ಮೋದಿ ಹೆಚ್ಚು ಖರ್ಚು ಮಾಡುವುದು ಯಾವುದಕ್ಕೆ ಗೊತ್ತಾ……??
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹಾಗೆಯೇ ನರೇಂದ್ರ ಮೋದಿ ಅವರ ಮೇಲೆ ಹಲವಾರು ಆರೋಪಗಳು ಇವೆ. ಒಮ್ಮೆ ಹಾಕಿದ ಬಟ್ಟೆ ಮತ್ತೊಮ್ಮೆ ಹಾಕುವುದಿಲ್ಲ. ಊಟಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ ಅಂತ. ಹಾಗಾದರೆ ಇವೆಲ್ಲಾ ಸತ್ಯನ. ಮೋದಿ ತಾವು ಹಾಕಿಕೊಳ್ಳುವಂತಹ ಬಟ್ಟೆಗೆ ಎಷ್ಟು ಖರ್ಚು ಮಾಡುತ್ತಾರೆ?
ಅವರು ಸೇವಿಸುವಂತಹ ಊಟಕ್ಕೆ ಎಷ್ಟು ಖರ್ಚು ಮಾಡುತ್ತಾರೆ? ಅವರ ಸಂಬಳ ಎಷ್ಟು? ಅವರ ಆಸ್ತಿ ಎಷ್ಟು? ಒಂದು ದಿನಕ್ಕೆ ನರೇಂದ್ರ ಮೋದಿಯವರು ಎಷ್ಟು ಹಣ ಖರ್ಚು ಮಾಡುತ್ತಾರೆ? ಹೀಗೆ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಮೋದಿ ಅವರ ಖರ್ಚುಗಳ ವಿಚಾರ ಬಂದಾಗ ಮೊದಲನೆಯದಾಗಿ ಬರುವುದೇ ಅವರ ಸೆಕ್ಯೂರಿಟಿ.
ಪ್ರಯಾಣ ಬಟ್ಟೆ ಹಾಗೂ ಊಟದ್ದು. ಮೋದಿ ಅವರ ಸೆಕ್ಯೂರಿಟಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ ಹೌದು. ನರೇಂದ್ರ ಮೋದಿ ಅವರು ಸಾಮಾನ್ಯ ವ್ಯಕ್ತಿ ಅಲ್ಲ. ಪಕ್ಷ ಯಾವುದೇ ಇರಲಿ ಅವರು ಭಾರತದ ಪ್ರಧಾನಿ. ಆದ್ದರಿಂದ ಅವರಿಗೆ ಹೆಚ್ಚಿನ ಸೆಕ್ಯೂರಿಟಿ ಕೊಡಬೇಕಾದದ್ದು ಸರ್ಕಾರದ ಕರ್ತವ್ಯ. ಹೀಗಾಗಿ ಅವರಿಗೆ ಕಟ್ಟುನಿಟ್ಟಿನ ಸೆಕ್ಯೂರಿಟಿ ಅನ್ನು ನೀಡಲಾಗುತ್ತದೆ. ಆ ಸೆಕ್ಯೂರಿಟಿಯನ್ನು ಭೇದಿಸಿ ಯಾರು ಕೂಡ ಅವರ ಹತ್ತಿರ ಹೋಗಲು ಸಾಧ್ಯವಾಗುವುದಿಲ್ಲ.
ಅಷ್ಟು ಭದ್ರವಾಗಿರುತ್ತದೆ ಅವರ ಸೆಕ್ಯೂರಿಟಿ. ಅದೇ ರೀತಿಯಾಗಿ ಈ ಸೆಕ್ಯೂರಿಟಿಗು ಕೂಡ ಖರ್ಚು ಕೂಡ ದೊಡ್ಡದಾಗಿಯೇ ಇದೆ. ಹೌದು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಎಂದು ದಿನಕ್ಕೆ 1 ಕೋಟಿ 61 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಅಂದರೆ ಮೋದಿ ಅವರ ಭದ್ರತೆಗೆ ಗಂಟೆಗೆ 6.72 ಲಕ್ಷ ರೂಪಾಯಿ.
ನಿಮಿಷಕ್ಕೆ 11,263 ರೂಪಾಯಿ ಖರ್ಚು ಮಾಡಿದಂತಾಗುತ್ತದೆ. ಕೇವಲ ನರೇಂದ್ರ ಮೋದಿ ಮಾತ್ರವಲ್ಲ ಈ ಹಿಂದೆ ಇದೇ ರೀತಿ ಸೆಕ್ಯೂರಿಟಿ ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಸ್ಥರಿಗೂ ಕೂಡ ಇತ್ತು. ಅಂದರೆ ಮನಮೋಹನ್ ಸಿಂಗ್ ಕುಟುಂಬ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಗೂ ಸಹ ಈ ರೀತಿಯ ಸೆಕ್ಯೂರಿಟಿ ಇತ್ತು. ಆದರೆ ಇತ್ತೀಚಿಗೆ
ಪ್ರಧಾನಿಯನ್ನು ಹೊರತುಪಡಿಸಿ ಉಳಿದವರಿಗೆ ನೀಡಿದ್ದ SPG ಭದ್ರತೆ ವಾಪಸ್ ಪಡೆಯಲಾಗಿದೆ. ಈ ಖರ್ಚು ವೆಚ್ಚದ ಕುರಿತು ಖುದ್ದು ಕೇಂದ್ರ ಗೃಹ ಇಲಾಖೆಯೇ ಸಂಸತ್ತಿನಲ್ಲಿ ಮಾಹಿತಿಯನ್ನು ನೀಡಿತ್ತು. ಒಂದೇ ದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ಮೂರು ಕಡೆ ರಾಲಿ ಇದ್ದರೆ ಸಾಮಾನ್ಯವಾಗಿ ಅವರು ಖುರ್ಥ ಬದಲಾಯಿಸುತ್ತಾರೆ. ಹೀಗಾಗಿ ಪದೇಪದೇ ಮೋದಿಯವರು ಬಟ್ಟೆ ಬದಲಾಯಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.