ಬಯಲಾಯ್ತು ಮಕರ ಜ್ಯೋತಿ ರಹಸ್ಯ ಬೆಂಕಿ ಹಚ್ಚೋ ಜಾಗ..ಸುಂದರಿಗೆ ಅಯ್ಯಪ್ಪ ಸ್ವಾಮಿ ಮಾತು…ಯಾವಾಗ ಮದುವೆ ಆಗ್ತಾರೆ ಗೊತ್ತಾ ?

ಅಯ್ಯಪ್ಪ ಸ್ವಾಮಿಯ ಲವ್ ಸ್ಟೋರಿ.ಬ್ರಹ್ಮನಿಂದ ವಿಚಿತ್ರವಾದ ವರ ಪಡೆದ ಮಹಿಶಿ, ಮಹಿಷಾಸುರನ ಅಂತ್ಯದ ಬಳಿಕ ಅವನ ತಂಗಿ ಮಹಿಷಿ ಬ್ರಹ್ಮನ ತಪಸ್ಸು ಮಾಡುತ್ತಾಳೆ ಆಕೆಯ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷವಾದಾಗ ಶಿವ ಮತ್ತು ವಿಷ್ಣುವಿಗೆ ಜನಿಸಿದ ಮಗುವಿನಿಂದಲೇ ನನ್ನ ಸಾವಾಗಬೇಕು ಬೇರೆ ಯಾರು ನನ್ನನ್ನು ಕೊಲ್ಲಕ್ಕೆ ಆಗಬಾರದು ಎಂದು ವರ ಕೇಳುತ್ತಾಳೆ ಬ್ರಹ್ಮವರನ್ನು ಕೊಡುತ್ತಾನೆ.

WhatsApp Group Join Now
Telegram Group Join Now

ನಂತರ ಮಹಿಷಿ ಭೂಮಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಳು. ಹೀಗಾಗಿ ವಿಷ್ಣು ಮೋಹಿನಿ ರೂಪತಾಳಿ ಶಿವನೊಂದಿಗೆ ಸೇರಿ ಇಬ್ಬರ ಸಂಗಮದಿಂದ ಒಂದು ಮಗುವಿನ ಜನನವಾಯಿತು ಅವರೇ ಶಬರಿಮಲೆಯ ಅಯ್ಯಪ್ಪ ನಂತರ ರಾಜ ರಾಜಶೇಖರನ ಮನ ಸೇರಿದ ಅಯ್ಯಪ್ಪ ಅಲ್ಲೇ ಬೆಳೆದು ದೊಡ್ಡವರಾದರೂ ಬಳಿಕ ಮಹಿಷಿಯನ್ನು ಕೊಂದು ವಾಪಸ್ ಹೊರಡುತ್ತಾರೆ.


ಆಗ ಸಾಕು ತಂದೆಯ ಮನವಿ ಮೇರೆಗೆ ಮಕರಿ ಸಂಕ್ರಾಂತಿಯಂದು ನಕ್ಷತ್ರದ ರೂಪದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಮಾಯವಾಗುತ್ತಾರೆ. ಅಲ್ಲಿಂದ ಇಲ್ಲಿಯ ತನಕ ಪ್ರತಿವರ್ಷ ಸಾವಿರಾರು ಭಕ್ತರು ಜ್ಯೋತಿರೂಪದ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಶಬರಿ ಮಲೆಗೆ ಮಹಿಳೆಯರು ಯಾಕೆ ಹೋಗಬಾರದು ಸಂಪ್ರದಾಯದ ಹಿಂದೆ ರೋಚಕ ಲವ್ ಸ್ಟೋರಿ ಇದೆ ಮಹಿಷಿ ಅಸಲಿಗೆ ರಾಕ್ಷಸಿಯಾಗಿರಲಿಲ್ಲ ಆಕೆ ಸುಂದರ ಹುಡುಗಿಯಾಗಿದ್ದಳು ಆದರೆ ಶಾಪದಿಂದಾಗಿ ರಾಕ್ಷಸಿಯ ಜೀವನ ಸಿಕ್ಕಿತು.

ಆದರೆ ಅಯ್ಯಪ್ಪ ಮಹಿಷಿಯನ್ನು ವದಿಸಿದ ಬಳಿಕ ಆಕೆ ತನ್ನ ಮೊದಲಿನ ರೂಪಕ್ಕೆ ಬಂದಳು ಜೊತೆಗೆ ಅಯ್ಯಪ್ಪನ ಕಡೆಗೆ ಮೋಹಿತಳಾಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಳು. ಆದರೆ ಆಕೆಯ ಮನವಿಯನ್ನು ನಿರಾಕರಿಸಿದ ಅಯ್ಯಪ್ಪ ನಾನು ಈಗ ಕಾಡಿಗೆ ಹೋಗಿ ನೆಲೆಸಬೇಕು ನನಗಾಗಿ ಬರುವ ಭಕ್ತರ ಕಷ್ಟಗಳನ್ನು ಆಲಿಸಬೇಕು ಎನ್ನುತ್ತಾರೆ.

ಜೊತೆಗೆ ಒಂದು ಮಾತು ಕೊಡುತ್ತಾರೆ ಯಾವಾಗ ನನ್ನ ಬಳಿಗೆ ಕನ್ಯಾ ಸ್ವಾಮಿಗಳು ಅಂದರೆ ಮೊದಲ ಬಾರಿಗೆ ಮಾಲೆ ಧರಿಸುವವರು ಬರೋದು ನಿಲ್ಲುತ್ತದೋ ಅಂದು ನಾನು ನಿನ್ನನ್ನು ಮದುವೆಯಾಗುತ್ತೇನೆ ಎನ್ನುತ್ತಾರೆ ಅದಕ್ಕೆ ಯುವತಿ ಸಂತೋಷದಿಂದ ಒಪ್ಪಿಕೊಳ್ಳುತ್ತಾಳೆ. ಪಕ್ಕದಲ್ಲಿ ಇದ್ದು ಕಾಯುವುದಾಗಿ ಹೇಳುತ್ತಾಳೆ ಆಕೆ ಅಂದು ನೆಲೆಸಿದ ಸ್ಥಳವೇ ಮಲ್ಲಿಕಾಪುರದಮ್ಮ ದೇಗುಲವಾಗಿದೆ ಶಬರಿಮಲೆಗೆ ಹೋಗುವಾಗ ಈ ದೇವಸ್ಥಾನ ಸಿಗುತ್ತದೆ ಕನ್ಯ ಸ್ವಾಮಿಗಳು ಅಯ್ಯಪ್ಪನ ಸನ್ನಿಧಾನಕ್ಕೆ ಬರುವುದು ಇನ್ನೂ ಕಡಿಮೆಯಾಗಿಲ್ಲ ವರ್ಷ ವರ್ಷ ಜಾಸ್ತಿ ಆಗುತ್ತದೆ ಇದೇ ಕಾರಣಕ್ಕೆ ಅಂದಿನಿಂದ ಇಂದಿನವರೆಗೂ ಮಲ್ಲಿಕಾಪುರದಮ್ಮ ಕಾಯುತ್ತಲೇ ಇದ್ದಾರೆ.

ಹೀಗಾಗಿ ಬ್ರಹ್ಮಚಾರಿಯಾಗಿ ದರ್ಶನಕ್ಕೆ ಯುವತಿಯರು ಹೋದರೆ ಮಲ್ಲಿಕಾಪುರದಮ್ಮ ಗೆ ಮೋಸವಾಗುತ್ತದೆ ಹೀಗಾಗಿ ಯುವತಿರು ಮತ್ತು ಮಹಿಳೆಯರು ಹೋಗಬಾರದು ಎನ್ನುವಂತಹ ನಂಬಿಕೆ. ಈ ಒಂದು ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಹೋಗಬಾರದು ಎನ್ನುವಂತಹ ಪ್ರತೀತಿಯಿದೆ ಇಂದಿಗೂ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಯುವತಿಯರು ಪಡೆಯಲು ಆಗುತ್ತಿಲ್ಲ.

[irp]