ಗರಿಕೆಯನ್ನು ಇಲ್ಲಿ ಬಚ್ಚಿಡಿ ಹಣ ಹೇಗೆ ಹುಡುಕಿ ಬರುತ್ತೆ ನೀವೇ ನೋಡಿ……!!
ಹಿಂದೂ ಧರ್ಮದಲ್ಲಿ ಪವಿತ್ರವಾದ ಗಿಡಗಳಲ್ಲಿ ತುಳಸಿಯು ಮೊದಲನೇ ಸ್ಥಾನದಲ್ಲಿ ಇದ್ದರೆ ಗರಿಕೆಯೂ ಎರಡನೇ ಸ್ಥಾನದಲ್ಲಿ ಇದೆ. ಗರಿಕೆ ಇಲ್ಲದೆ ಯಾವುದೇ ಪೂಜೆಯು ಹಿಂದೂ ಧರ್ಮದಲ್ಲಿ ಪೂರ್ಣವಾಗುವುದಿಲ್ಲ. ಪ್ರಥಮ ಪೂಜಿತನಾಗಿರುವಂತಹ ಗಣೇಶನಿಗೆ ಗರಿಕೆಯೂ ಅತ್ಯಂತ ಪ್ರಿಯವೂ ಕೂಡ ಹೌದು. ಪೂಜೆಯಲ್ಲಿಯೂ ಪ್ರಾಶಸ್ತ್ಯಯನ್ನು ಪಡೆದಿರುವಂತಹ ಗರಿಕೆಯನ್ನು ದುರ್ವ ಎಂದು ಕರೆಯುತ್ತಾರೆ.
ಪಾವಿತ್ರ್ಯತೆಯನ್ನು ಪಡೆದಿರುವಂತಹ ಗರಿಕೆಯು ಮೂರು ಚೂಪಾದ ಎಲೆಗಳ ಆಕಾರವನ್ನು ಹೊಂದಿದ್ದು ಇದು ಶಿವನ ಮೂರು ತತ್ವಗಳನ್ನು ಪ್ರತಿನಿಧಿಸುತ್ತದೆ. ಅಂದರೆ ಮೂರು ದೇವತತ್ವಗಳಾದ ಶಿವ ಶಕ್ತಿ ಮತ್ತು ಗಣೇಶ ನನ್ನು ಪ್ರತಿನಿಧಿಸುತ್ತದೆ. ಗಣೇಶನನ್ನು ಆಕರ್ಷಿಸುವಂತಹ ಗರಿಕೆಯ ಹುಲ್ಲನ್ನು ಗಣೇಶನಿಗೆ ಪ್ರಮುಖವಾಗಿ ಅರ್ಪಿಸಲಾಗುತ್ತದೆ. ಗರಿಕೆ ಎಸಳು ಹಾಗೂ ಚಿಗುರುಗಳನ್ನು ದೇವತಾ ಕಾರ್ಯಗಳಲ್ಲಿ ಬಳಸಲಾಗುತ್ತದೆ.
ಈ ಚಿಗುರುಗಳು ತಮ್ಮ ಎಲೆಗಳ ಮೇಲೆ ಬಿದ್ದ ಇಬ್ಬನಿಗಳಲ್ಲಿರೋ ದೇವತೆಗಳ ತತ್ವವನ್ನು ಹೀರಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಇದನ್ನು ಪೂಜೆಯಲ್ಲಿ ಬಳಸುವಂತಹ ಆರಾಧಕ ರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಒಂದು ವೇಳೆ ಗರಿಕೆಯು ಹೂವನ್ನು ಬಿಟ್ಟರೆ ಅಂತಹ ಗರಿಕೆಯನ್ನು ಪೂಜೆಯಲ್ಲಿ ಬಳಸಲಾಗುವು ದಿಲ್ಲ. ಯಾಕೆ ಎಂದರೆ ಹೂ ಬಿಡುವಂತಹ ಸಸ್ಯವು ಪಕ್ಷತೆಯನ್ನು ಸೂಚಿಸುತ್ತದೆ. ಮಾಗುವ ಕಾರಣ ಸಸ್ಯದ ಚೈತನ್ಯ ಕಡಿಮೆಯಾಗುತ್ತದೆ.
ಇದು ದೇವತಾ ಸಾಮರ್ಥ್ಯವನ್ನು ಆಕರ್ಷಿಸುವಂತಹ ತತ್ವವನ್ನು ಕಡಿಮೆ ಮಾಡುತ್ತದೆ. ಒಮ್ಮೆ ಅನಲಾಸುರ ಎಂಬ ರಾಕ್ಷಸನು ಸ್ವರ್ಗದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟು ಮಾಡುತ್ತಾನೆ. ತನ್ನ ದಾರಿಯಲ್ಲಿ ಎದುರಾದಂತಹ ಎಲ್ಲರನ್ನೂ ಕೂಡ ಕಣ್ಣಿನಿಂದ ಬರುವಂತಹ ಬೆಂಕಿಯಿಂದ ಸುಟ್ಟು ಹಾಕುತ್ತಿದ್ದ. ಆಗ ದೇವತೆಗಳು ಗಣೇಶನ ಸಹಾಯಕ್ಕೆ ಹೋದರು. ಗಣೇಶ ಹಾಗೂ ಅನಲಾಸುರನ ಮಧ್ಯೆ ಯುದ್ಧ ನಡೆದಾಗ ಅನಲಾಸುರನು ಬೆಂಕಿ ಉಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ.
ಆಗ ಕೋಪದಿಂದ ಗಣೇಶನು ಅಸುರರನ್ನು ಸಂಹಾರ ಮಾಡುವುದಕ್ಕೆ ವಿರಾಟ್ ರೂಪ ತಾಳಿ ಅನಲಾಸುರನನ್ನು ನುಂಗಿಬಿಡುತ್ತಾನೆ. ಇದರಿಂದ ಗಣೇಶನ ದೇಹದಲ್ಲಿ ಉಷ್ಣಾಂಶವು ಅಧಿಕವಾಗಿ ಹೊಟ್ಟೆ ಊದಿಕೊಳ್ಳು ತ್ತದೆ. ದೇಹದ ಉಷ್ಣಾಂಶದಿಂದ ದೇಹಾಲಸ್ಯದಿಂದ ಸುಧಾರಿಸಿಕೊಳ್ಳುವು ದಕ್ಕೆ ಗಣೇಶನು ಹರಸಾಹಸ ಪಡುತ್ತಿದ್ದ. ದೇವತೆಗಳಾದಂತಹ ಚಂದ್ರ ವಿಷ್ಣು ಶಿವ ಗಣೇಶನ ನೋವನ್ನು ಕಡಿಮೆ ಮಾಡಲು ನಾನಾ ರೀತಿಯ ಉಪಾಯಗಳನ್ನು ಮಾಡಿದರು ಕೂಡ.
ಗಣೇಶನಿಗೆ ಹೊಟ್ಟೆ ನೋವು ಕಡಿಮೆಯಾಗಲಿಲ್ಲ. ಕೊನೆಗೆ ಋಷಿಮುನಿ ಗಳು 21 ಗರಿಕೆಯನ್ನು ಗಣೇಶನ ತಲೆ ಮೇಲೆ ಇಡುತ್ತಾರೆ ಆಗ ಗಣೇಶನ ದೇಹದಲ್ಲಿರುವಂತಹ ಎಲ್ಲಾ ಉಷ್ಣಾಂಶವು ಆವಿಯಾಗಿ ನೋವು ಕಡಿಮೆಯಾಗಿ ಗಣೇಶನು ಗುಣಮುಖನಾಗುತ್ತಾನೆ. ಅಂದಿನಿಂದ ಯಾರು ನನಗೆ ಗರಿಕೆಯನ್ನು ಅರ್ಪಿಸುತ್ತಾರೋ ಅಂಥವರ ಮೇಲೆ ಸದಾ ನನ್ನ ಆಶೀರ್ವಾದ ಇರುತ್ತದೆ ಎಂದು ಭಗವಾನ್ ಗಣೇಶ ಹೇಳುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.