ವಿಧವೆಯರು ಯಾವ ಯಾವ ಪೂಜೆ ಮಾಡಬಹುದು..ಈಗಿನ ಕಾಲದಲ್ಲೂ ಇದನ್ನು ನಂಬಬೇಕಾ ? ತಪ್ಪು ಮಾಡಿದರೆ ಏನಾಗುತ್ತದೆ ನೋಡಿ

ವಿಧವೆಯರು ಯಾವ ಯಾವ ಪೂಜೆ ಮಾಡಬಹುದು..ಈಗಿನ ಕಾಲದಲ್ಲೂ ಇದನ್ನು ನಂಬಬೇಕಾ ? ತಪ್ಪು ಮಾಡಿದರೆ ಏನಾಗುತ್ತದೆ ನೋಡಿ

WhatsApp Group Join Now
Telegram Group Join Now

ಗಂಡ ಸತ್ತವರು ಎಲ್ಲ ಪೂಜೆಗಳನ್ನು ಮಾಡಬಹುದಾ ಯಾವುದಾದರೂ ನಿಯಮಗಳನ್ನು ಪಾಲಿಸಬೇಕ ಸ್ತ್ರೀಗಳಲ್ಲೂ ಸಹ ಅಮ್ಮನವರನ್ನು ಕಾಣಬೇಕೆಂದು ಶಾಸ್ತ್ರ ಹೇಳುತ್ತದೆ ನಾವು ಯಾರ ಮನಸ್ಸಿಗೂ ಗಾಸಿಗೊಳಿಸಬಾರದು ಚುಚ್ಚು ಮಾತು ನಡವಳಿಕೆ ಸಲ್ಲದು ನೆನಪಿಡಿ ಮುಖ್ಯವಾಗಿ ಮುತ್ತೈದೆ ಎಂದರೆ ಅವರ ಬಳಿ ಈ 5 ವಸ್ತುಗಳು ಇರಬೇಕಂತೆ ಅವೇನೆಂದರೆ.

ಮೊದಲನೆಯದಾಗಿ ಅರಿಶಿನ ಕುಂಕುಮ ಹೂಗಳು ಬಳೆಗಳು ಕಾಲುಂಗುರ ಮಂಗಳಸೂತ್ರ ಈ ಐದು ಮುತ್ತುಗಳು ಯಾರ ಹತ್ತಿರ ಇರುತ್ತದೆ ಅವರನ್ನು ಮುತ್ತೈದೆಯರು ಎಂದು ಕರೆಯುತ್ತಾರೆ ಆದ್ದರಿಂದಲೇ ಸುವಾಸನೆಯರು ಅಂದರೆ ಮುತ್ತೈದೆಯರು ಮೈಮೇಲೆ ಯಾವಾಗಲೂ ಈ ಐದು ವಸ್ತುಗಳು ಇರಬೇಕೆಂದು ನಮ್ಮ ಪುರಾಣಗಳು ಹೇಳುತ್ತವೆ ಯಾವ ವಸ್ತುಗಳನ್ನು ತೆಗೆಯಬೇಕು ಇದು ಅನೇಕರಿಗೆ ಕಾಡುವಂತಹ ಪ್ರಶ್ನೆ.


ಗಂಡ ಸತ್ತ ನಂತರ ತೆಗೆಯಬೇಕಾದದ್ದು ಕೇವಲ ಎರಡು ವಸ್ತುಗಳು ಮಾತ್ರ ಅವು ಯಾವುವೆಂದರೆ ಮಂಗಳಸೂತ್ರ ಹಾಗೂ ಕಾಲುಂಗುರ ಮಾತ್ರ ಇದು ಮದುವೆಯಾದರೆ ಗಂಡನಿಂದ ಬರುವಂತಹ ಮಂಗಳಕರ ವಸ್ತುಗಳು ಆದರೆ ಹೆಣ್ಣು ಹೆಂಡತನವನ್ನು ಕಂಡಾಗ ಆಕೆ ಬಳಸುವಂತಹ ಅರಿಶಿನ ,ಕುಂಕುಮ, ಹೂಗಳು ಬಳಿಯನ್ನು ಎಂತಹ ಪರಿಸ್ಥಿತಿಯಲ್ಲೂ ಯಾರೇ ಏನೇ ಹೇಳಿದರೂ ತೆಗೆಯಬಾರದು. ಈ ವಿಷಯ ತುಂಬಾ ಜನಕ್ಕೆ ತಿಳಿದಿಲ್ಲ ಗಂಡ ಸತ್ತು ಪಾಪ ಆ ಹೆಣ್ಣು ಕಣ್ಣೀರು ಹಾಕುತ್ತಿದ್ದರೆ ಆಕೆಯನ್ನು ಎಳೆದುಕೊಂಡು ಹೋಗಿ ಬಲವಂತವಾಗಿ ಹಣೆಯಲ್ಲಿರುವ ಬೊಟ್ಟು ಒರೆಸಿ ರಕ್ತ ಬರುವಂತೆ ಬಳೆಗಳನ್ನು ಹೊಡೆದು ಹಾಕಿ ತಲೆಯಲ್ಲಿರುವ ಹೂಗಳನ್ನು ಕಿತ್ತು ಹಾಕಿ ರಾಕ್ಷಸತ್ವ ಪ್ರದರ್ಶಿಸುತ್ತಾರೆ.

ಇದು ಯಾವ ಪುರಾಣದಲ್ಲೂ ಹೇಳಿಲ್ಲ ಯಾವ ಧರ್ಮ ಶಾಸ್ತ್ರದಲ್ಲೂ ತಿಳಿಸಿಲ್ಲ ಇದೆಲ್ಲ ಅಜ್ಞಾನಿಗಳು ಮಾಡುತ್ತಿರುವ ನೀಚ ಕೆಲಸಗಳು ಯಾವಾಗಲೂ ಗಂಡ ಸತ್ತ ನಂತರ ತೆಗೆಯಬೇಕಾದ ವಸ್ತುಗಳು ತಾಳಿ ಮತ್ತು ಕಾಲುಂಗುರ ಮಾತ್ರ ನಮ್ಮ ತವರು ಮನೆಯಿಂದ ಬಂದಿರುವಂತಹ ಅರಿಶಿಣ ಕುಂಕುಮ ಬಳೆಗಳು ಇವನು ಯಾರು ತೆಗೆಯುವಂತಿಲ್ಲ ತಂದೆ ತಾಯಿ ಕೊಟ್ಟಿರುವಂತಹ ಸೌಭಾಗ್ಯ ಅದು. ಮದುವೆ ಮುಂಚಿನಿಂದಲೂ ಕೂಡ ಹೆಣ್ಣು ಮಕ್ಕಳು ಹೂವು ಅರಿಶಿನ ಕುಂಕುಮ ಬಳೆಗಳನ್ನು ಹಾಕಿಕೊಳ್ಳುತ್ತಾರೆ ಇದು ಗಂಡ ಕೊಟ್ಟಂತಹ ವಸ್ತುಗಳಲ್ಲ ಇದೆಲ್ಲ ತೆಗೆದು ಹಾಕಬೇಕಂತ ಯಾವ ಪುರಾಣ ಹೇಳುತ್ತದೆ ಅಂತ ಕೇಳಿ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ಯಾವಾಗಲೂ ತವರು ಮನೆಯವರು ಕೊಟ್ಟಂತಹ ಸೌಭಾಗ್ಯವನ್ನು ತೆಗೆಯಬಾರದು ಅದನ್ನೇನಾದರೂ ತೆಗೆದರೆ ತವರು ಮನೆಯವರಿಗೆ ಅನುಷ್ಠ ಯಾರೇ ಹೀಯಾಳಿಸಿದರು ಹರಿಶಿನ ಕುಂಕುಮ ಹೂಗಳು ಬಳೆಗಳನ್ನು ಯಾವ ಪರಿಸ್ಥಿತಿಯಲ್ಲೂ ತೆಗೆಯಬಾರದು ಅರಿಶಿಣ ಆಂಟಿ ಬಯೋಟಿಕ್ ಅಂತ ನಾವೇ ಹೇಳುತ್ತೇವೆ ಆದರೆ ಗಂಡ ಸತ್ತ ಹೆಣ್ಣು ಮಕ್ಕಳು ಮಾತ್ರ ಅರಿಶಿಣ ಹಚ್ಚಿಕೊಳ್ಳಬಾರದಂತೆ ಇದು ಯಾವ ನಿಯಮ ಇನ್ನು ಕುಂಕುಮ ಆಜ್ಞ ಚಕ್ರಕ್ಕೆ ಪ್ರತಿಕವಾಗಿ ಇಟ್ಟುಕೊಳ್ಳುತ್ತೇವೆ ಹಾಗಾದರೆ ಗಂಡ ಇದ್ದವರಿಗೆ ಮಾತ್ರ ಸತ್ತು ಹೋಗುತ್ತದ ಎಂತಹ ಅಜ್ಞಾನಿಗಳಿದ್ದಾರೆ ಎಂದು ನೀವೇ ಒಂದು ಬಾರಿ ಯೋಚಿಸಿ ನೋಡಿ.

ಯಾವಾಗಲೂ ಕೂಡ ನಾವು ಇಂತಹ ದೌರ್ಭಾಗ್ಯ ಕೆಲಸಗಳಿಗೆ ಪ್ರೋತ್ಸಾಹ ಕೊಡಬಾರದು ಇನ್ನು ಹೂಗಳ ವಿಷಯಕ್ಕೆ ಬಂದರೆ ಒಂದು ಹೂವನ್ನು ಮಾತ್ರ ಇಟ್ಟುಕೊಳ್ಳಬಾರದೆಂದು ಹಿರಿಯರು ಹೇಳುತ್ತಾರೆ ಅದು ಮಲ್ಲಿಗೆ ಹೂ ಇದಕ್ಕೆ ಕಾರಣ ಏನೆಂದರೆ ಮಲ್ಲಿಗೆ ಹೂವಿನ ಸುವಾಸನೆಗೆ ಕೆಲ ಕೋರಿಕೆಗಳು ನಮ್ಮಲ್ಲಿ ಕಲಗುತ್ತವೆ ಅಂತ ಕೋರಿಕೆಗಳು ಗಂಡ ಸತ್ತ ಹೆಣ್ಣು ಮಕ್ಕಳಿಗೆ ಬರಬಾರದೆಂದು ಎಂಬ ಕಾರಣದಿಂದ ಮಾತ್ರವೇ ಮಲ್ಲಿಗೆ ಹೂಗಳನ್ನು ಮುಡಿಯಬಾರದು ಎಂದು ಹಿರಿಯರು ಹೇಳುತ್ತಾರೆ ಇನ್ನು ದೇವರನ್ನು ಪೂಜಿಸುವ ದಾಸವಾಳ ಹೂವಾಗಲಿ, ಗುಲಾಬಿಯಾಗಲಿ ಅದೇ ರೀತಿ ತುಳಸಿಯಾಗಲಿ ಬಿಲ್ವಪತ್ರೆಯಾಗಲಿ ಗಂಡ ಸತ್ತ ಮಹಿಳೆಯರು ಕಿರೋ ಧಾರಣೆ ಅಂದರೆ ತಲೆಯಲ್ಲಿ ಮುಡಿದುಕೊಳ್ಳಬಹುದು.

ಇನ್ನು ಕಾಲುಂಗುರ ಏತಕ್ಕಾಗಿ ತೆಗೆಯಬೇಕು ಈ ಫ್ಯಾಷನ್ ಅಂತ ಮದುವೆ ಆಗದವರು ಹಾಕಿಕೊಳ್ಳುತ್ತಿದ್ದಾರಲ್ಲ ಎಂದು ಕೇಳಬಹುದು ಆದರೆ ಕಾಲುಂಗುರ ಫ್ಯಾಷನ್ ಅಲ್ಲ ಅಂತ ಮೊದಲು ನೆನಪಿಟ್ಟುಕೊಳ್ಳಿ ಇನ್ನು ಪೂರ್ವದಲ್ಲಿ ಗಂಡಸರು ಕೂಡ ಕಾಲುಂಗುರ ಹಾಕಿಕೊಳ್ಳುತ್ತಿದ್ದರು ಇದು ತುಂಬಾ ಜನರಿಗೆ ಗೊತ್ತಿಲ್ಲ ಪದ್ಧತಿಯ ಪ್ರಕಾರ ಮದುವೆ ನಡೆದರೆ ಮದುವೆಯ ಸಮಯದಲ್ಲಿ ಗಂಡು ಹೆಣ್ಣು ಇಬ್ಬರೂ ಕಾಲುಂಗುರ ಹಾಕಿಕೊಳ್ಳುತ್ತಿದ್ದರು ಆದರೆ ಕೆಲ ದಿನಗಳ ನಂತರ ಗಂಡಸರು ಕಾಲುಂಗುರ ತೆಗೆದುಬಿಡುತ್ತಾರೆ ಹೆಂಗಸರು ಮಾತ್ರ ಹಾಗೆಯೇ ಇರಿಸಿಕೊಳ್ಳುತ್ತಾರೆ .

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ಕಾಮ ನಾಡಿಗಳು ಹಾಡುಗಳು ಎಂಬುದು ನಮ್ಮ ಕಾಲಿನ ಬೆರಳುಗಳಲ್ಲಿರುತ್ತದೆ ಕಾಲುಂಗುರ ಹಾಕಿಕೊಳ್ಳುವುದರಿಂದ ಕೆಲ ಕೋರಿಕೆಗಳು ಉತ್ಪತ್ತಿಯಾಗುತ್ತದೆ ಗಂಡ ಇದ್ದವರಿಗೆ ಪರವಾಗಿಲ್ಲಾ ಗಂಡ ಸತ್ತವರು ಅಥವಾ ಮದುವೆ ಆಗದಿರುವ ಹೆಣ್ಣು ಮಕ್ಕಳಿಗೆ ಅಂತಹ ಕೋರಿಕೆಗಳು ಬರಬಾರದು ಎಂದು ಹೇಳುತ್ತಾರೆ ಇನ್ನು ಇದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು ಇನ್ನೂ ಮಂಗಳಸೂತ್ರ ಇದು ಗಂಡ ಕೊಟ್ಟಿರುವುದರಿಂದ ಗಂಡ ಹೋದ ನಂತರ ತಾಳಿಕೋಡ ತೆಗೆಯಬೇಕೆಂದು ಹೇಳುತ್ತಾರೆ ತಾಳಿ ಬೊಟ್ಟು ತೆಗೆದು ಹಾಕಿ ಬರಿ ಚೈನ್ ಹಾಕಿಕೊಳ್ಳಬಹುದು ಗಂಡ ಸತ್ತ ಮಹಿಳೆಗೆ ಕೇವಲ ಈ ಮೂರು ವಸ್ತುಗಳು ಮಾತ್ರ ನಿಷೇಧ ತಾಳಿ ಕಾಲುಂಗುರ ಮಲ್ಲಿಗೆ ಹೂ ಇನ್ನೂ ಉಳಿತವೆಲ್ಲವನ್ನು ಧರಿಸಬಹುದು.

ಈಗ ನಿಯಮಗಳು ಪದ್ಧತಿಗಳ ಬಗ್ಗೆ ತಿಳಿಯೋಣ ಒಂದು ಗಂಡ ಸತ್ತವರು ಲಲಿತ ಸಹಸ್ರನಾಮ ಓದಬಹುದಾ ಖಂಡಿತ ಓದಬಹುದು ದೇವಿಗೆ ಒಂದು ಹೆಸರು ಕೂಡ ಇದೆ ಸುವಾಸಿರ್ನಾಚಿತ ಪ್ರಿಯೆ ನಮಃ ಇದರ ಅರ್ಥ ಸುವರ್ಜಿನೀಯರು ಅಂದರೆ ಮುತ್ತೈದೆಯರು ಕೈಯಿಂದ ಅರ್ಚನೆ ಮಾಡಿಸಿಕೊಂಡರೆ ದೇವಿ ಸಂತೋಷಸುತ್ತಾಳೆ ಹಾಗಂತ ಕೇವಲ ಮುತ್ತೈದೆಯರು ಪೂಜಿಸಬೇಕು ವಿಧವೆಯರು ಪೂಜಿಸುವಂತಿಲ್ಲ ಎಂದು ಇದರ ಅರ್ಥವಲ್ಲ ಲಲಿತ ಸಹಸ್ರನಾಮ ಉತ್ತರ ಪೀಠಿಕೆಯಲ್ಲಿ ನೀವು ನೋಡಿದ್ದೇ ಆದರೆ ಮುಂದಿನ ಜನ್ಮದಲ್ಲಿ ನೂರು ವರ್ಷಗಳ ಕಾಲ ಮುತ್ತೈದೆ ಆಗಿರಬಹುದೆಂದು ಉತ್ತರ ಪೀಠಿಕೆಯಲ್ಲಿ ಬರೆದಿದ್ದಾರೆ ಬೇಕಾದರೆ ನೀವು ಒಂದು ಸಾರಿ ಓದಿನೋಡಿ.

ಎರಡು ಇನ್ನು ಗೌರಿ ಪೂಜೆ ಮಾಡಬಹುದಾ ಖಂಡಿತ ಮಾಡಬಹುದು ಲಕ್ಷ್ಮಿ ಪೂಜೆ ಕೂಡ ಮಾಡಬಹುದು ಸಂಕಷ್ಟಹರ ಚತುರ್ಥಿ ವ್ರತ ಕೂಡ ಮಾಡಬಹುದು ಆಂಜನೇಯ ಸ್ವಾಮಿ ಪೂಜೆ ಕೂಡ ಮಾಡಬಹುದು ಲಕ್ಷ್ಮಿ ನರಸಿಂಹ ಪೂಜೆ ಮಾಡಬಹುದು ಈ ಎಲ್ಲಾ ಮತಗಳು ಪೂಜೆಗಳು ಅಂದರೆ ವಿಧವೆಯರು ಮಾಡಿಕೊಳ್ಳಬಹುದು. ಈ ವ್ರತ ಮಾಡಬಾರದೆಂದು ಎಲ್ಲಿಯೂ ಹೇಳಿಲ್ಲ ಮುಖ್ಯವಾಗಿ ಗಣಪತಿ ವ್ರತದಲ್ಲಾಗಲಿ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಾಗಲಿ ನೀವು ಕಥೆಯನ್ನು ಚೆನ್ನಾಗಿ ಗಮನವಿಟ್ಟು ಕೇಳಿಸಿಕೊಂಡರೆ ಗಂಡ ಇಲ್ಲದ ಮಹಿಳೆಯರು ಈ ವ್ರತ ಮಾಡಿದರೆ ಮುಂದಿನ ಜನ್ಮದಲ್ಲಿ ಸಕಾಲ ಮುತ್ತೈದೆ ಆಗಿರುತ್ತಾರೆಂದು ಆ ಕಥೆಗಳಲ್ಲಿ ಬರೆದಿದ್ದಾರೆ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ಪಾಂಡವರ ತಾಯಿಯಾದ ಕುಂತಿದೇವಿ ಪಾಂಡುರಂಗ ಸತ್ತು ಹೋದ ನಂತರ ಎಷ್ಟೋ ಪೂಜೆಗಳು ಎಷ್ಟು ವ್ರತಗಳು ಮಾಡಿದ್ದಾರೆ ಕೆಲವು ಪ್ರಾಚೀನ ಗ್ರಂಥಗಳು ಪ್ರಕಾರ ಗಂಡ ಸತ್ತ ನಂತರ ಗಜಗೌರಿ ವ್ರತ ಕೂಡ ಕುಂತಿದೇವಿ ಮಾಡಿರುವುದಾಗಿ ಬರೆದಿದ್ದಾರೆ ಇನ್ನು ಪಾಂಡವರು ಯಾವ ಕೆಲಸ ಮಾಡಬೇಕೆಂದರು ಮೊದಲು ಅವರ ತಾಯಿ ಆಶೀರ್ವಾದ ಪಡೆದುಕೊಂಡು ನಂತರವೇ ಮಾಡುತ್ತಿದ್ದರು ಎಂದು ಮಹಾಭಾರತದಲ್ಲಿ ಬರೆದಿದ್ದಾರೆ ಅದೇ ಪ್ರಕಾರ ದಶರಥ ಮಹಾರಾಜ ಮೃತಪಟ್ಟ ನಂತರ ಕೌಶಲ್ಯ ದೇವಿ ಸುಮಿತ್ರ ದೇವಿ, ಕೈಕೆಯಲ್ಲಿ ಇವರೆಲ್ಲರೂ ಕೂಡ ಸೀತಾರಾಮರನ್ನು ಆಶೀರ್ವದಿಸಿದ್ದಾರೆ ಶ್ರೀರಾಮನ ಪಟ್ಟಾಭಿಷೇಕ ಸಮಯದಲ್ಲೂ ಕೂಡ ಈ ಮೂವರು ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಿದ್ದಾರೆ. ಶ್ರೀ ರಾಮ ಅಶ್ವಮೇಧ ಯಾಗ ಮಾಡುವಾಗಲೂ ಕೂಡ ಅವರು ಅಲ್ಲೇ ಇದ್ದರು ಅವರಿಗೆ ಗಂಡ ಇಲ್ಲ ಅಂತ ಅವರನ್ನೇನು ಕೋಣೆಯೊಳಗೆ ಬಂಧಿಸಿರಲಿಲ್ಲ ಕುಂತಿದೇವಿಯನ್ನು ಕೂಡ ಪಾಂಡವರು ರಾಜಸುಯಾಗ ಮಾಡುವಾಗ ಪಕ್ಕದಲ್ಲಿ ಇಟ್ಕೊಂಡು ಪೂಜಿಸಿದ್ದರು ಅವರು ಯಾರು ಕೂಡ ಮುತ್ತೈದೆಯಾಗಿದ್ದಾಗ ಒಂದು ರೀತಿ ವಿಧವೆಯಾದಾಗ ಮತ್ತೊಂದು ರೀತಿ ನೋಡಿರಲಿಲ್ಲ .

ಆದರೆ ನಾವೇ ಇಂತಹ ದೌರ್ಭಾಗ್ಯ ಕೆಲಸ ಮಾಡುತ್ತಿದ್ದೇವೆ. ಮನೆಯಲ್ಲಿ ಲಕ್ಷ್ಮಿ ಪೂಜೆ ಅಥವಾ ಯಾವುದಾದರೂ ವ್ರತ ಇದು ಗಂಡ ಇದ್ದವರಿಗೆ ಮಾತ್ರ ಅರಿಶಿನ ಕುಂಕುಮ ತೆಗೆದುಕೊಳ್ಳಬಾರದು ಬರಿ ಬಾಳೆಹಣ್ಣು ತೆಗೆದುಕೊಳ್ಳಿ ಎನ್ನುವುದು ಅಥವಾ ಅರಿಶಿಣ ಕುಂಕುಮಕ್ಕೆ ಕರೆಯಲು ಹೋದಾಗ ಕೇವಲ ಮುತ್ತೈದೆಯರನ್ನು ಕರೆಯೋದು ಮಾಡುತ್ತೇವೆ ಅಂತ ನೀಚತ್ವ ಮನಸ್ಥಿತಿ ಇರುವವರು ಎಷ್ಟೇ ಪೂಜೆ ಮಾಡಿದರೂ ವ್ರತವನ್ನು ಮಾಡಿದರು ಅಮ್ಮನವರ ಅನುಗ್ರಹ ಪಡೆಯಲು ಸಾಧ್ಯವಾಗುವುದಿಲ್ಲ ನೆನಪಿಡಿ.