ಬಹಳ ಮಹಿಮೆ ಇರುವ ಆಂಜನೇಯ ಸ್ವಾಮಿ ವ್ರತ ಅನುಷ್ಠಾನ.ನಮಸ್ತೆ ಸ್ನೇಹಿತರೆ, ಮನುಷ್ಯನ ಇಷ್ಟಾರ್ಥ ಸಿದ್ಧಿಗಾಗಿ ಆಂಜನೇಯಸ್ವಾಮಿ ಧ್ಯಾನ ಮಾಡುವುದರಿಂದ ನಿಮ್ಮ ಇಷ್ಟಾರ್ಥ ಸಿದ್ದಿ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಮನೆಯಲ್ಲಿ ಹೇಗೆ ಒಂದು ವ್ರತ ಮಾಡಬೇಕು ಹೇಗೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಈ ವ್ರತ ಮಾಡಲು ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಅವರ ಫೋಟೋ ಅಥವಾ ಮೂರ್ತಿ ಬೇಕಾಗುತ್ತದೆ. ಫೋಟೋವನ್ನು ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಬೇಕಾಗುತ್ತದೆ. ಈ ವ್ರತವನ್ನು ಯಾವ ದಿನದಿಂದ ಆದರೂ ಶುರು ಮಾಡಬಹುದಾಗಿದೆ ಈ ವ್ರತವು 16 ದಿನಗಳ ಸಂಪೂರ್ಣ ವ್ರತ ಆಗಿರುತ್ತದೆ. ಮೊದಲನೇ ದಿನ ಆಂಜನೇಯ ಸ್ವಾಮಿಗೆ ದೀಪಹಚ್ಚಿ ಹಣ್ಣು ಕಾಯಿ ಪಲ ಇಟ್ಟು ನೈವೇದ್ಯ ಅರ್ಪಿಸಿ ಸಂಕಲ್ಪ ಪೂಜೆ ಮಾಡಬೇಕು. ಒಂದು ಸಿಪ್ಪೆಸಹಿತ ತೆಂಗಿನಕಾಯಿ ಇಡಬೇಕು ಏಕೆಂದರೆ 16 ದಿನ ವ್ರತ ಮುಗಿಯುವವರೆಗೂ ಕಾಯಿ ಯಾವುದೇ ರೀತಿ ಹಾಳಾಗದೆ ಇರಬೇಕು ಆದಕಾರಣ ಒಂದು ಸಿಪ್ಪೆಸಹಿತ ಕಾಯಿಯನ್ನು ಇಟ್ಟು ಪೂಜೆ ಮಾಡಬೇಕು.
ಈ ತಾಯಿಗೆ ಪೂಜೆ ಅರ್ಪಿಸಿ ನಂತರ ಆ ಕಾಯನ್ನು ಕೈಯಲ್ಲಿಟ್ಟುಕೊಂಡು ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿದ ನಂತರ ಆ ಕಾಯಿಯನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಬೇಕು 16 ದಿನ ಮುಗಿಯುವವರೆಗೂ ಈ ಕಾಯಿಯನ್ನು ತೆಗೆಯಬಾರದು ಸ್ಥಳ ಬದಲಾವಣೆ ಮಾಡಬಾರದು. ಪ್ರತಿದಿನವೂ ಈ ಕಾಯಿಗೆ ಪೂಜೆ ಅರ್ಪಿಸಬೇಕು ನಂತರ ನಾವು ತಿಳಿಸುವ ಈ ಸ್ತೋತ್ರವನ್ನು 108 ಬಾರಿ ಪಠನೆ ಮಾಡಬೇಕು.ತ್ವಮಸ್ಮಿನ್ ಕಾರ್ಯನಿರ್ಯೋಗೆ ಪ್ರಮಾಣಂ ಹರಿಸತ್ತಮ ಹನುಮಾನ್ ಯತ್ನಮಾಸ್ಥಾಯ ದುಃಖ ಕ್ಷಯ ಕರೋಭವ. ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತವಕಿ ಮದ ರಾಮದೂತ ಕೃಪಾಸಿಂಧು ಮತ್ಕಾರ್ಯಂ ಸಾಧಯ ಪ್ರಭೋ.ಈ ಸ್ತೋತ್ರವನ್ನು ಪ್ರತಿದಿನ ಆಂಜನೇಯಸ್ವಾಮಿಗೆ ಪೂಜೆ ನೈವೇದ್ಯ ಅರ್ಪಿಸಿ ತೆಂಗಿನಕಾಯಿ ಪೂಜೆ ಸಲ್ಲಿಸಿ ಈ ಸ್ತೋತ್ರವನ್ನು 108 ಬಾರಿ ಮಾಡಬೇಕು. 16 ದಿನ ಪೂಜೆ ಮುಗಿದ ನಂತರ ಈ ಕಾಯಿಯನ್ನು ಬದಲಿಸಬೇಕು ಪ್ರತಿದಿನ ಕಾಯಿಗೆ ನೈವೇದ್ಯ ತಪ್ಪದೇ ಅರ್ಪಿಸಿ ಇರಬೇಕು. ಹದಿನಾರನೇ ದಿನ ಕಾಯಿಯನ್ನು ಕದಲಿಸಿ ಆ ಕಾಯಿಯ ಸಿಪ್ಪೆಯನ್ನು ತೆಗೆದು ಆ ಕಾಯಿಂದ ಸಿಹಿ ಪದಾರ್ಥ ಮಾಡಿ ನಿಮ್ಮ ಮನೆಯಲ್ಲಿರುವವರಿಗೆ ಕೊಡಬೇಕು. ಈ ಕಾಯಿಯಿಂದ ಸಿಹಿ ಪದಾರ್ಥವನ್ನು ಮಾತ್ರ ಮಾಡಬೇಕು ಯಾವುದೇ ರೀತಿಯ ಕಾರ ಸಾಂಬಾರು ಪದಾರ್ಥಗಳಿಗೆ ಬಳಸಬಾರದು ಈ ರೀತಿ 16 ದಿನ ಪೂಜೆ ಮುಗಿದ ನಂತರ ಆಂಜನೇಯಸ್ವಾಮಿ ಕೃಪೆಗೆ ನೀವು ಪಾತ್ರರಾಗುತ್ತಿರ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ಬಹಳ ಶ್ರದ್ಧಾಭಕ್ತಿಯಿಂದ ಈ ಪೂಜೆಯನ್ನು ನೀವು ಮಾಡಬೇಕಾಗುತ್ತದೆ.
ನಿಮ್ಮ ಸಕಲ ಕಾರ್ಯಸಿದ್ದಿಗಾಗಿ ಮನೆಯಲ್ಲೇ ಮಾಡುವ ಕಾರ್ಯಸಿದ್ದಿ ಆಂಜನೇಯನ ಪೂಜೆ,48 ದಿನದಲ್ಲಿ ಕೆಲಸ ಆಗುತ್ತೆ..
ಪೂಜಾ ವಿಧಾನ
[irp]