ಇದೆಂಥಾ ಸಾವು ಶ್ರೀಮಂತನ‌ ಕಾರಿಗೆ ಸಿಕ್ಕಿ ಸಾವನ್ನಪ್ಪಿದ ಸುಂದರಿ,ಕೇಸ್ ಮುಚ್ಚಾಕಲು ಹಣದ ಆಮಿಷ.

ಇದೆಂಥಾ ಸಾವು ಶ್ರೀಮಂತನ‌ ಕಾರಿಗೆ ಸಿಕ್ಕಿ ಸಾವನ್ನಪ್ಪಿದ ಸುಂದರಿ,ಕೇಸ್ ಮುಚ್ಚಾಕಲು ಹಣದ ಆಮಿಷ.
ನವಂಬರ್ 2 ದೀಪಾವಳಿ ಹಬ್ಬದ ಸಡಗರ ಸಂಭ್ರಮ ಎಲ್ಲೆಡೆ ಮಿಂಚುತ್ತಿತ್ತು ಆದರೆ ಆ ಒಂದು ಮನೆಯಲ್ಲಿ ದೀಪವೇ ಹಾರಿಹೋಗಿತ್ತು ಹಾಗಾದರೆ ಯಾರು ಯಾರ ಮನೆಯಲ್ಲಿ ದೀಪ ಹಾರಿಹೋಗಿತ್ತು ಎಲ್ಲ ವಿಷಯವನ್ನು ಸಂಪೂರ್ಣವಾಗಿ ತಿಳಿಸುತ್ತೇವೆ.

WhatsApp Group Join Now
Telegram Group Join Now

ಆಕೆಯ ವಯಸ್ಸು 30 ವರ್ಷ ತಾಯಿಯನ್ನ ಕಳೆದುಕೊಂಡು ತಂದೆ ಮತ್ತು ತಮ್ಮನೊಂದಿಗೆ ಜೀವನವನ್ನು ನಡೆಸುತ್ತಿದ್ದರು ಹಾಗೂ ಆಕೆಗೆ ಮದುವೆಯಾಗಿ ಮೂರು ವರ್ಷಗಳು ತುಂಬಿತು ಎಚ್‌ಪಿ ಕಂಪನಿಯೊಂದರಲ್ಲಿ ಐಟಿ ಕೆಲಸವನ್ನ ನಿರ್ವಹಿಸುತ್ತಿದ್ದರು ಸ್ವಲ್ಪ ದಿನಗಳ ನಂತರ ಕೆಲಸವನ್ನು ಬಿಟ್ಟು ಫ್ಯಾಶನ್ ಡಿಸೈನರ್ ಗೆ ಸೇರಿಕೊಂಡರು ಅಂದರೆ ಚಿತ್ರಪಟವನ್ನು ಬಿಡಿಸುವಂತಹ ಕೆಲಸಕ್ಕೆ ಸೇರಿಕೊಂಡಿದ್ದರು ದೀಪಾವಳಿ ಹಬ್ಬದ ಕೊನೆಯ ಬಲಿಪಾಡ್ಯಮಿ ಹಬ್ಬ

ಸುಮಾರು ಏಳು ಗಂಟೆ ಸಂಜೆ ಕೆಲಸ ಮುಗಿಸಿ ನಂತರ ಮನೆಗೆ ತೆರಳ ಬೇಕಾಗಿತ್ತು ಬೆಂಗಳೂರಿನ ಕೆಂಗೇರಿ ನಿಲ್ದಾಣದಿಂದ ಮೆಟ್ರೋ ಕಡೆಗೆ ಸಂಚಾರ ಮಾಡುವ ಸಂದರ್ಭದಲ್ಲಿ ಬೆಂಜ್ ಕಾರ್ ಡಿಕ್ಕಿ ಹೊಡೆಯುತ್ತದೆ ಗುದ್ದಿದ ವ್ಯಕ್ತಿಯ ವಯಸ್ಸು ಸುಮಾರು 20 ವರ್ಷ ಇಂಜಿನಿಯರಿಂಗ್ ಐದನೇ ಸೆಮಿಸ್ಟರ್ ಅನ್ನ ವ್ಯಾಸಂಗ ಮಾಡುತ್ತಿದ್ದಾರೆ ಖಾಸಗಿ ಕಾಲೇಜ್ ನಲ್ಲಿ ಹೆಸರು ಧನುಷ್ ಪರಮಯ್ಯ ತಂದೆ ಬಂದು ಬಹಳ ದೊಡ್ಡ ಶ್ರೀಮಂತರಂತೆ ಉದ್ಯಮಿಯಂತೆ ಯಶವಂತಪುರದ ಮಾಲಿನಲ್ಲಿ ಚೆನ್ನಾಗಿ ಕಂಠಪೂರ್ತಿ ಕುಡಿದು ಸ್ನೇಹಿತರನ್ನು ಬಿಟ್ಟು ಒಬ್ಬ ಸ್ನೇಹಿತನ ಜೊತೆ ಕಾರನ್ನು ಚಾಲನೆ ಮಾಡುತ್ತಾ ನಾಯಂಡಳ್ಳಿ ಮಾರ್ಗದಿಂದ ಕೆಂಗೇರಿ ಕಡೆಗೆ ಬರುತ್ತಿರುತ್ತಾನೆ.

ಆ ಸಂದರ್ಭದಲ್ಲಿ ರೋಡ್ ಮೇಲೆ ಹಂಪ್ ಇರುವುದನ್ನು ಸಹ ನೋಡದೆ ಹಾಗೆ ರಭಸವಾಗಿ ಬಂದು ಅದಾದ ಬಳಿಕ ರಸ್ತೆ ದಾಡಿಕೊಂಡು ಹೋಗ್ತಿದ್ದಂತಹ ಸಂಧ್ಯಾ ಎಂಬ ಯುವತಿಗೆ ಜೋರಾಗಿ ಗುದ್ದಿದ್ದಾನೆ ಆತ ಗುದ್ದಿದಾರ ಬಸಕ್ಕೆ ಆಕೆ ಆರರಿಂದ ಏಳು ಅಡಿ ಎತ್ತರಕ್ಕೆ ಹೋಗಿ ಕೆಳಗೆ ಬಿದ್ದಿದ್ದಾಳೆ ನಂತರ ಮೇಲಿಂದ ಬಿದ್ದವಳೆ 2 ಕಿ.ಮೀಗಳವರಿಗೆ ನೆಲಕ್ಕೆ ಉಜ್ಜಿಕೊಂಡು ಹೋಗಿದ್ದಾಳೆ ನಂತರ ಅಲ್ಲಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಂದಕ್ಕೆ ರಭಸವಾಗಿ ಬಂದು ಅಲ್ಲಿ ಹೋಗುತ್ತಿದ್ದ ಸ್ಕೂಟಿಯಲ್ಲಿ ಒಬ್ಬ ವ್ಯಕ್ತಿಗೆ ಮತ್ತೆ ಗುತ್ತಿದ್ದಾನೆ ನಂತರ ಅಲ್ಲಿಯ ಸ್ಥಳೀಯರು ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಕೆಂಗೇರಿಯ ಸಮೀಪದಲ್ಲಿರುವ ಆಸ್ಪತ್ರೆಯೊಂದಕ್ಕೆ ಸಂಧ್ಯರನ್ನು ಅಲ್ಲಿಯ ಸ್ಥಳೀಯ ಜನರು ಸೇರಿಸುತ್ತಾರೆ ಆದರೆ ಆಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಕಳುಹಿಸುತ್ತಾರೆ ನಂತರ ಅಲ್ಲಿನ ಬಿಜಿಎಸ್ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗುತ್ತಾರೆ ಆದರೆ ಅಷ್ಟೊತ್ತಿಗೆ ಆಗಲೇ ಅವರು ತಮ್ಮ ಉಸಿರನ್ನು ಚೆಲ್ಲಿರುತ್ತಾರೆ ಆಕೆಯ ದೇಹದಲ್ಲಿರುವ ಮೂಳೆಗಳು ಪುಡಿ ಪುಡಿಯಾಗಿದಂತೆ ಸಂಪೂರ್ಣವಾಗಿ ಮುರಿದು ಹೋಗಿತ್ತು ಇದರಿಂದ ಆಕೆಯ ತಮ್ಮ ಹಾಗೂ ಆಕೆಯ ಗಂಡನ ನೋವು ಗಗನಕ್ಕೆ ಮುಟ್ಟಿತು.

ಕುಟುಂಬಕ್ಕೆ ತಾಯಿಯಾಗಿದ್ದ ಸಂಧ್ಯಾಳನ್ನು ಕಳೆದುಕೊಂಡ ತಮ್ಮ ಬಹಳ ದುಃಖ ತಪ್ತರಾಗಿದ್ದಾರೆ ತಾಯಿಯನ್ನ ಕಳೆದುಕೊಂಡು ಅಕ್ಕನನ್ನೇ ತಾಯಿಯ ಸ್ಥಾನದಲ್ಲಿ ಕಾಣುತ್ತಿದ್ದ ಸಂದ್ಯಾಳ ತಮ್ಮನಿಗೆ ಇದು ಆಘಾತಕಾರಿ ವಿಷಯವಾಗಿದೆ ಆದರೆ ಸಂಜಾಳ ತಮ್ಮ ಅಕ್ಕನ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಹೇಳುತ್ತಿದ್ದಾನೆ ಇದನ್ನ ಹೊತ್ತಿ ಹೇಳುವುದಕ್ಕೆ ಕಾರಣವೇನೆಂದರೆ ಆಕ್ಸಿಡೆಂಟ್ ಮಾಡಿದ ಯುವಕನ ಸಂಬಂಧಿಕರೊಬ್ಬರು ಸಂಧ್ಯಾಳ ಕುಟುಂಬದವರ ಬಳಿ ಹೋಗಿ ಒಂದುವರೆ ಕೋಟಿಯನ್ನ ನೀಡುವುದಾಗಿ ದೂರನ್ನ ಹಿಂದಕ್ಕೆ ತೆಗೆದುಕೊಳ್ಳುವುದಾಗಿ ದುಡ್ಡಿನ ಆಮಿಷವನ್ನು ಹೊಡ್ಡಿದ್ದಾರೆ ಆದರೆ ಆಕೆಯ ತಮ್ಮ ದುಡ್ಡು ಅವಶ್ಯಕತೆ ನಮಗಿಲ್ಲ ನನ್ನ ಅಕ್ಕನ ಸಾವಿಗೆ ನ್ಯಾಯ ಸಿಗಲೇಬೇಕು ಆಕ್ಸಿಡೆಂಟ್ ಮಾಡಿದ ವ್ಯಕ್ತಿಗೆ ಜೈಲು ಶಿಕ್ಷೆ ಆಗಲೇಬೇಕು ಎಂದು ನ್ಯಾಯ ಕೇಳುತ್ತಿದ್ದಾನೆ.

ಬೆಂಗಳೂರಿನ ಕಮಿಷನರ್ ದಯಾನಂದ್ ಅವರು ಮಾಧ್ಯಮದ ಮುಂದೆ ಹೇಳಿಕೆಯನ್ನು ನೀಡಿದ್ದಾರೆ ಯಾವ ಕಾರಣಕ್ಕು ಈ ಪ್ರಕರಣವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಆಕ್ಸಿಡೆಂಟ್ ಮಾಡಿದ ಯುವಕನನ್ನು ವ್ಯಾಯಾಂಗ ಬಂಧನಕ್ಕೆ ಈಗಾಗಲೇ ಒಪ್ಪಿಸಲಾಗಿದೆ ಇದರ ಪ್ರಕರಣ ಯಾವ ರೀತಿಯಲ್ಲಿದೆ ಎಂದು ಮುಂದೆ ತಿಳಿಸಿದ್ದೇವೆ ಎಂದು ಮಾಧ್ಯಮದ ಮುಂದೆ ಘೋಷಿಸಿದ್ದಾರೆ ಸಂಧ್ಯಾ ಗೆ ಆಕ್ಸಿಡೆಂಟ್ ಮಾಡಿದ ಕಾರು ಮಾರುಕಟ್ಟೆಯ ಬೆಲೆ ಒಂದು ಕೋಟಿ ಹತ್ತು ಲಕ್ಷ ಇಷ್ಟು ಬೆಲೆ ಬಾಳುವ ಕಾರನ್ನು 20 ವರ್ಷದ ಮಗನಿಗೆ ಉಡುಗೊರೆಯಾಗಿ ನೀಡಿರುತ್ತಾರೆ ಓದುವ ಮಕ್ಕಳಿಗೆ ಇಷ್ಟು ಬೆಲೆ ಬಾಳುವ ಕಾರನ್ನು ಕೊಡಿಸುವುದು ಅವಶ್ಯಕತೆ ಇರಲಿಲ್ಲ ಹಾಗೂ ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಮಕ್ಕಳ ಹಾಗೂ ಹೋಗುಗಳನ್ನ ತಿಳಿದುಕೊಳ್ಳಬೇಕು ತಮ್ಮ ಕುಡಿತದ ಚಟಕ್ಕೆ ಅವರ ಶೋಕಿಗೆ ಇನ್ನೊಬ್ಬರನ್ನು ಬಲಿ ತೆಗೆದುಕೊಳ್ಳುತ್ತಾರೆ ಸಂಧ್ಯಾಳ ಸಾವಿಗೆ ನ್ಯಾಯ ಸಿಗಲೇಬೇಕು.