ಆಮೆ ಉಂಗುರ ಧರಿಸಿ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ…..||
ಆಮೆಯ ಉಂಗುರವನ್ನು ಯಾವ ದಿನ ಧರಿಸಿದರೆ ಒಳ್ಳೆಯದು, ಹಾಗೆ ಆಮೆಯ ಉಂಗುರವನ್ನು ಧರಿಸಿಕೊಂಡು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿಯೂ ಕೂಡ ಆಮೆ ಉಂಗುರವನ್ನು ಧರಿಸಿರುವುದನ್ನು ನಾವು ಕಾಣಬಹುದು.
ಆಮೆ ಉಂಗುರವನ್ನು ಧರಿಸಿಕೊಳ್ಳುವುದರಿಂದ ನಮ್ಮ ಸಮಸ್ಯೆಗಳೆಲ್ಲ ದೂರವಾಗುತ್ತದೆ ಎಂದು ಹೆಚ್ಚಿನ ಜನ ಹೇಳುತ್ತಿರುತ್ತಾರೆ. ಅದಕ್ಕಾಗಿ ಬೇರೆಯವರು ಸಹ ಈ ಒಂದು ಆಮೆ ಉಂಗುರವನ್ನು ಧರಿಸಿರುತ್ತಾರೆ. ಅದರಲ್ಲೂ ವಿಶೇಷವಾಗಿ ವಿಷ್ಣು ದೇವರ ಹಾಗೂ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಹೆಚ್ಚಿನ ಜನ ಆಮೆ ಉಂಗುರವನ್ನು ಧರಿಸಿಕೊಳ್ಳುತ್ತಾರೆ. ಆದರೆ ಅವರು ತಿಳಿದೋ ತಿಳಿಯದೆಯೋ ಕೆಲವೊಂದಷ್ಟು ತಪ್ಪುಗಳನ್ನು ಮಾಡುತ್ತಿರುತ್ತಾರೆ.
ಇದರಿಂದ ಅವರು ಆಮೆ ಉಂಗುರವನ್ನು ಧರಿಸಿದರೂ ಅದರಿಂದ ಯಾವುದೇ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಮೆ ಉಂಗುರವನ್ನು ಯಾವ ವಿಧಾನದಲ್ಲಿ ಧರಿಸಬೇಕು ಹಾಗೂ ಅದನ್ನು ಧರಿಸಿದ ಮೇಲೆ ಯಾವ ವಿಧವಾಗಿ ನಾವು ಇರಬೇಕಾಗುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಮೇಲೆ ಹೇಳಿದಂತೆ ಆಮೆ ಉಂಗುರವನ್ನು ಧರಿಸಿಕೊಳ್ಳುವುದರಿಂದ ಭಗವಂತ ವಿಷ್ಣು ಹಾಗು ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸದಾ ಕಾಲ ನಮ್ಮ ಮೇಲೆ ಇರುತ್ತದೆ ಇದರಿಂದ ನಮಗೆ ಒಳ್ಳೆಯದಾಗುತ್ತದೆ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಧರಿಸಿಕೊಳ್ಳುತ್ತಾರೆ. ಅದರಲ್ಲೂ ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು, ಪತಿ-ಪತ್ನಿ ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗಬೇಕು, ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿಯಾಗಬೇಕು, ಪ್ರತಿಯೊಂದು ಸಮಸ್ಯೆಗಳು ದೂರವಾಗಬೇಕು ಹೀಗೆ ಹಲವಾರು ಕಾರಣಕ್ಕಾಗಿ ನಾವು ಆಮೆ ಉಂಗುರವನ್ನು ಧರಿಸಿಕೊಳ್ಳುತ್ತೇವೆ.
ಹೀಗೆ ಇಷ್ಟೆಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರೆ ನೀವು ಆಮೆ ಉಂಗುರವನ್ನು ಈ ಒಂದು ವಿಶೇಷವಾದಂತಹ ದಿನದಂದು ಧರಿಸಬೇಕು. ಹೌದು ಅಮಾವಾಸ್ಯೆ ದಿನ ಅಥವಾ ಹುಣ್ಣಿಮೆಯ ದಿನದಂದು ತಾಯಿ ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತಹ ದಿನವಾಗಿರುತ್ತದೆ ಆದ್ದರಿಂದ ಈ ಎರಡು ದಿನಗಳಲ್ಲಿ ನೀವು ಆಮೆ ಉಂಗುರವನ್ನು ಧರಿಸಿಕೊಳ್ಳುವುದರಿಂದ ಅತ್ಯುತ್ತಮವಾದ ಪ್ರಯೋಜನವನ್ನು ನೀವು ಪಡೆಯಬಹುದು.
ಹಾಗೇನಾದರೂ ಅಮಾವಾಸ್ಯೆ ಹುಣ್ಣಿಮೆ ಆಗಲಿಲ್ಲ ಎಂದರೆ ಬುಧವಾರ ಶುಕ್ರವಾರ ಹಾಗೂ ಶನಿವಾರ ಈ ಮೂರು ದಿನಗಳಲ್ಲಿ ನೀವು ಧರಿಸಿಕೊಳ್ಳುವುದು ಉತ್ತಮ. ಹಾಗೆಯೇ ಯಾವುದೇ ಕಾರಣಕ್ಕೂ ಆಮೆ ಉಂಗುರವನ್ನು ರಾತ್ರಿ ಮಲಗುವ ಸಮಯದಲ್ಲಿ ಧರಿಸಿಕೊಳ್ಳಬಾರದು ಏಕೆ ಎಂದರೆ ತಾಯಿ ಲಕ್ಷ್ಮಿ ದೇವಿ ನಮ್ಮ ಕೈಯಲ್ಲಿ ಇರುವುದರಿಂದ ಮೈಲಿಗೆ ಅದಕ್ಕೆ ಸೋಕಬಾರದು ಆದ್ದರಿಂದ ರಾತ್ರಿ ಸಮಯ ಧರಿಸುವುದು ಉತ್ತಮವಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.