ಚೈತ್ರ ಕುಂದಾಪುರ್ ಗೂ ಹಾಲ ಶ್ರೀ ಸ್ವಾಮಿಜಿಗೂ ಏನು ಲಿಂಕ್? ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡ್ತೀನಿ ಅಂತ ಚಳ್ಳೆ ಹಣ್ಣು ತಿನ್ನಿಸಿದ ಚೈತ್ರ ಕುಂದಾಪುರ ಇವತ್ತು ಸಿಸಿಡಿ ಕಸ್ಟಡಿಯಲ್ಲಿ ತೊಳೆದಾಡುತ್ತಿದ್ದಾರೆ. ಹಾಗಾದ್ರೆ ಈ ಚೈತ್ರ ಕುಂದಾಪುರ ಯಾರು? ಈಕೆ ಬೆಳೆದು ಬಂದ ಹಾದಿ ಹೇಗಿದೆ? ಪತ್ರಕರ್ತೆ ಒಬ್ಬರು ಹಿಂದೂ ಲೇಡಿ ಫೈಯರ್ ಬ್ರಾಂಡ್ ಆಗಿದ್ದು ಹೇಗೆ? ಇವಳು ಮಾಡಿಕೊಂಡ ವಿವಾದಗಳು ಎಷ್ಟು ಈಕೆಯ ಜಾತಿ ಯಾವುದು? ಎಲ್ಲವನ್ನು ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
1996ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಜನಿಸಿದರೂ ಇವರಿಗೆ ಈಗ 27 ವರ್ಷ ವಯಸ್ಸಾಗಿದೆ. ತಂದೆ ಹೈನುಗಾರಿಕೆ ಮಾಡಿಕೊಂಡಿದ್ದರೆ ತಾಯಿ ರೋಹಿಣಿ ಗೃಹಿಣಿಯಾಗಿದ್ದಾರೆ. ಇವರದು ಬಡ ಕುಟುಂಬವಾಗಿತ್ತು. ಚೈತ್ರಾಗೆ ಓರ್ವ ತಂಗಿ ಕೂಡ ಇದ್ದಾರೆ ಕುಂದಾಪುರದ ಸರ್ಕಾರಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಚೈತ್ರ ತೆಕ್ಕಟ್ಟೆಯಲ್ಲೇ ಇರೋ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ರು.
ಮಂಗಳೂರು ಯುನಿವರ್ಸಿಟಿಯಲ್ಲಿ ಪದವಿಯನ್ನು ಮುಗಿಸಿದರು. ಇವರು ಏ ವಿ ಪಿ ಯಲ್ಲಿ ಆಕ್ಟಿವ್ ಆಗಿ ಇರುತ್ತಿದ್ದರು. ಇವರು ಪದವಿಯನ್ನು ಓದುತ್ತಿದ್ದಾಗಲೇ ಹಿಂದೂ ಸಂಘಟನೆಗಳಲ್ಲಿ ಭಾಗವಹಿಸುತ್ತಿದ್ದರು ಹಾಗೆ ತಮ್ಮನ್ನ ಗುರುತಿಸಿಕೊಂಡಿದ್ದರು
ಎಬಿವಿಪಿಯನ್ನ ಸೇರ್ಕೊಂಡು ಕೆಲವು ಹೋರಾಟಗಳಲ್ಲಿ ಭಾಗಿಯಾದರು. ಎಬಿವಿಪಿಯಲ್ಲಿ ಗುರುತಿಸಿಕೊಂಡ ಈಕೆ ಹಲವು ಹುದ್ದೆಗಳನ್ನು ಕೂಡ ನಿಭಾಯಿಸಿದ್ರು.
ಸಂಘಟನೆಯ ಕಾರ್ಯಕಾರಿಣಿ ರಾಷ್ಟ್ರೀಯ ಹುದ್ದೆಯವರೆಗೂ ಕೂಡ ಇವರು ಬೆಳೆದರು ಕಾಲೇಜು ಶಿಕ್ಷಣ ಮುಗಿದ ಬಳಿಕ ಎಬಿವಿಪಿಯಿಂದ ಹಿಂದೆ ಸರಿದರು ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ರಕರ್ತೆಯಾಗಿ ವೃತ್ತಿ ಜೀವನವನ್ನು ಶುರು ಮಾಡಿದ್ರು. ಕಾಲೇಜಿನಲ್ಲಿ ಓದುತ್ತಿರುವಾಗಲೇ ನಿರೂಪಕಿಯಾಗಿದ್ದ ಇವರು ಲೋಕಲ್ ಚಾನೆಲ್ ನಲ್ಲಿ ನಿರೂಪಣೆಯನ್ನು ಮಾಡುತ್ತಿದ್ದರು.
ಇದರಿಂದ ಚೈತ್ರ ಅವರು ಕರಾವಳಿ ಭಾಗದಲ್ಲಿ ಫುಲ್ ಫೇಮಸ್ ಆದ್ರು. ಅಷ್ಟೇ ಅಲ್ಲದೆ ಉದಯವಾಣಿ ಪತ್ರಿಕೆಯಲ್ಲೂ ಕೂಡ ಉಪಸಂಪಾದಕಾಗಿ ಕೆಲಸವನ್ನು ಮಾಡಿದರು. ಕಾಲೇಜಿನಲ್ಲೂ ಕೂಡ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ ಇವರು ಪತ್ರಕರ್ತೆಯಾಗಿ ಎಷ್ಟು ಫೇಮಸ್ ಆಗಿದ್ರು ಅಂದ್ರೆ ಯುವ ಮಾಧ್ಯಮ ಪ್ರಶಸ್ತಿಯೂ ಕೂಡ ಇವರ ಮುಡಿಗೇರಿತ್ತು.
ಇಷ್ಟು ವರ್ಷಗಳಿಂದ ಕೆಲಸ ಮಾಡಿದ್ದಕ್ಕೆ ಅದನ್ನು ಮುಂದುವರಿಸಿಕೊಂಡು ಹೋದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಇಂದು ಫುಲ್ ಟೈಮ್ ಜರ್ನಲ್ ಇಷ್ಟ ಆಗಿ ಗೌರವಯುತವಾಗಿ ಬದುಕಬಹುದಿತ್ತು. ಆಕೆಗೆ ಪತ್ರಕರ್ತರ ಜೀವನ ಅಷ್ಟಾಗಿ ಹೋಗಿ ಬರಲಿಲ್ಲ. ಹಾಗಾಗಿ ಕೆಲಸ ಬಿಟ್ಟುಬಿಟ್ಟರು ಮತ್ತೆ ಹಿಂದು ಪರಿಷತ್ ಸದಸ್ಯೆಯಾಗಿ ಸೇರಿಕೊಂಡರು .
ಪತ್ರಕರ್ತೆಯ ಕೆಲಸಕ್ಕೆ ಗುಡ್ ಬೈ ಹೇಳಿದ ಚೈತ್ರ ಅವರು ಮತ್ತೆ ಹಿಂದು ಸಂಘಟನೆಯಲ್ಲಿ ತಮ್ಮನ್ನ ತಾವು ಪೂರ್ತಿಯಾಗಿ ತೊಡಗಿಸಿಕೊಂಡ್ರು. ತಮ್ಮ ಪ್ರಕಾರವಾದ ಭಾಷಣಗಳಿಂದ ರಾಜ್ಯದ ಹಿಂದೂ ಸಂಘಟನೆಗಳು ತಿರುಗಿ ನೋಡುವಂತೆ ಮಾಡಿದರು. ಮಹಿಳೆಯರ ಪೈಕಿ ಇತರ ಕಾರ ಕಾರವಾಗಿ ಮಾತನಾಡೋ ಮಹಿಳೆಯರು ಯಾರು ಇರಲಿಲ್ಲ. ಇವರ ಆಗಮನದಿಂದ ಆ ಕೊರತೆಯೂ ಕೂಡ ನೀಗಿತ್ತು. ಬಜರಂಗದಳವನ್ನ ಸೇರಿದ ನಂತರ ಇವರು ವಿವಿಧ ಜಿಲ್ಲೆಗಳಿಗೆ ಹೋಗಿ ಹಿಂದುತ್ವದ ಬಗ್ಗೆ ಮುಸ್ಲಿಂ ವಿರುದ್ಧದ ಬಗ್ಗೆ ಭಾಷಣವನ್ನು ಮಾಡುತ್ತಿದ್ದರು.
ಹಿಂದುತ್ವದ ಬಗ್ಗೆ ಕಾರ್ಯಕ್ರಮಗಳು ನಡೆದಾಗ ಇವರು ಪ್ರಮುಖ ಅತಿಥಿಯಾಗಿ ಇರುತ್ತಿದ್ದರು. ಇವರಿಂದ ಏನು ಆಗ್ತಿರ್ಲಿಲ್ಲ ಆದರೆ ಬರ್ತಾ ಬರ್ತಾ ತಮ್ಮ ನಾಲಿಗೆಯನ್ನು ಹರಿ ಬಿಡೋದಕ್ಕೆ ಶುರು ಮಾಡಿದರು. ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಪ್ರೇಮ ಪಾಶ ಅನ್ನೋ ಪುಸ್ತಕವನ್ನು ಕೂಡ ಬರೆದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.