ಬೇಕು ಅಂತಲೇ ಮಾಡಿ ಬಿಟ್ಟರೆ ಒಡಿಸ್ಸಾ ರೈಲು ಅಪಘಾತ? ಆ ರೈಲು ದುರಂತದ ಹಿಂದಿದ್ಯಾ ಷಡ್ಯಂತ್ರ?
ಶತಮಾನದ ಘೋರ ರೈಲು ದುರಂತ ನಡೆದು ದಿನಗಳೇ ಕಳೆಯುತ್ತಿದೆ. ಆದರೆ 275 ಮಂದಿಯನ್ನು ಬಲಿ ತೆಗೆದುಕೊಂಡ ಈ ಘನ ಘೋರ ದುರಂತಕ್ಕೆ ನಿಖರ ಕಾರಣ ಏನು ಅನ್ನೋದು ಇಲ್ಲಿವರೆಗೆ ಸ್ಪಷ್ಟವಾಗಿಲ್ಲ. ಈ ನಡುವೆ ಹಲವಾರು ಊಹಾಪೋಹಗಳು ಹರಿದಾಡುವುದಕ್ಕೆ ಶುರುವಾಗಿದೆ.
ಆರಂಭದಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತಾ ಇದ್ದೇವೆ ಈ ಅನುಮಾನವನ್ನ ವ್ಯಕ್ತಪಡಿಸಿರುವುದು ರೈಲ್ವೆ ಸಚಿವರು ಅವರೇ ಹೇಳಿರುವ ಪ್ರಕಾರ ಈ ದುರ್ಘಟನೆಯ ಹಿಂದೆ ಕಾಣದ ಕೈಗಳ ಶಂಕೆ ಇದೆ. ನೂರಾರು ಜನರನ್ನ ಬಲಿ ತೆಗೆದುಕೊಂಡ ರೈಲು ದುರಂತದ ಹಿಂದೆ ದುಷ್ಕೃತ್ಯ ಇದೆ. ಅಷ್ಟಕ್ಕೂ ರೈಲ್ವೇ ಸಚಿವರು ಇಂಥದ್ದೊಂದು ಅನುಮಾನ ವ್ಯಕ್ತಪಡಿಸಿರುವುದು ಯಾಕೆ. ಈ ರೈಲು ಅವಘಡದ ಹಿಂದೆ ಇರುವ ಕಾಣದ ಕೈಗಳು ಯಾವುದು.
ಹೌದು ಪ್ರಾಥಮಿಕ ತನಿಖೆಯಲ್ಲಿ ಬಯಲಾದ ಆ ಸತ್ಯವಾದರೂ ಏನು ಎಂಬುದನ್ನು ಈ ಕೆಳಗೆ ಈ ದಿನ ತಿಳಿಯುತ್ತಾ ಹೋಗೋಣ. ಆಕ್ಸಿಡೆಂಟ್ ಎನ್ನುವ ಪದದ ಅರ್ಥ ಹುಡುಕಿದರೆ ಅಲ್ಲಿ ಅಚಾನಕ್ಕಾಗಿ ಯಾವುದೇ ಉದ್ದೇಶಪೂರ್ವಕವಲ್ಲದೆ ನಡೆಯುವ ಘಟನೆ ಎಂಬ ಉತ್ತರ ಬರುತ್ತದೆ. ಆಕ್ಸಿಡೆಂಟ್ ಅನ್ನೋದೆ ಹಾಗೆ ಅದು ಕ್ಷಣಾರ್ಧದಲ್ಲಿಯೇ ಸಂಭವಿಸಿ ಬಿಡುತ್ತದೆ. ಕೆಲವರ ತಪ್ಪಿನಿಂದ ಆಕ್ಸಿಡೆಂಟ್ ಆದರೆ.
ಇನ್ನು ಕೆಲವೊಬ್ಬರು ಯಾವುದೇ ಕಾರಣವಿಲ್ಲದೆ ಆಕ್ಸಿಡೆಂಟ್ ಗೆ ತುತ್ತಾಗು ತ್ತಾರೆ. ಇದೇ ರೀತಿಯ ಒಂದು ಆಕ್ಸಿಡೆಂಟ್ ಒಡಿಸ್ಸಾದಲ್ಲೂ ಕೂಡ ನಡೆಯುತ್ತದೆ. ಅದು ರೈಲು ಆಕ್ಸಿಡೆಂಟ್. ಆರಂಭದಲ್ಲಿ ಇದನ್ನು ಆಕ್ಸಿಡೆಂಟ್ ಎಂದೇ ಕರೆಯಬೇಕು. ಒಂದು ರೈಲು ಅಳಿತಪ್ಪುವುದು ಕೆಲವೊಮ್ಮೆ ಆಗುತ್ತದೆ. ರೈಲುಗಳ ಮುಖಾಮುಖಿ ಡಿಕ್ಕಿ ಆಗಿದ್ದು ಸಹ ನಡೆದಿದೆ. ಆದರೆ ಒಂದೇ ಒಂದು ಸಲ ಮೂರು ರೈಲುಗಳು ದುರಂತಕ್ಕೆ ಈಡಾಗುವುದು.
ಅಷ್ಟು ಸುಲಭವಾಗಿ ಆಗುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಈ ರೈಲು ದುರಂತದ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದೆ. ಈ ರೀತಿ ಆದಾಗ ಜನಸಾಮಾನ್ಯರು ಒಂದು ಅನುಮಾನವನ್ನು ಹೊರ ಸೂಸು ವುದು ಸಾಮಾನ್ಯ. ಆದರೆ ಈ ದುರಂತದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿರುವುದು ರೈಲ್ವೆ ಸಚಿವರು. ಕೇಂದ್ರ ರೈಲ್ವೆ ಸಚಿವ ವೈಷ್ಣವ್ ಈ ದುರಂತದ ಹಿಂದೆ.
ಕಾಣದ ಕೈಗಳ ಕೈವಾಡ ಇದೆ ಎಂದು ಸ್ಪೋಟಕ ಸಂಗತಿಗಳನ್ನು ಬಿಚ್ಚಿಟ್ಟಿ ದ್ದಾರೆ. ದುರಂತಕ್ಕೆ ಕಾರಣ ಏನು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಮೊದಲನೇ ಕಾರಣ ಸಿಗ್ನಲ್. ಎರಡನೇ ಕಾರಣ ಇಂಟರ್ಲಾಕಿಂಗ್ ಸಮಸ್ಯೆ. ಕೊನೆ ಕ್ಷಣದಲ್ಲಿ ಇಂಟರ್ಲಾಕಿಂಗ್ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿತ್ತು. ಆದರೆ ಇದನ್ನು ಬದಲಾವಣೆ ಮಾಡಿದ್ದು ಯಾರು ಅಂತ ಮಾತ್ರ ಈಗಲೂ ಕೂಡ ನಿಗೂಢವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.