ನಮ್ಮ ಊರಿನ 40 ವರ್ಷದ ಪಟೇಲ ಪ್ರತಿ ವರ್ಷ ಕಾರ್ತಿಕ ಹುಣ್ಣಿಮೆಯ ದಿನದಂದು ಒಂದು ಸುಂದರವಾದ ಹುಡುಗಿಯನ್ನ ಮದುವೆಯಾಗುತ್ತಿದ್ದ ಮದುವೆಯಾದ ಮಾರನೇ ದಿನಕ್ಕೆ ಅವಳಿಗೆ ಡೈವೋರ್ಸ್ ಕೊಟ್ಟು ಬಿಟ್ಟು ಸಾಕಷ್ಟು ಐಶ್ವರ್ಯವನ್ನು ಕೊಡುತ್ತಿದ್ದನು. ಒಂದು ದಿನ ನನ್ನ ಮೇಲೆ ಅವನ ಕಣ್ಣು ಬಿದ್ದಿತ್ತು ನನ್ನನ್ನು ಮದುವೆಯಾಗಲು ಅವನ ತಯಾರಾದ ನನಗೆ ಇಷ್ಟವಿಲ್ಲ ಈಗಾಗಲೇ ನಾನು ಬೇರೆ ಹುಡುಗನನ್ನ ಪ್ರೀತಿಸಿದ್ದೇನೆ ಆದರೆ ತಂದೆಯ ಕಣ್ಣೀರಿನ ಮುಂದೆ ನಾನು ತಲೆಬಾಗಬೇಕಾಗಿತ್ತು. ದುಡ್ಡಿಗೋಸ್ಕರ ಆ ವಯ್ಯಾದ ಪಟೇಲನನ್ನು ಮದುವೆಯಾಗಲೇಬೇಕಿತ್ತು ಆದರೆ ಮುಂದೆ ನಡೆದದ್ದು ದುರಂತ.
ನನ್ನ ಹೆಸರು ಕಾಂಚನ ಅಪ್ಪ ಅಮ್ಮನ ಮೊದಲನೇ ಮಗಳು ನನ್ನ ಹಿಂದೆ ಮೂರು ಜನ ತಂಗೆಯರಿದ್ದಾರೆ ನಮ್ಮದು ಬಡ ಕುಟುಂಬ ಅಪ್ಪ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ನಾನು ಅಮ್ಮ ತಂಗಿಯರು ಈ ಹಳ್ಳಿಯಲ್ಲಿ ತಾತನ ಮನೆಯಲ್ಲಿ ಇದ್ದೇವೆ ದಿನಕ್ಕೆರಡು ಹೊತ್ತು ಊಟ ಮಾಡಿದರೆ ಅಂದು ನಮಗೆ ಹಬ್ಬ ಅಪ್ಪನ ಸಂಪಾದನೆ ತೀರ ಕಡಿಮೆ ಮನೆ ಮಂದಿಯಲ್ಲ ಅಜ್ಜಿ ತಾತ ಎಲ್ಲರ ಜವಾಬ್ದಾರಿ ಕೂಡ ಅವರ ಮೇಲೆ ಇತ್ತು ಅವರಿಗೆ ಸಹಾಯ ಮಾಡಲು ನಾನು ಕೆಲವೊಮ್ಮೆ ಅಕ್ಕಪಕ್ಕದ ಮನೆಗಳಲ್ಲಿ ಕ್ಲೀನಿಂಗ್ ಕೆಲಸವನ್ನು ಮಾಡುತ್ತಿದೆ ಅದು ಅಮ್ಮನಿಗೆ ತಿಳಿಯದೆ ಈ ರೀತಿ ಬಂದ ದುಡ್ಡಿನಿಂದ ತಂಗೇರಿಗೆ ಮತ್ತು ನನಗೆ ತಕ್ಕಮಟ್ಟಿಗೆ ಫೀಸ್ ಅನ್ನು ಕಟ್ಟಿಕೊಳ್ಳುತ್ತಿದ್ದೆ ತಂದೆ ತಾಯಿಗೆ ಹೊರೆಯಾಗಬಾರದು ಅಂತ ಓದುತ್ತಿದ್ದೆ ಅದಕ್ಕೆ ತಕ್ಕಂತೆ ಒಳ್ಳೆಯ ಅಂಕಗಳು ಬರುತ್ತಿತ್ತು.
ಒಂದು ಭಾನುವಾರ ನನ್ನ ಗೆಳತಿ ಮಾನಸಿ ಬಂದು ನಾವಿಬ್ಬರು ಬಾ ಮದುವೆಗೆ ಹೋಗೋಣ ಅಂತ ಕರೆದುಕೊಂಡು ಹೋದಳು. ಅಮ್ಮನ ಹತ್ತಿರ ಪರಮೇಶ್ ಅನ್ನು ತೆಗೆದುಕೊಂಡಾಗ ಆಗ ನಾನು ಹೇಳಿದೆ ಯಾರ ಮದುವೆ ನನ್ನನ್ನು ಕರೆದಿಲ್ಲ ನಾನು ಏಕೆ ಮದುವೆಗೆ ಬರಲಿ ಅಂತ ಆಗ ಮಾನಸಿ ಹೇಳಿದಳು ಈ ಮದುವೆಗೆ ಯಾರು ಯಾರನ್ನು ಕರೆಯುವುದಿಲ್ಲ ಎಲ್ಲರೂ ಹೋಗಬಹುದು ಇದು ಊರಿನ ಪಟೇಲ ಮದುವೆ ಎಷ್ಟು ಗ್ರಾಂಡ್ ಆಗಿ ಮದುವೆ ಮಾಡಿರುತ್ತಾರೆ. ಗೊತ್ತಾ ಅಂತ ಹೇಳಿದಳು ಆಗ ಮದುವೆ ಹುಡುಗಿಯನ್ನು ನೋಡಿ ತುಂಬಾ ಖುಷಿಯಾಯಿತು ದೇವಲೋಕದ ಅಪ್ಸರೆಯಂತೆ ಹುಡುಗಿ ಇದ್ದಳು ಹುಡುಗ ಅಂದರೆ ನಮ್ಮ ಊರಿನ ಪಟೇಲ ಮಾಧ್ಯಮ ವಯಸ್ಸಿನವನು ನನಗೆ ತುಂಬಾ ಬೇಜಾರಾಯ್ತು ಅವರಿಬ್ಬರ ಜೋಡಿಯನ್ನ ನೋಡಿ ನನ್ನ ಮನಸ್ಸನ್ನು ಅರಿತ ಮಾನಸಿ ದಡ್ಡಿ ಇದು ಶಾಶ್ವತವಾದ ಮದುವೆ ಅಲ್ಲ ಒಂದು ದಿನದ ಮದುವೆ ಅಷ್ಟೇ ಅಂತ ಹೇಳಿದಳು. ಅವಳ ಮಾತನ್ನು ಕೇಳಿ ನನಗೆ ಆಶ್ಚರ್ಯವಾಯಿತು ಅಂದರೆ ಕೇಳಿದೆ ಆಗ ಅವಳು ಹೇಳಿದಳು.
ಆ ಪಟೇಲ ಪ್ರತಿ ಕಾರ್ತಿಕ ಮಾಸದಲ್ಲೂ ಒಂದು ಸುಂದರವಾದ ಹುಡುಗಿಯ ಜೊತೆ ಮದುವೆ ಆಗುತ್ತಾನೆ. ಮಾರನೇ ದಿನ ಹುಡುಗಿಗೆ ಡೈವರ್ಸ್ ಕೊಟ್ಟು ಅವಳಿಗೆ ಬೇಕಾದಷ್ಟು ಐಶ್ವರ್ಯ ಆಸ್ತಿ ಒಡವೆಯನ್ನು ಕೊಟ್ಟು ಮನೆಯಿಂದ ಖುಷಿಯಿಂದ ಕಳಿಸುತ್ತಾನೆ. ಅವನು ಮದುವೆಯಾಗುವುದು ಕೂಡ ಬಡವರ ಮನೆಯ ಹಣದ ಅವಶ್ಯಕತೆ ಇರುವ ಹೆಣ್ಣು ಮಕ್ಕಳನ್ನು ಆದರೆ ಆ ಒಂದು ರಾತ್ರಿಯೇನು ನಡೆಯುತ್ತೆ ಅಂತ ಗೊತ್ತಾಗುವುದಿಲ್ಲ ಮಾರನೇ ದಿನ ಮಹಾಲಕ್ಷ್ಮಿಯಂತೆ ತಾಯಿ ಮನೆಗೆ ಆ ಹೆಣ್ಣು ಮಗಳು ಎಲ್ಲಾ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾಳೆ. ಇದರಿಂದ ಹುಡುಗಿಯು ಖುಷಿಯಾಗಿರುತ್ತಾಳೆ. ಅಯ್ಯಪ್ಪನ ಖುಷಿ ಏನು ಅಂತ ಇನ್ನೂ ಕೂಡ ಯಾರಿಗೂ ಅರ್ಥವಾಗುತ್ತಿಲ್ಲ ಅದೆಲ್ಲ ಒಂದು ದೊಡ್ಡ ರಹಸ್ಯ ಅಂತ ತಿಳಿಯುತ್ತದೆ ಹುಡುಗೀರು ಕೂಡ ಏನು ಹೇಳುವುದಿಲ್ಲ ಈ ಪಟೇಲನ್ನು ಏನು ಹೇಳುವುದಿಲ್ಲ ಇನ್ನು ನಮಗೇನು ಇದರ ಚಿಂತೆ ವರ್ಷಕ್ಕೆ ಒಂದು ಸಲ ಒಳ್ಳೆಯ ಊಟವನ್ನು ಹಾಕುತ್ತಾರೆ ಊಟ ಮಾಡುವುದು ಅಷ್ಟೇ ನಮ್ಮ ಕೆಲಸ ಅಂದಹಾಗೆ ನೀನು ತುಂಬಾ ಸುಂದರವಾಗಿದ್ದೀಯ ಪಟೇಲ ಸುಂದರವಾದ ಹುಡುಗಿಯರನ್ನ ಕರೆದುಕೊಂಡು ಮದುವೆಯಾಗುವುದು ನಿನ್ನ ಮುಖವನ್ನು ಮುಚ್ಚಿಕೊಂಡು ಓಡಾಡೋ ಅಂತ ಮಾನಸಿ ಹೇಳಿದಳು ಆಗ ನನಗೆ ಇನ್ನು ಭಯವಾಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.