ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

WhatsApp Group Join Now
Telegram Group Join Now

ಗೆಳೆಯರೇ ನೀವು ಗಮನಿಸಿರಬೇಕು ಇತ್ತೀಚಿಗೆ ನಮ್ಮಲ್ಲಿ ಸಾಕಷ್ಟು ಜನಕ್ಕೆ ಪುಸ್ತಕ ಓದುವ ಅಭ್ಯಾಸ ಕಡಿಮೆ ಆಗ್ತಾ ಇದೆ. ಟೈಮ್ ಸಿಕ್ರೆ ಒಟಿ ಗಳಲ್ಲಿ ಸಿನಿಮಾ ವೆಬ್ ಸೀರೀಸ್ ಗಳನ್ನ ನೋಡ್ತೀವಿ ಇನ್ನೊಂದಷ್ಟು ಜನಕ್ಕೆ ವಾಟ್ಸ್‌ಪ್ ಹಾಗೂ ಫೇಸ್ಬುಕ್ ಗಳೇ ಪ್ರಪಂಚ ಅವರ ಬಹುತೇಕ ಸಮಯ‌ ಫೇಸ್ಬುಕ್‌ ಅಲ್ಲಿ ವಾಟ್ಸ್‌ಪ್ ಅಲ್ಲಿ ಕಳೆದು ಹೋಗುತ್ತೆ.

ಹೀಗಾಗಿ ಅದರಲ್ಲಿ ಬಂದಿದ್ದನ್ನೆಲ್ಲ ಬಹುತೇಕ ನಿಜ ಅಂತ ಭಾವಿಸಿಬಿಡುವ ಅಪಾಯಗಳು ಕೂಡ ಹೆಚ್ಚಾಗಿರುತ್ತವೆ ಅದನ್ನ ಯಾರು ಬರೆದರು ಯಾಕೆ ಬರೆದರು ಅವರ ಉದ್ದೇಶ ಏನು ಆ ಲೇಖನದ ಹಿಂದೇನು ಮುಂದೇನು.

ಇದು ಯಾವುದು ನಮಗೆ ಬೇಕಾಗುವುದಿಲ್ಲ ನಾವು ಓದಿದ್ದು ನಮಗೆ ಇಷ್ಟ ಆದ್ರೆ ಸಾಕು ನಾವು ಅದನ್ನ ನಿಜ ಅಂತ ನಂಬಿಬಿಡ್ತೀವಿ ಫೇಸ್ಬುಕ್ ಇತ್ತೀಚಿಗೆ ನೋಡ್ತಾ ಇರುವಾಗ ಅದರಲ್ಲಿ ಒಂದು ತುಂಬಾ ಇಂಟರೆಸ್ಟಿಂಗ್ ಕಥೆ ಕಣ್ಣಿಗೆ ಬಿತ್ತು.

ಅದು ಒಂದು ಪಕ್ಷಿಯ ಬಗ್ಗೆ ಇದ್ದ ಕಥೆ ಸಾಮಾನ್ಯವಾಗಿ ನಮಗೆ ಈ ಪ್ರಾಣಿಗಳು ಪಕ್ಷಿಗಳ ಬಗೆಗಿನ ಜ್ಞಾನ ಅತ್ಯಲ್ಪ ಅಲ್ಲ ನಮ್ಮ ಅಕ್ಕಪಕ್ಕದಲ್ಲಿನ ಮನುಷ್ಯರನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ನಮಗೆ ಸಾಧ್ಯ ಆಗಿರೋದಿಲ್ಲ.

ಇನ್ನು ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ಗೊತ್ತಿರುವುದಕ್ಕೆ ಹೇಗೆ ಸಾಧ್ಯ ಹೇಳಿ ಇನ್ನು ಆ ಲೇಖನದಲ್ಲಿದ್ದ ವಿಷಯಗಳು ಕೂಡ ತುಂಬಾ ಸ್ವಾರಸ್ಯಕರ ಅನ್ಸಿದ್ವು ಜೊತೆಗೆ ಅನುಮಾನಗಳಿಗೆ ಕೂಡ ಕಾರಣ ಅದು ಸ್ವಲ್ಪ ಅಲ್ಲಿ ಇಲ್ಲಿ ಹುಡುಕಾಡುವುದಕ್ಕೆ ಶುರು ಮಾಡಿದರೆ ಫೇಸ್ಬುಕ್ ನ ಕಥೆ ಸುಮ್ಮನೆ ರೋಚಕತೆಯನ್ನು ತುಂಬುವ ಪ್ರಯತ್ನ ಅಂತ ಗೊತ್ತಾಯ್ತು.

ಆದರೆ ಆ ಪಕ್ಷಿಯ ಬಗ್ಗೆ ಕುತೂಹಲವನ್ನ ಆ ಲೇಖನ ಹೆಚ್ಚು ಮಾಡ್ತಾ ಹೋಯ್ತು ಹೀಗಾಗಿ ಅದರ ಬಗ್ಗೆ ನಿಮಗೂ ಒಂದು ಸ್ವಲ್ಪ ಹೇಳಬೇಕು ಅನ್ನಿಸ್ತು. ಅದು ನಮ್ಮ ಪುರಾಣಗಳಲ್ಲಿ ಉಲ್ಲೇಖಗೊಂಡ ಅತ್ಯಂತ ಬಲಶಾಲಿ ಪಕ್ಷಿ ಅದರ ಸುತ್ತ ಸಾಕಷ್ಟು ಕಥೆಗಳಿವೆ ರೋಚಕತೆಗಳಿವೆ ಹಾಗೆ ಆ ಪಕ್ಷಿ ಸಾಕಷ್ಟು ಇಂಟರೆಸ್ಟಿಂಗ್ ಅಂತ ಕೂಡ ಅನ್ಸುತ್ತೆ ಹಾಗಾದ್ರೆ ಆ ಪಕ್ಷಿ ಯಾವುದು ಏನದರ ಕಥೆ ಬನ್ನಿ ನೋಡೋಣ.

ಗೆಳೆಯರೇ ಮೊದಲಿಗೆ ನಾನಿಲ್ಲಿ ಆ ಕಥೆಯನ್ನು ನಿಮಗೆ ಹೇಳಿಬಿಡ್ತೀನಿ ಅದೊಂದು ಹದ್ದಿನ ಕಥೆ ಆ ಕಥೆಯಲ್ಲಿ ಹೇಳಿರುವ ಹಾಗೆ ಹದ್ದು ಸುಮಾರು 70 ವರ್ಷದವರೆಗೆ ಬದುಕುತ್ತಂತೆ ತನ್ನ ಜೀವನದ ಮೊದಲ 40 ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಸುಖವಾಗಿ ಬೇಟೆಯಾಡುತ್ತಾ ಹದ್ದು ಬದುಕುತ್ತೆ.

ಆದರೆ 40 ವರ್ಷ ಆದಮೇಲೆ ಅದಕ್ಕೆ ವಯಸ್ಸಾಗುತ್ತೆ ಅದರ ಕೊಕ್ಕು ಬೇಟೆಯಾಡುವುದಕ್ಕೆ ಸೂಕ್ತವಾಗಿರುವುದಿಲ್ಲ ಹಾಗೆ ಅದರ ವಯಸ್ಸಾದ ದೊಡ್ಡ ದೊಡ್ಡ ರೆಕ್ಕೆಗಳು ಆ ಪಕ್ಷಿಗಳಿಗೆ ಹಾರಾಡುವುದು ಕೂಡ ಕಷ್ಟ ಆಗೋತರ ಮಾಡುತ್ತವೆ.

ಅದರ ಕಾಲುಗಳ ಉಗುರುಗಳು ಕೂಡ ಮೊದಲಿನ ಹಾಗೆ ಶಾರ್ಪ್ ಆಗಿರೋದಿಲ್ಲ ಅವಿಕ್ಕೂ ವಯಸ್ಸಾಗಿರುತ್ತೆ ಹೀಗಾಗಿ 40 ವರ್ಷದ ನಂತರ ಹದ್ದು ಬದುಕಬೇಕು ಅಂದ್ರೆ ಅದು ಅಪಾರ ಪ್ರಮಾಣದ ನೋವನ್ನ ಸಹಿಸಿಕೊಳ್ಳಬೇಕಾಗುತ್ತಂತೆ.

ಇಲ್ಲದೆ ಇದ್ದರೆ ಊಟ ಇಲ್ಲದೆ ಅದು ಸಾಯಬೇಕು ಆ ಸಂದರ್ಭದಲ್ಲಿ ಹದ್ದು ಬದುಕೋದಕ್ಕೆ ಇಷ್ಟಪಡುತ್ತೆ ಅದಕ್ಕಾಗಿ ನರಕಯಾತನೆಯನ್ನ ಅನುಭವಿಸುತ್ತೆ ಆ ಹೊಸ ಬದುಕಿನ ಆರಂಭಕ್ಕಾಗಿ ಬೆಟ್ಟ ಒಂದರ ಮೇಲೆ ಗೂಡು ಮಾಡಿಕೊಳ್ಳುತ್ತೆ. ಅಲ್ಲಿ ಸಿಗೋಕೆ ಕಲ್ಲಿನ ಬಂಡೆಗೆ ತನ್ನ ಕೊಕ್ಕನ್ನ ಬಡಿತಾ ಹೋಗುತ್ತೆ.

ಯಾವಾಗ ಹದ್ದು ಬಲವಾಗಿ ಕೊಕ್ಕನ್ನ ಕಲ್ಲಿಗೆ ಬಡಿಯುತ್ತೋ ಆಗ ಕೊಕ್ಕು ತುಂಡರಿಸಿ ಬೀಳುತ್ತೆ ಆ ಬಳಿಕ ಹೊಸ ಕೊಕ್ಕು ಬರುವ ತನಕ ಹದ್ದು ತನ್ನ ಗೂಡಲ್ಲೇ ಇರುತ್ತೆ. ಒಮ್ಮೆ ಅದಕ್ಕೆ ಹೊಸ ಕೊಕ್ಕು ಬೆಳೆದ ನಂತರ ಅದರ ಸಹಾಯದಿಂದ ತನ್ನ ಹಳೆಯ ರೆಕ್ಕೆಗಳನ್ನ ಹಾಗೂ ಕಾಲಿನ ಉಗುರುಗಳನ್ನ ಅದು ಕಿತ್ತುಕೊಳ್ಳುತ್ತಾ ಹೋಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]