ಸಿನಿಮಾ ನೋಡಿದವರು ಹಾಗೂ ನೋಡದವರು ಇಬ್ಬರೂ ಈ ವಿಡಿಯೋ ಒಂದು ಸಲ ನೋಡಿ.. ಕೆಲಸ ಬೇಕು ಅಂತ ಈ ತಪ್ಪು ಮಾಡಬೇಡಿ
ವೀಕ್ಷಕರೇ ಆಡು ಜೀವಿತಂ ಅಥವಾ ದಿ ಗೋಟ್ ಲೈಫ್ ಇದು ಬೆನ್ಯಮಿನ್ ಎಂಬುವವರು 2008ರಲ್ಲಿ ಮಲಯಾಳಂ ಭಾಷೆಯಲ್ಲಿ ಬರೆದಂತಹ ಕಾದಂಬರಿ. ಇದನ್ನ ಸೌದಿ ಅರೇಬಿಯಾದಲ್ಲಿ ದೌರ್ಜನ್ಯಕ್ಕೆ ಒಳಗಾದಂತಹ ವಲಸೆ ಕಾರ್ಮಿಕನ ನೈಜ ಕಥೆ ಅಂತಾನೆ ಆಧರಿಸಿ ಬರೆಯಲಾಗಿದೆ.
ಈ ಒಂದು ಪುಸ್ತಕ ಅತ್ಯಧಿಕವಾಗಿ ಮಾರಾಟ ಆಗಿತ್ತು, ಇದನ್ನ ಆಧರಿಸಿನೇ ನಿರ್ದೇಶಕ ಬ್ಲೆಸ್ಸಿ ಅವರು ಅದೇ ಹೆಸರಲ್ಲಿ ಸಿನಿಮಾವನ್ನ ಮಾಡಿದ್ರು ಜುಲೈ 19ನೇ ತಾರೀಕು ನೆಟ್ಫ್ಲಿಕ್ಸ್ ನಲ್ಲಿ ಈ ಒಂದು ಚಿತ್ರ ತೆರೆ ಕಂಡ ಮೇಲಂತೂ ದೇಶಾದ್ಯಂತ ಸಕ್ಕತ್ ಸದ್ದನ್ನ ಮಾಡ್ತಾ ಇದೆ.
ನಿಮ್ಮಲ್ಲೂ ಕೂಡ ಹಲವರು ಈಗಾಗಲೇ ಈ ಒಂದು ಚಿತ್ರವನ್ನ ವೀಕ್ಷಣೆ ಮಾಡಿರ್ತೀರಿ ಈ ಒಂದು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲೇಬೇಕು ಅಂತ ಭಾರತೀಯ ಸಿನಿ ರಸಿಕರು ಆಸೆ ಪಡುತ್ತಿದ್ದಾರೆ.
ಇನ್ನು ಈ ಒಂದು ಚಿತ್ರದಲ್ಲಿ ವೀಕ್ಷಕರಿಗೆ ಅರ್ಥ ಆಗದಂತಹ ಅಥವಾ ಸೂಕ್ಷ್ಮ ವಿಷಯಗಳನ್ನು ಹೇಗೆ ತೋರಿಸಲಾಗಿದೆ ಅಂತ ತಿಳಿಸುವಂತಹ ಹಲವು ಪಾಯಿಂಟ್ ಗಳನ್ನ ಈ ಒಂದು ವಿಡಿಯೋದಲ್ಲಿ ತಿಳಿಸ್ತೀನಿ.
ಹಲವರಿಗೆ ಈ ಒಂದು ಚಿತ್ರದಲ್ಲಿ ಇರುವಂತಹ ದೃಶ್ಯಗಳು ಗೊಂದಲಮಯವಾಗಿವೆ ಹಾಗಾಗಿ ಈ ಒಂದು ವಿಡಿಯೋ ನೋಡಿದಮೇಲೆ ಮತ್ತೊಮ್ಮೆ ಆ ಒಂದು ಸಿನಿಮಾ ನೋಡಿದರೆ ನಿಮಗೆ ಖಂಡಿತ ಎಲ್ಲವೂ ಕೂಡ ಬಗೆಹರಿಯುತ್ತೆ.
ವೀಕ್ಷಕರೇ ಚಿತ್ರದ ನಾಯಕ ನಜೀಮ್ ಉತ್ತಮ ನಿರೀಕ್ಷೆಯಲ್ಲಿ ಸುಂದರವಾದಂತಹ ಕೇರಳದಿಂದ ಅರೇಬಿಯಾದ ಮರುಭೂಮಿಗೆ ಹೊಲಸೆ ಹೋಗ್ತಾನೆ. ಆದರೆ ಅವನ ಅದೃಷ್ಟ ನೆಟ್ಕಿರುವುದಿಲ್ಲ ಎಷ್ಟೋ ಆಸೆ ಇಟ್ಟುಕೊಂಡು ಹೋದವನು ಅಲ್ಲಿ ಕುರಿ ಕಾಯಬೇಕಾದಂತಹ ಪರಿಸ್ಥಿತಿಗೆ ಸಿಲುಕುತ್ತಾನೆ.
ಅಲ್ಲಿಂದ ಅವನು ಸುರಕ್ಷಿತವಾಗಿ ಮನೆಗೆ ಮಾಡೋದಕ್ಕೆ ಹಾಗೂ ತನ್ನ ಪ್ರಾಣಕ್ಕಾಗಿ ಹೋರಾಡುವ ನಿಜ ಘಟನೆ ಆಧರಿಸಿದ ಕಥೆನೇ ಈ ಒಂದು ಸಿನಿಮಾ, ಇದರಲ್ಲಿ ಎಲ್ಲೂ ಕೂಡ ಲಯ ತಪ್ಪದೆ ಹಾಗೂ ಯಾವ ಪಾತ್ರವನ್ನ ಅಥವಾ ಯಾವ ಸಂಗತಿಯನ್ನು ನಿರ್ಲಕ್ಷ ಮಾಡದೆ ತುಂಬಾ ಅಚ್ಚುಕಟ್ಟಾಗಿನೇ ಚಿತ್ರೀಕರಣ ಮಾಡಲಾಗಿದ್ದು ಅಲ್ಲಿ ಕೆಲವು ಸಂಗತಿಗಳ ಬಗ್ಗೆ ನೋಡುಗರು ಗಮನವನ್ನು ಹರಿಸಿಲ್ಲ ಅಥವಾ ಅವು ಎಲ್ಲರಿಗೂ ಅರ್ಥ ಆಗಿರೋದಿಲ್ಲ ಅವುಗಳನ್ನ ಈ ಒಂದು ವಿಡಿಯೋದಲ್ಲಿ ಈ ಮುಂದೆ ತಿಳಿಯೋಣ.
ಅದರಲ್ಲಿ ಮೊದಲನೇ ಪಾಯಿಂಟ್ ಇಲ್ಲಿ ನಾವು ನಜೀಬ್ ನೀರನ್ನು ಕುಡಿಯುವುದನ್ನ ನೋಡಬಹುದು ಅವನು ಕುರಿ ಮೇಕೆಗಳಂತೆ ಅಥವಾ ಪ್ರಾಣಿಗಳಂತೆ ನೀರನ್ನ ಕುಡಿತಾನೆ ಆದರೆ ಕುತೂಹಲಕಾರಿ ಅಂಶ ಏನು ಅಂದ್ರೆ ಈ ಒಂದು ದೃಶ್ಯದಲ್ಲಿ ಅವನು ನೋಡುವ ರೀತಿಯನ್ನ ಉದ್ದೇಶಪೂರ್ವಕವಾಗಿನೇ ಮಾಡಲಾಗಿದೆ.
ಅವನ ಕಣ್ಣುಗಳ ಬಿಳಿ ಭಾಗನೇ ಹೆಚ್ಚಾಗಿ ಕಾಣಿಸುತ್ತೆ ಮತ್ತೆ ನೀವು ಹಿಂದೆ ನೋಡಿದರೆ ಮೇಕೆಗಳ ಕಣ್ಣುಗಳು ಕೂಡ ಬಿಳಿಯಾಗಿ ಹೊಳಿತಾ ಇರುತ್ತವೆ ಈ ಮೂಲಕ ನಜೀಬ್ ಮತ್ತು ಮೇಕೆಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂಬುದನ್ನ ಈ ಒಂದು ಸೀನ್ ನಲ್ಲಿ ತೋರಿಸಲಾಗಿದೆ.
ಇನ್ನು ನೀವಿಲ್ಲಿ ನಜೀಬ್ ರೊಟ್ಟಿಯನ್ನು ಅಗಿಯೋದನ್ನ ನೋಡಬಹುದು ಕುರಿ ಮೇಕೆಗಳೊಂದಿಗೆ ವರ್ಷಗಟ್ಟಲೆ ಇದ್ದು ಇದ್ದು ಅವನು ಕೂಡ ಅವುಗಳ ಹಾಗೇನೆ ಅಗಿಯೋದನ್ನ ನೀವು ಇದರಲ್ಲಿ ಗಮನಿಸಬಹುದು. ಆದರೆ ಇದಕ್ಕೂ ಮೊದಲು ಅವನು ಸಾಮಾನ್ಯ ವ್ಯಕ್ತಿ ಅಂತಾನೆ ತಿಂತಾ ಇದ್ದ ಅಂದ್ರೆ ಇವನ ಜೀವನ ಕೂಡ ಆ ಹಾಡುಗಳ ರೀತಿನೇ ಬದಲಾಗಿದೆ ಅನ್ನೋದನ್ನ ಈ ಒಂದು ಸೀನ್ ನಲ್ಲಿ ತೋರಿಸಲಾಗಿದೆ.
ಇನ್ನು ಎರಡನೇ ಪಾಯಿಂಟ್ ಏನಪ್ಪಾ ಅಂದ್ರೆ ಈ ಒಂದು ಚಿತ್ರದ ಶೀರ್ಷಿಕೆನಲ್ಲಿಯೇ ಒಂದು ಕುತೂಹಲಕಾರಿ ಅಂಶವನ್ನ ಹೇಳಿದ್ದಾರೆ. ಅದೇನಪ್ಪಾ ಅಂದ್ರೆ ಇದರ ಆರಂಭಿಕ ಅಕ್ಷರಗಳು ದಪ್ಪವಾಗಿದ್ದು ನಂತರದ ಅಕ್ಷರಗಳು ತೆಳುವಾಗುತ್ತಾ ಹೋಗುತ್ತವೆ.
ಅಂದ್ರೆ ಇದು ಚಿತ್ರದಲ್ಲಿ ನಜೀಬ್ನ ರೂಪಾಂತರವನ್ನ ತೋರಿಸಿಕೊಡುತ್ತೆ ಈ ಒಂದು ಸಿನಿಮಾದಲ್ಲಿ ಅವನು ಆರಂಭದಲ್ಲಿ ಆರೋಗ್ಯವಂತ ಹಾಗೂ ಸದೃಢನಾಗಿದ್ದು ಚಿತ್ರದ ಅಂತ್ಯದ ವೇಳೆ ಅವನು ಅಕ್ಷರಗಳಂತೆ ತೆಳ್ಳಗಿನ ಮತ್ತು ದುರ್ಬಲ ಮನುಷ್ಯ ಆಗ್ತಾನೆ ಅನ್ನೋದನ್ನ ಇದು ಸೂಚಿಸುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.