ರಾಮುಲು ಅಳಿಯ ಯಾರು ಏನು ಮಾಡ್ತಾ ಇದ್ದಾರೆ ಶ್ರೀ ರಾಮುಲು ಅವರ ಕುಟುಂಬ ಹೆಂಡತಿ,ಮಗ,ಮಕ್ಕಳು,ಹೇಗಿದ್ದಾರೆ?

ಮಗಳು ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಟ್ಟ ಶ್ರೀರಾಮುಲು.ಶ್ರೀರಾಮುಲು ಅವರು 1971ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು ಅವರ ತಂದೆ ರೈಲ್ವೆ ಎಂಪ್ಲಾಯಿ ಆಗಿದ್ದರು ತಾಯಿ ಬಿ ಹೊನ್ನೂರಮ್ಮ ಈ ದಂಪತಿಗಳಿಗೆ ಎಂಟು ಜನ ಮಕ್ಕಳಿದ್ದು ಅದರಲ್ಲಿ ಶ್ರೀರಾಮುಲು ಅವರು ಏಳನೆಯವರು. ಇವರು ಬಿಜೆಪಿ ಪಕ್ಷದ ಎಂಎಲ್ಎ ಆಗಿದ್ದು ಬಿ ಭಾಗ್ಯಲಕ್ಷ್ಮಿ ಎಂಬುವರನ್ನು ಮದುವೆಯಾಗಿದ್ದಾರೆ ಈ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ.

WhatsApp Group Join Now
Telegram Group Join Now

2008ರ ಬೈ ಎಲೆಕ್ಷನ್ ವೇಳೆ ತಮ್ಮ ಆಸ್ತಿ 47 ಕೋಟಿ ಎಂದು ಘೋಷಿಸಿಕೊಂಡಿದ್ದ ಶ್ರೀರಾಮುಲು ಅವರು 2018ರಲ್ಲಿ 18 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ ಗಮನಿಸಿದರೆ 2008ರಿಂದ 2018ರಕ್ಕೆ ಅವರ ಆಸ್ತಿಯಲ್ಲಿ ಇಳಿಮುಖಗೊಂಡಿದೆ ಇದಕ್ಕೆ ಮುಖ್ಯ ಕಾರಣ ಜನಾರ್ಧನ ರೆಡ್ಡಿಯವರು ಅಕ್ರಮ ಗಣಿಗಾರಿಕೆಯ ಆರೋಪದ ಮೇಲೆ ಜೈಲು ಪಾಲದಾಗ ಇವರು ತಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ಅಥವಾ ಪತ್ನಿಯ ಹೆಸರಿಗೆ ಟ್ರಾನ್ಸ್ಫರ್ ಮಾಡಿರಬಹುದು.


ಶ್ರೀರಾಮುಲು ಅವರ ಮೊದಲ ಮಗಳು ರಕ್ಷಿತಾ ಅವರನ್ನು ಹೈದರಾಬಾದ್ ಮೂಲದ ಉದ್ಯಮಿಯ ಮಗ ಲಲಿತ್ ಸಂಜೀವ್ ರೆಡ್ಡಿ ಅವರೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ ಕೋಟಿಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿ ನೆರವೇರಿಸಿದ್ದಾರೆ. ಶ್ರೀರಾಮುಲು ಅವರು ತಮ್ಮ ಮಗಳ ಮದುವೆಯನ್ನು ಮಾರ್ಚ್ 5 2020ರಲ್ಲಿ ಅದ್ದೂರಿಯಾಗಿ ಮಾಡಿಕೊಟ್ಟಿದ್ದರು.

ಈ ಮದುವೆ ಕಾರ್ಯಕ್ರಮ 9 ದಿನಗಳ ಕಾಲ ನಡೆದಿದ್ದು ಮದುವೆ ಸಮಾರಂಭವನ್ನು ಬೆಂಗಳೂರಿನ ಅರಮನೆ ಮೈದಾನದ 40ಎಕರೆ ಜಾಗರದಲ್ಲಿ ನೆರವೇರಿಸಲಾಯಿತು. ಹಂಪಿಯ ವಿರೂಪಾಕ್ಷ ದೇವಾಲಯದ ಮಾದರಿಯಂತೆ ಈ ಮದುವೆಗೆ ಬೃಹತ್ ಸೆಟ್ಟನ್ನು ಹಾಕಿಸಲಾಗಿತ್ತು ಈ ಮದುವೆಗೆ ಬರೋಬ್ಬರಿ 500 ಕೋಟಿಗಳನ್ನು ಖರ್ಚು ಮಾಡಿರುವುದಾಗಿ ವರದಿಯಾಗಿತ್ತು.

See also  ಆಸ್ತಿ ಯಶಸ್ಸು ಸಿಗುತ್ತಿಲ್ಲವೇ ಆಗಿದ್ರೆ ಮನೆಯಿಂದ ಈ ವಸ್ತುವನ್ನು ಈಗಲೇ ಹೊರ ಹಾಕಿ..ಚಮತ್ಕಾರ ನೋಡಿ

ಇದರ ಮೇಲೆ ಐಟಿ ತನಿಖೆಯು ನಡೆದಿತ್ತು ಸಾಂಪ್ರದಾಯಿಕವಾಗಿ ಮದುವೆ ಮಾಡಿದ್ದೇವೆ ಎಂದು ಶ್ರೀರಾಮುಲು ಹೇಳಿದರು. ಇನ್ನು ಇವರ ಎಂಗೇಜ್ಮೆಂಟ್ ಅನ್ನು ಬೆಂಗಳೂರಿನ ತಾಜ್ ವೆಸ್ಟರ್ನ್ ಹೋಟೆಲ್ ನಲ್ಲಿ ನೆರವೇರಿಸಿದ್ದರು. ಮದುವೆಗೆ ಸಾನಿಯಾ ಸರ್ದಾರಿಯ ಎಂಬುವವರು ವಸ್ತ್ರವನ್ನು ವಿನ್ಯಾಸ ಮಾಡಿದರು ದೀಪಿಕಾ ಪಡುಕೋಣೆ ಅವರಿಗೆ ಮೇಕಪ್ ಮಾಡಿದಂತ ಮೇಕಪ್ ಆರ್ಟಿಸ್ಟ್ ಅವರೇ ಸ್ವತಹ ರಕ್ಷಿತಾ ಅವರಿಗೆ ಮೇಕಪ್ ಮಾಡಿದ್ದರು.

ಶ್ರೀರಾಮುಲು ಅವರ ಮಗಳು ರಕ್ಷಿತಾ ಅವರು ಲಂಡನ್ ನಲ್ಲಿ ಎಂಬಿಕೆ ವಿದ್ಯಾಭ್ಯಾಸ ಮಾಡುತ್ತಿದ್ದರು ರಕ್ಷಿತಾ ಅವರ ಜೊತೆ ಲಲಿತ್ ಅವರು ಕೂಡ ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದರು ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸಿದ್ದು ಇವರ ಪ್ರೀತಿಗೆ ಎರಡು ಕಡೆಯ ಮನೆಯವರು ಒಪ್ಪಿಗೆಯನ್ನು ನೀಡಿದ್ದರು ಮತ್ತು ಲಲಿತ್ ಅವರ ತಂದೆ ರವಿಕುಮಾರ್ ಅವರು ಹೈದರಾಬಾದ್ ನಲ್ಲಿ ದೊಡ್ಡ ಉದ್ಯಮಿಯಾಗಿದ್ದಾರೆ ಮತ್ತು ಲಲಿತ್ ಅವರು ಕೂಡ ತಂದೆಯಂತೆ ಬಿಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದಾರೆ.

[irp]


crossorigin="anonymous">