ಇದನ್ನೆಲ್ಲಾ ತಿಳಿದರೆ ಜನ್ಮದಲ್ಲಿ ನಿಮ್ಮ ಕುಕ್ಕರ್ ಲೀಕ್ ಆಗೋದಿಲ್ಲ…ಎಷ್ಟೇ ಹಳೆ ರಬ್ಬರ್ ಇರಲಿ ಎಸೆಯಬೇಡಿ

ಇದನ್ನೆಲ್ಲಾ ತಿಳಿದರೆ ಜನ್ಮದಲ್ಲಿ ನಿಮ್ಮ ಕುಕ್ಕರ್ ಲೀಕ್ ಆಗೋದಿಲ್ಲ…ಎಷ್ಟೇ ಹಳೆ ರಬ್ಬರ್ ಇರಲಿ ಎಸೆಯಬೇಡಿ

WhatsApp Group Join Now
Telegram Group Join Now

ಇದನ್ನೆಲ್ಲ ತಿಳಿದರೆ ಜನ್ಮದಲ್ಲಿ ನಿಮ್ಮ ಕುಕ್ಕರ್ ಲೀಕ್ ಆಗೋದಿಲ್ಲ…. ಇವತ್ತು ನಾವು ಎಲ್ಲರಿಗೂ ಪ್ರಯುಕ್ತವಾಗುವಂತ ಕೆಲವೊಂದಿಷ್ಟು ಕಿಚನ್ ಟಿಪ್ಸ್ ಗಳನ್ನು ನೋಡೋಣ. ನಮ್ಮ ಎಲ್ಲರ ಮನೆಯಲ್ಲಿ ಇರುತ್ತದೆ ಮಣ್ಣಿನ ಪಾತ್ರೆ ಸೌದೆ ಒಲಿಯ ಮೇಲೆ ಇಟ್ಟರೆ ಇದು ಬಿರುಕು ಬಿಡುವುದಿಲ್ಲ ಆದರೆ ನಾವು ಸ್ಟೌ ನ ಮೇಲೆ ಇಟ್ಟರೆ ಆ ಉಷ್ಣಾಂಶಕ್ಕೆ ಬಿರುಕುಗಳು ಬೀಳುತ್ತವೆ.

ಮಣ್ಣಿನ ಪಾತ್ರೆಗೆ ಮತ್ತೆ ನಾವು ಅದರಲ್ಲಿ ಏನಾದ್ರು ಅಡುಗೆಯನ್ನ ಮಾಡಬೇಕಾದರೆ ನೀರು ಸೋರುತ್ತದೆ ಮತ್ತು ಎಣ್ಣೆ ಕೂಡ ಸೋರುತ್ತದೆ ಅದಕ್ಕೆ ಒಂದು ಒಳ್ಳೆಯ ಉಪಾಯ ಎಂದರೆ ಕೋಲ್ಗೇಟ್ ಟೂತ್ಪೇಸ್ಟ್ ತೆಗೆದುಕೊಂಡು ಎಲ್ಲೆಲ್ಲಿ ಬಿರುಕು ಬಿಟ್ಟಿರುತ್ತದೆ ಆ ಜಾಗಕ್ಕೆಲ್ಲ ಪೇಸ್ಟನ್ನು ಹಚ್ಚಿಕೊಳ್ಳಬೇಕು ಐದು ನಿಮಿಷ ಬಿಟ್ಟು ಈ ಮಣ್ಣಿನ ಪಾತ್ರೆಯನ್ನು ನಾವು ಉಪಯೋಗಿಸಿಕೊಳ್ಳಬಹುದು.


ಸ್ವಲ್ಪವೂ ಸಹ ಲೀಕಾಗುವುದಿಲ್ಲ ಬಿಸಿ ತಟ್ಟಿದ ತಕ್ಷಣ ಪೇಸ್ಟೆಲ್ಲಾ ಕರಗಿ ಆ ಬಿರುಕಿನ ಒಳಗಡೆ ಹೋಗುತ್ತದೆ ಅದೆಲ್ಲವೂ ಮುಚ್ಚಿಕೊಳ್ಳುತ್ತದೆ. ಪ್ಲಾಸ್ಟಿಕ್ ಕವರ್ ಗಳು ಮನೆಯಲ್ಲಿ ಎಲ್ಲಾ ಕಡೆಯೂ ಅಲ್ಲಲ್ಲಿ ಬಿದ್ದಿರುತ್ತದೆ ಇದು ಎಷ್ಟೇ ಜೋಡಿಸಿದರು ಒಂದು ರೀತಿಯ ಗಲೀಜಾಗಿರುತ್ತದೆ ಮೊದಲು ಮಧ್ಯಕ್ಕೆ ಉದ್ದವಾಗಿ ಮಡಚಿ ಮತ್ತು ಅದನ್ನು ಇನ್ನೊಂದು ಇಂಬಳಿಕೆಯಲ್ಲಿ ಮಡಚಬೇಕು.

ಮತ್ತು ಕೆಳಗಿನ ಭಾಗವನ್ನು ಈ ತುದಿಯಿಂದ ಆ ತುದಿಗೆ ತ್ರಿಕೋನದ ರೀತಿಯಲ್ಲಿ ಮಡಚಿಕೊಂಡು ಬರಬೇಕು ನಾವು ಎಷ್ಟೇ ಪ್ಲಾಸ್ಟಿಕನ್ನು ಬ್ಯಾನ್ ಮಾಡಿದರು ಕೂಡ ಮಾರುಕಟ್ಟೆಗೆ ಹೋಗಬೇಕಾದರೆ ಪ್ಲಾಸ್ಟಿಕ್ ಕವರ್ ಅನ್ನು ತೆಗೆದುಕೊಂಡೆ ಹೋಗಬೇಕು ತುದಿಯಲ್ಲಿ ಕವರ್ ನ ಇಡಿಕೆಯಲ್ಲಿರುವ ತೂತು ಇರುತ್ತದೆ ಅದರ ಒಳಗಡೆ ಇದನ್ನು ಸೇರಿಸಿಕೊಳ್ಳಬೇಕು ಇದನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳಬಹುದು.

ಮಾರುಕಟ್ಟೆಗೆ ಹೋಗುವಾಗ ಇದನ್ನು ಉಪಯೋಗಿಸಬಹುದು ಅದೇ ಮನೆಯಲ್ಲಿ ಅಲ್ಲಲ್ಲಿ ಬಿದ್ದಿರುವಂತಹ ಪ್ಲಾಸ್ಟಿಕ್ ಕವರ್ ಗಳನ್ನು ಇದೇ ರೀತಿ ಮಡಚಿ ಒಂದು ಡಬ್ಬದ ಒಳಗಡೆ ಹಾಕಿ ಇಡುವುದಕ್ಕೆ ಇದು ತುಂಬಾನೇ ಸುಲಭ. ಬೆಳ್ಳುಳ್ಳಿಯನ್ನು ಪ್ರತಿದಿನ ನಾವು ಮನೆಯಲ್ಲಿ ಉಪಯೋಗಿಸುತ್ತೇವೆ.

ಅದರ ಸಿಪ್ಪೆ ತೆಗಿಯಬೇಕು ಎನ್ನುವುದೇ ಒಂದು ದೊಡ್ಡ ತಲೆನೋವು ಆಫೀಸಿಗೆ ಹೋಗುವವರಿಗೆ ಮಕ್ಕಳಿರುವವರಿಗೆಲ್ಲ ಇದರ ತಲೆನೋವು ಏನು ಎಂದು ಗೊತ್ತು ನಾವು ಸುಮ್ಮನೆ ಕುಳಿತಿರುವಂತಹ ಸಮಯದಲ್ಲಿ ನಾವು ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆದುಕೊಂಡು ಇಡಬೇಕು ಇದನ್ನು 15 ರಿಂದ 20 ದಿವಸ ಇಟ್ಟುಕೊಳ್ಳುವುದಕ್ಕೆ ಇದು ಸಹಾಯವಾಗುತ್ತದೆ.

ನಂತರ ಸಿಪ್ಪೆ ತೆಗೆದ ಮೇಲೆ ಒಂದು ಗ್ಲಾಸ್ ಜಾರನ್ನ ತೆಗೆದುಕೊಂಡು ಸಿಪ್ಪೆ ತೆಗೆದಿರುವಂತಹ ಬೆಳ್ಳುಳ್ಳಿ ಗಳನ್ನೆಲ್ಲ ಈ ಗ್ಲಾಸ್ ನ ಜಾರಿನ ಒಳಗಡೆ ಹಾಕಬೇಕು ಅದು ಹೇರ್ ಟೈಟ್ ಆಗಿರಬೇಕು ಅದನ್ನೆಲ್ಲ ಒಳಗಡೆ ಹಾಕಿದ ನಂತರ ಫ್ರಿಡ್ಜ್ ನಲ್ಲಿ ಇದನ್ನು ಶೇಖರಿಸಿ ಇಡಬಹುದು ಪೇಸ್ಟನ್ನು ಸಹ ಮಾಡಿ ಇದೇ ರೀತಿ ಇಟ್ಟುಕೊಳ್ಳಬಹುದು.

ಕೆಲವೊಂದು ಅಡಿಗೆಗೆ ನಿಮಗೆ ಬಿಡಿ ಬೆಳ್ಳುಳ್ಳಿ ಬೇಕಾದಾಗ ಇದನ್ನು ಉಪಯೋಗಿಸಿಕೊಳ್ಳಬಹುದು. ಗ್ಯಾಸ್ಕೆಟ್ ಇರುತ್ತದೆ ಎಲ್ಲರ ಮನೆಯಲ್ಲೂ ಪ್ರೆಶರ್ ಕುಕ್ಕರ್ ಉಪಯೋಗಿಸಿರುವವರಿಗೆಲ್ಲ ಕೂಡ ಇದು ಗೊತ್ತೇ ಗೊತ್ತು ಇದು ಸ್ವಲ್ಪ ದಿನ ಉಪಯೋಗಿಸಿದ ತಕ್ಷಣ ಲೂಸ್ ಆಗುತ್ತದೆ ಅದನ್ನ ನಾವು ಬದಲಾಯಿಸುತ್ತೇವೆ.

ಇನ್ನು ಇದನ್ನು ಆ ರೀತಿ ಬದಲಾಯಿಸುವುದಕ್ಕೆ ಹೋಗಬೇಡಿ ಮನೆಯಲ್ಲಿಯೇ ಹೊಸದಾಗಿ ಮಾಡುವುದಕ್ಕೆ ಒಂದು ಉಪಾಯವನ್ನು ಹೇಳುತ್ತೇನೆ ದೊಡ್ಡ ಒಂದು ಪಾತ್ರೆಗೆ ನೀರನ್ನು ತೆಗೆದುಕೊಂಡು ಅದನ್ನು ಕುದಿಯುವುದಕ್ಕೆ ಇಡೋಣ ಕುದಿಯುತ್ತಾ ಇರುವ ರಬ್ಬರ್ ಅನ್ನು ಹಾಕಿಕೊಳ್ಳಬೇಕು ನಂತರ 2 ರಿಂದ 3 ನಿಮಿಷ ಆ ನೀರಿನಲ್ಲಿ ಕುದಿಸಬೇಕು.

ಎರಡು ಸೈಡು ಮಗುಚಿ ಹಾಕಿ ಅದನ್ನು ಕುದಿಸಿಕೊಳ್ಳಬೇಕು ಇದನ್ನು ಪಕ್ಕಕ್ಕೆ ಇಟ್ಟು ಆರುವುದಕ್ಕೆ ಬಿಡಬೇಕು ನಾವು ಪ್ರತಿನಿತ್ಯ ಕುಕ್ಕರನ್ನು ಬಳಸುತ್ತಾ ಇರುವುದರಿಂದ ಈ ರೀತಿಯಾಗಿ ವಾರಕ್ಕೆ ಒಮ್ಮೆಯಾದರೂ ಮಾಡಿಕೊಳ್ಳಬೇಕು ಇದು ಲೂಸ್ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]