ಯಾವುದು ಹೇಂಗಾದ್ರೂ ಹಾಳಾಗಿ ಹೋಗಲಿ ನಮಗೆ ದುಡ್ಡು ಬಂದ್ರೆ ಸಾಕು ಅನ್ನೋರ ಮಧ್ಯೆ ಒಬ್ಬ ಬಾದ್ ಷಾ..ಸುದೀಪ್ ಅಂದು ಮಾಡಿದ್ದೇನು
ಬಿಗ್ ಬಾಸ್ ಸೀಸನ್ 11ರ ಸಂಚಿಕೆ ನಡೆಯುವ ಸಮಯದಲ್ಲೇ ಸುದೀಪ್ ಅವರು ಒಂದು ಮಾಡಿದ್ದರು ಈ ಬಾರಿಯೇ ನನ್ನ ಬಿಗ್ ಬಾಸ್ ಜರ್ನಿಯನ್ ಮುಗಿಸುತ್ತಿದ್ದೇನೆ ಎಂದು ಹೇಳಿದ್ದರು ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಮಟ್ಟದಲ್ಲೇ ಹರಿದಾಡಿತ್ತು ಬಿಗ್ ಬಾಸ್ ಅಭಿಮಾನಿಗಳಿಗೆ ಇದೊಂದು ಬಹುದೊಡ್ಡ ಶಾಕ್ ಆಗಿತ್ತು ಅವರು ಯಾಕೆ ಈ ರೀತಿ ಮಾಡಿದ್ದಾರೆ ಇದಕ್ಕೆ ಕಾರಣ ಏನು ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಇತ್ತು ಹಾಗೂ ಜನರ ತಲೆಯಲ್ಲಿ ಸುದೀಪ ಅವರಿಗೆ ಆರೋಗ್ಯ ಏನಾದರೂ ಸಮಸ್ಯೆ ಇದೆಯಾ ಅಥವಾ ಸಿನಿಮಾ ಹಾಗೂ ಬಿಗ್ ಬಾಸ್ ಎರಡನ್ನು ಸಮವಾಗಿ ತೂಗಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಅವರಿಗೆ ಸಮಯದ ಅಭಾವ ಏನಾದರೂ ಕಾಡುತ್ತಿದೆ ಎಂಬ ನೂರಾರು ಪ್ರಶ್ನೆಗಳು ಹುಟ್ಟಿದವು.
ಆದರೆ ಇದರ ಅಸಲಿ ಸತ್ಯವೇ ಬೇರೆ ಇತ್ತು ಈ ಒಂದು ಶೋವನ್ನು ನಡೆಸುವುದು ಅವರ ಸ್ವಂತ ವಿಷಯ ಸುದೀಪ್ ರವರು ಹಣಕ್ಕೆ ಆಸೆ ಪಡುವುದೇ ಆಗಿದ್ದರೆ ಆ ಒಂದು ಶೋ ಹೇಗಾದರೂ ನಡೆಯಲಿ ಆ ಅಲ್ಲಿನ ಸ್ಪರ್ಧಿಗಳು ಹೇಗಾದರೂ ಇರಲಿ ಎಂದು ನನಗೆ ನನ್ನ ಹಣ ಬಂದರೆ ಸಾಕು ಎಂಬ ವ್ಯಕ್ತಿಯಾಗಿದ್ದರೆ ಖಂಡಿತ ಆ ವ್ಯಕ್ತಿ ಈ ರೀತಿ ಟ್ವಿಟ್ ಮಾಡುತ್ತಿರಲಿಲ್ಲ ಅವರಿಗೆ ಆ ಒಂದು ಶೋ ಮೇಲೆ ಇರುವಂತಹ ಪ್ರೀತಿ ಅಲ್ಲಿನ ಸ್ಪರ್ಧಿಗಳ ಮೇಲೆ ಇರುವಂತಹ ಗೌರವ ಹಾಗೂ ಕನ್ನಡ ಭಾಷೆಯ ಮೇಲೆ ಇರುವಂತಹ ಅಭಿಮಾನ ಹಾಗೂ ಈ ಒಂದು ಶೋವನ್ನು ವೀಕ್ಷಿಸುತ್ತಿರುವ ಪ್ರತಿಯೊಬ್ಬ ವೀಕ್ಷಕರ ಮೇಲೆ ಇರುವ ಆಗತವಾದ ಗೌರವ ಇದೆಲ್ಲವೂ ಇರುವುದರಿಂದಲೇ ಸುದೀಪ್ ರವರಿಗೆ ಈ ಒಂದು ಟ್ವೀಟ್ ಅನ್ನು ಮಾಡಲು ಕಾರಣವಾಗಿತ್ತು.
ಯಾವುದೇ ಒಂದು ಕಾರ್ಯಕ್ರಮವಾಗಿರಲಿ ಅದು ಸ್ವಲ್ಪ ವರ್ಷಗಳ ಕಾಲ ಅಥವಾ ಸ್ವಲ್ಪ ಸಮಯದ ಕಾಲ ಎಂಬುದು ಅವರೇ ನಡೆಸಿಕೊಡಬೇಕೆಂಬ ಕಾಂಟ್ರಾಕ್ಟ್ ಆಗಿರುತ್ತದೆ ಅದು ಮುಗಿಯುವವರೆಗೂ ಅದನ್ನ ಅವರೇ ನಡೆಸಿಕೊಡಬೇಕು ಅದು ಮುಗಿದ ನಂತರ ಅದನ್ನು ಮುಂದುವರೆಸುವುದು ಬಿಡುವುದು ಅವರ ಇಷ್ಟ ಹಾಗಾದರೆ ಸುದೀಪ್ ಅವರು ಈ ಒಂದು ನಿರ್ಧಾರಕ್ಕೆ ಬರಲು ಕಾರಣವೇನು? ಬಹುಶಃ ಅವರು ಬ್ಯುಸಿ ಇರಬಹುದು ಹಾಗಾಗಿ ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅನೇಕರು ಭಾವಿಸಿದ್ದರು ಸುದೀಪ್ ಅವರು ಎರಡು ಸಾವಿರದ ಹದಿಮೂರರಲ್ಲಿ ಸಿನಿಮಾರಂಗದಲ್ಲಿ ಇಷ್ಟೇ ಬ್ಯುಸಿ ಇರುವಂತಹ ವ್ಯಕ್ತಿ ಕನ್ನಡ ಮಾತ್ರವಲ್ಲದೆ ಅವರಿಗೆ ಇತರ ಭಾಷೆಗಳನ್ನು ಸಹ ಬಹಳಷ್ಟು ಬೇಡಿಕೆ ಇದೆ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಸಹ ಈ ಒಂದು ಬಿಗ್ ಬಾಸ್ ಅನ್ನು ತಪ್ಪದೇ ನಡೆಸಿಕೊಡುತ್ತಿದ್ದರು.
ಕಳೆದೆರಡು ವರ್ಷಗಳ ಮಧ್ಯದಲ್ಲಿ ಬಿಗ್ ಬಾಸ್ ಲೀಗಲ್ ನೋಟಿಸ್ ಗಳು ಬಂದಿದ್ದವು ಕೆಲವರ ವಿರುದ್ಧ ಕಾರಣಾಂತರಗಳಿಂದ ದೂರು ಕೂಡ ದಾಖಲಾಗಿತ್ತು ಆರಂಭಿಕ ಬಿಗ್ ಬಾಸ್ ಸೀಸನ್ ನಲ್ಲಿ ಕನ್ನಡ ಭಾಷೆ ಹಾಗೂ ಪಾರಂಪರಿಕತೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿತ್ತು ಸ್ಪರ್ಧಿಗಳು ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತನಾಡಬೇಕು ಎಂಬ ನಿಯಮ ಇತ್ತು ಯಾರಾದರೂ ಮಾತನಾಡುವಾಗ ಆಂಗ್ಲ ಭಾಷೆಯನ್ನು ಬಳಸಿದರೆ ಬಿಗ್ ಬಾಸ್ ಅವರಿಗೆ ಎಚ್ಚರಿಕೆಯನ್ನು ಸಹ ನೀಡುತ್ತಿದ್ದರು ಆದರೆ ಈ ಬಾರಿ ಅದು ಕಾಣಿಸುತ್ತಿಲ್ಲ ಈ ಬಾರಿಯ ಬಿಗ್ ಬಾಸ್ ನಲ್ಲಿ ಎಲ್ಲರೂ ಸಹ ಕನ್ನಡದವರೆ ಆಗಿದ್ದರು ಕೆಲವರು ಹೆಚ್ಚು ಆಂಗ್ಲ ಭಾಷೆಯನ್ನು ಬಳಸುತ್ತಿದ್ದಾರೆ ಆದರೆ ಈ ಒಂದು ಸೀಸನ್ ನಲ್ಲಿ ಬಿಗ್ ಬಾಸ್ ಯಾವುದೇ ಒಂದು ಎಚ್ಚರಿಕೆಯನ್ನು ನೀಡುತ್ತಿಲ್ಲ ಎಂಬುದನ್ನ ಎಲ್ಲರೂ ಸಹ ಗಮನಿಸಿದ್ದಾರೆ.
ಒಂದು ವಿಷಯವನ್ನು ಇಟ್ಟುಕೊಂಡು ಸುದೀಪ್ ರವರು ಬಿಗ್ ಬಾಸ್ ತಂಡದ ಜೊತೆಗೆ ಮಾತನಾಡುತ್ತಾರೆ ಆದರೆ ಆ ಶೋನಾ ಆಯೋಜಕರು ಅಥವಾ ಅದರ ತಂಡ ಇವರ ಮಾತಿಗೆ ಯಾವುದೇ ರೀತಿಯ ಬೆಲೆ ನೀಡುವುದಿಲ್ಲ ಅದು ಅಲ್ಲದೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಕೂಡ ಇತ್ತು ನರಕದಲ್ಲಿ ಇರುವವರಿಗೆ ಬಾತ್ರೂಮ್ ವ್ಯವಸ್ಥೆ ಕೂಡ ಇರಲಿಲ್ಲ ಅಲ್ಲಿ ಇರುವವರು ಸ್ವರ್ಗ ನಿವಾಸಿಗಳ ಬಳಿ ರಿಕ್ವೆಸ್ಟ್ ಮಾಡಿಕೊಂಡು ಆ ಒಂದು ಬಾತ್ರೂಮನ್ನ ಬಳಸಬೇಕಾಗಿತ್ತು ಈ ಒಂದು ವಿಷಯದಲ್ಲೂ ಸಹ ಸುದೀಪ್ ರವರಿಗೆ ಸರಿಕಾಣಿಸಲಿಲ್ಲ ಇದರ ಬಗ್ಗೆ ಸುದೀಪ್ ರವರು ತಂಡದ ಬಳಿ ಮಾತನಾಡಿದರು ಮತ್ತು ಹಾಗೂ ರಿಕ್ವೆಸ್ಟ್ ಮಾಡಿದರು ಅವರ ಮಾತಿಗೆ ಬಿಗ್ ಬಾಸ್ ಶೋ ತಂಡದವರು ಸ್ಪಂದಿಸಲಿಲ್ಲ.
ಪ್ರತಿ ಭಾನುವಾರ ಶನಿವಾರ ಸುದೀಪ್ ರವರು ಪಂಚಾಯತಿ ನಡೆಸುವಾಗ ನರಕ ನಿವಾಸಿಗಳು ಆಶು ಮುಗಿಯುವವರೆಗೂ ನಿಂತೆ ಇರುತಿದ್ದರು ಆ ಒಂದು ವಿಷಯದ ಪರವಾಗಿಯೂ ಸಹ ಸುದೀಪ್ ರವರು ತಂಡದವರ ಬಳಿ ಮಾತನಾಡುತ್ತಾರೆ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಹೇಳುತ್ತಾರೆ ಆದರೆ ಈ ಯಾವ ಮಾತಿಗೂ ಸಹ ತಂಡದವರು ತಲೆ ಕೆಡಿಸಿಕೊಳ್ಳಲೇ ಇಲ್ಲ ಈ ಒಂದು ಶೋ ಗೆ ಹಲವಾರು ಸ್ಪಾನ್ಸರ್ ಜಾಹಿರಾತುಗಳು ಇರುತ್ತದೆ ಅದರಲ್ಲಿ A23 ರಮ್ಮಿ ಜಾಹಿರಾತು ಕೂಡ ಇರುತ್ತದೆ ಸಮಾಜಕ್ಕೆ ಒಳ್ಳೆಯದನ್ನ ನೀಡಬೇಕು ಈ ರೀತಿ ಜಾಹೀರಾತುಗಳನ್ನು ಈ ಶೋಗಳಲ್ಲಿ ನಡೆಸಿದರೆ ಒಳ್ಳೆಯದಲ್ಲ ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಸುದೀಪ್ ಅವರ ಬಳಿ ಕೆಲವೊಂದು ಪತ್ರಕರ್ತರು ಕೇಳಿದರು ಇದಕ್ಕೆ ಸುದೀಪ್ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರವನ್ನು ನೀಡಿದರು ಈ ಮಾಹಿತಿ ಕೆಲವಷ್ಟು ಜನರಿಗೆ ಇಷ್ಟವಾಯಿತು ಕೆಲವರಿಗೆ ಇಷ್ಟವಾಗಲಿಲ್ಲ.
ಇಷ್ಟೆಲ್ಲ ಅಲ್ಲದೆ ಕೆಲವು ಹೆಣ್ಣು ಮಕ್ಕಳ ಬಗ್ಗೆ ಮಹಿಳಾ ಆಯೋಗದಿಂದ ನೋಟೀಸ್ ಕೂಡ ಜಾರಿಯಾಗಿತ್ತು ಇದಲ್ಲದೆ ಸಾಕಷ್ಟು ಲೆಕ್ಕವಿಲ್ಲದಷ್ಟು ಬಿಗ್ ಬಾಸ್ ವಿರುದ್ಧ ನೋಟೀಸ್ ಗಳು ಜಾರಿಯಾಗುತ್ತದೆ ಕೂಡ ನೀವು ಕೇಳಬಹುದು ಬಿಗ್ ಬಾಸ್ ಎಂದರೆ ಅದು ಸುದೀಪ ಅವರ ಶೋ ಅಲ್ಲಿನ ನಿರ್ದೇಶಕರು ಯಾರು ಸೋನಾ ಆಯೋಜಕರು ಯಾರು? ಇದಕ್ಕೆ ಯಾರು ಹಣವನ್ನ ಹಾಕಿದ್ದಾರೆ ಬಿಗ್ ಬಾಸ್ ಶೋನಲ್ಲಿ ಸುದೀಪ್ ಅವರು ಯಾಕೆ ಕೆಲಸವನ್ನು ಮಾಡುತ್ತಿದ್ದಾರೆ ಇದೆಲ್ಲವೂ ಸಹ ಯಾರಿಗೂ ಬೇಕಾಗಿಲ್ಲ ಅದರ ಬದಲಾಗಿ ಈ ಎಲ್ಲ ಜವಾಬ್ದಾರಿ ಅದರ ಶಕ್ತಿ ಒಂದೇನೆ ಸುದೀಪ ಅವರು ಅಲ್ಲಿ ಏನೇ ಸರಿ ತಪ್ಪು ನಡೆದರೂ ಕೂಡ ಹೊಣೆಯಾಗುವುದು ಸುದೀಪ್ ಅವರು ಮಾತ್ರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ