ದೇವದಾಸಿಯರು ಎಂದರೆ ಯಾರು..ಇವರನ್ನು ಹೇಗೆಲ್ಲಾ ಬಳಸಿಕೊಳ್ತಾರೆ..ಈಗಲೂ ಈ ಪದ್ದತಿ ಇದೆಯಾ ನೋಡಿ
ದೇವದಾಸಿಯರ ಕರಾಳ ಸತ್ಯ… ಅದು 9ನೇ ಶತಮಾನ ದಕ್ಷಿಣ ಭಾರತವನ್ನು ಚೋಳರು ಪಾಂಡ್ಯರು ಆಳುತ್ತಾ ಇದ್ದಂತಹ ಕಾಲ ಪ್ರತಿ ವರ್ಷ ಹಳ್ಳಿಗಳ ದೇವಸ್ಥಾನದಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಪೂಜೆಗಳನ್ನು ಮಾಡಲಾಗುತ್ತಿತ್ತು ರಾತ್ರಿಯ ಸಮಯದಲ್ಲಿ ಕೆಲವೊಂದಷ್ಟು ಜನ ಹೆಣ್ಣು ಮಕ್ಕಳು ಹೂವನ್ನು ಮುಡಿದುಕೊಂಡು ದೊಡ್ಡದಾಗಿ ಹಣೆಗೆ ಕುಂಕುಮವನ್ನು ಇಟ್ಟುಕೊಂಡು.
ಊರನ್ನ ಸುತ್ತಿಕೊಂಡು ಜನಗಳನ್ನು ಕರೆದುಕೊಂಡು ದೇವಸ್ತಾನದ ಹತ್ತಿರ ಬರುತ್ತಾ ಇದ್ದರು ಅವರನ್ನೆ ದೇವದಾಸಿಯರು ಎಂದು ಕರೆಯಲಾಗುತ್ತಿತ್ತು ಅವರಲ್ಲಿ ಕೆಲವೊಂದಷ್ಟು ಜನರ ಹೆಣ್ಣು ಮಕ್ಕಳ ವಯಸ್ಸು ಕೇವಲ 8 ರಿಂದ 14 ವರ್ಷ ಮಾತ್ರ ಈ ದೇವದಾಸಿಯವರು ತಮ್ಮ ಜೀವನವನ್ನು ಪೂರ್ತಿಯಾಗಿ ಆ ಊರಿನಲ್ಲಿ ಇರುತ್ತಿದ್ದಂತಹ ದೇವಸ್ಥಾನಕ್ಕೆ ಮುಡಿಪಾಗಿ ಇಡುತ್ತಿದ್ದರು.
ಈ ದೇವದಾಸಿ ಯರು ವಯಸ್ಸಿನಲ್ಲಿ ತುಂಬಾ ಚಿಕ್ಕವರಾಗಿ ಇರುತ್ತಾ ಇದ್ದಿದ್ದರಿಂದ ಊರಿನವರೆಲ್ಲ ಇವರನ್ನ ದೇವರಿಗೆ ಸಮಾನವಾಗಿ ಕಾಣುತ್ತಾ ಇದ್ದರು ಹೀಗೆ ಪೂರ್ತಿ ಊರಿ ದೇವದಾಸಿಯರ ಹಿಂದೆ ಹೆಜ್ಜೆ ಹಾಕುತ್ತಾ ದೇವಸ್ಥಾನದ ಬಳಿ ಬರುತ್ತಾ ಇದ್ದರು ಊರಿನಲ್ಲಿ ಪೂಜೆ ನಡೆಯುತ್ತಿರಬೇಕಾದರೆ.
ಈ ದೇವದಾಸಿಯರು ಗುಡಿಯಲ್ಲಿ ನಾಟ್ಯ ಮಾಡುತ್ತಾ ಇದ್ದರು ಇವರ ನಾಟ್ಯವನ್ನು ನೋಡಿ ಜನಗಳು ಮೈಮರೆಯುತ್ತಿದ್ದರು ಪೂಜೆ ಮುಗಿದ ಮೇಲೆ ದೇವದಾಸಿಯರು ಬಂದು ಅಲ್ಲಿರುವಂತಹ ಜನಗಳಿಗೆ ದೇವರನ್ನು ತೋರಿಸಿ ಪೂಜೆ ಮುಗೀತು ಎಂದು ಹೇಳಿದ ಮೇಲೆನೆ ಆ ಜನಗಳು ಮನೆಗೆ ಹೋಗುತ್ತಾ ಇದ್ದಿದ್ದು ಆನಂತರ ದೇವದಾಸಿಯರು ಕೂಡ ದೇವಸ್ಥಾನದಲ್ಲಿಯೇ ಮಲಗಿಕೊಳ್ಳುತ್ತಿದ್ದರು.
ಹೀಗೆ ಕಾಲ ಕಳೆಯುತ್ತಾ ಹೋದಂತೆ ದೇವದಾಸಿಯರ ಮೇಲೆ ಇದ್ದಂತಹ ದೈವತ್ವ ಜನಗಳಲ್ಲಿ ಕಡಿಮೆಯಾಗಿಯವರನ್ನು ಬೇರೆ ರೀತಿನೇ ಬಳಸಿಕೊಳ್ಳುವುದಕ್ಕೆ ಶುರುಮಾಡಿದರೂ ಆಗಿನ ಕಾಲದಲ್ಲಿ ದಕ್ಷಿಣ ಭಾಗದಲ್ಲಿ ಚೋಳರ ಸಾಮ್ರಾಜ್ಯ ಹೆಚ್ಚುತ್ತಾ ಹೋಯಿತು ಹೀಗೆ ಅವರ ಸಾಮ್ರಾಜ್ಯ ಹೆಚ್ಚಾಗುತ್ತಾ ಅವರಿಗೆ ಅಪಾರ ಸಂಪತ್ತು ಹರಿದು ಬರುತ್ತದೆ ಇದರಿಂದ ಚೋಳರು ದೇವಸ್ಥಾನಗಳನ್ನ ತುಂಬಾ ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಾ ಹೋಗುತ್ತಾರೆ.
ಆ ಚೋಳರು ದೇವದಾಸಿಯರು ವ್ಯವಸ್ಥೆಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು ದೇವದಾಸಿಯರು ಎಂದರೆ ದೇವರಿಗೆ ದಾಸಿಯರು ಅಥವಾ ದೇವರ ಸೇವಕಿಯರು ಎಂದು ಅರ್ಥ ರಾಜರು ತಮ್ಮ ರಾಜ ಮಂದಿರಗಳಲ್ಲಿ ಮಧ್ಯವನ್ನ ಕುಡಿಯುತ್ತಾ ನಾಟ್ಯವನ್ನು ನೋಡುತ್ತಾ ಕಣ್ಣು ತುಂಬಿಕೊಳ್ಳುತ್ತಿದ್ದರು ಚೋಳರು ದೇವದಾಸ್ಯರ ಕಲೆಯನ್ನ ಪ್ರೋತ್ಸಾಹ ಮಾಡುತ್ತಾ ಇದ್ದಿದ್ದರಿಂದ.
ಆರನೇ ಶತಮಾನದಿಂದ 13ನೇ ಶತಮಾನದವರೆಗೂ ದೇವದಾಸಿಯರಿಗೆ ತುಂಬಾ ಗೌರವವನ್ನು ಕೊಡಲಾಗುತ್ತಿತ್ತು ಇದನ್ನು ಕಂಡು ಪಕ್ಕದ ರಾಜ್ಯದವರು ಕೂಡ ದೇವದಾಸಿ ವ್ಯವಸ್ಥೆಯನ್ನು ತಮ್ಮ ರಾಜ್ಯಗಳಲ್ಲಿಯೂ ಹುಟ್ಟು ಹಾಕಿದರು ನಂತರ ಆ ದೇವದಾಸಿಯರಿಗೆ ದೇವರ ಜೊತೆ ಮದುವೆ ಮಾಡಲಾಗುತ್ತಿತ್ತು.
ಅವರ ಮದುವೆಯ ಆಚಾರ ಹೇಗಿರುತ್ತಿತ್ತು ಎಂದರೆ ಆ ಊರಿನ ಗುಡಿಯಲ್ಲಿ ದೇವರ ಮುಂದೆ ದೇವರ ಬದಲಾಗಿ ಆ ಗುಡಿಯ ಪೂಜಾರಿ ಆ ಹೆಣ್ಣಿಗೆ ತಾಳಿಯನ್ನು ಕಟ್ಟುತ್ತಾರೆ ಆನಂತರ ಆ ಹೆಣ್ಣಿಗೆ ತನ್ನ ಸ್ವಂತ ಕುಟುಂಬ ಅನ್ನುವುದು ಯಾವುದು ಇಲ್ಲದೆ ದೇವರ ಗುಡಿಯಲ್ಲಿಯೇ ದೇವರ ದಾಸಿಯರಾಗಿ ಜೀವನ ಸಾಗಿಸಬೇಕಾಗಿತ್ತು.
ಆ ಕಾಲದಲ್ಲಿ ದೇವದಾಸಿಯರಿಗೆ ತುಂಬಾ ಗೌರವ ಇರುತ್ತದೆ ಊರಿನಲ್ಲಿ ಏನೇ ಸಮಾರಂಭಗಳು ನಡೆದರು ಮುಂಚಿತವಾಗಿ ಇವರನ್ನೇ ಕರೆಯುತ್ತಿದ್ದರು ದೇವದಾಸಿಯರು ಶುಭಕಾರ್ಯಗಳಿಗೆ ಬಂದರೆ ತುಂಬಾ ಒಳ್ಳೆಯದು ಆಗುತ್ತದೆ ಎಂದು ಭಾವಿಸುತ್ತಾ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.