ಇಂತಹ ಕಿಚನ್ ಟಿಪ್ಸ್ ಗಳು ನಿಮಗೆ ಗೊತ್ತಿದ್ದರೆ ನಿಮಗೆ ಅಡುಗೆ ಮಾಡಲು ಇಷ್ಟ ಇಲ್ಲದಿದ್ದರೂ ಇಂಟರೆಸ್ಟ್ ಕೊಟ್ಟು ಮಾಡುತ್ತೀರಾ.ನಮ್ಮ ಮನೆಯಲ್ಲಿ ಯಾವಗಲೂ ಅಡುಗೆಮನೆಯ ತುಂಬಾ ಸ್ವಚ್ಛವಾಗಿರಬೇಕು ಯಾವ ಅಡುಗೆಮನೆ ಸ್ವಚ್ಛವಾಗಿರುತ್ತದೆ ಅಂತವರ ಮನೆಯಲ್ಲಿ ಇರುವಂತಹ ಸದಸ್ಯರ ಆರೋಗ್ಯವೂ ಕೂಡ ಅಷ್ಟೇ ಚೆನ್ನಾಗಿ ಇರುತ್ತದೆ ಎಂಬುದನ್ನು ಹಿರಿಯರು ಹೇಳಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವು ಮಹಿಳೆಯರು ಅಡುಗೆ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದಿಲ್ಲ ಈ ರೀತಿ ಇಲ್ಲದೆ ಇರುವ ಕಾರಣ ಅವರ ಮನೆಯಲ್ಲಿ ಆರೋಗ್ಯವೂ ಕೂಡ ಹಾಳಾಗುತ್ತದೆ. ಹಾಗಾಗಿ ಇಂದು ಅಡಿಗೆಮನೆಗೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಸರಳ ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ. ಈ ಟಿಪ್ಸ್ ಗಳನ್ನು ನೀವು ಅನುಸರಣೆ ಮಾಡಿದರೆ ಖಂಡಿತವಾಗಿಯೂ ಕೂಡ ನೀವು ತುಂಬಾ ಸುಂದರವಾಗಿ ನಿಮ್ಮ ಅಡುಗೆ ಮನೆಯನ್ನು ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಅಡುಗೆ ಮಾಡಲು ಕೂಡ ಈ ಸರಳ ಟಿಪ್ಸ್ ಗಳು ನಿಮಗೆ ತುಂಬಾನೇ ಸಹಾಯ ಮಾಡಬಹುದು.
ಆಗಾದರೆ ಆ ಟಿಪ್ಸ್ ಯಾವುದು ಯಾವ ರೀತಿಯಾಗಿ ನಾವು ಈ ಚಿಪ್ಸ್ ಅನ್ನು ಬಳಕೆ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಮೊದಲನೇದಾಗಿ ನಿಮ್ಮ ಮನೆಯಲ್ಲಿ ಕನ್ನಡಿ ಅಥವಾ ಕೂಲಿಂಗ್ ಗ್ಲಾಸ್ ಇದ್ದೇ ಇರುತ್ತದೆ ಸಾಮಾನ್ಯವಾಗಿ ಇದನ್ನು ನಾವು ಬಳಕೆ ಮಾಡುತ್ತಿದ್ದ ಹಾಗೂ ಅವುಗಳ ಒಳಪು ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಅವುಗಳ ಮೇಲೆ ತುಂಬಾನೇ ಧೂಳು ಅಥವಾ ಕಸಾ ಕೂರುತ್ತದೆ. ಹಾಗಾಗಿ ಅವುಗಳನ್ನು ಕ್ಲೀನ್ ಮಾಡಬೇಕಾದರೆ ಒಂದು ಸರಳ ವಿಧಾನವನ್ನು ಅನುಸರಿಸಿ ಅದೇನೆಂದರೆ ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇರುವ ಸ್ಯಾನಿಟೈಸರ್ ಅನ್ನು ನಿಮ್ಮ ಬಳಿ ಇರುವಂತಹ ಕೂಲಿಂಗ್ ಗ್ಲಾಸ್ ಆಗಿರಬಹುದು ಅಥವಾ ಕನ್ನಡ ಆಗಿರಬಹುದು ಅಥವಾ ನಿಮ್ಮ ಮನೆಯ ಶೋಕೇಸ್ ಆಗಿರಬಹುದು ಅದರ ಮೇಲೆ ಸ್ಪ್ರೇ ಮಾಡಿ ಒಂದು ಟಿಸ್ಯೂ ಪೇಪರ್ ನಿಂದ ಒರೆಸಿ.
ಹೀಗೆ ಮಾಡುವುದರಿಂದ ಕನ್ನಡಿ ಅಥವಾ ಕನ್ನಡಕ ಗಾಜುಗಳು ಎಲ್ಲವೂ ಕೂಡ ಹೊಸದರಂತೆ ಹೊಳಪು ನೀಡುತ್ತದೆ ಇದು ಮೊದಲನೆಯ ಎರಡನೆಯದಾಗಿ ಸಾಮಾನ್ಯವಾಗಿ ಸಕ್ಕರೆಯನ್ನು ಇದನ್ನು ಎಲ್ಲರೂ ಕೂಡ ಬಳಕೆ ಮಾಡುತ್ತಾರೆ ಕೆಲವೊಮ್ಮೆ ನೀರಿನ ಅಂಶ ಬಿಟ್ಟುಕೊಳ್ಳುತ್ತದೆ. ಸಕ್ಕರೆಯಲ್ಲಿ ನೀರು ಬಿಟ್ಟುಕೊಳ್ಳಬಾರದು ಅಂದರೆ ನೀವು ಸಕ್ಕರೆ ಅನ್ನು ಸಂಗ್ರಹಣೆ ಮಾಡಲು ಬಳಕೆ ಮಾಡುವಂತಹ ಪ್ಲಾಸ್ಟಿಕ್ ಬಾಕ್ಸ್ ಆಗಿರಬಹುದು ಅಥವಾ ಸ್ಟೀಲ್ ಬಾಕ್ಸ್ ಆಗಿರಬಹುದು ಅದರ ಕೆಳಗೆ ಮೊದಲು ಒಂದು ಟಿಶ್ಯೂ ಪೇಪರ್ ಹಾಕಬೇಕು. ನಂತರ ಅದರ ಮೇಲೆ ಸಕ್ಕರೆಯನ್ನು ಹಾಕಬೇಕು ಸಕ್ಕರೆ ತುಂಬಿದ ನಂತರ ಮೇಲೆ ಇನ್ನೊಂದು ಟಿಶ್ಯೂ ಪೇಪರ್ ಹಾಕಬೇಕು ಈ ರೀತಿ ಮಾಡುವುದರಿಂದ ಖಚಿತವಾಗಿ ಕೂಡ ಸಕ್ಕರೆಯಲ್ಲಿ ನೀರು ಬಿಡುವುದಿಲ್ಲ.