ಕರ್ನಾಟಕದ ಮಾತನಾಡುವ ಚೌಡೇಶ್ವರಿ ದೇವಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವ ಅಮ್ಮನವರು…..||
ಕರ್ನಾಟಕದಲ್ಲಿ ನೆಲೆಸಿರುವ ಈ ಅಮ್ಮನವರು ಮಾತನಾಡುತ್ತಾರೆ, ನೀವು ಬೇಡಿಕೊಂಡ ತಕ್ಷಣ ನಿಮ್ಮ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾರೆ. ಪ್ರಪಂಚದಲ್ಲಿಯೇ ಮಾತನಾಡುವ ದೇವರು ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ದೇವಸ್ಥಾನದಲ್ಲಿ ನೆಲೆಸಿರುವ ಅಮ್ಮನವರ ಬಳಿ ಕೇಳಿಕೊಂಡ ಎಲ್ಲ ಇಚ್ಛೆಗಳು ನೂರಕ್ಕೆ ನೂರು ಪೂರೈಸುತ್ತದೆ ಎಂದೇ ಹೇಳಬಹುದು.
ಸ್ವಲ್ಪ ವರ್ಷಗಳಿಂದ ಈ ದೇವಸ್ಥಾನ ದೇಶಾದ್ಯಂತ ಮನೆಮಾತಾಗಿದೆ. ಈ ಅಮ್ಮನವರ ದರ್ಶನ ಪಡೆಯಲು ಪ್ರತಿ ದಿನ ಅಂದಾಜು ಏನಿಲ್ಲ ಅಂದರು ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ಈ ಶಕ್ತಿಶಾಲಿ ದೇವಿಯು 2006ರಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇಲ್ಲಿ ಬರುವ ಭಕ್ತರು ಈ ದೇವಿಯನ್ನು ಭವಿಷ್ಯ ವಾಣಿ ನುಡಿಯುವ ದೇವರು ಎಂದು ಕರೆಯುತ್ತಾರೆ.
ಹಾಗಾದರೆ ಈ ದೇವಸ್ಥಾನ ಯಾವುದು? ಈ ದೇವಸ್ಥಾನ ಇರುವುದಾ ದರೂ ಎಲ್ಲಿ? ಈ ದೇವಸ್ಥಾನದ ಸಂಪೂರ್ಣ ವಿಳಾಸದ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ದೇವಸ್ಥಾನದಲ್ಲಿ ನೆಲೆಸಿರುವoತಹ ಮಾತನಾಡುವ ಅಮ್ಮನವರು ಪಾರ್ವತಿ ಅಮ್ಮನವರ 18ನೆಯ ಅವತಾರ. ಈ ದೇವಿಯನ್ನು ನೋಡುತ್ತಿದ್ದರೆ ಎಂಥವರಿಗಾದರೂ ಕೂಡ ತಮ್ಮ ಕಷ್ಟಗಳನ್ನು ಹೇಳಿಕೊಂಡು ಕೈಮುಗಿಯಬೇಕು ಎಂದೆನಿಸುತ್ತದೆ.
ನಮ್ಮ ಕರ್ನಾಟಕದಲ್ಲಿ ನೆಲೆಸಿರುವಂತಹ ಈ ದೇವಸ್ಥಾನದ ವಿಳಾಸ ನೋಡುವುದಾದರೆ ಬೆಂಗಳೂರು ಮತ್ತು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ 150 ಕಿಲೋ ಮೀಟರ್ ಪ್ರಯಾಣ ಮಾಡಿದರೆ ತಿಪಟೂರು ನಗರ ಬರುತ್ತದೆ. ಅಲ್ಲಿಂದ 10 ಕಿ.ಮೀ ಪ್ರಯಾಣ ಮಾಡಿದರೆ ದರಸಿ ಘಟ್ಟ ಎಂಬ ಗ್ರಾಮ ಸಿಗುತ್ತದೆ. ಇದೇ ಗ್ರಾಮದಲ್ಲಿ ನೆಲೆಸಿರುವ ಮಾತನಾಡುವ ಚೌಡೇಶ್ವರಿ ಅಮ್ಮನವರು.
ಈ ಚೌಡೇಶ್ವರಿ ಅಮ್ಮನವರ ಪವಾಡ ಪ್ರಪಂಚದಾದ್ಯಂತ ಮನೆ ಮಾತಾಗಿದೆ. ಪ್ರಪಂಚದ ಎಲ್ಲಾ ಕಡೆಯಿಂದ ಭಕ್ತರು ಇಲ್ಲಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಬರುತ್ತಾರೆ. ಪಾರ್ವತಿ ದೇವಿಯ 18ನೇ ಅವತಾರ ಆದಿಶಕ್ತಿ, ಆದಿಶಕ್ತಿಯ 7ನೇ ಅವತಾರ ಚೌಡೇಶ್ವರಿ ದೇವಿ. ಇಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿಯ ನಿಜವಾದ ದೇವಿ ಎಂದು ಹೇಳಲು ಸಾಕಷ್ಟು ಪುರಾವೆಗಳನ್ನು ನೋಡಬಹುದು. ದೇವರಲ್ಲಿ ಅತಿ ಹೆಚ್ಚು ರಾಕ್ಷಸರನ್ನು ಸಂಹಾರ ಮಾಡಿರುವಂತಹ ದೇವರು ಯಾರು ಎಂದರೆ ಅದು ಚೌಡೇಶ್ವರಿ ಅಮ್ಮನವರು.
ಭಾರತದ ನೂರು ಶಕ್ತಿಶಾಲಿ ದೇವಾಲಯಗಳಲ್ಲಿ 28ನೇ ಸ್ಥಾನ ಪಡೆದು ಕೊಳ್ಳುವ ಈ ಚೌಡೇಶ್ವರಿ ಅಮ್ಮನವರ ದೇವಸ್ಥಾನ. ಈ ದೇವಸ್ಥಾನದಲ್ಲಿ ಚೌಡೇಶ್ವರಿ ಅಮ್ಮನವರು ಹುತ್ತದ ರೂಪದಲ್ಲಿ ನೆಲೆಗೊಂಡಿದ್ದಾರೆ. ಈ ಹುತ್ತದ ಮುಂದೆ ಆರು ಅಡಿ ಚೌಡೇಶ್ವರಿ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.