ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ನಿಮಗಾಗಿ ಕೆಲವೊಂದು ಅಡುಗೆ ಟಿಪ್ಸ್ ಗಳು ಉಪ್ಪಿನಕಾಯಿ ಸೀಸೆ ಅಥವಾ ಜಾಡಿಯಲ್ಲಿ ಚಮಚವನ್ನು ಹಾಕಿಡಬಾರದು ಚಮಚವನ್ನು ಅದರಲ್ಲಿ ಹಾಕಿಟ್ಟರೆ ಉಪ್ಪಿನಕಾಯಿ ಬೇಗನೆ ಕೆಟ್ಟು ಹೋಗುತ್ತದೆ .

ನಿಂಬೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ಸಾಸ್ ಅಥವಾ ಸಲಾಡ್ ಗಳಿಗೆ ಸೇರಿಸಿದರೆ ಅದರ ರುಚಿ ಇಮ್ಮಡಿಯಾಗುತ್ತದೆ.
ತೆಂಗಿನಕಾಯಿಯನ್ನು ಒಡೆಯುವ ಮೊದಲು ನೀರಿನಲ್ಲಿ ಅದ್ದಿ ತೆಗೆದು ಒಡೆದರೆ ಅದು ಸರಿ ಅರ್ಧಕ್ಕೆ ಇಬ್ಬಾಗವಾಗುತ್ತದೆ.

ಕಾಯಿ ಚಟ್ನಿಯನ್ನು ತಂಪು ಬೆಟ್ಟಿಗೆ ಇಲ್ಲದಿರುವವರು ಹಸಿರು ಬಾಳೆ ಎಲೆಯಲ್ಲಿ ಚಟ್ನಿಯನ್ನು ಸುತ್ತಿಟ್ಟರೆ ಎರಡು ದಿನಗಳವರೆಗೆ ಅದು ಕೆಡದೆ ಉಳಿಯುತ್ತದೆ.

ಕಡಲೆಕಾಯಿ ಎಣ್ಣೆಯಲ್ಲಿ ಪಾಮೋಲಿನ್ ಎಣ್ಣೆ ಬೆರಕೆಯಾಗಿದೆಯಾ ಎಂದು ತಿಳಿಯಲು ಕಡಲೆಕಾಯಿ ಎಣ್ಣೆಯನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಕೆಲವು ನಿಮಿಷಗಳ ನಂತರ ಅದರಲ್ಲಿ ಗೆಡ್ಡೆ ಉತ್ಪತ್ತಿಯಾಗುತ್ತದೆ .

ಇದನ್ನು ಕಲಬೆರಕೆ ಆಗಿದೆ ಎಂದು ತಿಳಿಯಬಹುದು 30 ನಿಮಿಷಗಳಾದರೂ ತಿಳಿಯಾಗಿಯೇ ಇದ್ದರೆ ಅದು ಶುದ್ಧವಾದ ಎಣ್ಣೆಯಾಗಿರುತ್ತದೆ.

ಜೇನುತುಪ್ಪದ ಒಂದೆರಡು ಹನಿಗಳನ್ನು ನೀರಿನಲ್ಲಿ ಹಾಕಿದರೆ ಅದು ಹಾಗೆಯೇ ಕರಗದಿದ್ದರೆ ಶುದ್ಧವಾಗಿದೆ ಎಂದು ತಿಳಿಯಬಹುದು. ಕಲಬೆರಿಕೆಯಾಗಿದ್ದರೆ ಅದು ಕರಗಿ ನೀರಿನ ಬಣ್ಣ ಬದಲಾಗುತ್ತದೆ.

ಬೆಣ್ಣೆಯನ್ನು ತಣ್ಣಗಿನ ಉಪ್ಪು ನೀರಿನಲ್ಲಿ ಇಟ್ಟರೆ ಮೂರು ನಾಲ್ಕು ದಿನಗಳವರೆಗೆ ಹಸನಾಗಿರುತ್ತದೆ ನೀರನ್ನು ಪ್ರತಿದಿನವೂ ಬದಲಾಯಿಸಿದರೆ ಒಂದು ವಾರದವರೆಗೆ ಚೆನ್ನಾಗಿರುತ್ತದೆ.

ಬೆಣ್ಣೆ ಹಳೆಯದಾದರೆ ದುರ್ವಾಸನೆಯನ್ನು ಹೊಮ್ಮಿಸುತ್ತದೆ. ಸ್ವಲ್ಪ
ಅಡುಗೆ ಸೋಡಾ ಬೆರೆಸಿದ ನೀರಿನಲ್ಲಿ ಬೆಣ್ಣೆಯ ಮುದ್ದೆಯನ್ನು ಹಾಕಿದರೆ ಸ್ವಲ್ಪ ಹೊತ್ತಿನಲ್ಲಿ ದುರ್ವಾಸನೆ ತೊಳಗುತ್ತದೆ.

ಆಲೂಗಡ್ಡೆಯ ಉಪ್ಪೇರಿಯನ್ನು ಮಾಡುವಾಗ ಎಣ್ಣೆಗೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿದರೆ ಉಪ್ಪೇರಿ ಆಕರ್ಷಕ ಬಣ್ಣದಲ್ಲಿರುತ್ತದೆ ಎಲೆಕೋಸನ್ನು ಕೊಳ್ಳುವಾಗ ದಪ್ಪಗಿರುವುದನ್ನು ಮಾತ್ರ ನೋಡದೆ ಎತ್ತಿದರೆ ಭಾರವಾಗಿಯೂ, ಅದು ಗಟ್ಟಿಯಾಗಿಯೂ ಇರುವುದನ್ನು ನೋಡಿಕೊಳ್ಳಬೇಕು.

ಖರ್ಜೂರದ ಹಣ್ಣನ್ನು ತಿನ್ನುವಾಗ ಅದರ ಬೀಜದೊಂದಿಗೆ ಬೀಜದ ಮೇಲೆ ಅಂಟಿರುವ ತೆಳುವ ಸಿಪ್ಪೆಯನ್ನು ಎಸೆದು ಹಣ್ಣನ್ನು ಸೇವಿಸಬೇಕು .

ಮೀನನ್ನು ಎಣ್ಣೆಯಲ್ಲಿ ಕರೆಯುವಾಗ ಅದರ ದುರ್ವಾಸನೆಯು ಅಕ್ಕಪಕ್ಕದ ಮನೆಯ ಸಸ್ಯಹಾರಿಗಳಿಗೆ ತೊಂದರೆಯನ್ನು ಉಂಟುಮಾಡಬಹುದು ಅಂತಹ ಸಂದರ್ಭದಲ್ಲಿ ಸ್ಟವ್ ನ ಬಳಿಯಲ್ಲಿ ಮೇಣದ ಬತ್ತಿ ಒತ್ತಿಸಿಟ್ಟುಕೊಂಡು ಮೀನನ್ನು ಕರಿದರೆ ಅದರ ವಾಸನೆ ಅಡುಗೆ ಮನೆಯಿಂದ ಹೊರಕ್ಕೆ ಹೋಗುವುದಿಲ್ಲ.

ಬದನೆಕಾಯಿಯನ್ನು ಹೆಚ್ಚುವ ಮುನ್ನ ಕೈಗಲಿಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಬೇಕು ಇಲ್ಲದಿದ್ದರೆ ಕೈಗಳಲ್ಲಿ ನೀಲಿಗಂಪು ಬಣ್ಣವು ಹತ್ತಿಕೊಳ್ಳುತ್ತದೆ.

ಬಾಳೆಹೂ ಬಾಳೆ ದಿಂಡು ಮುಂತಾದ ಬಾಳೆ ಗಿಡದ ವಸ್ತುಗಳನ್ನು ಹೆಚ್ಚಿದ ನಂತರ ಹಾಗೆ ಇಟ್ಟರೆ ಅವು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಅವುಗಳನ್ನು ಹೆಚ್ಚುವಾಗಲೇ ಮಜ್ಜಿಗೆ ಬೆರೆಸಿದ ನೀರಿನಲ್ಲಿ ಹಾಕಿದರೆ ಬಣ್ಣ ಬದಲಾಗದೆ ಚೆನ್ನಾಗಿರುತ್ತದೆ .

ಬದನೆಕಾಯಿಯನ್ನು ಫ್ರಿಡ್ಜ್ ನಲ್ಲಿ ಇಡುವಾಗ ಯಾವಾಗಲೂ ಕಾಗದದಲ್ಲಿ ಸುತ್ತಿ ಇಡಬೇಕು ಹಸಿಮೆಣಸಿನಕಾಯಿಯನ್ನು ಉಪ್ಪಿನಲ್ಲಿ ಹಾಕಿಟ್ಟು ನಂತರ ಅದರ ತೊಟ್ಟುಗಳನ್ನು ಮಾತ್ರ ತೆಗೆದು ಮಜ್ಜಿಗೆಯಲ್ಲಿ ಹಾಕಿಟ್ಟರೆ ಮಜ್ಜಿಗೆ ಹುಳಿಯಾಗುವುದಿಲ್ಲ.

ಹಾಗಲಕಾಯಿಯನ್ನು ಅಡುಗೆಗೆ ಬಳಸುವಾಗ ಅದರ ಕಹಿ ಹೋಗಳು ಹಾಗಲಕಾಯಿ ಮೇಲಿನ ಉಬ್ಬುಗಳನ್ನು ಚಾಕುವಿನಿಂದ ಹರಿದು ತೆಗೆದು ಕಾಯಿಗಳನ್ನು ಇಬ್ಬಾಗವಾಗಿ ಸೀಳಿ ಒಳಗಿನ ಬೀಜ ಮತ್ತು ತಿರುಳನ್ನು ತೆಗೆದು ಹೊರಹೂ ಒಳಬದಿಗಳಿಗೆ ಉಪ್ಪನ್ನು ಸವರಿಟ್ಟು ಒಂದು ಗಂಟೆಯ ನಂತರ ನೀರಿನಲ್ಲಿ ಅದ್ದಿ ತೆಗೆದು ಅಡುಗೆಗೆ ಬಳಸಿದರೆ ಅದರಲ್ಲಿ ಕಹಿ ಅಂಶ ಸ್ವಲ್ಪವೂ ಇರುವುದಿಲ್ಲ.

ಹುಳಿ ಸಾಂಬಾರ್ ಮಾಡಿದಾಗ ಅದಕ್ಕೆ ಮೂರು ನಾಲ್ಕು ಟೊಮೆಟೊ ಹಣ್ಣುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ತೆಗೆದು ಬೆರೆಸಿರಿ ಹುಳಿಯು ರುಚಿ ಹಾಗೂ ಬಣ್ಣದಲ್ಲಿ ಉತ್ತಮವಾಗಿರುತ್ತದೆ.

ಚಪಾತಿಗಳನ್ನು ಒಂದೊಂದಾಗಿ ಬೇಯಿಸಿದ ನಂತರ ರಂದ್ರಗಳಿರುವ ಚಾಲರಿ ತಟ್ಟೆಯ ಮೇಲಿಟ್ಟರೆ ಅವುಗಳಿಂದ ಹೊರಬರುವ ಆವಿಯನ್ನು ತಪ್ಪಿಸಿ ಬೇಗ ತಣ್ಣಗಾಗಿಸಬಹುದು.

ಹಸಿಮೆಣಸಿನಕಾಯಿಗಳ ತೊಟ್ಟುಗಳನ್ನು ಬಿಡಿಸಿಟ್ಟರೆ ಬಹಳ ದಿನಗಳವರೆಗೆ ಮೆಣಸಿನಕಾಯಿಗಳು ಬಾಡುವುದಿಲ್ಲ ಮೆಣಸಿನ ಪುಡಿ ಜೀರಿಗೆ ಮುಂತಾದ ಸಾಂಬಾರ ಪದಾರ್ಥಗಳನ್ನು ಒಮ್ಮೆ ಬಾಣಲಿಯಲ್ಲಿ ಹೊರಿದು ಸೀಸೆ ಅಥವಾ ಡಬ್ಬಿಯಲ್ಲಿ ಹಾಕಿಟ್ಟರೆ ಬಹಳ ದಿನಗಳ ಕಾಲ ಕೆಡದೆ ಉಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]