ಭಕ್ತರ ಮುಂದಿನ ಜನ್ಮದ ಬಗ್ಗೆ ತಿಳಿಸುವ ಅಸಾಮಾನ್ಯ ಶಿವಲಿಂಗ…..||ಗೌರಿ ಸೋಮನಾಥ…||ಓಂಕಾರೇಶ್ವರ…..||
ಭೂವಸುಂದರೆಯಲ್ಲಿ ನಮ್ಮ ಭರತ ಖಂಡ ಒಂದು ಸುಂದರ ಹಾಗೂ ಪವಿತ್ರವಾದ ಭೂಪ್ರದೇಶ. ನಮ್ಮ ಭಾರತ ದೇಶದಲ್ಲಿ ಅಸಂಖ್ಯಾತ ದೇವರುಗಳು ಜನ್ಮತಾಳಿದ್ದಾರೆ. ಋಷಿಮುನಿಗಳೆಲ್ಲರೂ ಕೂಡ ತಪಸ್ಸನ್ನು ಆಚರಿಸಿ ನಮ್ಮ ಈ ಭಾರತದ ನೆಲವನ್ನು ಪಾವನಗೊಳಿಸಿದ್ದಾರೆ. ಈ ಭಾರತದ ಪುರಾತನ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಗೆ ಸಾಕ್ಷಿ ಎಂಬಂತೆ
ನಮ್ಮ ದೇಶದಲ್ಲಿ ಮೂಲೆ ಮೂಲೆಗಳಲ್ಲಿಯೂ ಸಹ ಪ್ರಾಚೀನ ದೇಗುಲ ಗಳು ನಮಗೆ ಕಾಣ ಸಿಗುತ್ತದೆ. ನಮ್ಮ ಭಾರತ ದೇಶದಲ್ಲಿರುವ ಕೆಲವು ದೇವಸ್ಥಾನಗಳು ತಮ್ಮ ಅಸಮಾನ್ಯ ಶಕ್ತಿ ಮತ್ತು ಅಲ್ಲಿ ಜರುಗುವಂತಹ ಕೆಲವು ವಿಸ್ಮಯಗಳ ಸಂಗತಿಯಿಂದಾಗಿ ಬೆರಗನ್ನು ಗೊಳಿಸುತ್ತಿದೆ. ಅದೇ ರೀತಿಯಾಗಿ ಇಂದು ನಾವು ನಮ್ಮ ನೆಲದಲ್ಲಿರುವಂತಹ ಒಂದು ಅಸಾಮಾನ್ಯ ಶಕ್ತಿ ಇರುವಂತಹ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.
ಈ ದೇಗುಲದಲ್ಲಿರುವಂತಹ ಶಿವಲಿಂಗವು ಎಂತಹ ಅದ್ಭುತ ಶಕ್ತಿಯನ್ನು ಒಳಗೊಂಡಿದೆ ಎಂದರೆ ಈ ಶಿವಲಿಂಗ ದರ್ಶನ ಮಾಡುವಂತಹ ಜನರಿಗೆ ಶಿವಲಿಂಗದ ಮೇಲ್ಮೈ ಮೇಲೆ ತಮ್ಮ ಮುಂದಿನ ಜನ್ಮದ ಪ್ರತಿಬಿಂಬ ಕಾಣಿಸುತ್ತಿತ್ತಂತೆ. ಮೊಘಲ್ ದೊರೆಯಾದ ಔರಂಗಜೇಬ್ ಈ ಶಿವಲಿಂಗದ ಮುಂದೆ ನಿಂತು ತನ್ನ ಮುಂದಿನ ಜನ್ಮದ ಚಿತ್ರಣವನ್ನು ಕಂಡು ಕೋಪದಿಂದ ದಂಗಾಗಿದ್ದನಂತೆ. ಆದರೆ ಈಗ ಈ ಅಸಾಮಾನ್ಯ ಶಿವಲಿಂಗ
ತನ್ನ ಅದ್ಭುತವಾದ ಸಾಮರ್ಥ್ಯವನ್ನು ಉಳಿಸಿಕೊಂಡಿಲ್ಲ. ಭಕ್ತರ ಭವಿಷ್ಯದ ಜನ್ಮದ ಚಿತ್ರಣವನ್ನು ತೋರಿಸುವ ಅದ್ಭುತವಾದಂತಹ ಶಕ್ತಿ ಈ ಶಿವಲಿಂಗದಿಂದ ಶಾಶ್ವತವಾಗಿ ಕಳೆದು ಹೋಗಿದೆ. ಹಾಗಾದರೆ ಈ ಸಾಮಾನ್ಯ ಶಿವಲಿಂಗ ಇರುವುದಾದರೂ ಎಲ್ಲಿ? ಶಿವಲಿಂಗದ ಭವಿಷ್ಯ ತೋರಿಸುವಂತಹ ಸಾಮರ್ಥ್ಯ ನಾಶವಾಗಿದ್ದು ಹೇಗೆ? ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸುತ್ತಾ ಹೋಗೋಣ.
ಈ ದೇವಸ್ಥಾನದ ಶಿವಲಿಂಗದ ಹೆಸರು ಓಂಕಾರೇಶ್ವರ ಇದು ಮಧ್ಯ ಪ್ರದೇಶದ ಕಾಂಡ್ವ ಜಿಲ್ಲೆಯಲ್ಲಿ ನರ್ಮದಾ ನದಿಯ ತಟದಲ್ಲಿರುವಂತಹ ಒಂದು ಪ್ರಮುಖವಾದ ಯಾತ್ರಾ ಕ್ಷೇತ್ರ. ಓಂಕಾರೇಶ್ವರ ಪಟ್ಟಣದಲ್ಲಿ ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದದ್ದು ಎನಿಸಿಕೊಂಡಿ ರುವಂತಹ ಓಂಕಾರೇಶ್ವರ ಜ್ಯೋತಿರ್ಲಿಂಗ ಸ್ಥಿತವಿದ್ದು. ಓಂಕಾರೇಶ್ವರ ಜ್ಯೋತಿರ್ಲಿಂಗದ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಗಳಿಂದಲೂ ಅಸಂಖ್ಯಾತ ಭಕ್ತರು ದರ್ಶನ ಮಾಡುವುದಕ್ಕೆ ಬರುತ್ತಾರೆ.
ಈ ಕ್ಷೇತ್ರಗಳಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳಂತಹ ಅಸಂಖ್ಯಾತ ದೇಗುಲಗಳು ಇವೆ. ಓಂಕಾರೇಶ್ವರ ಪಟ್ಟಣದ ಒಂದು ಪುರಾತನ ದೇಗುಲವೇ ಗೌರಿ ಸೋಮನಾಥ ದೇವಾಲಯ ಈ ದೇಗುಲ ನರ್ಮದಾ ನದಿಯ ದ್ವೀಪ ವಾದಂತಹ ಮದಾಂತ ದ್ವೀಪದಲ್ಲಿ ಸ್ಥಿತವಿದೆ. ಓಂಕಾರೇಶ್ವರ ದೇವಸ್ಥಾನದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಓಂಕಾರೇಶ್ವರದ ಪರಿಕ್ರಮ ಪಥದಲ್ಲಿಯೇ ಗೌರಿ ಸೋಮನಾಥ ದೇವಾಲಯ ಸ್ಥಿತವಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.