ಇಂದು ನಾವು ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ. ಇದು ಕನಕಪುರದಿಂದ ಆರು ಕಿಲೋಮೀಟರ್ ದೂರದಲ್ಲಿದೆ. ಮೇನ್ ರೋಡಿನಲ್ಲೇ ಈ ದೇವಾಲಯ ಇದೆ. ಈ ದೇವಸ್ಥಾನದಲ್ಲಿ ನೀವು ಏನೇ ವರ ಕೇಳಿದರು 24 ಗಂಟೆ ಒಳಗೆ ವರ ಕೊಡುವಂತಹ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ.
ಇಲ್ಲಿ ನೀವು ಏನು ಬೇಡಿಕೊಂಡು ಹೋದರು ಅಂದು ರಾತ್ರಿ ಕನಸಿನಲ್ಲಿ ಬಂದು ನಿಮಗೆ ಆಶೀರ್ವಾದ ಮಾಡಿ ನಿಮ್ಮ ಬಾಳನ್ನು ಬೆಳಗುವಂತೆ ದೇವಸ್ಥಾನ. ದೇವಸ್ಥಾನದಲ್ಲಿ ಏನು ವಿಶೇಷತೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ಬರುವಾಗ ಕನಕಪುರ ಮಾರ್ಗವಾಗಿ ಬಂದು ದೊಡ್ಡಾಲಳ್ಳಿ ಮಾರ್ಗವಾಗಿ ಬಂದರೆ ಕನಕಪುರ ದಿಂದ 6 ಕಿಲೋಮೀಟರ್.
ಈ ದೇವಸ್ಥಾನ ಒಬ್ಬ ರೈತನ ಮನೆಯಲ್ಲಿ ನೆಲೆಗೊಂಡಿರುವಂತಹ ದೇವಸ್ಥಾನ. ಇಂದು ದೊಡ್ಡ ದೇವಾಲಯವಾಗಿ ಬೆಳೆದು ನಿಂತಿದೆ. ಮೊದಲು ಇದು ಸಣ್ಣ ದೇವಾಲಯವಾಗಿತ್ತು ಒಬ್ಬ ಬಡ ರೈತ ತನ್ನ ಮನೆಯಲ್ಲಿ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿದ್ದರು. ಇಲ್ಲಿ ನೀವು ಬಂದು ಏನೇ ಹರಿಕೆ ಇದ್ದರು ನೆರವೇರುತ್ತದೆ.
ಮನೆ , ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ, ಮದುವೆ, ಏನೇ ಇದ್ದರೂ 24 ಗಂಟೆ ಒಳಗಡೆ ನೆರವೇರಿಸುವಂತಹ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಇದಾಗಿದೆ. ಈ ದೇವಸ್ಥಾನಕ್ಕೆ ಬಂದಂತಹ ಸುಮಾರು ಭಕ್ತಾದಿಗಳಿಗೆ ತುಂಬಾ ಒಳ್ಳೆಯದಾಗಿದೆ ಈ ದೇವಸ್ಥಾನ ಇತ್ತೀಚೆಗೆ ಬೆಳಕಿಗೆ ಬಂದಿರುವಂತಹದ್ದು. ನೀವು ಸಹ ಈ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಕೋರಿಕೆಗಳನ್ನು ನೆರವೇರಿಸಿಕೊಳ್ಳಿ.
ನೀವು ಸಂಪಾದನೆ ಮಾಡಿದಂತಹ ಹಣ ನಿಮ್ಮ ಕೈಯಲ್ಲಿ ನಿಲ್ಲುತ್ತಿಲ್ಲ ಎಂದಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ನೀವು ಮನೆಗೆ ಹೋಗುವುದರ ಒಳಗಾಗಿ ನಿಮಗೆ ಒಂದು ಕುರುಹು ಸಿಗುತ್ತದೆ. ಕುಟುಂಬ ಸಮೇತರಾಗಿ ಬಂದು ಈ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಹೋದರೆ ನಿಮ್ಮ ಕುಟುಂಬ ಹೇಳಿಕಗೆ ಹೊಂದುತ್ತದೆ.
ಈ ದೇವಾಲಯದ ಅರ್ಚಕರ ಹೆಸರು ಸಣ್ಣಪ್ಪ. ಅವರ ಮೊಬೈಲ್ ಸಂಖ್ಯೆ 9743581939 ಅವಿವಾಹಿತ ಯುವಕರಿಗೆ ಮದುವೆಯಾಗಿಲ್ಲ, ಮದುವೆಯಾದ ಮಹಿಳೆಯರಿಗೆ ಮಕ್ಕಳಾಗಿಲ್ಲ, ಅಂತಹವರು ಬಂದು ಇಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ನಾಗದೇವತೆಗಳಿಗೆ ಪ್ರದಕ್ಷಣೆಯಾಗಿ ಹಾಲಿನ ಅಭಿಷೇಕವನ್ನು ಮಾಡಿ ಸಂಕಲ್ಪವನ್ನು ಮಾಡಿಕೊಂಡು ಹೋದರೆ ತುಂಬಾ ಒಳ್ಳೆಯದು.
ಕೋಡಿಹಳ್ಳಿ, ದೊಡ್ಡಆಲಳ್ಳಿ ಕನಕಪುರದಿಂದ ಅತಿ ಹೆಚ್ಚು ಜನ ಬರುತ್ತಾರೆ. ಇಲ್ಲಿ ಬಂದಂತಹ ಭಕ್ತಾದಿಗಳಿಂದ ಒಬ್ಬರಿಂದ ಒಬ್ಬರಿಗೆ ಈ ದೇವಸ್ಥಾನದ ಬಗ್ಗೆ ತಿಳಿದು ಅತಿ ಹೆಚ್ಚು ಜನ ಆಗಮಿಸುತ್ತಿದ್ದಾರೆ. ಬೇಡಿಕೊಂಡಂತಹ ಕೋರಿಕೆಗಳನ್ನು ಈಡೇರಿಸುವಂತಹ ಮೂಲ ದೇವರು ಈ ಲಕ್ಷ್ಮಿ ವೆಂಕಟೇಶ್ವರ. ಇದಕ್ಕೆ ಮೂಲ ಇತಿಹಾಸವನ್ನು ಕೂಡ ಇದೆ.
ಆದರೆ ಈ ದೇವಸ್ಥಾನವನ್ನು 7 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ವೈಕುಂಠ ಏಕಾದಶಿ, ನಾಲ್ಕನೆಯ ಶ್ರಾವಣ ಶನಿವಾರ, ಅನ್ನದಾಸೋಹವನ್ನು ಏರ್ಪಡಿಸಲಾಗಿರುತ್ತದೆ. ದಿನನಿತ್ಯವೂ ಸಹ ಪೂಜಾ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ವೈಕುಂಠ ಏಕಾದಶಿ ಶ್ರಾವಣ ಶನಿವಾರಗಳಲ್ಲಿ ವಿಶೇಷವಾಗಿರುತ್ತದೆ.
ಶಿವರಾತ್ರಿ ದಿನಗಳಲೂ ಸಹ ವಿಶೇಷ ಪೂಜೆಗಳಿರುತ್ತದೆ. ಇದಲ್ಲದೆ ವಿಷ್ಣುವಿಗೆ ಸಂಬಂಧಿಸಿದಂತಹ ದೀಪೋತ್ಸವಗಳು ಸಪ್ತಮಿ ದಿನಗಳನ್ನು ಸಹ ವಿಶೇಷ ಪೂಜೆಗಳಿರುತ್ತದೆ. ಪ್ರತಿನಿತ್ಯದ ಬೆಳಿಗ್ಗೆ 8:00 ಗಂಟೆಯಿಂದ 12 ಗಂಟೆಯವರೆಗೆ ಸಂಜೆ 4:00 ಇಂದ 8:00 ಪೂಜೆ ಇರುತ್ತದೆ. ಮೊದಲು ಹಳೆಯ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲಾಗುತ್ತೆ.
ಈ ಹೊಸ ದೇವಾಲಯವನ್ನು ಏಳು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ದೇವಾಲಯ ನಿರ್ಮಾಣ ವಾಗುತ್ತಾ ಸಣ್ಣಪ್ಪನವರೇ ಅರ್ಚಕರಾಗಿ ಹೋದ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.