ಸದ್ಗುರು ಅವರಿಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ..ನಿಮ್ಮ ಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿದ್ರಿ,ಬೇರೆ ಮಕ್ಕಳಿಗೆ ಸನ್ಯಾಸತ್ವ ಏಕೆ..?
ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಇರುವ ಈಶಾ ಫೌಂಡೇಶನ್ ಅವಾಗವಾಗ ಸುದ್ದಿಯಲ್ಲಿ ಇರುತ್ತದೆ ಇದೀಗ ಮತ್ತೊಮ್ಮೆ ಸುದ್ದಿಯ ಹಿನ್ನೆಲೆ ಬಂದಿದೆ ಒಂದೇ ವಿಚಾರವೇನಲ್ಲ ಬೇರೆ ಬೇರೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿ ಚರ್ಚೆ ವಿಚಾರಣೆ ಆಗುತ್ತಲೇ ಇರುತ್ತದೆ ಎಲ್ಲರಿಗೂ ತಿಳಿದಿರುವಂತೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ಒಂದು ಆಧ್ಯಾತ್ಮಿಕ ಸಂಸ್ಥೆ ನಮ್ಮ ಚಿಕ್ಕಬಳ್ಳಾಪುರದಲ್ಲೂ ಸಹ ಈಶ ಫೌಂಡೇಶನ್ ಆಧ್ಯಾತ್ಮಿಕ ಸಂಸ್ಥೆ ಇದೆ.
ತಮಿಳುನಾಡಿನ ಕೊಯಿಮುತ್ತೂರಿನಲ್ಲಿ ಇರುವಂತಹ ಆಧ್ಯಾತ್ಮಿಕ ಸಂಸ್ಥೆ ಸುದ್ದಿಯಲ್ಲಿದೆ ಪೊಲೀಸರು ಸಹ ಮುತ್ತಿಗೆಯನ್ನ ಹಾಕಿದ್ದಾರೆ ಪ್ರಮುಖವಾಗಿ ಆಗಿರುವಂತಹ ಬೆಳವಣಿಗೆ ಎಂದರೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ ಪ್ರಶ್ನೆಗಳನ್ನು ಸಹ ಮುಂದಿಟ್ಟಿದೆ ಪ್ರಮುಖವಾಗಿ ನ್ಯಾಯಾಂಗ ಕೇಳುತ್ತಿರುವುದು ಜಗ್ಗಿ ವಾಸುದೇವ ಅವರೇ ನಿಮ್ಮ ಮಗಳನ್ನ ನೀವು ಅದ್ದೂರಿಯಾಗಿ ಮದುವೆಯನ್ನು ಮಾಡಿ ಕೊಟ್ಟಿದ್ದೀರಾ ನಿಮ್ಮ ಮಗಳ ಜೀವನ ಒಳ್ಳೆಯ ರೀತಿಯಲ್ಲಿ ವೃದ್ಧಿಸಿದ್ದೀರಿ ನಿಮ್ಮ ಮಗಳಿಗೆ ಅದ್ಭುತವಾದ ಬದುಕನ್ನು ಕಟ್ಟಿಕೊಟ್ಟಿದ್ದೀರಿ ಆದರೆ ಬೇರೆ ಹೆಣ್ಣು ಮಕ್ಕಳಿಗೆ ನೀವು ಯಾಕೆ ಸನ್ಯಾಸತ್ವಕ್ಕೆ ಉತ್ತೇಜನವನ್ನು ಕೊಡುತ್ತೀರಿ ತಲೆಯನ್ನು ಬೋಡಿಸಿಕೊಂಡು ಸನ್ಯಾಸಿಯಾಗಿ ಎಂದು ಪ್ರೇರೇಪಿಸುತ್ತೀರಾ ಎಂದು ನ್ಯಾಯಾಂಗ ಪ್ರಶ್ನೆಯನ್ನು ಸದ್ಗುರುಗೆ ಮುಂದಿಟ್ಟಿದ್ದಾರೆ.
ನ್ಯಾಯಾಂಗ ಪ್ರಶ್ನೆ ಮಾಡುವುದಕ್ಕೂ ಸಹ ಸಾಕಷ್ಟು ಕಾರಣಗಳಿವೆ ಅದಕ್ಕೆ ಕಾರಣವೇನೆಂದರೆ ನ್ಯಾಯಾಂಗ ಸೂಚನೆಯ ಬೆನ್ನೆಲೆ 150 ಪೊಲೀಸರು ಈಶಾ ಫೌಂಡೇಶನ್ ಕೇಂದ್ರದ ಮೇಲೆ ದಾಳಿಯನ್ನು ಮಾಡಿದರು ಇದರ ಬೆನ್ನೆಲೆ ನ್ಯಾಯಾಂಗ ಮತ್ತೊಂದು ಖಡಕ್ ಸೂಚನೆಯನ್ನು ನೀಡಿದೆ ಈಶ ಫೌಂಡೇಶನ್ ಗೆ ಸಂಬಂಧಪಟ್ಟಂತೆ ಯಾವೆಲ್ಲಾ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಲ್ಲ ವರದಿ ಸಹ ಅಕ್ಟೋಬರ್ 4 ನೇ ತಾರೀಕು ತನ್ನ ಮುಂದೆ ಇಡುವುದಾಗಿ ನ್ಯಾಯಾಂಗ ಹೇಳಿಕೆಯನ್ನು ನೀಡಿದೆ ಇದರ ನಡುವೆ ಮತ್ತೊಂದು ಫೋಟೋ ಕೂಡ ಪ್ರಚಾರಣೆಗೆ ಕಾರಣವಾಗಿದೆ ಇದು ಸಹ ಚರ್ಚೆಗೆ ಪ್ರಾಸವಾಗಿದೆ.
ಈಶ ಫೌಂಡೇಶನ್ ನ ಅಧಿಕೃತ ವೆಬ್ಸೈಟ್ನಲ್ಲಿ ಸದ್ಗುರು ಪಾದಮ್ ಅಂತ ಹೇಳಿ ಸದ್ಗುರು ಜಗ್ಗಿ ವಾಸುದೇವವರ ಕಾಲಿನ ಚಿತ್ರಪಟವನ್ನು ಹಾಕಿ 3200ಗಳನ್ನು ಆ ಚಿತ್ರ ಪಟಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ ಈ ಒಂದು ವಿಷಯವು ಸಹ ಸಾಕಷ್ಟು ಚರ್ಚೆಯಲ್ಲಿದೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಇರುವಂತಹ ಈಶಾ ಫೌಂಡೇಶನ್ ಆಧ್ಯಾತ್ಮಿಕ ಕೇಂದ್ರದಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸುವುದು ಹಾಗೂ ಆಧ್ಯಾತ್ಮಿಕ ದ ಬಗ್ಗೆ ಸಭೆಯನ್ನು ಏರ್ಪಡಿಸುವುದು ಇಂಥದೆಲ್ಲವನ್ನು ಸಹ ಅಲ್ಲಿ ಹೇಳಿಕೊಡಲಾಗುತ್ತದೆ ಅಲ್ಲಿ ಸಾಕಷ್ಟು ಗಂಡು ಮಕ್ಕಳಿದ್ದಾರೆ ಹಾಗೂ ಸಾಕಷ್ಟು ಹೆಣ್ಣು ಮಕ್ಕಳುಗಳು ಸಹ ಇದ್ದಾರೆ ಸಾಕಷ್ಟು ಮಂದಿ ಸನ್ಯಾಸತ್ವವನ್ನು ಸಹ ಸ್ವೀಕರಿಸಿದ್ದಾರೆ.
ನಿವೃತ್ತ ಪ್ರಾಧ್ಯಾಪಕರು ಒಬ್ಬರು ಈಶ ಫೌಂಡೇಶನ್ ಗೆ ಸಂಬಂಧಪಟ್ಟಂತೆ ಬೇರೆ ಬೇರೆ ಕಡೆ ದೂರನ್ನು ನೀಡಲು ಮುಂದಾಗುತ್ತಾರೆ ಆದರೆ ಎಲ್ಲಿಯೂ ಸಹ ಇದು ಸಫಲವಾಗದೆ ಇದ್ದಾಗ ನ್ಯಾಯಾಂಗದ ಮೋರೆ ಹೋಗುತ್ತಾರೆ ಕೋರ್ಟ್ ಗೆ ಎ ಬಿ ಎಫ್ ಅರ್ಜಿಯನ್ನು ಹಾಕುತ್ತಾರೆ ತನ್ನ ಇಬ್ಬರು ಹೆಣ್ಣು ಮಕ್ಕಳು ಸದ್ಗುರುವಿನ ಆಶ್ರಮದಲ್ಲಿ ಕೂಡಿ ಹಾಕಿಕೊಂಡಿದ್ದಾರೆ ಅಂದರೆ ಒತ್ತಾಯ ಪೂರ್ವಕವಾಗಿ ಬಂಧಿಸಲಾಗಿದೆ ಮತ್ತು ಅವರಿಗೆ ಬ್ರೈನ್ ವಾಶ್ ಮಾಡಿ ಸನ್ಯಾಸತ್ವವನ್ನು ತೆಗೆದುಕೊಳ್ಳಲು ಬಲವಂತವಾಗಿ ಉತ್ತೇಜನ ಹಾಕಿದ್ದಾರೆ ನನ್ನ ಇಬ್ಬರು ಹೆಣ್ಣು ಮಕ್ಕಳು ಸನ್ಯಾಸಿ ಆಗಿದ್ದಾರೆ ಹೆಚ್ಚು ಕಡಿಮೆ 40 ವರ್ಷದ ವಯಸ್ಸಿನವರು ಆ ಹೆಣ್ಣು ಮಕ್ಕಳು.
2008ರ ಇಸವಿಯಲ್ಲಿ ಈಶಾ ಫೌಂಡೇಶನ್ ಗೆ ಹೋಗಲು ಶುರು ಮಾಡುತ್ತಾರೆ ಯೋಗ ಕಲಿಯುವ ಸಲುವಾಗಿ ಅದಾದ ನಂತರ ಹಂತ ಹಂತವಾಗಿ ಸನ್ಯಾಸಿಗಳಾಗಿದ್ದಾರೆ ನಮ್ಮ ಕುಟುಂಬದವರ ಜೊತೆಗೆ ಅವರ ಯಾವ ಸಂಪರ್ಕವೂ ಸಹ ಇಟ್ಟುಕೊಳ್ಳದ ರೀತಿಯಲ್ಲಿ ನೋಡಿಕೊಳ್ಳಲಾಗಿದೆ ನನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಸಹ ಕೊಡಿಸಿದ್ದೆ ತನ್ನ ಹಿರಿಯ ಮಗಳು ಯುಕೆ ಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಅದ್ಭುತವಾದ ಕೆಲಸಕ್ಕೆ ಸೇರಿಕೊಂಡಿದ್ದರು ಎರಡನೇ ಮಗಳು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು ಯಾವಾಗ ಈಶ ಫೌಂಡೇಶನ್ ಗೆ ಯೋಗ ಕಲಿಯಲು ಸೇರಿಕೊಂಡರು ಕೆಲಸವೆಲ್ಲವನ್ನು ಬಿಟ್ಟು ಈಗ ಸನ್ಯಾಸಿಯಾಗಿದ್ದಾರೆ ನಮ್ಮ ಕುಟುಂಬದ ಜೊತೆಗೂ ಸಹ ಸಂಪರ್ಕವಿಲ್ಲ ಎಂದು ಆ ಹೆಣ್ಣು ಮಕ್ಕಳ ತಂದೆ ಸದ್ಗುರು ಮೇಲೆ ಕೇಸನ್ನು ಹಾಕಿದ್ದಾರೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.