ಈ ಹೆದ್ದಾರಿ ನಗರದಲ್ಲಿ ಮಾಡುತ್ತೆ ಟ್ರಾಫಿಕ್ ಕಿರಿಕಿರಿ…..!! ಸಾವಿರಾರು ಮಂದಿಯ ಬದುಕು ಕಸೀತಿದೆ ಎಕ್ಸ್ ಪ್ರೆಸ್ ಹೈವೇ…..!!
ಬೆಂಗಳೂರು ಮತ್ತು ಮೈಸೂರು ನಡುವಿನ ದಶಪಥ ರಸ್ತೆ ಭಾಗಶಹ ಮುಗಿದಿದೆ ಮುಂದಿನ ತಿಂಗಳು ಉದ್ಘಾಟನೆಯಾಗುವ ನಿರೀಕ್ಷೆಗಳು ಸಹ ಇದೆ. ಸದ್ಯಕ್ಕೆ ಹೊಸ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಕೇವಲ 75 ನಿಮಿಷದಲ್ಲಿ ತಲುಪುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಮೈಸೂರಿಗೆ ಪ್ರಯಾಣಿಸುವ ಪ್ರವಾಸಿಗರು.
ಖುಷಿಯಾಗಿರುತ್ತಾರೆ. ಆದರೆ ಈ ಹಿಂದೆ ಮೈಸೂರು ಬೆಂಗಳೂರು ರಸ್ತೆ ಬದಿಗಳಲ್ಲಿ ಬದುಕು ಕಟ್ಟಿಕೊಂಡವರು ಮಾತ್ರ ಕಣ್ಣೀರು ಹಾಕುತ್ತಿದ್ದಾರೆ. ಸುಮಾರು 8,000 ಕೋಟಿಗಳ ಈ ಪ್ರಾಜೆಕ್ಟ್ ಎರಡು ನಗರಗಳ ಅಂತರವನ್ನು ಕಡಿಮೆ ಮಾಡುತ್ತದೆ ಅನ್ನುವುದು ನಿಜ. ಆದರೆ ಇದು ಸಾವಿರಾರು ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ ಎನ್ನುವುದು ಕೂಡ ಸತ್ಯ. ಸದ್ಯಕ್ಕೆ ಈ ಎಕ್ಸ್ಪ್ರೆಸ್ ದಾರಿ ಏನೋ ಮುಗಿದಿದೆ.
ಇದರಿಂದ ಮೈಸೂರು ಹಾಗೂ ಬೆಂಗಳೂರು ರಸ್ತೆಗಳಲ್ಲಿ ಉಂಟಾಗುತ್ತಿರು ವಂತಹ ಟ್ರಾಫಿಕ್ ಸಮಸ್ಯೆ ನಿವಾರಣೆಯ ಬಗ್ಗೆ ರಾಜ್ಯ ಸರ್ಕಾರ ಇನ್ನು ಗಮನಹರಿಸದೆ ಇರುವುದು ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗುವ ಭೀತಿ ಉಂಟು ಮಾಡುತ್ತಿದೆ. ಹಾಗಾದರೆ ಏನಿದು ಬೆಂಗಳೂರು ಮೈಸೂರು ದಶಪಥ ರಸ್ತೆಯ ಕಥೆ. ಇಲ್ಲಿ ನಿಜಕ್ಕೂ ಜನರು ಬದುಕು ಗಳನ್ನು ಕಳೆದುಕೊಳ್ಳುತ್ತಿದ್ದಾರಾ. ಇಷ್ಟಕ್ಕೂ ಈ ಎರಡು ಮಹಾನಗರ ಗಳಲ್ಲಿ ಆಗುತ್ತಿರುವ
ಟ್ರಾಫಿಕ್ ಸಮಸ್ಯೆಯ ಮೂಲ ಕಾರಣ ಏನು ಅನ್ನುವುದರ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿಯನ್ನು ನೋಡೋಣ. ಶನಿವಾರ ಭಾನುವಾರ ಬಂತು ಎಂದ ತಕ್ಷಣ ಬೆಂಗಳೂರಿನಿಂದ ಹೊರಡುವವರ ಸಂಖ್ಯೆ ಹೆಚ್ಚಿರುತ್ತದೆ. ನಗರದ ಎಂಟು ದಿಕ್ಕುಗಳ ರಸ್ತೆಗಳಲ್ಲಿಯೂ ಕೂಡ ವಾಹನಗಳ ಒತ್ತಡ ಬೀಳುವುದಕ್ಕೆ ಶುರುವಾಗುತ್ತದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಅದರ ಸುತ್ತ ಮುತ್ತಲಿನ ಪ್ರವಾಸಿ ಕೇಂದ್ರಗಳತ್ತ.
ಜನರ ದಂಡು ಹೊರಟಿಬಿಡುತ್ತದೆ. ಹೀಗಾಗಿ ಮೈಸೂರು ಹಾಗೂ ಬೆಂಗಳೂರು ನಡುವೆ ಪ್ರಯಾಣಿಸುವಂತಹ ವಾಹನಗಳ ಸಂಖ್ಯೆ ಸಹಜ ವಾಗಿ ಹೆಚ್ಚಾಗುತ್ತಿತ್ತು ಮತ್ತು ಪ್ರಯಾಣದ ಅವಧಿ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಯಿತು. ಇದಕ್ಕೆ ಪರಿಹಾರವನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ, ಭಾರತ್ ಮಾಲ ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಎಕ್ಸ್ಪ್ರೆಸ್ ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಈ ಒಂದು ರಸ್ತೆಗೆ ಸುಮಾರು 8066 ಕೋಟಿ ರೂಪಾಯಿಗಳು ಖರ್ಚಾಗಿದ್ದು.
119 ಕಿಲೋಮೀಟರ್ ಉದ್ದದ ರಸ್ತೆಯನ್ನು ಎರಡು ಹಂತದಲ್ಲಿ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಿಂದ ನಿಡಗಡ್ಡ ದ ವರೆಗೆ ಒಂದು ಹಂತ ಹಾಗೂ ನಿಡಗಡ್ಡದಿಂದ ಮೈಸೂರಿಗೆ ಎರಡನೇ ಹಂತದಲ್ಲಿ ರಸ್ತೆ ಯನ್ನು ನಿರ್ಮಾಣ ಮಾಡಿದ್ದಾರೆ. ಈ ರಸ್ತೆಗಳಲ್ಲಿ 5 ಕಡೆಗಳಲ್ಲಿ ಬೈಪಾಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.