ಸರ್ಪದೋಷ ನಾಗದೋಷ ರಾಹುದೋಷ ಜಾತಕದಲ್ಲಿ ಇಷ್ಟೆಲ್ಲಾ ತೊಂದರೆಗಳು ಬರುತ್ತೆ..ಸರಳ ಪರಿಹಾರ ಇದೆ ನೋಡಿ

ಸರ್ಪದೋಷ, ನಾಗದೋಷ ಹಾಗೂ ರಾಹು ದೋಷಗಳು ಇದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಅವುಗಳ ಪರಿಹಾರಕ್ಕಾಗಿ ಈ ಪೂಜೆ ಮಾಡಿ…

WhatsApp Group Join Now
Telegram Group Join Now

ಸರ್ಪ ದೋಷ, ನಾಗದೋಷ ಹಾಗೂ ರಾಹು ದೋಷಗಳು ಇದ್ದರೆ ಅವರು ಜೀವನದಲ್ಲಿ ಬಹಳ ಕಷ್ಟವನ್ನು ಪಡುತ್ತಾರೆ. ಈ ದೋಷಗಳು ಅನೇಕ ಕಾರಣಗಳಿಂದ ಬರುತ್ತವೆ. ಮುಖ್ಯವಾಗಿ ಸರ್ಪಗಳಿಗೆ ಸಂಬಂಧಿಸಿದ ಹಾಗೆ ಈ ದೋಷಗಳು ಅಂಟಿಕೊಳ್ಳುತ್ತವೆ. ಈ ದೋಷ ಇರುವವರು ಏನು ತಪ್ಪು ಮಾಡದಿದ್ದರೂ ಅವರ ವಂಶದಲ್ಲಿ ಯಾರಾದರೂ ಸರ್ಪಗಳಿಗೆ ತೊಂದರೆ ಕೊಟ್ಟಿದ್ದರೆ, ಸಾತ್ವಿಕ ಸರ್ಪಗಳನ್ನು ಕೊಂದಿದ್ದರೆ ಅಥವಾ ಸರ್ಪಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಿಂಸಿಸಿದರೆ ಈ ಪಾಪ ಕಾಡುತ್ತದೆ.

ಯಾಕೆಂದರೆ ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಸರ್ಪಗಳನ್ನು ಕೂಡ ನಾವು ದೇವರ ರೂಪವಾಗಿ ಕಾಣುತ್ತೇವೆ. ಹಾಗಾಗಿ ಇವುಗಳಿಗೆ ತೊಂದರೆ ಕೊಟ್ಟಾಗ ದೋಷ ಕಾಡುತ್ತದೆ. ಗಾದೆ ಮಾತೊಂದು ಹೇಳುವಂತೆ ಹಿರಿಯ ನಾಗದ ನಂಜು, ಮರಿ ನಾಗನವರೆಗೂ ಎಂದರೆ ಮೂರು ನಾಲ್ಕು ತಲೆಮಾರು ಆದರೂ ಕೂಡ ನಾಗಗಳು ತಮ್ಮ ಹಿರಿಕರಿಗೆ ಆದ ತೊಂದರೆಗೆ ಸೇಡು ತೀರಿಸಿಕೊಳ್ಳುತ್ತವೆ. ಅದೇ ರೀತಿ 3-4 ತಲೆಮಾರಿನ ಹಿಂದಿನವರು ಸರ್ಪಗಳಿಗೆ ತೊಂದರೆ ಕೊಟ್ಟಿದ್ದರೂ ಆ ಶಾಪ ವಂಶ ಪಾರಂಪರ್ಯವಾಗಿ ಕಾಡುತ್ತದೆ.

ಒಂದು ವೇಳೆ ಯಾರಾದರೂ ಸರ್ಪವನ್ನು ಕೊಂದು ಹಾಕಿದ್ದಾಗ ಅದನ್ನು ನೋಡಿ ಅದಕ್ಕೆ ಸಂಸ್ಕಾರ ಕೊಡದೆ ದಾಟಿಕೊಂಡು ಬಂದಿದ್ದರೆ ಅಥವಾ ನೋಡಿಕೊಂಡು ಬಂದಿದ್ದರೆ ಕೂಡ ಅದು ಸರ್ಪದೋಷವಾಗಿ ಕಾಡುತ್ತದೆ. ಈ ರೀತಿ ದೋಷಗಳು ಬಂದಿದ್ದಾಗ ವಿವಾಹ ಯೋಗವು ಬೇಗನೆ ಕೂಡ ಕೂಡಿ ಬರುವುದಿಲ್ಲ, ಮದುವೆಯಾಗಿ ಹಲವು ವರ್ಷಗಳು ಆದರೂ ಸಂತಾನ ಭಾಗ್ಯ ಲಭಿಸುವುದಿಲ್ಲ.

ಜೊತೆಗೆ ಎಷ್ಟೇ ಸಂಪತ್ತಿದ್ದರೂ ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಮಯಗಳಲ್ಲಿ ಸೂಕ್ತ ಜೋತಿಷ್ಯರ ಬಳಿ ಹೋಗಿ ಜಾತಕವನ್ನು ಪರಿಶೀಲನೆ ಮಾಡಿಸಿದಾಗ ನಮ್ಮ ಜಾತಕದಲ್ಲಿ ಸರ್ಪದೋಷ, ನಾಗದೋಷ, ರಾಹು ದೋಷ ಇದೆಯೇ ಎನ್ನುವುದು ತಿಳಿಯುತ್ತದೆ. ಒಂದು ವೇಳೆ ದೋಷಗಳು ಇದ್ದರೆ ಪರಿಹಾರವನ್ನು ಕೂಡ ತಿಳಿಸುತ್ತಾರೆ.

ಅದಕ್ಕೆ ಯಾವ ಪರಿಹಾರ ಮಾಡಬೇಕು ಅಥವಾ ದೇವಾಲಯಗಳಲ್ಲಿ ಹೋಗಿ ವಿಶೇಷವಾಗಿ ಪೂಜೆ ಹೋಮಗಳನ್ನು ಮಾಡಿಸಬೇಕು, ಯಾವ ವ್ರತ ಆಚರಣೆ ಮಾಡಬೇಕು ಎಂದು ಜ್ಯೋತಿಷ್ಯರು ತಿಳಿಸುತ್ತಾರೆ. ಅವುಗಳನ್ನು ಪಾಲನೆ ಮಾಡಿ ನಿಮ್ಮ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಒಂದು ವೇಳೆ ಆ ರೀತಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಮನೆಯಲ್ಲೇ ಸರ್ಪದೋಷ ನಿವಾರಣೆ ಮಾಡಿಕೊಳ್ಳುವ ಮನಸಿದ್ದರೆ ಅದಕ್ಕೂ ಕೂಡ ಪರಿಹಾರ ಇದೆ.

ಮನೆಯಲ್ಲಿಯೇ ಭಕ್ತಿ ಪೂರ್ವಕವಾಗಿ ಶ್ರದ್ಧೆಯಿಂದ ನಾಗದೇವರ ಆವಾಹಣೆ ಮಾಡಿ ನಾಗದೇವರ ರಂಗೋಲಿ ಬಿಡುವ ಮೂಲಕ ಅವರ ಶ್ಲೋಕಗಳನ್ನು ಹೇಳುವ ಮೂಲಕ ಸರಳ ಉಪವಾಸದ ಆಚರಣೆ ಮಾಡುವ ಮೂಲಕ ದೋಷವನ್ನು ಪರಿಹಾರ ಮಾಡಿಕೊಳ್ಳಬಹುದು. ಅದರ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]