ಮೇಷ ರಾಶಿ:- ಇಂದು ನೀವು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ. ವಿಶೇಷವಾಗಿ ನಿಮ್ಮ ಮೊಂಡುತನದ ಸ್ವಭಾವವು ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಮಾತನಾಡುವಾಗ ನಿಮ್ಮ ಮಾತಿನ ಬಗ್ಗೆ ಹಾಗೂ ಪದಬಳಕೆಯ ಬಗ್ಗೆ ಹೆಚ್ಚಿನ ಗಮನಹರಿಸುವುದು ಒಳ್ಳೆಯದು. ಕಚೇರಿಯ ಕೆಲಸದಲ್ಲಿ ಅವಸರವನ್ನು ಮಾಡಬೇಡಿ. ಇಂದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನವಾಗಿರುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಿಗ್ಗೆ 6:00 ಯಿಂದ 11:30ವರೆಗೆ.
ವೃಷಭ ರಾಶಿ:- ಕೌಟುಂಬಿಕವಾಗಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ನಿಮ್ಮ ಸಂಬಂಧವನ್ನು ಸರಿಪಡಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಗೆ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ನಿರುದ್ಯೋಗಿಗಳು ಇಂದು ಕೆಲಸದ ವಿಷಯವಾಗಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 5:00ಯಿಂದ ರಾತ್ರಿ 8:30ರ ವರೆಗೆ.
ಮಿಥುನ ರಾಶಿ:- ನಿಮ್ಮ ಸಂಗಾತಿಯನ್ನು ಗೌರವದಿಂದ ನೋಡಿಕೊಳ್ಳ ಬೇಕು. ಕಚೇರಿಯಲ್ಲಿ ಇಂದು ಕಠಿಣ ಕೆಲಸವನ್ನು ಕೊಡಬಹುದು. ಆದರೂ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸು ವುದರಿಂದ ನೀವು ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ವ್ಯಾಪಾರಸ್ಥರಿಗೆ ಎಂದು ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 5:30ರ ವರೆಗೆ.
ಕಟಕ ರಾಶಿ:- ಈ ದಿನ ನಿಮ್ಮ ಕೆಲಸದ ಜೊತೆ ನಿಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ. ಇಂದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರತಿಕೂಲ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯ ವರ್ತನೆ ನಿಮ್ಮ ಪ್ರೀತಿಯನ್ನು ಹೆಚ್ಚು ಮಾಡುತ್ತದೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ -ಹಸಿರು ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2:30 ವರೆಗೆ.
ಸಿಂಹ ರಾಶಿ:- ಈ ದಿನ ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಿ. ಮತ್ತು ನಿಮ್ಮ ಕೆಲಸದಲ್ಲಿ ಹೆಚ್ಚಿನ ಗಮನ ಹರಿಸಿ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಸುಧಾರಿಸಲು ಪ್ರಯತ್ನಿಸಿ. ವ್ಯಾಪಾರಿಗಳಿಗೆ ದೊಡ್ಡ ಹೂಡಿಕೆ ಪ್ರಾರಂಭ ಮಾಡಲು ಈ ದಿನ ಉತ್ತಮವಾದ ಅವಕಾಶ ಸಿಗುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ
ಕನ್ಯಾ ರಾಶಿ:- ಆರ್ಥಿಕವಾಗಿ ಈ ದಿನ ನಿಮಗೆ ನೆಮ್ಮದಿಯ ದಿನವಾಗಿರು ತ್ತದೆ. ಇಂದು ಹಣಕಾಸಿನ ಯಾವುದೇ ಪರಿಹಾರವನ್ನು ಪಡೆಯಬಹುದು. ಉದ್ಯೋಗಿಗಳಿಗೆ ವೇತನ ಹೆಚ್ಚಾಗುವ ಪ್ರಭಲ ಸಾಧ್ಯತೆ ಇದೆ. ವ್ಯಾಪಾರಿ ಗಳು ಇಂದು ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದು. ಇಂದು ನಿಮ್ಮ ಹಿರಿಯರ ಆಶೀರ್ವಾದ ಸಿಗುತ್ತದೆ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 5:30ರ ವರೆಗೆ.
ತುಲಾ ರಾಶಿ:- ಇಂದು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿದ್ದರೆ. ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಅತಿಯಾದ ಆತುರ ನಿಮಗೆ ಹಾನಿಯನ್ನು ಉಂಟು ಮಾಡಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಾತನ್ನು ನಿರ್ಲಕ್ಷ್ಯ ಮಾಡುವುದನ್ನು ತಪ್ಪಿಸಿ. ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಿಗ್ಗೆ 7:00ಯಿಂದ ಮಧ್ಯಾಹ್ನ 1 ಗಂಟೆಯವರೆಗೆ.
ವೃಶ್ಚಿಕ ರಾಶಿ:- ವ್ಯವಹಾರದಲ್ಲಿ ಬದಲಾವಣೆಯ ಸಮಯ ಅನುಕೂಲ ಕರವಾಗಿದೆ. ಪಾಲುಗಾರಿಕೆಯಲ್ಲಿ ಕೆಲವೊಂದಷ್ಟು ದೊಡ್ಡ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಉದ್ಯೋಗಿಗಳ ದಿನ ಸಾಮಾನ್ಯವಾಗಿರುತ್ತದೆ. ನೀವು ಇಂದು ಯಾವುದೇ ಕೆಲಸವನ್ನು ಅಡೆತಡೆ ಇಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.
ಧನಸ್ಸು ರಾಶಿ:- ನೀವು ಇಂದು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಯನ್ನು ತೋರಿಸಲು ಒಳ್ಳೆಯ ಅವಕಾಶ ಸಿಗುತ್ತದೆ. ವಿಶೇಷವಾಗಿ ಇಂದು ಉದ್ಯೋಗಿಗಳಿಗೆ ತುಂಬಾ ಉತ್ತಮವಾದ ದಿನವಾಗಿರುತ್ತದೆ. ಇಂದು ಯಾವುದೇ ಒಂದು ಪ್ರಮುಖ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಕಚೇರಿಯಲ್ಲಿ ಸಹಉದ್ಯೋಗಿಗಳು ನಿಮ್ಮನ್ನು ಹೊಗಳುತ್ತಾರೆ. ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.
ಮಕರ ರಾಶಿ:- ಕಚೇರಿಯಲ್ಲಿ ನಿಮ್ಮ ಸಹ ಉದ್ಯೋಗಿಗಳೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಕೆಲಸದ ಮೇಲೆ ಸಂಪೂರ್ಣವಾದ ಗಮನ ಹರಿಸುವುದು ಉತ್ತಮ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಇಂದು ಉತ್ತಮವಾದ ಆರ್ಥಿಕ ಲಾಭ ಗಳಿಸ ಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30ವರೆಗೆ.
ಕುಂಭ ರಾಶಿ:- ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಕೆಲಸ ಮಾಡುವವರು ಕೆಲಸದ ಹೊರೆಯನ್ನು ತಮ್ಮ ಮೇಲೆ ಅತಿಯಾಗಿ ಹಾಕಬೇಡಿ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣದ ದೃಷ್ಟಿಯಿಂದ ಈ ದಿನ ಒಳ್ಳೆಯ ದಿನವಾಗಿರುತ್ತದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 5:00 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಮೀನ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇಂದು ಬಹಳ ವಿಶೇಷವಾದ ದಿನವಾಗಿರುತ್ತದೆ. ಇಂದು ಕೆಲಸಕ್ಕೆ ಸಂಬಂಧಿಸಿ ದಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಇಂದು ಕೆಲಸ ಮಾಡುವ ಸ್ಥಳದಲ್ಲಿ ಬಹಳ ಉತ್ಸಾಹದಿಂದ ಇರುತ್ತೀರಿ. ನಿಮಗೆ ಬರುವ ಯಾವುದೇ ಸವಾಲನ್ನು ನೀವು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳಿಸುತ್ತೀರಿ. ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 4:30 ರಿಂದ ರಾತ್ರಿ 8:30ರ ವರೆಗೆ.