ರಾಜಕಾರಣದಲ್ಲಿ ಇದು ನಿಜಕ್ಕೂ ಗುಮ್ಮೋ ಟಗರು …….? ಯಾರು ಈ ಸಿಎಂ ಸಿದ್ದರಾಮಯ್ಯ……?
ಸಿದ್ದರಾಮಯ್ಯ ಹುಟ್ಟಿದ್ದು ಅರಮನೆ ನಗರಿಯ ಒಂದು ಕುಗ್ರಾಮದಲ್ಲಿ ಮೈಸೂರು ಜಿಲ್ಲೆಯ ವರುಣ ಹೋಬಳಿಯ ಸಿದ್ದರಾಮನ ಹುಂಡಿ ಗ್ರಾಮದಲ್ಲಿ. 1948ರ ಆಗಸ್ಟ್ 12ರಂದು ಸಿದ್ದರಾಮಯ್ಯ ಅವರ ಜನನವಾಗುತ್ತದೆ. ಹೆತ್ತವರೇನೋ ಪ್ರಭಾವಿಗಳಲ್ಲ ಅವರದ್ದು ಸಾಮಾನ್ಯ ರೈತ ಕುಟುಂಬ ಅಂದಿನ ಕಾಲದಲ್ಲಿ ಎಸ್ ಎಸ್ ಎಲ್ ಸಿ ಪಾಸ್ ಮಾಡುವುದೇ ಕಠಿಣವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರು ಹಳ್ಳಿಗಾಡಿನ ಬದುಕಿನ ಎಲ್ಲಾ ಅಡೆತಡೆಗ ಳನ್ನು ಸವಾಲುಗಳನ್ನು ಸ್ವೀಕರಿಸಿ ಮೆಟ್ಟಿನಿಂತು ಸಾಧನೆಯ ಶಿಖರವನ್ನೇ ರಿದ ಸಿದ್ದರಾಮಯ್ಯ ಅವರ ಬದುಕು ರೋಚಕವಾಗಿದೆ. ಸಿದ್ದರಾಮಯ್ಯ ಅವರು ಸಾಗಿ ಬಂದ ದಾರಿ ಹೂವಿನ ಪಥವಾಗಿರಲಿಲ್ಲ ಆದರೆ ಛಲ ಬಿಡದ ತ್ರಿವಿಕ್ರಮನಂತೆ ಸಿದ್ದರಾಮಯ್ಯ ಎಲ್ಲವನ್ನು ದಾಟಿಕೊಂಡು ಬಂದವರು.
ಆರಂಭದಲ್ಲಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾದಂತಹ ಪರಿಸ್ಥಿತಿ ಬಂದಿತ್ತು ಎಲ್ಲಿಯವರೆಗೆ ಎಂದರೆ ಶಾಲೆ ಬಿಟ್ಟು ದನ ಮೇಯಿಸ ಬೇಕಾದಂತಹ ಸ್ಥಿತಿ ಕೂಡ ಸಿದ್ದರಾಮಯ್ಯ ಅವರಿಗೆ ಎದುರಾಗಿತ್ತು. ಆದರೆ ಸಿದ್ದರಾಮಯ್ಯ ಅವರಲ್ಲಿ ಅದೇನೋ ಪ್ರತಿಭೆ ಇದೆ ಅಂತ ಅಲ್ಲಿನ ಗ್ರಾಮದ ಜನರಿಗೆ ಅಲ್ಲಿನ ಶಿಕ್ಷಕರಿಗೆ ಬಲವಾಗಿ ಅನ್ನಿಸಿತ್ತು. ಅವರ ಒತ್ತಾಯದಿಂದ ಸಿದ್ದರಾಮಯ್ಯ ಶಿಕ್ಷಣವನ್ನು ಮುಂದುವರಿಸುತ್ತಾರೆ. ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರಾದಂತಹ ಸಿದ್ದರಾಮನಹುಂಡಿ ಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಾರೆ.
ನಂತರ ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ಬರುತ್ತಾರೆ. ಯುವರಾಜ ಕಾಲೇಜಿಗೆ ಪ್ರವೇಶವನ್ನು ಪಡೆದಂತಹ ಸಿದ್ದರಾಮಯ್ಯ ಬಿಎಸ್ಸಿ ಪದವಿ ಯನ್ನು ಪಡೆದುಕೊಳ್ಳುತ್ತಾರೆ. ನಿಜ ಹೇಳಬೇಕು ಎಂದರೆ ಸಿದ್ದರಾಮಯ್ಯ ಅವರ ತಂದೆಗೆ ಮಗನನ್ನು ಡಾಕ್ಟರ್ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರಿಗೆ ಕಾನೂನು ವ್ಯಾಸಂಗ ಮಾಡಬೇಕು ಎನ್ನುವ ಒಲವು ಇರುತ್ತದೆ ತಮ್ಮ ಆಸೆಯಂತೆ ಕಾನೂನು ಪದವಿಗಾಗಿ.
ಶಾರದಾ ವಿಲಾಸ ಕಾಲೇಜಿಗೆ ಸೇರ್ಪಡೆಯಾಗುತ್ತಾರೆ. ಅಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡು ಕೆಲಕಾಲ ವಿದ್ಯಾ ವರ್ಧಕ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು ಇದಾದ ನಂತರ ವಕೀಲ ವೃತ್ತಿಯನ್ನು ಆರಂಭಿಸುತ್ತಾರೆ. ಕಾನೂನು ಪದವಿಯನ್ನು ಪಡೆದಂತಹ ಸಿದ್ಧರಾಮಯ್ಯ ಮುಂದೆ ಸಾಗಿದ್ದು ನ್ಯಾಯದ ಹಾದಿಯಲ್ಲಿ. ಸಿದ್ದರಾಮಯ್ಯ ಅವರ ನ್ಯಾಯದ ಹೋರಾಟ ಕೇವಲ ನ್ಯಾಯಾಲಯಕ್ಕೆ ಸೀಮಿತವಾಗಿರಲಿಲ್ಲ.
ಈ ಹೋರಾಟದ ಮನೋಭಾವ ಮತ್ತಷ್ಟು ಬಲಿಷ್ಠವಾದಾಗ ಸಿದ್ದರಾಮ ಯ್ಯ ರಾಜಕೀಯದ ಅಖಾಡಕ್ಕೆ ಧುಮಿಕಿ ಬಿಡುತ್ತಾರೆ. 1978 ರಲ್ಲಿ ರಾಜಕಾರಣಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದಂತಹ ಸಿದ್ದರಾಮಯ್ಯ ತಾಲೂಕು ಮಂಡಳಿಯ ಅಭಿವೃದ್ಧಿಯ ಸದಸ್ಯರಾದರು. 1980ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದರು. ಆರಂಭದಲ್ಲಿಯೇ ಸಿದ್ದರಾಮಯ್ಯ ಅವರನ್ನು ಸೋಲು ರಾಜಕೀಯಕ್ಕೆ ವೆಲ್ಕಮ್ ಮಾಡಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.