ಕೊಹಿನೂರ್ ವಜ್ರ ಧರಿಸಿದ ರಾಜರುಗಳೆಲ್ಲಾ ಸತ್ತು ಹೋಗಿದ್ದು ಯಾಕೆ…ಕೊಹಿನೂರ್ ವಜ್ರದ ಅಸಲಿ ರಹಸ್ಯ..ಇದು
ಕೊಹಿನೂರು ವಜ್ರದ ಅಸಲಿ ರಹಸ್ಯ… ಕೊಹಿನೂರು ಡೈಮಂಡ್ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಫೇಮಸ್ ಆಗಿರುವ ಡೈಮಂಡ್ ಇದು ಕೊಹಿನೂರು ವಜ್ರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ನಡೆದಂತಹ ಯುದ್ಧಗಳು ಹಿಂಸಾಚಾರ ದರೋಡೆಗಳು ಅದೆಷ್ಟೋ ಇದೆ ಇದೇ ಕಾರಣಕ್ಕೆ ಕೊಹಿನೂರು ವಜ್ರಕ್ಕೆ ಇರುವಂತಹ ಪ್ರಖ್ಯಾತಿ ಇಡೀ ಪ್ರಪಂಚದಲ್ಲಿಯೇ ಬೇರೆ ಯಾವ ವಜ್ರಕ್ಕೂ ಇಲ್ಲ.
ಇದರ ಬೆಲೆ ಎಷ್ಟು ಇರಬಹುದು ಎಂದು ಹೇಳುವುದಕ್ಕೆ ಇಲ್ಲಿಯವರೆಗೂ ಈ ವಜ್ರವನ್ನು ಯಾರು ಕೂಡ ಕೊಂಡುಕೊಳ್ಳುವುದಾಗಲಿ ಮಾರುವುದಾಗಲಿ ನಡೆದೆ ಇಲ್ಲ ಕೇವಲ ದೋಚಿಕೊಳ್ಳುವುದು ಗೆದ್ದುಕೊಳ್ಳುವುದು ಮಾತ್ರ ನಡೆದಿದೆ ನಾದೀಶ ಎಂಬ ರಾಜ ಕೊಹಿನೂರು ವಜ್ರಕ್ಕೆ ಇರುವಂತಹ ಬೆಲೆಯನ್ನು ಈ ರೀತಿಯಾಗಿ ಹೇಳಿದ್ದಾನೆ.
ಒಬ್ಬ ಶಕ್ತಿವಂತನಾದ ಒಬ್ಬ ಮನುಷ್ಯ ಇದು ಕಲ್ಲುಗಳನ್ನು ತೆಗೆದುಕೊಂಡು ಒಂದೊಂದು ಕಲ್ಲುಗಳನ್ನು ಒಂದೊಂದು ದಿಕ್ಕಿಗೆ ತುಂಬಾ ದೂರದಲ್ಲಿ ಎಸೆದು ಮತ್ತೊಂದು ಕಲ್ಲನ್ನ ಜೋರಾಗಿ ಮೇಲಕ್ಕೆ ಎಸೆದರೆ ಎಷ್ಟು ಜಾಗವಿರುತ್ತದೆಯೋ ಅದಷ್ಟೂ ಜಾಗಕ್ಕೆ ಬಂಗಾರವನ್ನು ತುಂಬಿದರೂ ಸಹ ಅದರ ಬೆಲೆ ಕೊಹಿನೂರು ವಜ್ರಕಿಂತ ಕಡಿಮೆ ಎಂದು ಹೇಳಿದ್ದಾನೆ.
ಇನ್ನೊಂದು ರೀತಿಯಲ್ಲಿ ಪ್ರಪಂಚದಲ್ಲಿರುವ ಜನಗಳಿಗೆ ಒಂದು ದಿನದ ಆಹಾರಕ್ಕೆ ಎಷ್ಟು ಖರ್ಚಾಗುತ್ತದೆಯೋ ಅಷ್ಟು ಖರ್ಚಿನ ಬೆಲೆ ಕೊಹಿನೂರು ವಜ್ರಕ್ಕೆ ಇದೆ ಎಂದು ಬಾಬರ್ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ ಅಷ್ಟಕ್ಕೂ ಈ ಕೊಹಿನೂರು ವಜ್ರದ ಅಸಲಿ ಕಥೆ ಏನು? ಈ ಕೊಹಿನೂರು ವಜ್ರವನ್ನು ಯಾರು ಧರಿಸಿಕೊಳ್ಳುತ್ತಾರೆ ಅವರು ಸತ್ತು ಹೋಗುತ್ತಾರೆ ನಾಶವಾಗುತ್ತಾರೆ ಎನ್ನುವುದು ನಿಜಾನಾ.
ಈಗ ಕೊಹಿನೂರು ವಜ್ರ ಎಲ್ಲಿದೆ ಎನ್ನುವ ಪೂರ್ತಿ ವಿಚಾರವನ್ನು ಈಗ ನಾನು ನಿಮಗೆ ತಿಳಿಸುತ್ತಾ ಹೋಗುತ್ತೇನೆ. ಕ್ರಿಸ್ತಶಕ 11ನೇ ಶತಮಾನದಲ್ಲಿ ಕಾಕತೆಯ ವಂಶದ ರಾಜ ಪ್ರತಾಪ ರುದ್ರನ ಹತ್ತಿರ ಕೊಹಿನೂರು ಡೈಮಂಡ್ ಇತ್ತು ಈ ಕೊಹಿನೂರು ವಜ್ರವನ್ನ ಯಾರು ಹೊಂದಿರುತ್ತಾರೆ ಅವರನ್ನು ಶ್ರೇಷ್ಠರು ಎಂದು ಭಾವಿಸಲಾಗುತ್ತಿತ್ತು.
ಅಲ್ಲದೆ ಈ ವಜ್ರಕ್ಕೆ ಸರಿಸಾಟಿ ಆದಂತಹ ವಜ್ರ ಮತ್ತೊಂದು ಇರಲಿಲ್ಲ ಈ ಕೊಹಿನೂರು ವಜ್ರದ ಮಹತ್ವವನ್ನು ಕೇಳಿದಂತಹ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಕಾಕತಿಯ ಮೇಲೆ ದಾಳಿ ಮಾಡುತ್ತಾನೆ ಕಾಕತಿಯ ರಾಜ ಪ್ರಥಪ ರುದ್ರ ಎಷ್ಟೇ ಪ್ರಬಲವಾಗಿ ಯುದ್ಧ ಮಾಡಿದರು ದೆಹಲಿ ಸುಲ್ತಾನನ ವಿರುದ್ಧ ಸೋತು ಹೋಗುತ್ತಾರೆ.
ನಂತರ ಅಲ್ಲಾವುದ್ದೀನ್ ಖಿಲ್ಜಿ ಕೊಹಿನೂರು ವಜ್ರವನ್ನು ತೆಗೆದುಕೊಂಡು ದೆಹಲಿಗೆ ಹೋಗಿಬಿಡುತ್ತಾನೆ ದೆಹಲಿಯ ಸುಲ್ತಾನನ ಬಳಿ ಇರುವಂತಹ ಈ ಕೊಹಿನೂರು ವಜ್ರದ ಬಗ್ಗೆ ತಿಳಿದುಕೊಂಡಂತಹ ಬಾಬರ್ ಕ್ರಿಸ್ತಶಕ 1526 ರಲ್ಲಿ ದೆಹಲಿಯ ಮೇಲೆ ಆಕ್ರಮಣವನ್ನು ಮಾಡುತ್ತಾನೆ ಆಗ ದೆಹಲಿ ಯನ್ನು ಸುಲ್ತಾನ್ ಇಬ್ರಾಹಿಂ ಲೋದಿ ಆಳುತ್ತಾ ಇರುತ್ತಾನೆ.
ಅವನ ಮೇಲೆ ಬಾಬರ್ ಯುದ್ಧವನ್ನು ಮಾಡಿ ಕೊಹಿನೂರು ವಜ್ರವನ್ನು ತನ್ನ ಕೈವಶ ಮಾಡಿಕೊಂಡು ದೆಹಲಿಯಲ್ಲಿ ಮೊಘಲ ಸಾಮ್ರಾಜ್ಯ ಎಂಬ ಸಾಮ್ರಾಜ್ಯವನ್ನೇ ಸ್ಥಾಪಿಸುತ್ತಾನೆ ಆಗ ಬಾಬರ್ ತನ್ನ ಆತ್ಮ ಚರಿತ್ರೆಯಲ್ಲಿ ಈ ವಜ್ರದ ಬಗ್ಗೆ ಬರೆದುಕೊಂಡಿದ್ದ ಆದರೆ ಆ ವಜ್ರವನ್ನ ಬಾಬರ್ ಪರಿಚಯಿಸಿದ್ದರಿಂದ ಎಲ್ಲರೂ ಅದನ್ನು ಬಾಬರ್ ವಜ್ರ ಎಂದು ಕರೆಯುತ್ತಿದ್ದರು.
ನಂತರ ಆ ವಜ್ರ ಬಾಬರ್ನಿಂದ ಶಹಜಹನ್ನ ಕೈ ಸೇರುತ್ತದೆ ಆಗ ಶಹಜಹಾನ್ ಮುತ್ತುರತ್ನಗಳಿಂದಲೇ ಕೂಡಿದ ಮಯೂರ ಸಿಂಹಾಸನವನ್ನ ನಿರ್ಮಿಸಿಕೊಂಡಿದ್ದ ಆ ಮಯೂರ ಸಿಂಹಾಸನದಲ್ಲಿ ಕೊಹಿನೂರು ವಜ್ರವನ್ನು ಅಡಗಿಸಿಟ್ಟಿದ್ದ ಇನ್ನೊಂದು ವಿಚಾರ ಏನು ಎಂದರೆ ಪೂರ್ತಿಯಾಗಿ ಚಿನ್ನ ಮುತ್ತು ವಜ್ರ ವೈಡೂರ್ಯಗಳಿಂದಲೇ ಸತತ ಏಳು ವರ್ಷಗಳವರೆಗೆ ಮಾಡಲ್ಪಟ್ಟಿದ್ದ ಆ ನವಿಲು ಸಿಂಹಾಸನಗಳ ಮೇಲೆ ನಾಲ್ಕು ತಾಜ್ಮಹಲ್ಗಳಿಗೆ ಸಮಾನವಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.