ಹಾಸ್ಯ ನಟ ಚಿಕ್ಕಣ್ಣ ಅವರ ರಿಯಲ್ ಲೈಫ್ ಸ್ಟೋರಿ..ದರ್ಶನ್ ಸ್ನೇಹ ಮಾಡಿದ್ದೇಗೆ..ಕಷ್ಟದಲ್ಲಿದ್ದಾಗ ದಚ್ಚು ಚಿಕ್ಕಣ್ಣನಿಗೆ ಏನೆಲ್ಲಾ ಸಹಾಯ ಮಾಡಿದ್ರು ನೋಡಿ
ಚಿಕ್ಕಣ್ಣ ರಿಯಲ್ ಲೈಫ್ ಸ್ಟೋರಿ… ಚಿಕ್ಕಣ್ಣ ಕನ್ನಡದ ಪ್ರಸಿದ್ಧ ಹಾಗೂ ಬೇಡಿಕೆಯ ಹಾಸ್ಯ ನಟ ಇಂತಹ ಚಿಕ್ಕಣ್ಣ ಇಲ್ಲಿಯವರೆಗೂ ಬೆಳೆದು ಬಂದಿದ್ದು ಹೇಗೆ ಇವರ ಜೀವನದ ಆದಿ ಹೇಗಿದೆ ಅನ್ನೋದನ್ನ ಈಗ ತಿಳಿಯುತ್ತಾ ಹೋಗೋಣ. 1984ರ ಜೂನ್ 22ರಂದು ಜನನ ಮೈಸೂರು ಜಿಲ್ಲೆಯ ಬಲ್ಲಾಹಳ್ಳಿ ಎಂಬಲ್ಲಿ ತಂದೆ ಬೈರೇಗೌಡ ತಾಯಿ ನಿಂಗಮ್ಮ ಈ ದಂಪತಿಯ ಐವರು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು ಚಿಕ್ಕಣ್ಣ.
ಇವರಿಗೆ ಮೂವರು ಅಕ್ಕಂದಿರು ಒಬ್ಬರು ತಂಗಿ ಮೊದಲ ಮೂರು ಮಕ್ಕಳು ಹೆಣ್ಣಾಗಿದ್ದರಿಂದ ಗಂಡು ಮಗು ಜನಿಸಲಿ ಎಂದು ತಾಯಿ ನಿಂಗಮ್ಮ ದೇವರಲ್ಲಿ ಬೇಡಿಕೊಳ್ಳುತ್ತಿದ್ದರಂತೆ ಆಗ ಹುಟ್ಟಿದ್ದೇ ಚಿಕ್ಕಣ್ಣ ಇವರ ಪೂರ್ತಿ ಹೆಸರು ಚಿಕ್ಕಣ್ಣೇಗೌಡ ಇವರದು ಒಕ್ಕಲಿಗ ಸಮುದಾಯ ಕೃಷಿಕ ಕುಟುಂಬ. ಹುಟ್ಟೂರಿನಲ್ಲಿ ಆರಂಭಿಕ ಶಿಕ್ಷಣ ಚಿಕ್ಕಣ್ಣ ಪ್ರಾರ್ಥಮಿಕ ಶಿಕ್ಷಣವನ್ನು ಪಡೆದಿದ್ದು ಬಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ.
ಓದುವುದರಲ್ಲಿ ಮುಂದೆ ಇದ್ದ ಇವರು ನಾಲ್ಕನೇ ತರಗತಿಯಲ್ಲಿ 120 130ರ ಮಗ್ಗಿಯನ್ನ ಪಟಪಟ ಎಂದು ಹೇಳುತ್ತಾ ಇದ್ದರು ಹೀಗಿದ್ದರೂ ಓದುವುದಕ್ಕೆ ತಂದೆಯಿಂದ ಸಪೋರ್ಟ್ ಸಿಗಲಿಲ್ಲ 5ನೇ ಕ್ಲಾಸ್ ಪಾಸ್ ಆಗುತ್ತಿದ್ದ ಹಾಗೆ ಓದಿದ್ದು ಸಾಕು ಮನೆಯಲ್ಲಿ ದನ ಕರುಗಳನ್ನು ನೋಡಿಕೊಂಡು ಇರು ಎಂದು ಅಂದುಬಿಟ್ಟರು ಕೊನೆಗೆ ಹಾಗೂ ಹೀಗೂ ಅಪ್ಪನನ್ನು ಒಪ್ಪಿಸಿ ಶಿಕ್ಷಣ ಮುಂದುವರಿಸಿದ್ದರು ಈ ನಡುವೆ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದರೂ.
ಮನೆಯ ಯಜಮಾನ ಕೆಲಸಕ್ಕೆ ಹೋಗುತ್ತಾ ಇರಲಿಲ್ಲ ಇದರ ಪರಿಣಾಮ ತಾಯಿ ನಿಗಮ ಮತ್ತು ಮನೆಯ ಹೆಣ್ಣು ಮಕ್ಕಳು ಗಾರೆ ಕೆಲಸ ಮಾಡಿ ಕುಟುಂಬವನ್ನ ನಿರ್ವಹಿಸಿದ್ದರು, ಅಪ್ಪ ಅಂದ್ರೆ ಮಕ್ಕಳಿಗೆ ಭಯ ಚಿಕ್ಕಂದಿನಲ್ಲಿ ಅಪ್ಪನನ್ನ ಕಂಡರೆ ಚಿಕ್ಕಣ್ಣ ಸೇರಿದಂತೆ ಮನೆಯಲ್ಲಿ ಎಲ್ಲರೂ ಭಯಪಡುತ್ತಾ ಇದ್ದರು ಚಿಕ್ಕಪುಟ್ಟದಕ್ಕೆಲ್ಲಾ ಹೆಂಡತಿ ಮಕ್ಕಳ ಮೇಲೆ ಕೈಮಾಡುತ್ತಾ ಇದ್ದಿದ್ದೇ ಇದಕ್ಕೆ ಕಾರಣ ಮಗ ಶಾಲೆ ಮುಗಿಸಿ ಕ್ರಿಕೆಟ್ ಕುಂಟೆಬಿಲ್ಲೆ ಹಾಡುವುದಕ್ಕೆ ಹೋದರೆ ಸಾಕು ದನಗಳಿಗೆ ಮೇವು ಹಾಕಿಲ್ಲವಾ, ನೀರು ಕುಡಿಸಿಲ್ಲವಾ ಎಂದು ಓಡಾಡಿಸಿಕೊಂಡು ಹೊಡೆಯುತ್ತಾ ಇದ್ದರು.
ಅಪ್ಪನ ಕೈಯಲ್ಲಿ ಪ್ರತಿದಿನ ಪೆಟ್ಟು ತಿಂದೆ ಬೆಳೆದರೂ ಚಿಕ್ಕಣ್ಣ. 12ನೇ ವಯಸ್ಸಿನಲ್ಲಿಯೇ ಗಾರೆ ಕೆಲಸ ಚಿಕ್ಕಣ್ಣ 7ನೇ ಕ್ಲಾಸ್ ಪಾಸ್ ಆಗುತ್ತಿದ್ದ ಹಾಗೆ ಸ್ಕೂಲ್ ಬಿಡು ಎಂದು ಮತ್ತೊಮ್ಮೆ ಗದರಿಸಿದರು ತಂದೆ ಆದರೆ ಮಗ ಒಪ್ಪಲಿಲ್ಲ ಪಕ್ಕದ ಊರು ಬೀರೇಹುಂಡಿಯ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು ರಜಾ ಸಿಕ್ಕಾಗ ಗಾರೆ ಕೆಲಸ ಮಾಡಿ ಹೂವು ಮಾರಿ ಸ್ಕೂಲಿಗೆ ದುಡ್ಡನ್ನು ಹೊಂದಿಸಿದ್ದರು.
ಕಾಲಕ್ರಮೇಣ ಓದುವ ಕಡೆ ಗಮನ ಕಡಿಮೆಯಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾದವು ರನ್ನಿಂಗ್ ಲಾಂಗ್ ಜಂಪ್ ನಂತಹ ಆಟಗಳಲ್ಲಿ ಭಾಗವಹಿಸಿ ಹಾಡು ಏಕಪಾತ್ರ ಅಭಿನಯ ನಾಟಕಗಳಲ್ಲಿ ಬಹುಮಾನ ಗೆದ್ದರು.ಆದರೆ ಮಗ ಸ್ಟೇಜ್ ಎತ್ತುವುದು ಊರಲ್ಲಿ ನಡೆಯುವ ನಾಟಕದಲ್ಲಿ ಪಾತ್ರ ಮಾಡುವುದು ತಂದೆಗೆ ಸ್ವಲ್ಪವೂ ಕೂಡ ಇಷ್ಟವಿರಲಿಲ್ಲ.
ಒಂದು ಬಾರಿ ಮಗ ನಾಟಕದಲ್ಲಿ ಪಾತ್ರ ಮಾಡುತ್ತಾನೆ ಎಂದು ಗೊತ್ತಾಗಿ ಕತ್ತಿ ಹಿಡಿದುಕೊಂಡು ಸ್ಟೇಜ್ ಮುಂದೆ ಕಾಯುತ್ತಾ ಕುಳಿತಿದ್ದರು ಕೊನೆಗೆ ಊರಿನವರು ತಂದೆಯನ್ನು ತಡೆದು ಚಿಕ್ಕಣ್ಣ ಅವರಿಂದ ಪಾತ್ರ ಮಾಡಿಸಿದ್ದರು ಇಷ್ಟೆಲ್ಲಾ ಆದಮೇಲೆ ಮನೆಗೆ ಹೋದರೆ ಅಪ್ಪ ಸಾಯಿಸಿ ಬಿಡುತ್ತಾರೆ ಎಂದುಕೊಂಡು ಒಂದು ವಾರ ಆ ಕಡೆ ಮುಖಾನು ಹಾಕಿರಲಿಲ್ಲವಂತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.