಕೊಳ್ಳೋಣ ಅಂದ್ರೆ ನಾವು ಮುಚ್ಚುಳ ಹಾಕಿದಾಗ ಅದು ಟೈಟ್ ಆಗಿ ಕುಳಿತುಕೊಳ್ಳಬೇಕು ಅಲ್ಲಿಯವರೆಗೂ ಅದನ್ನು ಸುತ್ತಿಕೊಳ್ಳೋಣ.
ಈ ರೀತಿಯಾಗಿ ಸಲೋ ಟೈಪನ್ನು ನಾವು ಸುತ್ತಿದ ನಂತರ ಮುಚ್ಚಳವನ್ನು ಹಾಕಿದರೆ ಅದು ಬಿಗಿಯಾಗಿ ಕುಳಿತುಕೊಳ್ಳುತ್ತದೆ ಹಾಗಾಗಿ ನೀವು ಏನಾದರೂ ಈ ರೀತಿಯಾಗಿ ಮುಚ್ಚಳ ಲೂಸಾಗಿದೆ ಎಂದು ಉಪಯೋಗಿಸದೆ ಇಟ್ಟಿದ್ದರೆ ಇದನ್ನು ಮಾಡಿಕೊಳ್ಳಿ ನಿಮಗೆ ಅದು ಉಪಯೋಗಕ್ಕೆ ಬರುತ್ತದೆ ಮತ್ತು ಅದು ಬಿಚ್ಚಿಕೊಳ್ಳುವುದಿಲ್ಲ.
ಈಗ ನಾವು ಫೇಮಸ್ ಆಗಿರುವ ಪೂರಿ ಟಿಪ್ಸ್ ಅನ್ನು ನೋಡೋಣ ಪೂರಿಯನ್ನು ನಾವು ಈಗ ತಿರುಗಿಸುವುದು ಬೇಡ ಅದೇ ತಿರುಗಿ ಕೊಳ್ಳುತ್ತದೆ ಈ ಪುರಿಯನ್ನ ಮಾಡಿಕೊಳ್ಳುವುದಕ್ಕೆ ಎಂದು ನಾನು ಈಗ ನಾವು ಸಾಮಾನ್ಯವಾಗಿ ಪೂರಿ ಚಪಾತಿಗೆ ಹೇಗೆ ಹಿಟ್ಟನ್ನು ಕಲಸಿಕೊಳ್ಳುತ್ತಿವಿಯೋ ಅದೇ ರೀತಿ ಕಲಿಸಿಕೊಂಡು ಹಿಟ್ಟನ್ನು ಚಪಾತಿ ಮಣೆಯ ಮೇಲೆ ಉದ್ದವಾಗಿ ಒತ್ತಿಕೊಳ್ಳಬೇಕಾಗುತ್ತದೆ.
ನಾವು ಪುರಿಯನ್ನು ಒತ್ತಬೇಕಾದರೆ ರೌಂಡ್ ಆಗಿ ಒತ್ತಿಕೊಳ್ಳುತ್ತೇವೆ ಆದರೆ ಇದಕ್ಕೆ ನಾವು ಆ ರೀತಿ ಒತ್ತಿಕೊಳ್ಳದೆ ಓವಲ್ ಶೇಪಲ್ಲಿ ಇದನ್ನು ಒತ್ತಿಕೊಳ್ಳಬೇಕಾಗುತ್ತದೆ ಅಷ್ಟೇ ಅಲ್ಲದೆ ಇದನ್ನು ತುಂಬಾ ತೆಳ್ಳಗಾಗಿ ಮಾಡಿಕೊಳ್ಳಬಾರದು ಅದನ್ನು ಸ್ವಲ್ಪ ಗಟ್ಟಿಯಾಗಿರುವಂತೆ ಮಾಡಿಕೊಳ್ಳಬೇಕು ನಂತರ ಚೆನ್ನಾಗಿ ಕಾದ ಎಣ್ಣೆಯಲ್ಲಿ ಹಾಕಿದಾಗ ಅದು ಚೆನ್ನಾಗಿ ಕುದ್ದು ತಾನೇ ತಿರುಗಿಕೊಳ್ಳುತ್ತದೆ ಅದಕ್ಕೆ ಯಾವುದೇ ರೀತಿಯ ಸೌಟನ್ನು ಉಪಯೋಗಿಸಿಲ್ಲ.
ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದೇನೆಂದರೆ ಎಲ್ಲರಿಗೂ ಕೂಡ ಇಷ್ಟವಾಗುವುದಿಲ್ಲ ಏಕೆಂದರೆ ನಮ್ಮ ಕೈ ನೋವು ಮಾಡಿಕೊಂಡು ಊರಿಗೆ ನೋವು ಮಾಡಿಕೊಂಡು ಸಿಪ್ಪೆಯನ್ನು ಬಿಡಿಸಬೇಕಾಗುತ್ತದೆ ಹಾಗಾಗಿ ಅದು ಯಾವುದೇ ನೋವು ಆಗದೇ ಕೂಡ ನಾವು ಬೆಳ್ಳುಳ್ಳಿಯನ್ನ ಬಿಡಿಸಿಕೊಳ್ಳಬಹುದು ಮುಂದೆ ನೀವು ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಬೇಕಾದರೆ ಬೆಳ್ಳುಳ್ಳಿಗಳನ್ನು ಜಾಲರಿಗೆ ಹಾಕಿಕೊಂಡು ಸ್ಟವ್ ನ ಮೇಲೆ ಇಟ್ಟು ಅದನ್ನು ಸ್ವಲ್ಪ ಬೆಚ್ಚಗಾಗುವ ರೀತಿ ಮಾಡಿಕೊಳ್ಳಬೇಕು.
ಕೇವಲ ಸಿಪ್ಪೆ ಮಾತ್ರ ಬೆಚ್ಚಗಾಗಬೇಕು ಆ ರೀತಿಯಾಗಿ ಅದನ್ನು ಮಾಡಿಕೊಂಡು ನಂತರ ಬಿಡಿಸುವುದರಿಂದ ಯಾವುದೇ ರೀತಿಯ ಕೈ ನೋವು ಬರುವುದಿಲ್ಲ. ಈ ಒಂದು ಪ್ಲಾಸ್ಟಿಕ್ ಬಾಟಲಿನಿಂದ ನಾವು ಗಂಟೆಗಟ್ಟಲೆ ಕಷ್ಟಪಟ್ಟು ಮಾಡುವಂತಹ ಕೆಲಸವನ್ನು ನಿಮಿಷದಲ್ಲಿಯೇ ಹಾಗೆ ಆರಾಮವಾಗಿ ಮಾಡಿಬಿಡಬಹುದು ಅದು ಹೇಗೆ ಎಂದು ಈಗ ನೋಡೋಣ.
ಒಂದು ಪ್ಲಾಸ್ಟಿಕ್ ಬಾಟಲ್ ಅನ್ನು ನಾನು ಈಗ ಬಿಸಿಯಾಗಿರುವ ಚಾಕುವಿನಿಂದ ಅರ್ಧಕ್ಕೆ ಕತ್ತರಿಸಿ ಕೊಳ್ಳುತ್ತಿದ್ದೇನೆ ಈ ರೀತಿಯಾಗಿ ಎರಡು ಭಾಗವಾಗಿ ಮಾಡಿದ ನಂತರ ಮೇಲಿನ ಭಾಗವನ್ನು ಹಾಗೆ ಇಟ್ಟುಕೊಂಡು ಕೆಳಗಿನ ಭಾಗವನ್ನು ಉಲ್ಟಾ ಮಾಡಿ ಅದರ ಮೇಲೆ ನಾವು ತೂತುಗಳನ್ನು ಮಾಡಿಕೊಳ್ಳಬೇಕು ಅದನ್ನು ಕೂಡ ಬಿಸಿಯಾಗಿರುವ ಚಾಕುವಿನಿಂದಲೇ ಮಾಡಿಕೊಳ್ಳುತ್ತಿದ್ದೇನೆ.
ಈ ರೀತಿ ತೂತನು ಮಾಡಿಕೊಂಡ ನಂತರ ಮೇಲಿನ ಭಾಗವನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ ನಿಮ್ಮ ಸಿಂಕಿನಲ್ಲಿ ಯಾವುದಾದರೂ ಒಂದು ವಸ್ತು ಸಿಕ್ಕಿಹಾಕಿಕೊಂಡಾಗ ನೀರು ಅಲ್ಲಿಯೇ ನಿಂತುಕೊಳ್ಳುತ್ತದೆ ಅದು ಹೋಗುವುದಿಲ್ಲ ಆ ರೀತಿಯಾಗಿ ನೀರು ನಿಂತಾಗ.
ಜಿರಳೆ ಹಲ್ಲಿಗಳು ಸೊಳ್ಳೆಗಳು ಎಲ್ಲವೂ ಕೂಡ ತುಂಬಿಕೊಳ್ಳುತ್ತದೆ ಹಾಗಾಗಿ ಆ ರೀತಿ ಅದನ್ನು ಬಿಟ್ಟುಕೊಳ್ಳದೆ ಮೇಲಿನ ಭಾಗವನ್ನು ನಾವು ಇಟ್ಟುಕೊಂಡಿರುವುದರಿಂದ ಅದನ್ನು ನೀರು ಹೋಗುವ ಜಾಗದಲ್ಲಿ ಅಮುಕುವುದರಿಂದ ನೀರು ಸಲೀಸಾಗಿ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.