ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..
ಜನರ ಕೆಟ್ಟ ದೃಷ್ಟಿ ಬಿದ್ದಾಗ ಆಗುವ ಪರಿಣಾಮಗಳು ಅದರಿಂದ ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ ಯಾವುದೇ ಒಂದು ದೊಡ್ಡ ಮಟ್ಟದಲ್ಲಿ ನಮಗೆ ಗೆಲುವಾದಾಗ ಜನರ ದೃಷ್ಟಿ ಬಿದ್ದು ಅದು ಬೇಗ ಕುಂದು ಹೋಗುತ್ತದೆ ಈ ರೀತಿ ಜನರ ದೃಷ್ಟಿ ಬಿದ್ದಿದೆ ಎಂದು ತಿಳಿದುಕೊಳ್ಳಲು ಆರು ಸೂಚನೆಗಳು ನಮಗೆ ತಿಳಿದು ಬರುತ್ತದೆ ಅವು ಯಾವುವು ಯಾವ ರೀತಿ ಅದರ ಪರಿಣಾಮ ಇರುತ್ತದೆ ಪ್ರತಿಯೊಂದು ನಾವು ತಿಳಿಸಿಕೊಡುತ್ತೇವೆ.
ಈ ದೃಷ್ಟಿಯಿಂದ ಮನುಷ್ಯನ ಜೀವನವನ್ನೇ ಹಾಳು ಮಾಡಿಬಿಡುತ್ತದೆ ಚೆನ್ನಾಗಿ ಸಂಪಾದನೆ ಮಾಡಿ ನಾಲ್ಕು ಕಾಸು ಸಂಪಾದಿಸಿ ನೆಮ್ಮದಿ ಜೀವನ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ ಆದರೆ ನಾವು ಚೆನ್ನಾಗಿದ್ದೀವಿ. ಎಲ್ಲವೂ ಸರಿಯಾಗಿ ನಡಿತಾ ಇದೆ ಎಂದಾಗಲೇ ಒಂದಲ್ಲ ಒಂದು ಸಂಕಷ್ಟಕ್ಕೆ ಗುರಿಯಾಗುತ್ತೇವೆ ಅದು ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದಲೇ ಆಗಿರಬಹುದು ಆದರೆ ಅದರ ಜೊತೆಗೆ ನಮ್ಮ ಎದುರಿನವರ ದೃಷ್ಟಿಯು ಕಾರಣವಾಗುತ್ತದೆ ಸಂಬಂಧಿಕರು ಅಕ್ಕಪಕ್ಕದವರು ನಮ್ಮನ್ನು ನೋಡಿ ಆಗದೆ ಇದ್ದವರು ನಮ್ಮ ಜೊತೆ ಇದ್ದು ನಮ್ಮ ವಿರುದ್ಧ ಪಿತೂರಿ ಮಾಡುವವರು ಹಿತಶತ್ರುಗಳು ಹೀಗೆ ಹೇಳ್ತಾ ಹೋದರೆ ಒಂದು ಪಟ್ಟಿಯೇ ಆಗಿಬಿಡುತ್ತದೆ.
ಈ ರೀತಿ ನಮ್ಮ ಹೇಳಿಗೆ ಸಹಿಸವಾದವರು ನಾವು ಬೆಳೆಯುವುದನ್ನು ನೋಡಕ್ಕೆ ಆಗದೆ ಇದ್ದವರು ನಮ್ಮನ್ನು ನೋಡಿ ಅಸೂಯೆ ಪಡುವಾಗ ನಮ್ಮ ಜೀವನದಲ್ಲಿ ನಾನಾ ಅಡ್ಡಿ ಆತಂಕಗಳು ಉಂಟಾಗುತ್ತದೆ ಈ ರೀತಿ ದೃಷ್ಟಿ ನರ ದೃಷ್ಟಿ ಕೆಟ್ಟ ದೃಷ್ಟಿಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂದು ಈಗ ತಿಳಿಯೋಣ ತಿರುಪತಿ ತಿಮ್ಮಪ್ಪನಿಗೂ ನಿತ್ಯವೂ ದೃಷ್ಟಿ ತೆಗಿತಾರೆ ಯಾಕೆ ಗೊತ್ತಾ ಲಕ್ಷಾಂತರ ಮಂದಿ ಪಕ್ಷವು ಆತನ ದರ್ಶನವನ್ನು ಒಂದು ದಿನದಲ್ಲಿ ಮಾಡುತ್ತಾರೆ ಆ ಭಕ್ತರೆಲ್ಲರ ದೃಷ್ಟಿ ಭಗವಂತನ ಮೇಲಿದ್ದಾಗ ಸಾಕ್ಷಾತ್ ದೇವರಿಗೂ ದೃಷ್ಟಿಯಾಗುತ್ತದೆ ಆದ್ದರಿಂದ ದೇವರಿಗೂ ಕೂಡ ನಿತ್ಯದೃಷ್ಟಿ ತೆಗೆಯಲಾಗುತ್ತದೆ.
ಆದರೆ ಮನುಷ್ಯನಿಗೆ ಮನುಷ್ಯ ಕೊಡುವ ದೃಷ್ಟಿಯ ಎಫೆಕ್ಟ್ ಬೇರೆ ರೀತಿಯೇ ಇರುತ್ತದೆ ಅದು ಕೆಟ್ಟ ದೃಷ್ಟಿ ಅಸೂಯೆಯ ದೃಷ್ಟಿ ಯಾಗಿರುತ್ತದೆ ಜೀವನದಲ್ಲಿ ಈ ಲಕ್ಷಣಗಳು ಕಾಣಿಸುತ್ತದೆ ಇದ್ದಕ್ಕಿದ್ದಂತೆ ಕೆಲಸಗಳು ಅರ್ಧಕ್ಕೆ ನಿಲ್ಲುವುದು ಹಣಕಾಸಿನ ಸಮಸ್ಯೆಗಳು ವಿಪರೀತವಾಗುವುದು ಸಲ್ಲದ ಕಾರಣಕ್ಕಾಗಿ ನಿತ್ಯ ಕಲಹಗಳನ್ನು ಮಾಡುವುದು ಮನೆಯಲ್ಲಿ ಒಂದರ ಹಿಂದೆ ಸಮಸ್ಯೆಗಳು ಉಂಟಾಗುವುದರ ಜೊತೆಗೆ ಅನಾರೋಗ್ಯಕ್ಕೆ ತುತ್ತಾಗುವುದು ಈ ರೀತಿ ಪದೇ ಪದೇ ಆಗುತ್ತಿದ್ದರೆ ನಿಮಗೆ ಶತ್ರುಗಳ ಕೆಟ್ಟ ಕಣ್ಣಿನ ದೃಷ್ಟಿ ಹೆಚ್ಚಾಗಿದೆ ಎಂದು ನೆನಪಿಟ್ಟುಕೊಳ್ಳಿ.
ಮಲಗಿದ್ದಾಗ ಮಧ್ಯರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗುವುದು ಭಯ ಭೀತಿಯಿಂದ ಎಚ್ಚರಗೊಳ್ಳುವುದು ಕೆಟ್ಟ ಕನಸುಗಳು ಹೆಚ್ಚಾಗಿ ಬಿಡುವುದು ಮನೆಯಲ್ಲಿದ್ದಾಗ ಕೆಲಸ ಮಾಡುವಾಗ ತಲೆನೋವು ಹೆಚ್ಚಾಗುವುದು ಮನೆಯಲ್ಲಿದ್ದ ವಸ್ತುಗಳು ಇದ್ದಕ್ಕಿದ್ದಂತೆ ಮಾಯವಾಗುವುದು ಮನೆಯಲ್ಲಿ ನಾ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟುಹೋಗುವುದು ನಿಮ್ಮ ಇಷ್ಟ ವಸ್ತುಗಳು ನಿಮ್ಮಿಂದ ಕೈ ಜಾರಿ ಪದೇ ಪದೇ ಬಿದ್ದು ಹೊಡೆದು ಹೋಗುವುದು ನಿಮ್ಮ ಮನೆಯಲ್ಲಿ ಬೆಳೆಸಿದ ಗಿಡಗಳು ನಿರಂತರವಾಗಿ ಒಣಗಿ ಹೋಗುವುದು ನಲ್ಲಿಯಲ್ಲಿ ನಿರಂತರ ನೀರು ಪೋಲಾಗುವುದು ಪದೇ ಪದೇ ಹಾಲು ಒಡೆದು ಹೋಗುವುದು.
ಎದುರಿನ ವ್ಯಕ್ತಿ ನಮ್ಮ ಮೇಲೆ ಕೆಟ್ಟ ಯೋಚನೆಯಿಂದ ದೃಷ್ಟಿ ಇಟ್ಟಿದ್ದಾನೆ ಅಂದರೆ ಕೇವಲ ನಮಗೆ ಮಾತ್ರವಲ್ಲ ನಾವು ಸಾಕಿದ ಪ್ರಾಣಿ ನಾವು ಇಷ್ಟಪಡುವ ವಸ್ತುಗಳು ನಾವು ಮಾಡುವ ವ್ಯಾಪಾರ ಉದ್ಯೋಗ ವ್ಯವಹಾರಕ್ಕು ಹಾನಿ ಉಂಟು ಮಾಡುತ್ತದೆ ಇಷ್ಟೆಲ್ಲಾ ಸಮಸ್ಯೆಗಳು ಮನುಷ್ಯನ ದೃಷ್ಟಿಯಿಂದಲೇ ಆಗುತ್ತದೆ ಎಂದರೆ ಅದಕ್ಕೆ ನಾನಾ ಪರಿಹಾರಗಳು ಕೂಡ ಇವೆ. ಅವುಗಳಲ್ಲಿ ಮುಖ್ಯವಾದದ್ದು ವಿಳೆದೆಳೆ ಪರಿಹಾರ ಮಂಗಳವಾರ ಶನಿವಾರಗಳಂದು ಆಂಜನೇಯ ಸ್ವಾಮಿಗೆ ಬಿಳೇದೆಲೆ ಮಾಲೆಯನ್ನು ಹಾಕಿ ಕೈಮುಗಿಯಬೇಕು ನಮಗೆ ಯಾರು ಕೆಟ್ಟ ಕಣ್ಣಿನ ದೃಷ್ಟಿ ಪ್ರಭಾವ ಬೀರುತ್ತಿದ್ದಾರೆ ಅದು ನಾಶವಾಗಬೇಕು ಶತ್ರುಗಳಿಂದ ಆಗುವ ಕಷ್ಟದಿಂದ ನಮ್ಮನ್ನು ತಪ್ಪಿಸಿ ಎಂದು ಭಕ್ತಿಯಿಂದ ಕೇಳಿಕೊಳ್ಳಬೇಕು ವಿಳ್ಳೇದೆಲೆ ಮನುಷ್ಯನ ದೃಷ್ಟಿ ಹಾಗೂ ಮಾಟ ಮಂತ್ರದ ದೃಷ್ಟಿಗಳಿಂದ ರಕ್ಷಿಸುವ ಶಕ್ತಿ ಇದೆ.
ವಿಳೆದೆಲೆ ಹಾರವನ್ನು ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ಶತ್ರುಗಳಿಂದ ಮುಕ್ತಿ ಅನಾರೋಗ್ಯದಿಂದ ಮುಕ್ತಿ ಆರ್ಥಿಕ ಸಂಕಷ್ಟಗಳಿಂದ ಖಚಿತವಾಗಿ ಮುಕ್ತಿ ದೊರೆಯುತ್ತದೆ ನಿಮ್ಮ ಮನೆಯಲ್ಲಿ ಯಾರಿಗಾದರೂ ದೃಷ್ಟಿ ಹೆಚ್ಚಾಗಿ ಇದೆ ಎಂದರೆ ಕಲ್ಲುಪ್ಪನ್ನು ತಲೆಯ ಸುತ್ತ ಮೂರು ಬಾರಿ ಎಡಬಾಗದಿಂದ ಮೂರು ಬಾರಿ ಬಲಭಾಗದಿಂದ ಪಾದದವರೆಗೆ ಮೂರು ಬಾರಿ ದೃಷ್ಟಿ ತೆಗೆದು ಸಿಂಕಿನಲ್ಲಿ ಹಾಕಿ ಅಥವಾ ಮೋರಿಯಲ್ಲಿ ಹಾಕಿ ಇದರಿಂದ ಆ ವ್ಯಕ್ತಿಗೆ ಇರುವ ದೃಷ್ಟಿ ದೋಷ ಸ್ವಲ್ಪ ಕಡಿಮೆಯಾಗುತ್ತದೆ.
ಇನ್ನು ಇಡೀ ಮನೆಗೆ ದೃಷ್ಟಿ ತೆಗೆಯಬೇಕು ಎಂದರೆ ಒಂದು ಚೊಂಬು ನೀರಿಗೆ ತುಳಸಿಯ ಎಲೆಗಳನ್ನು ಹಾಕಿ ಆ ನೀರನ್ನು ಮನೆಯ ಎಲ್ಲಾ ಜಾಗಗಳನ್ನು ವೀಳ್ಯದೆಲೆಯನ್ನು ಬಳಸಿ ಚೆಲ್ಲಬೇಕು ಮನೆಗೆ ಯಾರಾದರೂ ಬಂದು ಹೋಗಿದ್ದರೆ ಕೆಟ್ಟ ಕಣ್ಣಿನ ದೃಷ್ಟಿಯನ್ನು ಹಾಕಿದ್ದರೆ ಪದೇಪದೇ ಮನೆಯಲ್ಲಿ ಅನಾರೋಗ್ಯ ಉಂಟಾಗುತ್ತಿದ್ದರೆ ಗೆಲವು ದೂರವಾಗಿ ನೆಮ್ಮದಿಯ ವಾತಾವರಣ ಮನೆಯಲ್ಲಿ ನೆಲೆಸುತ್ತದೆ ಇನ್ನು ಚೆನ್ನಾಗಿ ಸುಡುವಂತಹ ಕೆಂಡಕ್ಕೆ ಸ್ವಲ್ಪ ಹಿಂಗನ್ನು ಉಡಿ ಮಾಡಿ ಸಾಮ್ರಾಣಿ ರೀತಿ ಹಾಕಬೇಕು ಹಿಂಗುವಿನ ಉಗೆಯನ್ನು ಮನೆಯ ಎಲ್ಲಾ ಜಾಗಗಳಿಗೂ ತೋರಿಸಬೇಕು ವಾತಾವರಣವನ್ನು ಶುದ್ಧಿ ಮಾಡುವ ವಿಶೇಷ ಗುಣವಿದೆ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಖಚಿತವಾಗಿ ದೂರವಾಗುತ್ತದೆ.
ಮನೆಯ ಮುಂಭಾಗದಲ್ಲಿ ಕುಂಬಳಕಾಯಿಯನ್ನು ಅಮಾವಾಸ್ಯೆ ದಿನ ಮರ್ಯಾದೆ ಕಟ್ಟಿ ಪ್ರತಿ ಅಮಾವಾಸ್ಯೆ ಒಮ್ಮೆ ಅಥವಾ ಕುಂಬಳಕಾಯಿ ಒಣಗಿದ ಮೇಲೆ ಬದಲಿಸಬೇಕು ಎಷ್ಟು ಜನ ನಿಂಬೆಹಣ್ಣು ಮೆಣಸಿನ ಕಾಯಿಯನ್ನು ಬಾಗಿಲಿಗೆ ನೇತು ಹಾಕುತ್ತಾರೆ ಅದು ಕೂಡ ಒಳ್ಳೆಯದು ರಸ್ತೆಯಲ್ಲಿ ಏನಾದರೂ ಮೊಟ್ಟೆ ನಿಂಬೆಹಣ್ಣು ತೆಂಗಿನ ಕಾಯಿ ಹೊಡೆದಿದ್ದರೆ ಅವುಗಳ ಬಗ್ಗೆ ಜಾಗೃತಿ ಇರಲಿ, ಯಾರಿಗೂ ದೃಷ್ಟಿ ತೆಗೆದು ಎಸೆದಿರುವ ವಸ್ತುಗಳು ನಾವು ಕೂಡ ದಾಟಿದಾಗ ಅದರ ಶಕ್ತಿ ನಮ್ಮ ಮೇಲು ಪ್ರಭಾವ ಬೀರುತ್ತದೆ ಆದ್ದರಿಂದ ಮಾನಸಿಕ ಕಿರಿಕಿರಿ, ಅನಾರೋಗ್ಯ ಉಂಟಾಗಬಹುದು ಮತ್ತಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.