ಮಕರ ರಾಶಿ ಭವಿಷ್ಯ ಆಗಸ್ಟ್ 2022 ||ಶ್ರಾವಣ ಮಾಸದಲ್ಲಿ ಮಕರ ರಾಶಿಯವರ ಭವಿಷ್ಯ ಮಕರ ರಾಶಿ ಎoದ ತಕ್ಷಣ ನೆನಪಾಗುವಂತದ್ದು ಮಕರ ರಾಶಿಗೆ ಶನಿ ಪರಮಾತ್ಮ ನಾಲ್ಕನೇ ಚರಣಕ್ಕೆ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ ಅದು ಪುನಹ ಸಾಡೆ ಸಾತು ನಲ್ಲಿ ತೋರಿಸುವಂತದ್ದು ಅದರಲ್ಲಿಯೂ ಕೂಡ ವಿಶೇಷವಾಗಿ ಕೆಲವೊಂದು ರಾಶಿಯವರಿಗೆ ವಕ್ರ ಶನಿ ಪ್ರಾರಂಭವಾಗಿರುವಂಥದ್ದು. ಮಕರ ರಾಶಿ ಅಧಿಪತಿ ಶನಿ ಅವನಿಗೆ ಸ್ವ ಸ್ಥಾನ ಗುರುಬಲ ಇದ್ದರೆ ಮಕರ ರಾಶಿಯವರಿಗೆ ಯಾವ ತೊಂದರೆಯೂ ಇಲ್ಲ ಎಂದು ಆದರೆ ವೃತ್ತಿಯಲ್ಲಿ ಹಲವಾರು ತೊಂದರೆಗಳು ಹಣವನ್ನು ಕಳೆದುಕೊಳ್ಳುವಂತದ್ದು ಮಾಡದೇ ಇರುವಂತಹ ತಪ್ಪುಗಳಿಗೆ ಧನವ್ಯಯವಾಗುವಂತಹ ಸಾಧ್ಯತೆಗಳು ಇವೆ. ಉದಾಹರಣೆಗೆ ಹೇಳುವುದಾದರೆ ನೀವು ಯಾರಿಗೊ ಒಂದಿಷ್ಟು ಹಣವನ್ನು ಸಹಾಯಕ್ಕಾಗಿ ಕೊಟ್ಟಿರುತ್ತೀರಿ ಆದರೆ ಅದೇ ನಿಮಗೆ ಮಾರಕವಾಗುವಂತಹ ಸನ್ನಿವೇಶ ಎದುರಾಗುತ್ತದೆ.
ಜನ್ಮ ಶನಿ ಕಾಟ ಮತ್ತು ಚಂದ್ರನಿಂದ ಮಾನಸಿಕವಾಗಿ ಪರಸ್ಪರ ವಿರೋಧ ಅಂದರೆ ಮನೆಯಲ್ಲಿ ಒಬ್ಬರ ಮಾತು ಒಬ್ಬರಿಗೆ ತಪ್ಪಾಗಿ ಕಾಣಿಸುವಂತಹ ಸನ್ನಿವೇಶಗಳು ಎದುರಾಗಬಹುದು ಹಾಗಾಗಿ ಮಕರ ರಾಶಿಯವರು ಸ್ವಲ್ಪ ತಾಳ್ಮೆಯನ್ನು ತಂದುಕೊಳ್ಳಬೇಕು ಶನಿ ಪರಮಾತ್ಮನನ್ನು ಆರಾಧನೆ ಮಾಡಿಕೊಳ್ಳಬೇಕು. ಹಾಗೆಯೇ ಮೂರನೇ ಮನೆಯಲ್ಲಿ ಗುರು ವಿಪತ್ತು ಸ್ಥಾನ ಅಂದರೆ ಸ್ವಸ್ಥಾನ ಆದರೂ ಕೂಡ ಗುರುವಿನ ಮನೆ ಹಾಗಾಗಿ ಗುರುಬಲ ಇದ್ದರೆ ಯಶಸ್ಸು ಗುರುಬಲ ಇಲ್ಲ ಎಂದರೆ ಕಷ್ಟ. ಇದಕ್ಕೆ ಪರಿಹಾರಾರ್ಥಕವಾಗಿ ಗುರುವಾರದ ದಿನದಂದು ನವಗ್ರಹಕ್ಕೆ ಹೋಗಿ ಗುರುವಿನ ಪ್ರಾರ್ಥನೆ ಮಾಡಿ ಗುರು ಗ್ರಹಕ್ಕೆ ಕಡಲೆಕಾಳು ಹಾಗೆಯೇ ಹಳದಿ ಬಟ್ಟೆ ಕೊಡುವುದು ಹಾಗೆಯೇ ಅರಳಿ ಮರಕ್ಕೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮಕರ ರಾಶಿಯವರಿಗೆ ಗುರು ಬಲ ಬರುತ್ತದೆ ಎಂದು ಹೇಳಲಾಗುತ್ತದೆ.
ನಾಲ್ಕನೇ ಮನೆಯಲ್ಲಿ ಸುಖ ಸ್ಥಾನದಲ್ಲಿ ರಾಹು ಇದ್ದಾನೆ ಅವನು ಕುಜನ ಮನೆಯಲ್ಲಿ ಇದ್ದಾನೆ ಹಾಗಾಗಿ ಆರೋಗ್ಯ ಅಂದರೆ ಮಾನಸಿಕವಾಗಿ ವಿಚಲಿತ ಗೊಳ್ಳುತ್ತೀರಿ ತಲೆನೋವು ಬರುವಂತದ್ದು ಅಥವಾ ಮನಸ್ಸು ಯಾಕೋ ಸ್ತಿಮಿತದಲ್ಲಿ ಇಲ್ಲ ಅನ್ನುವ ಹಾಗೆ ಆಗುತ್ತದೆ. ಶುಕ್ರನ ಮನೆಯಲ್ಲಿ ಕುಜ ಗ್ರಹ ಇದೆ ಅದು ಐದನೇ ಮನೆಯಲ್ಲಿ ಇದ್ದಾನೆ ಇದರಿಂದ ಧನ ವ್ಯಯವಾಗುವಂಥದ್ದು ಭೂಮಿಯ ವಿಷಯಕ್ಕೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳು ವಿಫಲಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆ ಮಕರ ರಾಶಿಯವರಿಗೆ ವಿವಾಹ ಭಾಗ್ಯ ಕೂಡಿ ಬರುವಂತಹ ಸಮಯವಾಗಿದೆ ಎಂದು ಹೇಳಬಹುದು ಶುಕ್ರನಿಂದ ಸಂಪತ್ತು ಹಾಗೆಯೇ ಈ ಎಲ್ಲಾ ಸ್ಥಾನಗಳು ಅಭಿವೃದ್ಧಿ ಹೊಂದಬೇಕು ಎಂದರೆ ಗುರುವಿನ ಅನುಗ್ರಹ ಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.