ಈ ಏಳು ಕಾರಣಗಳಿಗೆ ಹೆರಿಗೆ ಸಮಯದಲ್ಲಿ ಗಂಡ ಜೊತೆಗಿರಲೆಬೇಕು..ಮಡದಿಯ ಹಾರೈಕೆಗೆ ಉತ್ತಮ ಸಲಹೆಗಳು..

ಈ 7 ಕಾರಣಗಳಿಗೆ ಹೆರಿಗೆ ಸಮಯದಲ್ಲಿ ಗಂಡ ಜೊತೆಗಿರಲೇಬೇಕು..||

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಬದುಕು ಕುಕ್ಕರ್ ಒಳಗಿನ ಮೆಕ್ಕೆಜೋಳ ಇದ್ದಹಾಗೆ ಆಗಿದೆ. ದೈಹಿಕ ಮಾನಸಿಕ ಒತ್ತಡ ಎಲ್ಲೆಡೆಯಿಂದ ಆವರಿಸಿದೆ. ಇಂತಹ ಸಮಯದಲ್ಲಿ ಗರ್ಭಿಣಿಯಾಗಿರುವಂತಹ ಸವಾಲೇ ಸರಿ. ತನ್ನನ್ನು ನಿಯಂತ್ರಿಸುವಂತಹ ಹಾರ್ಮೋನ್ ಗಳು ಏರುಪೇರಾಗಿ ಗರ್ಭಿಣಿ ಹೆಂಗಸು ಒಂದು ರೀತಿಯ ಎಳಸು ಪ್ರಾಯದ ಹುಡುಗಿಯಂತೆ ಆಡಬಹುದು. ಚಿತ್ತ ಚಂಚಲೆಯಾಗಿ ದೈಹಿಕ ನೋವನ್ನು ಅನುಭವಿಸುತ್ತಾ.

ಹಾಗೂ ಇನ್ನಿತರ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯ ದಲ್ಲಿ ಪತಿಯಾಗಿ ಮಾಡಬೇಕಾಗಿರುವುದು ಇಂತಹ ಸಮಯದಲ್ಲಿ ಪತ್ನಿಯ ಜೊತೆ ಸಮಯವನ್ನು ಕಳೆಯುವುದು. ಇಂತಹ ಸಮಯದಲ್ಲಿ ಪ್ರತಿಯೊಬ್ಬ ಪತಿಯು ಪತ್ನಿಯ ಜೊತೆ ಇರಲೇಬೇಕು ಎನ್ನುವುದಕ್ಕೆ ಪ್ರಮುಖ ವಾದಂತಹ ಏಳು ಕಾರಣಗಳು ಇದೆ. ಅವು ಯಾವುದು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದು ಮಾನಸಿಕ ಬೆಂಬಲಕ್ಕಾಗಿ ಅವಳಿಗೆ ಓರ್ವ ಗೆಳೆಯ ಬೇಕು.

ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಹಲವಾರು ವ್ಯತ್ಯಾಸಗಳು ಉಂಟಾಗುತ್ತದೆ. ಇದರಿಂದ ಮಾನಸಿಕ ಸಮತೋಲನ ಅಸ್ತವ್ಯಸ್ತವಾಗುತ್ತದೆ. ಇದರಿಂದಾಗಿ ಅವಳು ಒಂದು ಸಮಯ ಇದ್ದಂತೆ ಮತ್ತೊಂದು ಸಮಯ ಇರುವುದಿಲ್ಲ ಕೆಲವೊಮ್ಮೆ ಖುಷಿಯಾಗಿ ಇದ್ದರೆ, ಕೆಲವೊಮ್ಮೆ ಚಿಕ್ಕಪುಟ್ಟ ವಿಷಯಕ್ಕೂ ಕೂಡ ಹೆಚ್ಚು ಕೋಪಗೊಳ್ಳುತ್ತಾಳೆ. ಆದ್ದರಿಂದ ಆ ಸಮಯದಲ್ಲಿ ಪತಿಯಾದವನು ಜೊತೆಗೆ ಇದ್ದು ಅವಳ ಪ್ರತಿಯೊಂದು ಕ್ಷಣವನ್ನು ಕೂಡ ಸರಿಪಡಿಸಬೇಕು ಹಾಗೂ ಅವಳಿಗೆ ಬೆಂಬಲವಾಗಿ ನಿಲ್ಲಲೇಬೇಕು.

ಎರಡನೆಯದಾಗಿ ಅವಳಿಗೆ ದೈಹಿಕ ಬೆಂಬಲವಾಗಿ ನಿಲ್ಲುವವನು ಬೇಕು. ಗರ್ಭಧಾರಣೆಯ ಸಮಯ ಬಹಳ ಒತ್ತಡದಿಂದ ಹಾಗೂ ನೋವಿನಿಂದ ಕೂಡಿರುತ್ತದೆ ಎಂದೇ ಹೇಳಬಹುದು, ಹಾಗಾಗಿ ಆ ಸಮಯದಲ್ಲಿ ಅವಳಿಗೆ ಮಸಾಜ್ ಮಾಡುವುದರಿಂದ ಎಷ್ಟೋ ನಿರಾಳ ಎನ್ನಿಸುತ್ತದೆ. ಹಾಗೂ ಮೈಕೈ ನೋವಾಗುವಂತಹ ಕೆಲಸಗಳನ್ನು ಅವಳ ಕೈಯಿಂದ ಮಾಡಿಸಬಾರದು. ಕೆಲವೊಮ್ಮೆ ಅವಳು ಅಡುಗೆ ಮಾಡುವಂತಹ ಸಮಯದಲ್ಲಿ ಅವಳಿಗೆ ಆಯಾಸವಾಗಬಹುದು.

ಆದ್ದರಿಂದ ಅಡುಗೆ ಕೆಲಸಗಳಲ್ಲಿ ಪತಿಯಾದವನು ಆ ಸಮಯದಲ್ಲಿ ಕೆಲಸ ಮಾಡಿ ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಮೂರನೆಯ ದಾಗಿ ಆಕೆಗೆ ಆಸರೆಯಾಗಿ ಯಾರಾದರೂ ಬೇಕು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವಳಿಗೆ ಬೆಂಬಲವಾಗಿ ನಿಲ್ಲುವವರು ಈ ಸಮಯದಲ್ಲಿ ಅವಳಿಗೆ ಯಾರಾದರೂ ಬೇಕೇ ಬೇಕು. ಸಲಹೆಗಳನ್ನು ನೀಡುವುದಕ್ಕೆ, ಅವಳ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ, ವೈದ್ಯರ ಬಳಿ ಹೋಗುವುದಕ್ಕೆ, ತನ್ನ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ.

ಆ ಸಮಯದಲ್ಲಿ ಅವಳಿಗೆ ಯಾರಾದರೂ ಬೇಕೇ ಬೇಕು. ನಾಲ್ಕನೆಯ ದಾಗಿ ಆರೋಗ್ಯಕರ ಗರ್ಭಧಾರಣೆಗಾಗಿ ಗರ್ಭಧಾರಣೆಯ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ತಾಯಿಯ ಆರೋಗ್ಯ ಹಾಗೂ ಮಗುವಿನ ಆರೋಗ್ಯ ಇವೆರಡಕ್ಕೆ ಮೊದಲ ಆದ್ಯತೆ ಇರುತ್ತದೆ. ದೈಹಿಕ ಆರೋಗ್ಯಕ್ಕೆ ಪೋಷಕರ ಹಾಗೂ ಮುಖ್ಯವಾಗಿ ಪತಿಯು ಪತ್ನಿಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]