ಚಿಕ್ಕ ಮೊಬೈಲ್ ಕ್ಯಾಂಟೀನ್ ಮಾಡ್ಕೊಂಡು ಜೀವನ ಕಟ್ಟಿಕೊಂಡ ಧೈರ್ಯವಂತೆ..ಎರಡು‌ ಕೋಟಿ ಕಳೆದುಕೊಂಡರು ಧೃತಿಗೆಡಲಿಲ್ಲ..

ಜೀವನದಲ್ಲಿ ನೂರು ರೂಪಾಯಿ ಕಳೆದುಕೊಂಡರು ನಾವು ಎಷ್ಟು ನೋವನ್ನು ಅನುಭವಿಸುತ್ತೇವೆ. ಪ್ರತಿ ಜೀವನದ ಜಂಜಾಟದಲ್ಲಿ ಒಂದಲ್ಲ ಒಂದು ತೊಂದರೆಗಳು ನಮ್ಮನ್ನು ಕಾಡುತ್ತಲೇ ಇರುತ್ತದೆ ಹೀಗಿರುವಾಗ ಇಲ್ಲೊಂದು ದಂಪತಿ 200 ಕೋಟಿ ರೂಪಾಯಿಗಳನ್ನು ಕಳೆದುಕೊಂಡು ದೃತಿಗೆಡದೆ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಿದ್ದಾರೆ ತಮ್ಮ ತಲೆಗೆ ಬಂದಿರುವಂತಹ 200 ಕೋಟಿ ಸಾಲವನ್ನು ತೀರಿಸಲು ಇಡಿ ಕುಟುಂಬ ಕೆಲಸವನ್ನು ಮಾಡುತ್ತಿದ್ದಾರೆ ಇವರೆಲ್ಲಿರುವ ಧೈರ್ಯ ಧೈರ್ಯ ಬಹಳಷ್ಟು ಜನರಲ್ಲಿ ಇರುವುದಿಲ್ಲ ಆದರೆ ಇವರ ಜೀವನ ನಮ್ಮೆಲ್ಲರಿಗೂ ಆಶಾದಾಯಕವಾಗಿರುತ್ತದೆ ಆದ್ದರಿಂದ ಇಂದು ನಾವು ಅವರ ಬಗ್ಗೆ ನಿಮಗೆ ತಿಳಿಸಿ ಕೊಡ್ತೀವಿ

WhatsApp Group Join Now
Telegram Group Join Now

ಇವರು ಬೆಂಗಳೂರಿನ ಪದ್ಮನಾಭ ನಗರದಲ್ಲಿದ್ದಾರೆ ಇವರ ಜೀವನದ ಸಂಪೂರ್ಣ ಕಥೆ ತಿಳಿಯೋಣ ಎಸ್ ಆರ್ ಕಿಚನ್ ಹಾಗೂ ದೋಸೆ ಅಡ್ಡ ಇದು ಇವರ ಅಂಗಡಿಯ ಹೆಸರು ರಾಧಾ ಕೋವಿಡ್ ನಂತರ ಈ ದೋಸೆ ಕ್ಯಾಂಪನ್ನು ಶುರು ಮಾಡಿರುತ್ತಾರೆ. ರಾಧಾ ಅವರ ಬಳಿ 20 ಟ್ರಾವೆಲ್ ಗಾಡಿಗಳಿದ್ದು 20 ಜನ ಡ್ರೈವರ್ ಗಳು ಇರುತ್ತಾರೆ ಕೋವಿಡ್ ಸಮಯದಲ್ಲಿ ಯಾವುದೇ ರೀತಿಯ ಗಾಡಿಗಳಿಗೆ ಡ್ಯೂಟಿ ಸಿಗದ ಕಾರಣ ಡ್ರೈವರ್ ಗಳಿಗೆ ಸರಿಯಾಗಿ ಸಂಬಳ ನೀಡಲು ಸಾಧ್ಯವಾಗದೆ ತಮ್ಮಲ್ಲಿದ್ದ ಇಪ್ಪತ್ತು ಗಾಡಿಗಳನ್ನು ಸೇಲ್ ಮಾಡಬೇಕಾಗಿತ್ತು ಕೋವಿಡ್ ಕಾರಣ ಟ್ರಾವೆಲ್ ಕೆಲಸ ನಡೆಸಲು ಸಾಧ್ಯವಾಗದೆ 200 ಕೋಟಿ ಹಣ ಕಳೆದುಕೊಂಡೆವು.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ನಂತರ ಜೀವನ ನಡೆಸುವುದಕ್ಕಾಗಿ ಎಸ್ ಎಸ್ ಆರ್ ಕಿಚೆನ್ ಶುರು ಮಾಡಿದವು. ರಾಧಾ ಅವರ ಗಂಡ ಹಾಗೂ ರಾಧ ಇಬ್ಬರು ಸೇರಿ ಈ ಕ್ಯಾಂಟೀನ್ ಅನ್ನು ಶುರು ಮಾಡಿದೆವು. ಆದರೆ ರಾಧಾ ಅವರ ಗಂಡ ಅವರ ದಾರಿಯಲ್ಲಿ ಬೆಳೆಯಬೇಕೆಂದು ಬೇರೆ ಕೆಲಸವನ್ನು ಮಾಡುತ್ತಿದ್ದಾರೆ ರಾಧಾ ರವರಿಗೆ ಅವರ ತಾಯಿ ಮನೆಯವರು ಅವರ ಸ್ವಂತ ಮನೆಯನ್ನು ಮಾರಿ ಹಾಗೂ ಅವರ ಒಡವೆಗಳನ್ನು ಮಾರಿ ರಾಧಾ ಅವರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡದೆ ಮತ್ತೆ ರಾಧ ಅವರು ಛಲ ಬಿಡದೆ ಒಂದು ಕ್ಯಾಂಟೀನನ್ನು ಓಪನ್ ಮಾಡುತ್ತಾರೆ.

ರಾಧ ಅವರ ಸ್ವಂತ ಊರು ಕುಣಿಗಲ್ ಅವರು ಬೆಳೆದಿದ್ದು ಬೆಂಗಳೂರಿನಲ್ಲಿ ಮದುವೆಯಾಗಿದ್ದು ಮಂಡ್ಯದ ಕೆ ಎಮ್ ದೊಡ್ಡಿ ಆದರೆ ಈಗ ಜೀವನ ನಡೆಸುತ್ತಿರುವುದು ಬೆಂಗಳೂರಿನಲ್ಲಿ ಈಗಾಗಲೇ ದೊಡ್ಡ ಪೆಟ್ಟು ತಿಂದಿದ್ದರಿಂದ ಯಾವುದೇ ಕೆಲಸ ಮಾಡಲು ಸ್ವಲ್ಪ ಭಯದಿಂದ ಮಾಡುತ್ತಿದ್ದೆವು. ಹೋಟೆಲ್ ಶುರು ಮಾಡುವ ಆಸೆ ಇದ್ದರೂ ಕೂಡ ಹೇಗೆ ಶುರು ಮಾಡಬೇಕು ಯಾವ ರೀತಿಯಾಗಿ ಶುರು ಮಾಡಬೇಕು ಎಂಬುದನ್ನು ಒಂದು ವರ್ಷಗಳ ಕಾಲ ಯೋಚಿಸಿ ನಂತರ ಎಸ್ ಆರ್ ಕಿಚ್ಚನ್ ಅಥವಾ ದೋಸೆ ಅಡ್ಡ ಇದನ್ನು ಓಪನ್ ಮಾಡಿದೆವು

ಜೀವನದಲ್ಲಿ ದೊಡ್ಡ ಪೆಟ್ಟು ತಿಂದಿದ್ದರಿಂದ ಕ್ಯಾಂಟೀನ್ ಶುರು ಮಾಡಲು ಸ್ವಲ್ಪ ಸಮಯವೇ ಹಿಡಿಯಿತು ಕಾರಣ ತಿಂಗಳಾದರೆ ಬಡ್ಡಿ ಕಟ್ಟಬೇಕಿತ್ತು ತುಂಬಾ ಅವಮಾನಗಳನ್ನು ಎದುರಿಸಿ ಕೊನೆಗೆ 2023 ಕೊನೆಯಲ್ಲಿ ಕ್ಯಾಂಟೀನ್ ಗೆ ಬೇಕಾಗಿರುವಂತಹ ವಸ್ತುಗಳನ್ನು ಸಿದ್ಧಪಡಿಸಿದ್ದರು ಯಾವುದೇ ಒಂದು ಹೊಸ ಕೆಲಸ ಶುರು ಮಾಡಬೇಕಾದರೆ ಹಲವಾರು ಅಡೆ-ತಡೆಗಳು ಇರುತ್ತದೆ ಹಾಗೆ ಕೂಡ ಕ್ಯಾಂಟೀನ್ ಅನ್ನು ಶುರು ಮಾಡಲು ಲೊಕೇಶನ್ ಹುಡುಕಿದಾಗ ಬಹಳಷ್ಟು ತೊಂದರೆಗಳಾಗಿತ್ತು. ಹಲವಾರು ಜನರ ಪರ್ಮಿಷನ್ ಸಹ ಬೇಕಾಗಿತ್ತು ಮೊದಲಿಗೆ ಎ ಜೆ ಎಸ್ ಲೇಔಟ್ ನಲ್ಲಿ ಹೋಟೆಲ್ ಶುರುಮಾಡಿದ್ದಾಗ ಬಹಳಷ್ಟು ತೊಂದರೆಗಳಾಗಿ ಅಲ್ಲಿಂದ ತೆಗೆದು ನಂತರ ಪದ್ಮನಾಭನಗರದಲ್ಲಿ ಶುರುಮಾಡಿದೆವು. ಮೊದಲಿಗೆ ಬಹಳ ಕಷ್ಟವಾಗಿತ್ತು ನಂತರ ಒಳ್ಳೆಯ ರುಚಿಕರವಾದ ಅಡುಗೆಯಿಂದ ಅಂಗಡಿಯು ಬಹಳಷ್ಟು ಬೇಗ ಒಳ್ಳೆ ರೀತಿಯಲ್ಲಿ ಬೆಳೆಯತೊಡಗಿತು ಹಲವಾರು ಜನ ಈ ರುಚಿಯಾದ ಅಡುಗೆಯನ್ನು ತಿಂದು ತಮ್ಮ ತಮ್ಮ ಮನೆಯನ್ನು ನೆನೆಸಿಕೊಳ್ಳುತ್ತಿದ್ದರು ಇದರಿಂದ ಬಹಳ ಖುಷಿಯಾಗುತ್ತಿತ್ತು.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ಜೀವನದಲ್ಲಿ ನನಗಿರುವಂತಹ ಗುರಿ ಒಂದೇ ನನಗಾಗಿ ತನ್ನ ತಾಯಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ತನ್ನ ಮನೆಯನ್ನು ಸಹ ಮಾರಿ ನನಗೆ ದಾರಿದೀಪವಾಗಿದ್ದಾರೆ ಹಾಗಾಗಿ ಅವರಿಗೆ ನಾನು ಮೊದಲು ಅವರ ಜೀವನಕ್ಕೆ ಒಂದು ದಾರಿಯನ್ನು ಮಾಡಬೇಕು ನಂತರ ನನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಬೇಕು ಇಷ್ಟು ದಿನಗಳ ಕಾಲ ಯಾವೆಲ್ಲ ಅವಮಾನವನ್ನು ಅನುಭವಿಸಿದ್ದೇನೆ ಅದೆಲ್ಲದರ ಮುಂದೆ ನಾನು ನಿಂತು ತೋರಿಸಬೇಕು ಇದೇ ನನ್ನ ಜೀವನದ ಅತಿ ಮುಖ್ಯವಾದ ಗುರಿ ಜೀವನದಲ್ಲಿ ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಒಂದು ಬಾರಿ ಕಳೆದುಕೊಂಡರೆ ನಾವು ಬಹಳಷ್ಟು ಹಿಂದಕ್ಕೆ ಕುಗ್ಗಿಬಿಡುತ್ತೇವೆ. ಇದು ರಾಧಾ ಅವರ ಬದುಕಿನ ದಾರಿ ಬಹಳಷ್ಟು ಕಷ್ಟಪಟ್ಟು ಜೀವನದಲ್ಲಿ ಒಂದೊಂದೇ ಹೆಜ್ಜೆಯನ್ನು ಇಡುತ್ತಾ ಮೇಲೆ ಬರುತ್ತಿದ್ದಾರೆ ಯಾವುದೇ ಸಂದರ್ಭವಾಗಲಿ ಎಷ್ಟೇ ಕಷ್ಟ ಬರಲಿ ಯಾವುದೇ ಕಾರಣಕ್ಕೂ ನಾವು ಕುಗ್ಗಬಾರದು ಹಿಂಜರಿಕೆಯನ್ನು ಪಡಬಾರದು ನಾವು ಧೈರ್ಯವಾಗಿ ಮುಂದಕ್ಕೆ ಹೆಜ್ಜೆ ಇಟ್ಟಾಗ ಮಾತ್ರ ಜೀವನದಲ್ಲಿ ಒಂದು ಮಟ್ಟಕ್ಕೆ ಬೆಳೆಯಲು ಸಾಧ್ಯ ಇದು ರಾಧಾ ಅವರ ಜೀವನ ಕಥೆ