ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯುವಾಗ ಹೀಗೆ ಮಾಡಿ ಸಾಕು ಬಟ್ಟೆ ಒಂದಕ್ಕೊಂದು ಸಿಕ್ಕಿ ಹಾಕಿಕೊಳ್ಳೊಲ್ಲ ಬಟ್ಟೆ ಸುಕ್ಕ ಆಗೊಲ್ಲ..ಬಟ್ಟೆ ಹೊಸದರಂತೆ ಇರುತ್ತೆ.

ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಹಾಕುವಾಗ ಬರಿ ಇಷ್ಟು ಮಾಡಿದರೆ ಸಾಕು ಬಟ್ಟೆಗಳು ಸುಕ್ಕಾಗುವುದಿಲ್ಲ.
ಪ್ರತಿದಿನ ಬಟ್ಟೆ ಒಗೆಯುವ ಕೆಲಸ ನಮ್ಮೆಲ್ಲರಿಗೂ ಇದ್ದೇ ಇರುತ್ತದೆ ಇನ್ನು ವಾಷಿಂಗ್ ಮಷೀನ್ ನಲ್ಲಿ ಒಗೆಯ ಬೇಕಾದರೂ ಕೂಡ ಕೆಲವೊಂದು ಚಿಕ್ಕ ಪುಟ್ಟ ಸಮಸ್ಯೆಗಳು ನಮಗೆ ಕಾಡುತ್ತದೆ ಅದರಲ್ಲಿಯೂ ಬಟ್ಟೆಗಳು ವಾಷ್ ಆದಮೇಲೆ ಒಂದಕ್ಕೊಂದು ಸಿಕ್ಕಿಹಾಕಿಕೊಂಡಿರುತ್ತದೆ ಇದನ್ನು ಎಳೆಯಲು ಹೋದರೆ ಬಟ್ಟೆಗಳು ಹರಿಯುವ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗೆಯೇ ಬಟ್ಟೆಗಳು ವಾಷಿಂಗ್ ಮಷೀನ್ ಅಲ್ಲಿ ಕ್ಲೀನ್ ಆಗುವುದಿಲ್ಲ ಎನ್ನುವಂತಹ ಸಮಸ್ಯೆ ಇನ್ನೂ ಕೆಲವರಿಗೆ.

WhatsApp Group Join Now
Telegram Group Join Now

ಬಟ್ಟೆಗಳು ಜಾಸ್ತಿ ಮುದುಡಿಕೊಳ್ಳುತ್ತದೆ ಸುಕ್ಕಾಗುತ್ತದೆ ಎನ್ನುವಂತಹ ಸಮಸ್ಯೆ ಈ ಎಲ್ಲ ಸಮಸ್ಯೆಗಳಿಗೂ ಸಹ ನಾವಿಲ್ಲಿ ತಿಳಿಸುವಂತಹ ಒಂದು ಸಿಂಪಲ್ ಆದ ಟಿಪ್ಸ್ ಅನ್ನು ಉಪಯೋಗಿಸಿಕೊಂಡರೆ ನೀವು ಈ ಒಂದು ಸಮಸ್ಯೆಗಳಿಂದ ಪಾರಾಗಬಹುದು ಅದರಲ್ಲೂ ವಾಷಿಂಗ್ ಮಷೀನ್ ಗೆ ಹಾಕುವ ಮೊದಲು ಬಟ್ಟೆಗಳನ್ನು ನೆನೆಸಿಟ್ಟು ನಂತರ ವಾಷಿಂಗ್ ಮಿಷನ್ ಗೆ ಹಾಕುವುದರಿಂದ ಬಟ್ಟೆಯ ಕೊಳೆ ಚೆನ್ನಾಗಿ ಬಿಟ್ಟಿಕೊಳ್ಳುತ್ತದೆ.

ಬಟ್ಟೆಗಳನ್ನು ನೆನೆಸಿದ ನಂತರ ವಾಷಿಂಗ್ ಮಷೀನ್ ಗೆ ಹಾಕುವಾಗ ಬಟ್ಟೆಗಳನ್ನು ಸಪರೇಟ್ ಸಪರೇಟ್ ಆಗಿ ಒಂದೊಂದಾಗಿ ಸುತ್ತ ಹಾಕಬೇಕು ಒಂದೇ ಕಡೆ ಬಟ್ಟೆಗಳನ್ನು ಹಾಕುವುದರಿಂದ ಅದು ಸುಕ್ಕಾಗುತ್ತದೆ ಅಷ್ಟೇ ಅಲ್ಲದೆ ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುತ್ತದೆ. ಮಧ್ಯದಲ್ಲಿ ನೀವು ಜಾಗವನ್ನು ಬಿಟ್ಟು ಸುತ್ತ ಬಟ್ಟೆಗಳನ್ನು ಒಂದರ ಮೇಲೆ ಒಂದರಂತೆ ಹಾಕಿಕೊಳ್ಳಬೇಕು ಮಧ್ಯ ಖಾಲಿ ಇರುವಂಥ ಜಾಗದಲ್ಲಿ ಒಂದು ಪ್ಲಾಸ್ಟಿಕ್ ಬಾಟಲನ್ನು ಹಾಕಬೇಕು ಹೀಗೆ ಮಾಡುವುದರಿಂದ ಏನು ತೊಂದರೆ ಆಗುವುದಿಲ್ಲ.

ಹೀಗೆ ಮಾಡುವುದರಿಂದ ಬಟ್ಟೆಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವುದಿಲ್ಲ ಹಾಗೆಯೇ ಬಟ್ಟೆಗಳು ಜಾಸ್ತಿ ಸುಕ್ಕು ಆಗುವುದಿಲ್ಲ ಈ ರೀತಿಯಾಗಿ ನೀವು ಬಟ್ಟೆಗಳನ್ನು ಒಗೆದು ನೋಡಿ ಬಟ್ಟೆಗಳು ತುಂಬಾ ಈಜಿ ಆಗಿ ಹೊರಗಡೆ ತೆಗೆದುಕೊಳ್ಳಬಹುದು ಹಾಗೆಯೇ ಬಟ್ಟೆಗಳು ಸಹ ಜಾಸ್ತಿ ಸುಕ್ಕಾಗುವುದಿಲ್ಲ. ನೀವು ವಾಷಿಂಗ್ ಮಿಷನ್ ಗೆ ಬಾಟಲ್ ಗಳ ಬದಲು ಲ್ಯಾಂಡ್ರಿ ಬಾಲ್ಸ್ ಗಳನ್ನು ಸಹ ಹಾಕಿಕೊಳ್ಳಬಹುದು.

ಈ ಒಂದು ಲ್ಯಾಂಡ್ರಿ ಬಾಲ್ಸ್ ಗಳು ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಇಲ್ಲ ಆನ್ಲೈನ್ ನಲ್ಲಿಯೂ ಸಹ ಈ ಒಂದು ಬಾಲ್ಸ್ ಗಳು ನಿಮಗೆ ಸಿಗುತ್ತದೆ ಈ ಒಂದು ಟಿಪ್ಸ್ ಗಳನ್ನು ನೀವು ಬಳಸಿಕೊಂಡರೆ ಖಂಡಿತವಾಗಿಯೂ ನಿಮ್ಮ ಬಟ್ಟೆಗಳು ವಾಷಿಂಗ್ ಮಷೀನ್ ನಲ್ಲಿ ಹಾಕಿದಾಗ ಸುಕ್ಕಾಗುವುದಿಲ್ಲ ಹಾಗೆ ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವುದಿಲ್ಲ.

ಯಾರೆಲ್ಲಾ ಹೊರಗೆ ಹೋಗಿ ದುಡಿಯುವಂತಹ ಮಹಿಳೆಯರು ಇರುತ್ತಾರೆ ಅಂತಹವರು ಇಂತಹ ಕೆಲವೊಂದು ಸುಲಭವಾದಂತಹ ಟಿಪ್ಸ್ ಗಳನ್ನು ಉಪಯೋಗಿಸಿಕೊಂಡು ತಮ್ಮ ಕೆಲಸಗಳನ್ನು ಈಜಿ ಯನ್ನಾಗಿ ಮಾಡಿಕೊಳ್ಳಬೇಕು. ಆಗ ನಿಮಗೆ ಸಮಯ ಉಳಿತಾಯವಾಗುತ್ತದೆ ಹಾಗೆಯೇ ಖರ್ಚು ಸಹ ಕಡಿಮೆ ಆಗುತ್ತದೆ.

[irp]