ಇದು ನೀವರಿಯದ ಕುರಿ ಕಾಯುವವರ ಅಚ್ಚರಿ ಜೀವನ ಗೊತ್ತಾ ಹೇಗಿರುತ್ತೆ ಅವರ ಜೀವನಶೈಲಿ

ಇದು ನೀವರಿಯದ ಕುರಿ ಕಾಯುವವರ ಅಚ್ಚರಿ ಜೀವನ ಗೊತ್ತಾ ಹೇಗಿರುತ್ತೆ ಅವರ ಜೀವನಶೈಲಿ… ಚೀನಾ ಪಾಕಿಸ್ತಾನ ಬಾರ್ಡರ್ ನಿಂದ ಹಿಡಿದು ಉತ್ತರ ಕರ್ನಾಟಕದ ಬಯಲು ಸೀಮೆವರೆಗೂ ನೀವು ಕುರಿಗಾವಲುಗಾರರು ಹಲವು ಕಡೆ ಸಿಗುತ್ತಾರೆ ಮಳೆಗಾಲದಲ್ಲಿ ನೆನೆದು ಚಳಿಗಾಲದಲ್ಲಿ ಮರಗಟ್ಟೆ ಬೇಸಿಗೆ ಕಾಲದಲ್ಲಿ ಬೆಂದುಹೋಗುವಂತಹ ಅವರ ಜೀವ ಹಲವು ತಲೆಮಾರುಗಳಿಂದ ಇದನ್ನೆಲ್ಲಾ ಸಹಿಸಿಕೊಳ್ಳುತ್ತಲೇ ಬಂದಿದೆ.

WhatsApp Group Join Now
Telegram Group Join Now

ಇವತ್ತು ನಾವು ಅವರ ಬದುಕು ಬವಣೆ ಆದಾಯ ನಷ್ಟ ದ ಬಗ್ಗೆ ಸ್ವಲ್ಪ ತಿಳಿಯುತ್ತಾ ಹೋಗೋಣ. ಈ ಕುರಿ ಕಾಯುವ ಕೆಲಸ ಇವತ್ತು ಮತ್ತು ನೆನ್ನೆ ಅದಲ್ಲ ಅನಾದಿ ಕಾಲದಿಂದಲೂ ಕೂಡ ಈ ಒಂದು ವೃತ್ತಿ ನಡೆದುಕೊಂಡು ಬಂದಿದೆ ಜನರು ಮಾಡುವಂತಹ ವೃತ್ತಿ ಆಧಾರದ ಮೇಲೆ ಜಾತಿಗಳು ಹುಟ್ಟಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ ಹಾಗೆ ಕುರಿ ಕಾಯುವವರನ್ನು ಕುರುಬರು ಎಂದು ಕರೆಸಿಕೊಂಡರು ಅಂದರೆ ಕುರುಬರ ಕುಲಕಸುಬು.

ಈ ಕುರಿಯನ್ನು ಕಾಯುವುದಾಗಿತ್ತು ಆದರೆ ಕಾಲಕ್ರಮೇಣ ಇತರ ವೃತ್ತಿಗಳಂತೆ ಕುರಿ ಕಾಯುವ ಕೆಲಸವನ್ನು ಕೂಡ ಇತರ ಜಾತಿ ಧರ್ಮದವರು ಮಾಡುವುದಕ್ಕೆ ಶುರು ಮಾಡಿದರು ಇತ್ತೀಚೆಗೆ ಬಹುತೇಕ ಕುರುಬರು ತಮ್ಮ ಕುಲಕಸುವನ್ನು ಮರೆತು ವಿವಿಧ ರೀತಿಯ ವೃತ್ತಿ ನೌಕರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ ಆದರೆ ಈಗಲೂ ಕೂಡ ನೀವು ಉತ್ತರ ಕರ್ನಾಟಕದ ಕುರುಬರಲ್ಲಿ ಕುರಿ ಗಳ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದನ್ನು ನೋಡಬಹುದು.

ಸ್ವಲ್ಪ ಜಾಗ ಸಿಕ್ಕರೆ ಸಾಕು ಒಂದೆರಡು ಕುರಿಗಳನ್ನು ಸಾಕೋಣ ಎಂದು ಅನಿಸುತ್ತದೆ ಅವರ ಪಾಲಿಗೆ ಕುರಿಯನ್ನುವುದು ಲಕ್ಷ್ಮಿ ಸ್ವರೂಪ ಇವತ್ತು ಕೂಡ ಅವರ ಮನೆಗಳಲ್ಲಿ ಹುಟ್ಟುವ ಕುರಿಗೆ ಮರಿ ಕುರಿಯನ್ನದೆ ಬದುಕು ಎಂದು ಹೇಳುತ್ತಾರೆ ಇದರಲ್ಲಿಯೇ ಅವರು ಕುರಿಗಳ ಬಗ್ಗೆ ಇಟ್ಟುಕೊಂಡಂತಹ ಭಾವನೆಯನ್ನ ಅರ್ಥಮಾಡಿಕೊಳ್ಳಬಹುದು.

ಉತ್ತರ ಕರ್ನಾಟಕದ ಬಯಲುಸೀಮೆಯಲ್ಲಿ ಕುರಿ ಕಾಯುವವರನ್ನು ಹಾಗೂ ದನ ಕಾಯುವವರನ್ನು ಕೂಡ ನಾವು ನೋಡಬಹುದು ಆದರೆ ವ್ಯತ್ಯಾಸ ಏನು ಎಂದರೆ ದನ ಕಾಯುವವರು ಬೆಳಗ್ಗೆಯಿಂದ ಸಂಜೆಯವರೆಗೂ ದನಗಳನ್ನು ಮೆಹಿಸಿಕೊಂಡು ಹೊತ್ತು ಮುಳುಗುವಷ್ಟರಲ್ಲಿ ಮನೆ ಸೇರಿಕೊಂಡರೆ ಕುರಿ ಕಾಯುವವರು ಒಮ್ಮೆ ಮನೆಯಲ್ಲಿ ಬಿಟ್ಟರೆ ಮತ್ತೆ ಮನೆ ನೋಡುವುದು ಅರೇಳು ತಿಂಗಳ ನಂತರ.

ಹೀಗೆ ತಿಂಗಳುಗಟ್ಟಲೆ ಊರುಗಳನ್ನು ಬಿಟ್ಟು ಅಲೆಮಾರಿಗಳಂತೆ ಕುರಿಯನ್ನು ಮೇಯಿಸುತ್ತಾ ನಾಡಿನಾದ್ಯಂತ ತಿರುಗಾಡುವ ಇವರು ಕುರಿ ಗಾಯಿಗಳಾಗಿ ಇರುತ್ತಾರೆ ಸ್ಕೂಲಿಗೆ ಹೋಗುವಂತಹ ಮಕ್ಕಳನ್ನು ಮಾತ್ರ ಊರಿನಲ್ಲಿ ಅಜ್ಜ ಅಜ್ಜಿಯ ಜೊತೆ ಅಥವಾ ಹಾಸ್ಟೆಲ್ ಗಳಲ್ಲಿ ಬಿಟ್ಟು ಗಂಡ ಹೆಂಡತಿ ಪುಟ್ಟ ಮಕ್ಕಳ ಸಮೇತ ಎಲ್ಲರೂ ಕೂಡ ಹೀಗೆ ಕುರಿ ಹಿಂಡಲ್ಲಿ ಹೊರಟುಬಿಡುತ್ತಾರೆ.

ಸಂಜೆ ಸ್ವಲ್ಪ ಮೋಡಿ ಕವಿದಂತಹ ವಾತಾವರಣ ಉಂಟಾದರೆ ಯಾವಾಗ ಬೇಗ ಹೋಗಿ ನಾವು ಮನೆಯನ್ನು ಸೇರಿಕೊಳ್ಳುತ್ತೇವೆ ಎಂದು ನಮಗೆ ಅನಿಸುತ್ತದೆ ಮನೆಯಿಂದಲೂ ಕೂಡ ನಮಗೆ ಎಲ್ಲಿದ್ದೀರಾ ಮಳೆ ಬರುವ ಹಾಗಿದೆ ಮನೆಗೆ ಬನ್ನಿ ಎಂದು ಫೋನ್ ಗಳು ಬರುತ್ತಾ ಇರುತ್ತವೆ ಆದರೆ ಇವರಿಗೆ ಮಳೆ ಗಾಳಿ ಚಳಿ ಬಿಸಿಲು ಇದ್ಯಾವುದೂ ಕೂಡ ಲೆಕ್ಕಕ್ಕೆ ಇಲ್ಲ ವಾತಾವರಣ ಹೇಗಿದ್ದರೂ ಕೂಡ ಅವರು ಅದಕ್ಕೆ ಹೊಂದಿಕೊಳ್ಳಲೇಬೇಕು,

ಈ ಕುರಿಗಳು ಇರುವ ಕಡೆ ಸಹಜವಾಗಿ ಸಿಡಿಲು ಬಡಿಯುವುದು ಹೆಚ್ಚು ಕುರಿ ಹಿಂಡಿನೊಂದಿಗೆ ಯಾವಾಗಲೂ ಕೂಡ ಇರುವಂತಹ ಕುರಿ ಗಾಯಿಗಳು ಎಷ್ಟೋ ಬಾರಿ ಸಿಡಿಲಿಗೆ ಬಲಿಯಾದಂತಹ ಉದಾಹರಣೆಗಳು ಕೂಡ ಇವೆ ಇನ್ನು ಇವರ ಜೀವನಶೈಲಿ ಹೇಗಿರುತ್ತದೆ ಎಂದು ನೋಡುವುದಾದರೆ ಮಾಮೂಲಾಗಿ ರೈತರ ಜಮೀನಿನಲ್ಲಿ ಬೀಡನ್ನು ಬಿಡುವಂತಹ ಇವರು.

ಪ್ರತಿ ದಿನ ಬೆಳಗಾದ ಕೂಡಲೇ ಎದ್ದು ಮಹಿಳೆಯರು ಅಡುಗೆಯನ್ನು ಮಾಡುವುದಕ್ಕೆ ನಿಂತರೆ ಗಂಡಸರು ಹಿಂಡಿನಲ್ಲಿರುವ ಚಿಕ್ಕಮರಿಗಳಿಗೆ ಸುತ್ತಮುತ್ತ ಗಿಡ ಮರಗಳಿಂದ ಸೊಪ್ಪು ಬಳ್ಳಿ ಇತ್ಯಾದಿಗಳನ್ನು ಕತ್ತರಿಸಿಕೊಂಡು ತರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]