ರಶ್ಮಿಕಾಗೆ ಸ್ವಲ್ಪವಾದರೂ ಇರಬೇಕಿತ್ತು ನಿಯತ್ತು ಈ 2 ಇಂಟರ್ವೂನಲ್ಲಿ ನಡೆದಿದ್ದು ಇಷ್ಟು.ರಶ್ಮಿಕಾ ಏಟು ರಿಷಬ್ ತಿರುಗೇಟು…

ರಿಷಬ್ ಹೆಸರು ಹೇಳಲು ನಖರಾ ಮಾಡಿದ್ದ ರಶ್ಮಿಕಾಗೆ ಅವಳದ್ದೆ ಸ್ಟೈಲಿನಲ್ಲಿ ತಿರುಗೇಟು ಕೊಟ್ಟ ಶೆಟ್ರು.ರಶ್ಮಿಕ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿ ಮರೆಯುತ್ತಿರಬಹುದು ಆದರೆ ಆಕೆಗೆ ಇಂಥದ್ದೊಂದು ಸ್ಥಾನ ಬರಲು ಅವಳ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಕಾರಣ. ಈ ಸಿನಿಮಾದಲ್ಲಿ ಹೊಸ ಮುಖವಾಗಿದ್ದ ಇವರನ್ನು ಪಳಗಿಸಿ ಇಂದು ದೇಶವೇ ಗುರುತಿಸುವಂತಹ ನಟಿ ಮಾಡುವಲ್ಲಿ ಆ ಸಿನಿಮಾದ ನಾಯಕನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರ ಪಾತ್ರ ಮಹತ್ವದ್ದು, ಇಂತಹ ನಿರ್ದೇಶಕರು ಹಾಗೂ ಟೀಮ್ ಅನ್ನು ಯಾರೇ ಆಗಿದ್ದರು ಕೊನೆಯವರೆಗೂ ಕೂಡ ನೆನಪಿಟ್ಟುಕೊಳ್ಳುತ್ತಿದ್ದರು. ಆದರೆ ರಶ್ಮಿಕಗೆ ಆ ಬಗ್ಗೆ ಸ್ವಲ್ಪ ಕೂಡ ಕೃತಜ್ಞತೆ ಇಲ್ಲ. ಈಗಾಗಲೇ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಸಾಕಷ್ಟು ಬಾರಿ ತಪ್ಪಾಗಿ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗಿದ್ದ ರಶ್ಮಿಕ ಮಂದಣ್ಣ ಅವರು ಈಗ ರಿಷಬ್ ಶೆಟ್ಟಿ ಹೆಸರಿನಲ್ಲಿ ಮಾಡಿಕೊಂಡ ಅವತಾರದಿಂದ ಮತ್ತೊಮ್ಮೆ ಟ್ರೋಲಿಗೆ ಒಳಗಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಯೂಟ್ಯೂಬರ್ ಒಬ್ಬರಿಗೆ ಸಂದರ್ಶನ ಕೊಟ್ಟಿದ್ದರು. ಅದರಲ್ಲಿ ನಿರೂಪಕಿ ಅವರ ಆಕ್ಟಿಂಗ್ ಶುರುವಿನ ದಿನದ ಬಗ್ಗೆ ಪ್ರಶ್ನಿಸಿದಾಗ ತಾನು ತನ್ನ ಟೀಚರ್ ಫೋರ್ಸ್ ಇಂದ ಆಕ್ಟಿಂಗ್ ಮಾಡಲು ಒಪ್ಪಿಕೊಂಡೆ ಎಂದು ಹೇಳಿದ ಅವರು ತನ್ನ ಮೊದಲ ಸಿನಿಮಾ ಈ ಪ್ರೊಡಕ್ಷನ್ ಇಂದ ಆಯಿತು ಎಂದು ಹೇಳಿ ಆ ಪ್ರೊಡಕ್ಷನ್ ಮತ್ತು ಟೀಮ್ ನ ಹೆಸರು ಹೇಳದೆ ಕೈಯಲ್ಲಿ ಸನ್ನೆ ಮಾಡಿ ತೋರಿಸಿದರು. ಇದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಕೂಡ ಆಗಿ ಅನೇಕರು ಈ ಬಗ್ಗೆ ಬೇಸರಿಸಿಕೊಂಡಿದ್ದರು. ಈಗ ರಿಷಬ್ ಶೆಟ್ಟಿ ಅವರಿಗೆ ಅದನ್ನು ತಿರುಗಿಸಿ ಹೇಳುವ ಅವಕಾಶ ದೊರಕಿದ್ದು ಕರ್ಮ ಈಗ ರಶ್ಮಿಕಾ ಮಾಡಿದ್ದನ್ನು ಅವಳಿಗೆ ತಿರುಗಿಸಿಕೊಟ್ಟಿದೆ. ಈಗ ದೇಶದಾದ್ಯಂತ ಕಾಂತರಾ ಸಿನಿಮಾ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿರುವುದರಿಂದ ಎಲ್ಲಾ ಭಾಷೆಗಳನ್ನು ಕೂಡ ರಿಷಭ್ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದಾರೆ.

WhatsApp Group Join Now
Telegram Group Join Now
See also  ಬಿಪಿಎಲ್ ಕಾರ್ಡ್ ಇರುವವರು ತಪ್ಪದೇ ನೋಡಿ..ಇಷ್ಟು ಲಕ್ಷ ಕಾರ್ಡುಗಳು ರದ್ದಾಗಲಿವೆ..ಕಾರಣ ಇಷ್ಟೇ..

ಹೀಗೆ ಹಿಂದಿ ಭಾಷೆಯಲ್ಲಿ ನಡೆದ ಒಂದು ಇಂಟರ್ವ್ಯೂ ಅಲ್ಲಿ ನಿರೂಪಕನೊಬ್ಬ ರಿಷಬ್ ಶೆಟ್ಟಿ ಅವರಿಗೆ ಈಗ ದೇಶದಾದ್ಯಂತ ಫೇಮಸ್ ಆಗಿರುವ ರಶ್ಮಿಕ ಮಂದಣ್ಣ, ಕೀರ್ತಿ ಸುರೇಶ್, ಸಾಯಿ ಪಲ್ಲವಿ, ಸಮಂತ ಇವರಲ್ಲಿ ನೀವು ಯಾರನ್ನು ನಿಮ್ಮ ಸಿನಿಮಾ ಗೆ ಹಾಕಿಕೊಳ್ಳಲು ಇಷ್ಟಪಡುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆ ಕೇಳಿದ್ದೆ ತಡ ರಿಷಬ್ ಶೆಟ್ಟಿ ಅವರು ರಶ್ಮಿಕ ಮಾಡಿದ್ದ ರೀತಿಯಲ್ಲಿ ಕೈ ಸನ್ನೆ ಮಾಡಿ ಈ ತರಹದ ಆಕ್ಟ್ರೇಸ್ ಗಳನ್ನು ಎಂದಿಗೂ ನನ್ನ ಟೀಮ್ ಒಳಗೆ ಮತ್ತೆ ಬಿಟ್ಟುಕೊಳ್ಳುವುದಿಲ್ಲ ಎಂದು ಅದೇ ರೀತಿ ಇವರು ಸಹ ಸನ್ನೆ ಮಾಡಿ ತೋರಿಸಿ ಈ ಮೂಲಕ ರಶ್ಮಿಕಾಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಮತ್ತೆ ಮಾತು ಮುಂದುವರಿಸಿ ಸಾಯಿ ಪಲ್ಲವಿ ಮತ್ತು ಸಮಂತಾ ಅವರ ಜೊತೆ ಕೆಲಸ ಮಾಡುವ ಆಸೆ ಇದೆ ಎಂದು ಕೂಡ ಹೇಳಿಕೊಂಡಿದ್ದಾರೆ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ರಶ್ಮಿಕಾ ಕಾಲೆಳೆಯಲು ಕಾಯುತ್ತಿರುವ ಟ್ರೋಲಿ ಗರಿಗೆ ಒಂದೊಳ್ಳೆ ಹಬ್ಬದ ಊಟ ಸಿಕ್ಕಂತೆ ಆಗಿದೆ. ಈ ಟ್ರೋಲಿಂಗ್ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಕೂಡ ಕಮೆಂಟ್ ಮಾಡಿ ರಶ್ಮಿಕಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ರಶ್ಮಿಕ ಇಂಟೆರ್ವ್ಯೂ ವಿಡಿಯೋ ಮತ್ತು ರಿಷಭ್ ಕೊಟ್ಟ ಸಂದರ್ಶನದ ವಿಡಿಯೋ ತುಣಕು ಎರಡು ಸೇರಿಸಿ ಮಾಡಿರುವ ಈ ಟ್ರೋಲ್ ವಿಡಿಯೋವನ್ನು ನೀವು ಒಮ್ಮೆ ನೋಡಿ.

See also  ಕನ್ನಡ ಧಾರವಾಹಿಯಲ್ಲಿ ಮಿಂಚುತ್ತಿರುವ ಮುಸ್ಲಿಂ ಧರ್ಮದ ತಾರೆಯರು ಇವರೆ ನೋಡಿ...

[irp]