ಪ್ರತಿಯೊಬ್ಬ ಮನುಷ್ಯರು ಜೀವನದಲ್ಲಿ ಬಹಳ ಸುಖವಾಗಿರಬೇಕು ತಮಗೆ ಸೋಲು ಅನ್ನದೇ ಬರಬಾರದು ತಮ್ಮ ಮಕ್ಕಳು ತಮ್ಮ ಮಾತನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಮತ್ತು ತಮ್ಮ ಉದ್ಯೋಗದಲ್ಲಿ ಒಳ್ಳೆಯ ಸಂಬಳವನ್ನು ಪಡೆಯಬೇಕು ಯಾವುದೇ ರೀತಿಯ ಕಷ್ಟವನ್ನ ಅನುಭವಿಸಬಾರದು ಹಾಗೂ ದೇವಸ್ಥಾನಗಳಿಗೆ ಹೋಗಿ ಹರಕೆಗಳನ್ನ ಕಟ್ಟುವುದು ಈ ಎಲ್ಲವೂ ಸಹ ಮಾಡಿದರು ಮನುಷ್ಯ ಪ್ರತಿದಿನ ಒಂದಲ್ಲ ಒಂದು ಗೊಂದಲದಲ್ಲಿ ಅಥವಾ ಕಷ್ಟದಲ್ಲಿ ಇರುತ್ತಾನೆ. ಇದೆಲ್ಲಾದಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತದೆ ಅದು ಈ ಪಿತೃ ಪಕ್ಷದ ಸಮಯದಲ್ಲಿ ನಾವು ಮಾಡಿರುವಂತಹ ಅನೇಕ ತಪ್ಪುಗಳಿಗೆ ನಾವು ಅನುಭವಿಸುತ್ತಿರುವ ಕಷ್ಟಗಳಿಗೆ ಸರಿಪಡಿಸಿಕೊಳ್ಳುವ ಒಂದು ಒಳ್ಳೆಯ ಅವಕಾಶ ಸಿಗುತ್ತದೆ ಹಾಗಾದರೆ ಈ ಪಿತೃ ಪಕ್ಷದಲ್ಲಿ ಯಾವೆಲ್ಲ ದೋಷಗಳನ್ನು ಕಳೆದುಕೊಳ್ಳಬಹುದು ನಮ್ಮ ಜೀವನವನ್ನು ಯಾವ ರೀತಿ ಉತ್ತಮವಾಗಿಸಿಕೊಳ್ಳಬಹುದು ಈ ಎಲ್ಲದನ್ನು ನೋಡೋಣ.
ಪಿತೃ ಪಕ್ಷದಲ್ಲಿ ಮಾಡುವ ಪುಣ್ಯದ ಕೆಲಸಗಳು ನಮ್ಮ ಜೀವನವನ್ನು ಉದ್ದಾರ ಮಾಡುತ್ತದೆ ಈ ಪರಿಹಾರಗಳನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಮೊದಲನೆಯದಾಗಿ ಕೆಲವು ಜನರಿಗೆ ಎಲ್ಲವೂ ಸರಿಯಾಗಿದ್ದರೂ ಮದುವೆಯಾಗುವುದಿಲ್ಲ ಒಳ್ಳೆಯ ಸಂಗಾತಿ ಸಿಗುವುದಿಲ್ಲ ಮದುವೆಯಾದರು ಸಹ ಮಕ್ಕಳ ಭಾಗ್ಯ ಇರುವುದಿಲ್ಲ ಮಕ್ಕಳು ಹುಟ್ಟಿದರು ಸಹ ಮಾನಸಿಕವಾಗಿ ದೈಹಿಕವಾಗಿ ಅಸ್ವಸ್ಥರಾಗಿರುತ್ತಾರೆ ನಿಮಗೆ ಯೋಗ್ಯತೆಗೆ ಸಿಗಬೇಕಾದದ್ದು ಸಿಗೋದೇ ಇಲ್ಲ ಇವೆಲ್ಲಕ್ಕೂ ಕಾರಣ ನಾವು ಪಿತೃ ಕಾರ್ಯವನ್ನು ಸರಿಯಾಗಿ ಮಾಡದೆ ಇರೋದು
ಮೊದಲ ಎರಡು ಭಾಗವನ್ನ ಸಂಕ್ಷೇಪವಾಗಿ ನಾನು ನಿಮಗೆ ಹೇಳ್ಬಿಡ್ತೀನಿ ಹೆತ್ತವರು ಇರೋತನಕ ಅವರಿಗೆ ಗೌರವ ಆದರಗಳನ್ನು ಕೊಟ್ಟುಕೊಂಡು ನಮಸ್ಕಾರಗಳನ್ನು ಮಾಡಿಕೊಂಡು ಅವರನ್ನು ಸುಖ ಜೀವಿಗಳಾಗಿ ನೋಡಿಕೊಳ್ಳಬೇಕು ಹೇಮ ಬಗ್ಗೆ ನೀವು ಹೇಗೆ ಬದುಕಬೇಕು ಅಂದ್ರೆ ನಿಮ್ಮ ಬಗ್ಗೆ ನಾಲ್ಕು ಜನ ಮಾತಾದಾಗ ಅವರಿಗೆ ಖುಷಿಯಾಗಬೇಕು ತಂದೆ ತಾಯಿಗಳು ಇಹಲೋಕವನ್ನು ತ್ಯಜಿಸಿದ ನಂತರ 12 ದಿನಕ್ಕೆ ಮಾಡುವ ಪಿಂಡಪ್ರದಾನ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು.
12 ದಿನದ ನಂತರ ಎಲ್ಲಾ ಶಾಂತಿಗಳು ಮುಗಿದ ನಂತರ ದೇಹದಿಂದ ತ್ಯಜಿಸುವರುವಂತಹ ಆತ್ಮವು ಶಾಂತವಾಗುತ್ತದೆ ಪ್ರತಿವರ್ಷ ಮಾಡುವಂತಹ ಪಿತೃ ಕಾರ್ಯವು ಪಿತೃ ದೇವತೆಗಳಿಗೆ ಅರ್ಪಿತವಾಗುತ್ತದೆ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವಂತಹ ಪಿತೃಪಕ್ಷವನ್ನು ಮಾಡಲೇಬೇಕು ಈ ಪಿತೃ ಪಕ್ಷವು ಕೆಲವೊಬ್ಬರು ಆಚರಿಸುವುದಿಲ್ಲ ತಮಗೆ ಗೊತ್ತಿಲ್ಲ ಎಂದರೆ ಕನಿಷ್ಠಪಕ್ಷ ಈ ಮೂರು ಕೆಲಸವನ್ನಾದರೂ ಮಾಡಬೇಕು.
ಮೊದಲನೆಯದಾಗಿ ತಮ್ಮ ಶಕ್ತಿಗನುಸಾರವಾಗಿ ಜ್ಞಾನಿಗಳಿಗೆ ಉಪಹಾರವನ್ನು ನೀಡಬೇಕು ಸಾಧುಗಳಿಗೆ ಆಹಾರವನ್ನು ನೀಡಬೇಕು ಸಾಧು ಸಂತರಿಗೆ ತಮ್ಮ ಕೈಯಲ್ಲಿ ಆದಷ್ಟು ದಾನ ಮಾಡಿದರೆ ಅವರ ಆಶೀರ್ವಾದವು ನಮಗಿರುವಂತಹ ಎಲ್ಲಾ ದೋಷಗಳನ್ನು ಕಡಿಮೆ ಮಾಡುತ್ತದೆ ನಮ್ಮ ನಿಂತಿರುವ ಬದುಕು ಸಹಜವಾಗಿ ಮುಂದೆ ಹೋಗಲಿಕ್ಕೆ ಸಹಾಯ ಆಗುತ್ತೆ ಅತಿ ಹೆಚ್ಚು ಕಷ್ಟಗಳನ್ನು ಈ ಒಂದು ದಾನ ಧರ್ಮದಿಂದ ಕಳೆದುಕೊಳ್ಳಲು ಸಹಾಯವಾಗುತ್ತದೆ.
ಇನ್ನು ಎರಡನೆಯದಾಗಿ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಅಂತಹ ಅಧ್ಯಯನದ ಮಕ್ಕಳಿಗೆ ಒಂದು ವರ್ಷಕ್ಕೆ ಆಗುವಷ್ಟು ಪುಸ್ತಕಗಳನ್ನು ದಾನ ಮಾಡಬೇಕು ಈ ರೀತಿಯಾಗಿ ಧ್ಯಾನಕ್ಕೆ ಮುಖ ಮಾಡುವವರು ಸಾಧಕರು ಹಾಗೂ ಸಂತರಿಗೆ ಶಕ್ತಿಗನುಸಾರವಾಗಿ ದಾನವನ್ನು ಮಾಡುವುದರಿಂದ ಅವರ ಜೀವನ ಬಹಳಷ್ಟು ಸುಖಮಯವಾಗಿರುತ್ತದೆ ಇದರಿಂದ ತಮಗಿರುವ ಎಲ್ಲಾ ದೋಷಗಳು ಕಳೆಯುತ್ತದೆ ಮತ್ತು ಪಿತೃ ಶಾಪಗಳು ಈ ಸಂದರ್ಭದಲ್ಲಿ ಕಡಿಮೆಯಾಗುತ್ತದೆ.
ಮೂರನೆಯದಾಗಿ ಗೋವು ಎಲ್ಲಾ ದೇವತೆಗಳನ್ನು ಒಳಗೊಂಡಿರುವಂತಹ ವಿಶೇಷವಾದ ಅದ್ಭುತ ಶಕ್ತಿ ಈ ಗೋವುಗಳಿಗೆ ಇರುತ್ತದೆ ಒಂದು ಗೋಗು ಮತ್ತು ಕರವನ್ನು ಖರೀದಿ ಮಾಡಿ ಸಾಧಕರಿಗೆ ಗುರುಕುಲದವರಿಗೆ ಅಥವಾ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಅವರ ಜೀವನ ಅತ್ಯದ್ಭುತವಾಗಿ ಬದಲಾವಣೆಯಾಗುತ್ತದೆ ಅವರ ಜೀವನ ಉನ್ನತ ಮಟ್ಟಕ್ಕೆ ಹೋಗುತ್ತದೆ ಅಥವಾ ಗೋವುಗಳಿಂದ ಜೀವನ ನಡೆಸುತ್ತಿರುವವರಿಗೆ ಗೋವನ್ನು ದಾನವಾಗಿ ಅಂದ್ರೆ ಅವರಿಗೆ ಹಸುವನ್ನ ಒಂದು ಕರುವನ್ನ ದಾನವಾಗಿ ಕೊಡಿ. ಇದು ಆಗುವುದಿಲ್ಲ ಎಂದರೆ ಗೋವಿನ ಸೇವೆಯನ್ನು ಮಾಡಿ ಇದರಿಂದ ಪುಣ್ಯ ಫಲವನ್ನು ಪಡೆಯಬಹುದು ನಮ್ಮ ಜೀವನದಲ್ಲಿ ಇರುವಂತಹ ಇಷ್ಟು ಕಷ್ಟಗಳು ಕಳೆಯಲು ಈ ಒಂದು ಪಿತೃ ಪಕ್ಷದ ಸಮಯದಲ್ಲಿ ನಾವು ಮಾಡುವಂತಹ ದಾನಗಳು ಧರ್ಮಗಳು ನಮ್ಮ ಜೀವನದ ಹಾದಿಯನ್ನು ಬದಲಾಯಿಸುತ್ತದೆ ನಮ್ಮ ಜೀವನವು ಉನ್ನತ ಮಟ್ಟಕ್ಕೆ ಬರುತ್ತದೆ ಮತ್ತಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.