ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ನವಿಲು ಇಂದಿಗೂ ಜೀವಂತವಾಗಿರುವ ಸುಬ್ರಹ್ಮಣ್ಯ ಸ್ವಾಮಿಯ ನವಿಲು..!

ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ನವಿಲು ಇಂದಿಗೂ ಜೀವಂತವಾಗಿರುವ ಸುಬ್ರಮಣ್ಯ ಸ್ವಾಮಿಯ ನವಿಲು……..!!

WhatsApp Group Join Now
Telegram Group Join Now

ಈ ದಿನ ನಾವು ಹೇಳಲು ಹೊರಟಿರುವಂತಹ ದೇವಸ್ಥಾನದ ಹೆಸರು ವೈರಲಿಮಲಿ ಮುರುಗನ್ ದೇವಸ್ಥಾನದ ಬಗ್ಗೆ. ಈ ದೇವಸ್ಥಾನದ ವಿಶೇಷತೆ ಏನು ಎಂದರೆ ಪ್ರತಿದಿನ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಮಾಡುವಂತಹ ಸಮಯದಲ್ಲಿ ನವಿಲು ಬರುತ್ತದೆ. ಪ್ರತಿದಿನ ದೇವಸ್ಥಾನಕ್ಕೆ ಬಂದು ಎರಡರಿಂದ ಮೂರು ಗಂಟೆಗಳ ಕಾಲ ಇದ್ದು ಆನಂತರ ಹೊರಟು ಹೋಗುತ್ತದೆ.

ಹಾಗಾದರೆ ಈ ದೇವಸ್ಥಾನ ಇರುವುದಾದರೂ ಇರಲಿ? ದೇವಸ್ಥಾನದಲ್ಲಿ ಏನೆಲ್ಲಾ ವಿಶೇಷತೆ ಇದೆ? ಹಾಗೆಯೇ ನವಿಲು ಈ ಒಂದು ದೇವಸ್ಥಾನಕ್ಕೆ ಬರುವುದಕ್ಕೆ ಕಾರಣ ಏನು? ಹೀಗೆ ಈ ಒಂದು ವಿಚಾರಕ್ಕೆ ಸಂಬಂಧಪಟ್ಟ ಇನ್ನೂ ಹಲವಾರು ರೀತಿಯ ಕುತೂಹಲಕಾರಿ ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಈ ದೇವಸ್ಥಾನದ ವಿಳಾಸ ನೋಡುವುದಾದರೆ

ಕರ್ನಾಟಕದ ನೆರೆ ರಾಜ್ಯವಾದ ತಮಿಳುನಾಡಿನಲ್ಲಿರುವ ತಿರುಚರಪಲ್ಲಿ ನಗರಕ್ಕೆ ಹೋಗಬೇಕು ತಿರುಚರಪಳ್ಳಿ ಇಂದ 35km ಪುಯಾಣ ಮಾಡಿದರೆ ವೈರಲಿಮಲಿ ಎಂಬ ಹಳ್ಳಿ ಸಿಗುತ್ತೆ ಇದೇ ಹಳ್ಳಿಯಲ್ಲಿ ನೆಲೆಸಿರುವ “ವೈರಲಿಮಲಿ ಮುರುಗನ್ ದೇವಸ್ಥಾನ”. ಈ ದೇವಸ್ಥಾನ ದಲ್ಲಿ ನೆಲೆಸಿರುವ ದೇವರು ಮುರುಗನ್ ಅಂದರೆ ಸುಬ್ರಹ್ಮಣ್ಯ ಸ್ವಾಮಿ. ಈ ದೇವಸ್ಥಾನದ ಯಾವುದೇ ರೀತಿಯ ಫೋಟೋ ಆಗಲಿ ಈ ದೇವಸ್ಥಾನದ ವಿಡಿಯೋ ಆಗಲಿ ನೀವು ಎಲ್ಲೂ ಕೂಡ ನೋಡಿರಲು ಸಾಧ್ಯವಿಲ್ಲ.

ದೇವಸ್ಥಾನಕ್ಕೆ ಹೋಗಬೇಕು ಅಲ್ಲಿ ದೇವರನ್ನು ನೇರವಾಗಿ ನೋಡಿ ನಮಸ್ಕರಿಸಿಕೊಂಡು ಬರಬೇಕು. ಫೋಟೋ ಮತ್ತು ವಿಡಿಯೋವನ್ನು ದೇವಸ್ಥಾನದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. 1999 ರಲ್ಲಿ ಈ ಸುಬ್ರಹ್ಮಣ್ಯ ಸ್ವಾಮಿಯ ಫೋಟೋವನ್ನು ಗುಪ್ತವಾಗಿ ತೆಗೆಯುತ್ತಾರೆ. ಈ ಒಂದು ಫೋಟೋ ಕೆಲವೊಂದಷ್ಟು ದಿನ ಜಾಲತಾಣದಲ್ಲಿ ಇತ್ತು ಆದರೆ ಆನಂತರ ಸ್ವಲ್ಪ ದಿನ ಕಳೆದ ನಂತರ ಅದು ಕಣ್ಮರೆಯಾಗುತ್ತದೆ.

ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಸುಬ್ರಮಣ್ಯ ಸ್ವಾಮಿಯ ವಿಗ್ರಹವು 10 ಅಡಿ ಎತ್ತರವಾಗಿದೆ. 10 ಅಡಿ ಎತ್ತರವಿರುವoತಹ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹದಲ್ಲಿ ಮೂರು ಮುಖಗಳು ಹಾಗೂ 10 ಕೈಗಳು ಹೊಂದಿರುವಂತಹ ಪ್ರಪಂಚದ ಏಕೈಕ ಸುಬ್ರಹ್ಮಣ್ಯ ಸ್ವಾಮಿಯ ಶಿಲೆ. ಪ್ರತಿದಿನ ಸರಿಸುಮಾರು 10,000ಕ್ಕೂ ಹೆಚ್ಚಿನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ಪ್ರತಿದಿನ ಬೆಳಗಿನ ಸಮಯ ಸುಬ್ರಮಣ್ಯ ಸ್ವಾಮಿಗೆ ಪೂಜೆ ಮಾಡುವಾಗ ಸುಬ್ರಮಣ್ಯ ಸ್ವಾಮಿಯ ವಾಹನವಾಗಿರುವಂತಹ ನವಿಲು ಕಾಡಿನ ಮಧ್ಯ ಭಾಗದಿಂದ ಹಾರಿಕೊಂಡು ದೇವಸ್ಥಾನಕ್ಕೆ ಬರುತ್ತದೆ. ಸುಮಾರು 5000 ವರ್ಷಗಳಿಂದಲೂ ಕೂಡ ಈ ಪವಾಡ ನಡೆಯುತ್ತಲೇ ಬರುತ್ತಿದೆ ಎಂದು ಹೇಳುತ್ತಾರೆ. ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ನಾತ್ಯಾರ್ ಎಂಬ ರಾಕ್ಷಸ ಈಗ ದೇವಸ್ಥಾನ ಇರುವ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]