ನಿಮ್ಮ ಹತ್ತಿರ ಈ ಆರು ಲಕ್ಷಣಗಳು ಇದ್ದರೆ ಹಣ ಉಳಿಯುವುದಿಲ್ಲ… ಜೀವನದಲ್ಲಿ ಧನವಂತರಾಗಬೇಕು ಎಂದು ಅಂದುಕೊಳ್ಳುವವರಲ್ಲಿ ಈ ಲಕ್ಷಣಗಳು ಇರಬಾರದು ಎಂದು ಚಾಣಕ್ಯನು ತನ್ನ ಚಾಣುಕ್ಯ ನೀತಿ ಪುಸ್ತಕದಲ್ಲಿ ವಿವರಿಸಿದ್ದಾನೆ ಆ ಲಕ್ಷಣಗಳು ಯಾವುವು ಎಂದು ಈಗ ನಾವು ನೋಡೋಣ.
ಅದೇ ರೀತಿ ನಾವು ಬೇರೆಯವರು ಹೇಳಿದ ಮಾತುಗಳನ್ನು ಕೇಳುವುದಕ್ಕಿಂತ ಮುಂಚೆ ಅವರು ಹೇಳುತ್ತಿರುವುದು ನಿಜಾನಾ ಸುಳ್ಳ ಎಂದು ತಿಳಿದುಕೊಳ್ಳುವುದಕ್ಕೆ ಚಾಣುಕ್ಯನು ಕೆಲವು ಉಪಾಯಗಳನ್ನು ಹೇಳಿದ್ದಾನೆ ಅವುಗಳ ಬಗ್ಗೆ ಕೂಡ ಈಗ ನಾವು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಕಳೆದು ಹೋದ ಕಾಲದಲ್ಲಿ ಮಾಡಿದ ತಪ್ಪುಗಳನ್ನು ನೆನೆಸಿಕೊಂಡು ಸಂಕಟಪಡಬಾರದು ಮಾಡಿದ ತಪ್ಪುಗಳನ್ನು ನೆನಪಿಸಿಕೊಂಡು ಕಾಲವನ್ನು ವ್ಯರ್ಥ ಮಾಡಬಾರದು ಮಾಡಿದ ತಪ್ಪುಗಳಲ್ಲಿ ಕಲಿತ ಪಾಠವನ್ನು ಮುಂದಿನ ಜೀವನದಲ್ಲಿ ಪಾಲಿಸಬೇಕು.
ಎರಡನೆಯದಾಗಿ ಒಬ್ಬರಿಗೆ ಮೋಸ ಮಾಡಿ ಹಣವನ್ನು ಹಾಸ್ತಿಯನ್ನು ಗಳಿಸಬೇಕು ಎನ್ನುವ ಆಸೆ ಇರಬಾರದು ಈ ರೀತಿ ಮಾಡಿದರೆ ಈ ಸಮಾಜದಲ್ಲಿ ನಿಮ್ಮ ಬೆಲೆ ಕಡಿಮೆಯಾಗಿ ಹೋಗುತ್ತದೆ ಕೆಲವು ಬಾರಿ ವಿಷ ಕೂಡ ಕುಡಿಯಬೇಕಾದರೆ ಸಿಹಿಯಾಗಿರುತ್ತದೆ ಆದರೆ ಕೊನೆಗೆ ಅದು ಪ್ರಾಣವನ್ನೇ ತೆಗೆದುಬಿಡುತ್ತದೆ.
ಆದರಿಂದ ಯಾರಿಗೆ ಆದರೂ ಸರಿ ಹಣದ ಮೇಲೆ ಮತ್ತು ಆಸ್ತಿಯ ಮೇಲೆ ಅತಿಯಾದ ಆಸೆ ಇರಬಾರದು. ಮೂರನೆಯದಾಗಿ ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದು ಕೆಲಸ ಪ್ರತಿ ಮಾತು ತನ್ನ ಮೇಲೆ ಅಲ್ಲದೆ ಇತರರ ಮೇಲೆ ಕೂಡ ಪ್ರಭಾವ ಬೀರುತ್ತದೆ ಆದ್ದರಿಂದ ಮಾತನಾಡುವ ಮಾತಿನ ಮೇಲೆ ನಿಯಂತ್ರಣವಿರಬೇಕು.
ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಅಥವಾ ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆ ತನಗೆ ತಾನು ಮೂರು ಪ್ರಶ್ನೆಗಳನ್ನ ಹಾಕಿ ಕೊಳ್ಳಬೇಕು ತಾನು ಏನು ಮಾಡಬೇಕು ಮಾಡಿದ ನಂತರ ಏನು ಆಗುತ್ತದೆ ಮಾಡಿರುವ ಕೆಲಸಕ್ಕೆ ಎಷ್ಟು ಬೆಲೆ ಇದೆ ಇಂತಹ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಳ್ಳಬೇಕು.
ಈ ರೀತಿ ಮಾಡಿದರೆ ಖಂಡಿತವಾಗಿಯೂ ಜೀವನದಲ್ಲಿ ಧನವಂತರಾಗುತ್ತೀರಾ. ನಾಲ್ಕನೇದಾಗಿ ಮನುಷ್ಯರ ಮಾತುಗಳು ಕೈಗಳೇ ಅಲ್ಲ ಅವರ ಮುಖ ಕೂಡ ಮೋಸ ಮಾಡುತ್ತದೆ ಅದೇ ರೀತಿ ನೀವು ಎಷ್ಟೇ ಸಂಕಟದಲ್ಲಿ ಇದ್ದರೂ ಎಷ್ಟೇ ಕಷ್ಟದಲ್ಲಿ ಇದ್ದರೂ ನಿಮ್ಮ ಮುಖದ ಮೇಲೆ ಅವು ಕಾಣಿಸಬಾರದು ಧನಮಂತರಾಗಬೇಕು ಎಂದು ಅಂದುಕೊಳ್ಳುವವರ ಮುಖ ಲಕ್ಷಣಗಳು.
ವಿಷ ಇಲ್ಲದೆ ಇರುವ ಹಾವು ಕೂಡ ವಿಷ ಇರುವ ರೀತಿ ಇರುತ್ತದೆ ಇಲ್ಲವಾದರೆ ಬೇರೆ ಪ್ರಾಣಿಗಳು ಅವುಗಳನ್ನು ಬದುಕಲು ಬಿಡುವುದಿಲ್ಲ ಅದೇ ರೀತಿ ನಮಗೆ ಎಷ್ಟೇ ಕಷ್ಟ ಇದ್ದರೂ ಇಲ್ಲದ ಹಾಗೆ ಇರಬೇಕು ಇಲ್ಲವಾದರೆ ಮತ್ತಷ್ಟು ಕಷ್ಟಗಳು ಬರುವುದು ನಿಜ.
ಐದು ನಾವು ಗ್ರೇಟ್ ಎಂದು ಅನಿಸಿಕೊಳ್ಳಬೇಕು ಎನ್ನುವ ಮನೋಭಾವನೆ ಇರಬಾರದು ಸುಗಂಧ ಪರಿಮಳಗಳ ವಾಸನೆಗೆ ಗಾಳಿಯ ಸಹಾಯ ಬೇಕು ಆದರೆ ಒಬ್ಬ ದೊಡ್ಡ ವ್ಯಕ್ತಿಗೆ ತಾನು ಗ್ರೇಟ್ ಎಂದು ಅನ್ನಿಸಿಕೊಳ್ಳುವುದಕ್ಕೆ ಯಾರ ಸಹಾಯವೂ ಕೂಡ ಬೇಡ ನಿಮ್ಮ ಬಗ್ಗೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾತನಾಡುತ್ತಾ ಇದ್ದಾರೆ ಎಂದರೆ ನೀವು ಸರಿಯಾದ ಮಾರ್ಗದಲ್ಲಿ ಹೋಗುತ್ತಾ ಇದ್ದೀರಿ ಎಂದು ಅರ್ಥ.
ನಿಮಗೆ ಸಹಾಯ ಮಾಡಬೇಕು ಎನ್ನುವರು ಒಳ್ಳೆಯದಾಗಿ ನಿಮ್ಮ ಮೇಲೆ ದ್ವೇಷ ಇರುವವರು ಕೆಟ್ಟದಾಗಿ ಮಾತನಾಡುವುದು ಸಹಜ. ಆರನೇದಾಗಿ ಬಲಹೀನನನ್ನು ಯಾವಾಗಲೂ ನಿರ್ಲಕ್ಷ ಮಾಡಬಾರದು ನಿಮ್ಮ ಸ್ನೇಹಿತರನ್ನು ಹತ್ತಿರ ಇಟ್ಟುಕೊಳ್ಳಬೇಕು ಆದರೆ ನಿಮ್ಮ ಶತ್ರುಗಳನ್ನು ಇನ್ನು ಕೂಡ ಹತ್ತಿರ ಇಟ್ಟುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.