ಮುಟ್ಟಾದ ಸ್ತ್ರೀಯರು ವರಮಹಾಲಕ್ಷ್ಮಿ ವ್ರತವನ್ನು ಮಾಡಬಹುದಾ…. ಇದೇ ಶುಕ್ರವಾರ ಶ್ರಾವಣದ ಎರಡನೇ ಶುಕ್ರವಾರ ಹುಣ್ಣಿಮೆಯ ಹಿಂದೆ ಬರುವಂತಹ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನ ನಮ್ಮ ಪೂರ್ವಿಕರು ಆಚರಣೆ ಮಾಡುತ್ತಿದ್ದರು ಈಗ ವ್ರತವನ್ನು ಆಚರಣೆ ಮಾಡುವಂತವರ ಸಂಖ್ಯೆ ತುಂಬಾ ಕಡಿಮೆ ಆಗಿ ಹೋಗಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.
ಅದು ಒಂದರ ಮಟ್ಟಕ್ಕೆ ತಪ್ಪು ಕೂಡ ಹೌದು ಒಂದರ ಮಟ್ಟಿಗೆ ಸರಿ ಕೂಡ ಹೌದು ಹಾಗಾಗಿ ಯಾವುದು ಸರಿ ಯಾವುದು ತಪ್ಪು ಎನ್ನುವುದಕ್ಕಿಂತ ವರಮಹಾಲಕ್ಷ್ಮಿ ವ್ರತವನ್ನು ಯಾಕೆ ಆಚರಣೆ ಮಾಡುತ್ತಾ ಇದ್ದರು ಅನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಇದೇ ಸಂದರ್ಭದಲ್ಲಿ ಈ ವ್ರತವನ್ನು ಆಚರಣೆ ಮಾಡುವ ಸ್ತ್ರೀಗೆ ಏನಾದರೂ ಮುಟ್ಟಿನ ಸಮಸ್ಯೆ ಬಂದರೆ ಏನು ಮಾಡಬೇಕು.
ಮುಟ್ಟಿನ ಸಮಸ್ಯೆ ಬಂದಾಗ ಏನಾದರೂ ವರಮಹಾಲಕ್ಷ್ಮಿ ಹಬ್ಬದ ವ್ರತವನ್ನು ಆಚರಣೆ ಮಾಡಬಹುದಾ ಆಸ್ತ್ರಿಯು ಅಥವಾ ಮಾಡಬಾರದ ಮಾಡುವ ಹಾಗೆ ಇದ್ದರೆ ಇನ್ಯಾವಾಗ ಮಾಡಬೇಕು ಎನ್ನುವಂತಹ ಸವಿವರವಾದ ಒಂದು ಮಾಹಿತಿಯನ್ನ ಈಗ ನಾವು ತಿಳಿದುಕೊಳ್ಳೋಣ. ಇಲ್ಲಿ ಕೇವಲ ನಾವು ನನ್ನ ತಾತ ಹೇಳಿದ ಕಥೆ ನನ್ನ ಅಜ್ಜಿ ಹೇಳಿದ ಕಥೆ ಅಪ್ಪ ಮಾಡುತ್ತಾ ಇದ್ದರು.
ಅಮ್ಮ ಮಾಡುತ್ತಿದ್ದರು ಹಾಗಾಗಿ ನಾನು ಮಾಡ್ತೀನಿ ಅನ್ನುವಂತಹ ಮನಸ್ಥಿತಿ ಇರುವವರು ಪ್ರತಿಯೊಬ್ಬರೂ ಕೂಡ ಗಮನಕೊಟ್ಟು ಓದಬೇಕು ಮತ್ತು ಹಿರಿಯರಾದವರು ಏನು ಮಾಡಬೇಕು ಎಂದರೆ ಮಕ್ಕಳು ಕೇಳುವಂತಹ ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರವನ್ನ ಕೊಡದೆ ದೊಡ್ಡವರನ್ನ ಪ್ರಶ್ನೆ ಮಾಡಬಾರದು ಎನ್ನುವ ಮಾತನ್ನು ಹೇಳದೆ ಇದರ ಹಿಂದೆ ಇರುವಂತಹ ವೈಜ್ಞಾನಿಕ ವಿಚಾರಗಳೇನು ಎನ್ನುವುದನ್ನು ತಿಳಿದುಕೊಂಡು.
ಆಧ್ಯಾತ್ಮ ವಿಜ್ಞಾನ ಎರಡನ್ನು ತಿಳಿದುಕೊಂಡು ನಿಮ್ಮ ನಿಮ್ಮ ಮಕ್ಕಳಿಗೆ ನಮ್ ಆಚರಣೆಯ ಮಹತ್ವವನ್ನು ತಿಳಿಸಿ ಕೊಡುತ್ತಾ ಹೋಗುವುದು ತುಂಬಾ ಒಳ್ಳೆಯದು, ಮೊದಲನೆಯದಾಗಿ ಹೇಳಬೇಕು ಎಂದರೆ ಇದು ಹಬ್ಬವಲ್ಲ ಹಬ್ಬದ ರೀತಿ ಮಾಡುವಂತದ್ದಲ್ಲ ಇದು ವ್ರತ ಈ ವ್ರತ ಆಚರಣೆಯನ್ನು ಹೇಗೆ ಮಾಡಬೇಕು ಎಂದು ಶಾಸ್ತ್ರದಲ್ಲಿ ಉಲ್ಲೇಖವಿದೆಯೋ ಅದೇ ರೀತಿಯಾಗಿ ಮಾಡಬೇಕು.
ಇದಕ್ಕೆ ನಾನು ಸಾಕಷ್ಟು ವೈಜ್ಞಾನಿಕ ಕಾರಣವನ್ನು ಕೊಡುತ್ತೇನೆ. ಮುಟ್ಟಾದಂತಹ ಸ್ತ್ರೀಯರು ವರಮಹಾಲಕ್ಷ್ಮಿ ಹಬ್ಬವನ್ನು ಮಾಡಬಹುದ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಬಹುದಾ ಎಂದು ತುಂಬಾ ಜನ ಹೆಣ್ಣು ಮಕ್ಕಳು ಕೇಳುತ್ತಾ ಇದ್ದೀರಾ ಸ್ತ್ರೀಯರು ಈ ವರಮಹಾಲಕ್ಷ್ಮಿ ಹಬ್ಬ ಅಥವಾ ವ್ರತವನ್ನು ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಎಷ್ಟು ಜನ ಹೇಳುತ್ತಾರೆ ನಾವು ಎಲ್ಲವನ್ನು ರೆಡಿ ಮಾಡಿ ಇಟ್ಟುಕೊಂಡಿದ್ದೇವೆ ಆದರೆ ಸಂಜೆ ನಾನು ಮುಟ್ಟಾದೆ ಏನು ಮಾಡುವುದು ಇನ್ನೇನು ಬೆಳಗ್ಗೆ ದೀಪ ಹಚ್ಚಬೇಕು ಮುಟ್ಟಾದೆ ಏನು ಮಾಡಬೇಕು ಯಾವುದೇ ಅಡ್ಡಿ ಆತಂಕ ಅಳುಕುಗಳು ಇಲ್ಲದೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಭಯ ಇಲ್ಲದೆ ನೀವು ಈ ವ್ರತವನ್ನು ಅಥವಾ ಈ ಹಬ್ಬದ ಪೂಜೆಯನ್ನು ವಿಧಿ ವಿಧಾನವನ್ನು ಸಂಪೂರ್ಣಗೊಳಿಸಬಹುದು.
ಪ್ರತಿ ಹೆಣ್ಣು ಮಕ್ಕಳಿಗೂ ನಾನು ಹೇಳುವುದು ಇಷ್ಟೇ ಪ್ರತಿ ಮಹಿಳೆಯೂ ಕೂಡ ಅರ್ಥಮಾಡಿಕೊಳ್ಳಿ ಮುಟ್ಟಾದ ಸಮಯ ಹತ್ತಿರ ಬಂತ ಅಥವಾ ಮುಟ್ಟೆ ಹಾಗೆ ಹೋದರ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ನಿಮ್ಮ ಪಾಡಿಗೆ ನೀವು ಈ ಹಬ್ಬವನ್ನು ಅಥವಾ ವ್ರತದ ನಿಯಮಗಳನ್ನು ನೀವು ಅನುಸರಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.