ಅಡುಗೆ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ಎರಡು ವಸ್ತುಗಳನ್ನು ನೇತು ಹಾಕಲೆಬಾರದು ಎಚ್ಚರ..

ಗೃಹಿಣಿಯರೆ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಏಳಿಗೆ ಆಗೋದಿಲ್ಲ ಎನ್ನುವ ಕುತೂಹಲಕಾರಿ ಮಾಹಿತಿ ನಿಮಗಾಗಿ.ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕತ್ತರಿ,ಚಾಕು ಅಥವಾ ಯಾವುದೇ ಹರಿತವಾದ ಚೂಪಾದ ವಸ್ತುಗಳನ್ನು ಅಡುಗೆ ಮನೆಯ ಗೋಡೆಯ ಮೇಲೆ ತೂಗು ಹಾಕಬಾರದು ಅಥವಾ ಕಾಣುವಂತೆ ಸೆಲ್ಪ್ ಮೇಲೆ ಇಡುವುದು ಈ ರೀತಿ ಮಾಡಬಾರದು.ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ.

WhatsApp Group Join Now
Telegram Group Join Now

ಸದಾ ಜಗಳ ಮಾನಸಿಕ ಕಿರಿಕಿರಿ ನೆಮ್ಮದಿ ಇಲ್ಲದ ವಾತಾವರಣ ಹಣದ ಸಮಸ್ಯೆ ಉಂಟಾಗುತ್ತವೆ. ಆದ್ದರಿಂದ ಇಂತಹ ಹರಿತವಾದ ವಸ್ತುಗಳನ್ನು ಯಾರಿಗೂ ಕಾಣದ ರೀತಿ ಇಡುವುದು ಬಹಳ ಮುಖ್ಯ.ಇನ್ನೊಂದು ಮುಖ್ಯವಾದ ವಿಷಯವೆಂದರೆ ಅಡುಗೆ ಮನೆಯಲ್ಲಿ ಬಳಸುವ ಚಪಾತಿ ಒತ್ತುವ ಮಣೆ ಹಾಗೂ ಲಟ್ಟಣಿಗೆ ಸದ್ದು ಮಾಡಬಾರದು.ಮತ್ತು ಕಪ್ಪು ಬಣ್ಣದ ಲಟ್ಟಣಿಗೆ ಹಾಗೂ ಮಣೆಯನ್ನು ಬಳಸಬಾರದು ಇದು ಶನಿದೋಷ ಉಂಟುಮಾಡುವುದರ ಜೊತೆಗೆ ದುರಾದೃಷ್ಟ ತರುತ್ತದೆ.ಹಾಳಾದ ಮಣೆ ಲಟ್ಟಣಿಗೆ ಸದ್ದು ಮಾಡುವುದು ಸಹಜ ಆದಷ್ಟು ಬೇಗ ಅದನ್ನು ಬದಲಾಯಿಸಿ ಇಲ್ಲದಿದ್ದರೆ ಸಮಸ್ಯೆ ತಲೆದೋರುತ್ತದೆ.ಶಬ್ದಕ್ಕೆ ಕಿರಿಕಿರಿ ಜಗಳ ಆರ್ಥಿಕ ನಷ್ಟ ಉಂಟಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಲಟ್ಟಣಿಗೆ ಮಣೆ ಕೊಳ್ಳಲು ಬುಧವಾರ ಗುರುವಾರ ಶುಭ.ಶನಿವಾರ ಸೋಮವಾರ ಅಶುಭ.ಅಡುಗೆ ಮನೆಯಲ್ಲಿ ಯಾವಾಗಲೂ ಏನಾದರು ಸದ್ದು ಗದ್ದಲ ಇದ್ದದ್ದೇ ಜೊತೆಗೆ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಈರುಳ್ಳಿ ಬಳಸಲಾಗುತ್ತದೆ ‌ಮತ್ತು ಮಾಂಸ ಮೀನು ಮುಂತಾದ ತಾಮಸಿಕ ಆಹಾರ ತಯಾರಿಸಲಾಗುತ್ತದೆ ಮತ್ತು ಎಂಜಲು ಪಾತ್ರೆ ಇರುತ್ತದೆ ಆದ್ದರಿಂದ ದೇವರ ಪೋಟೊ ಯಾವುದೇ ಕಾರಣಕ್ಕೂ ಇಡಬಾರದು ಎಚ್ಚರ‌.

ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಸದಾ ಸ್ವಚ್ಚವಾಗಿಡಬೇಕು.ಹಾಲು ಉಕ್ಕಿ ಚೆಲ್ಲಿದರೆ ತಕ್ಷಣವೇ ಕ್ಲೀನ್ ಮಾಡಬೇಕು ಇದರಿಂದ ಸದಾ ಕಾಲ ಸಮೃದ್ದಿ ಇರುತ್ತದೆ.ಅಡುಗೆ ಮನೆಯಲ್ಲಿ ಕುಳಿತು ಆಹಾರ ಸೇವನೆ ಮಾಡುವುದರಿಂದ ಅನೇಕ ಗ್ರಹದೋಷಗಳಿಂದ ಮುಕ್ತಿಯನ್ನು ನೀಡುತ್ತದೆ.ಆದರೆ ಈ ವಿಷಯಗಳನ್ನು ನೆನಪಿಡಿ ಅಡುಗೆ ಮನೆಯ ಮಧ್ಯಬಾಗದಲ್ಲಿ ಊಟ ಮಾಡಬಾರದು.ಸ್ವಲ್ಪ ದೂರ ಕುಳಿತು ಊಟ ಮಾಡಿ ಅಲ್ಲದೇ ತಿನ್ನುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಬೇಡಿ..

ಇದು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿಗಳನ್ನು ಧರಿಸಬಾರದು ಇದರಿಂದ ವ್ಯಕ್ತಿಯು ಆರ್ಥಿಕ ನಷ್ಟ ಅನುಭವಿಸಬಹುದು ಹಾಗೂ ತಾಯಿ ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ.ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ.

[irp]