ಸಾವಿರ ಕೋಟಿ ದಂಡ ಬಾಕಿ ಇದ್ದರೂ ಭಾರತಕ್ಕೆ ಬಹಿರಂಗ ಎಚ್ಚರಿಕೆ ಕೊಟ್ಟ ಗೂಗಲ್…

ಸಾವಿರ ಕೋಟಿ ದಂಡ ಬಾಕಿ ಇದ್ದರು ಭಾರತಕ್ಕೆ ಬಹಿರಂಗ ಎಚ್ಚರಿಕೆ ಕೊಟ್ಟ ಗೂಗಲ್.ಕಾಂಪಿಟೇಶನ್ ಕಮೀಷನ್ ಆಫ್ ಇಂಡಿಯಾದ ನಿಯಮಾವಳಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿರುವ ಗೂಗಲ್ ಮೇಲೆ ದಂಡ ಹಾಕಲಾಗಿತ್ತು ಇಲ್ಲಿ CCI ನ ಕೆಲಸ ಏನೆಂದರೆ, ದೇಶದಲ್ಲಿ ಕಾಂಪಿಟೇಶನ್ ಅನ್ನ ಉಳಸಿಕೊಳ್ಳುವುದು. ಯಾವುದೇ ರಂಗದಲ್ಲಿ ಆಗಲಿ ಕಾಂಪಿಟೇಶನ್ ಅನ್ನೋದು ಇರಲೇಬೇಕು ಕಾಂಪಿಟೇಶನ್ ಇಲ್ಲದೆ ಹೋದರೆ ಅದು ಏಕ ಚಕ್ರಾಧಿಪತ್ಯ ಆಗುತ್ತದೆ.

WhatsApp Group Join Now
Telegram Group Join Now

ಏಕ ಚಕ್ರಾಧಿಪತ್ಯ ಆಗಿಬಿಟ್ಟರೆ ಅವರು ಆಡಿದ್ದೆ ಆಟ ಮುಂದೆ ಅವರು ಹೇಳಿದ ಹಾಗೆ ನಾವು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೊಂದು ರೀತಿ ಸರ್ವಾಧಿಕಾರ ಇದ್ದಹಾಗೆ ಹೀಗಾಗಿ ಕಾಂಪಿಟೇಶನ್ ಅನ್ನು ಉಳಿಸಿಕೊಳ್ಳುವುದು ಈ ಸಂಸ್ಥೆಯ ಮೊದಲ ಕೆಲಸ ಭಾರತ ಸಂಸ್ಥೆಗಳು ಭಾರತದಲ್ಲಿ ನೆಲೆಯೂರಲು ಈ ಸಂಸ್ಥೆ ತುಂಬಾನೇ ಅಗತ್ಯ ದೊಡ್ಡದೊಂದು ಕಂಪನಿ ಬಂದು ಭಾರತವನ್ನು ಆವರಿಸಿ ಉಳಿದ ಕಂಪನಿಗಳನ್ನ ಬೆಳೆಯುವುದಕ್ಕೆ ಬಿಡದೆ ಇರುವ ರೀತಿ ನೋಡಿಕೊಳ್ಳುವ ಸಾಧ್ಯತೆ ಇದೆ.

ಈ ರೀತಿಯ ಸಮಸ್ಯೆಯನ್ನು ತಡೆಗಟ್ಟುವುದು ಕೂಡ ಈ ಸಂಸ್ಥೆಯ ಕೆಲಸವಾಗಿರುತ್ತದೆ ಇದೇ CCI ಕಳೆದ ಬಾರಿ ಎರಡು ದೊಡ್ಡ ಮೊತ್ತದ ಗೂಗಲ್ ಕಂಪನಿಯ ಮೇಲೆ ದಂಡ ವಿಧಿಸಿತ್ತು ಅದರಲ್ಲಿ 1937 ಕೋಟಿಯ ದಂಡವೊಂದಾದರೆ ಮತ್ತೊಂದು ಕಡೆ 936 ಕೋಟಿ ರೂಪಾಯಿಯ ದಂಡ ಇತ್ತು. ಯಾಕೆ ಇಷ್ಟು ಪ್ರಮಾಣದ ದಂಡ ವಿಧಿಸಲಾಯಿತು ಎಂದು ನೋಡುವುದಾದರೆ.

ಎಲ್ಲರಿಗೂ ಗೊತ್ತಿರುವ ಹಾಗೆ ನಿಮ್ಮ ಮೊಬೈಲ್ ಗಳಲ್ಲಿ ಆಂಡ್ರಾಯ್ಡ್ ಸಾಫ್ಟ್ವೇರ್ ಇದ್ದರೆ ಅದರಲ್ಲಿ ಗೂಗಲ್ ಪ್ಲೇ ಸ್ಟೋರ್ ಕಂಡಿತವಾಗಿಯೂ ಇರುತ್ತದೆ ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ನಿಮಗೆ ಬೇಕಾದಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಗೂಗಲ್ ತಾನೆ ಬಿಲ್ಡ್ ಮಾಡಿದ ಆಪ್ ಗಳನ್ನ ಹೆಚ್ಚಾಗಿ ಪ್ರಿ ಇನ್ಸ್ಟಾಲ್ ಮಾಡುತ್ತಿದೆ ಈ ರೀತಿ ಮಾಡುತ್ತಿರುವುದರಿಂದ ಬೇರೊಂದು ಕಂಪನಿ ಭಾರತದಲ್ಲಿ ಬೆಳೆಯುವುದಕ್ಕೆ ಸಾಧ್ಯವಿಲ್ಲ.

ಭಾರತದ ಹೊಸ ಆಪ್ ಗಳಿಗೆ ಕೂಡ ಗೂಗಲ್ ಅವಕಾಶ ಮಾಡಿಕೊಡದೆ ಇರಬಹುದು. ನಮ್ಮ ಮೊಬೈಲ್ ಗಳಲ್ಲಿ ಇರುವ ಬಹುತೇಕ ಆಪ್ ಗಳು ಗೂಗಲ್ ಕಂಪನಿಯದ್ದು ಗೂಗಲ್ ಪೇ, ಗೂಗಲ್ ಮ್ಯಾಪ್, ಗೂಗಲ್ ಫೋಟೋಸ್ ಹೀಗೆ ಜನರಿಗೆ ಏನೆಲ್ಲ ಬೇಕು ಆ ಎಲ್ಲಾ ಆಪ್ ಗಳನ್ನು ಸಹ ಗೂಗಲ್ ರೆಡಿ ಮಾಡಿ ಇದೆ. ಅಷ್ಟೇ ಅಲ್ಲ ಗೂಗಲ್ ನಾ ಬಹುತೇಕ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಫ್ರೀ ಇನ್ಸ್ಟಾಲ್ ಆಗುತ್ತವೆ.

ಅಂದರೆ ನೀವು ಮೊಬೈಲ್ ತೆಗೆದುಕೊಳ್ಳುವಾಗಲೇ ಇನ್ಸ್ಟಾಲ್ ಆಗಿರುತ್ತದೆ ನೀವು ಡೌನ್ಲೋಡ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಬೇಕಾಗಿಲ್ಲ ಹೀಗೆ ಮಾಡಿದರೆ ಬೇರೆ ಯಾರಿಗೂ ಬೆಳೆಯುವುದಕ್ಕೆ ಅವಕಾಶವೇ ಸಿಗುವುದಿಲ್ಲ ಯಾರು ಕೂಡ ಕಾಂಪಿಟೇಶನ್ ಕೊಡುವುದಕ್ಕೆ ಮುಂದೆ ಬರುವುದಿಲ್ಲ, ಕಾಂಪಿಟೇಶನ್ ಕೊಟ್ಟರು ಗೂಗಲ್ ಮುಂದೆ ಬೆಳೆಯಲು ಆಗುವುದಿಲ್ಲ ಎನ್ನುವುದು ಅವರ ತಲೆಯಲ್ಲಿ ಕುಳಿತುಕೊಂಡು ಬಿಡುತ್ತದೆ.

[irp]