ಮಗು ಹುಟ್ಟಿದ ನಂತರ ಮೇಘನಾ ರಾಜ್ ಎಂತ ನಿರ್ಧಾರ ತೆಗೆದುಕೊಂಡಿದ್ದಾರೆ ನೋಡಿ ಎಲ್ಲರೂ ಶಾಕ್.. - Karnataka's Best News Portal

ನಮಸ್ತೆ ಗೆಳೆಯರೇ ಈ ತಿಂಗಳು 22 ನೇ ತಾರೀಕಿನಂದು ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಕ್ಕೆ ಮರೆಯಲಾಗದ ದಿನ ನಿಜ ಕಳೆದು ಹೋದ ಸಂತೋಷ ಮತ್ತೆ ಮನೆಗೆ ಮರಳಿದ ದಿನವೆನ್ನಬಹುದು ಚಿರು ತಾನು ಹೋಗಿ ತನ್ನ ಕಂದನ ಮೂಲಕ ಮತ್ತೆ ಕುಟುಂಬಕ್ಕೆ ಮರಳಿ ಬಂದ ಎಂದರೆ ತಪ್ಪಾಗಲಾರದು ಮಗುವಿಗೆ ಜನ್ಮ‌ಕೊಟ್ಟ ಬಳಿಕ ಮೇಘನಾ ಆಲೋಚನೆ ಅಥವಾ ನಿರ್ಧಾರ ಒಂದನ್ನು ಮಾಡಿದ್ದಾರೆ ನಿಜ ಸ್ನೇಹಿತರೆ ಜೂನ್ 7 ರಂದು ಚಿರು ಇಲ್ಲವಾದ ಬಳಿಕ ಗರ್ಭಿಣಿಯಾಗಿದ್ದ ಮೇಘನಾ ಬಹಳ ಗಟ್ಟಿ ಮನಸ್ಸು ಮಾಡಿಕೊಂಡು ತನ್ನ ತಂದೆ ತಾಯಿಗೂ ಸಹ ಅವರೇ ಧೈರ್ಯ ತುಂಬಿ ಒಡಲಲ್ಲಿನ ಮಗುವಿನ ಹಾರೈಕೆಯಲ್ಲಿ ತೊಡಗಿದ್ದರು. ನಂತರ 22 ರಂದು ಪುಟ್ಟ ಕಂದನಿಗೆ ಜನ್ಮ ನೀಡಿ ಮಗುವಿನಲ್ಲಿಯೇ ಚಿರುವನ್ನು ಕಾಣುತ್ತಿದ್ದಾರೆ. ವಿಜಯದಶಮಿಯ ದಿನ ಗೋಧೂಳಿ‌ ಲಗ್ನದಲ್ಲಿ ಮೇಘನಾ ಹಾಗೂ‌ ಮಗುವನ್ನು ಸುಂದರ್ ರಾಜ್ ಅವರು ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ. ಗೋಧೂಳಿ ಲಗ್ನದಲ್ಲಿ ಕಾಮಧೇನುಗಳು ಮರಳಿ ಗೂಡು ಸೇರುವಂತೆ ಮೇಘನಾ ಹಾಗೂ ಮಗುವಿನ ರೂಪದಲ್ಲಿನ ಚಿರು ಮರಳಿ ಮನೆಗೆ ಬಂದರೆಂದು ಕುಟುಂಬಸ್ಥರು ಸಂತೋಷ ಪಟ್ಟರು. ಮೇಘನಾ ತಮ್ಮೆಲ್ಲಾ ನೋವು ಹಾಗೂ ಸಂತೋಷ ಹಂಚಿಕೊಳ್ಳುವ ಸಲುವಾಗಿ ಮಾದ್ಯಮದ ಮುಂದೆ ಬರುವ ನಿರ್ಧಾರ ಮಾಡಿದ್ದಾರೆ ಚಿರು ಇಲ್ಲವಾದ ಬಳಿಕ ಎಂದೂ ಸಹ ಮಾದ್ಯಮದ ಮುಂದೆ ಬಾರದ ಮೇಘನಾ ಇದೀಗ ತಮ್ಮ ಎಲ್ಲಾ ಮನದ ಮಾತು ಹಂಚಿಕೊಳ್ಳಲು ಈ ರೀತಿಯ ನಿರ್ಧಾರ ಮಾಡಿದ್ದಾರೆ. ಅಂದು ಚಿರು ಹುಟ್ಟುಹಬ್ಬದ ದಿನ ಫಾರ್ಮ್ ಹೌಸ್ ಗೆ ತೆರಳುತ್ತಿದ್ದ ಮೇಘಾನಾರ ಮುಂದೆ ಮಾದ್ಯಮದವರು ಬಂದಾಗ ಚಿರು ಯಾವಾಗ ಬರುವ ಪ್ಲಾನ್ ಮಾಡಿದ್ದಾರೋ ಆಗಲೇ ಬರಲಿ ಎಂದಿದ್ದರು. ಅದನ್ನು ಬಿಟ್ಟು ಬೇರೇನೂ ಹೇಳಿರಲಿಲ್ಲ ಯಾವುದೇ ನೋವು ಹಂಚಿಕೊಂಡಿರಲಿಲ್ಲ ಸಾಮಾಜಿಕ ಜಾಲತಾಣದಲ್ಲಿ ಹಿಂದೊಮ್ಮೆ ಒಂದು ದಿನ ನಿಮ್ಮ ಮುಂದೆ ಬರುವೆ ಎಲ್ಲವನ್ನು ಹೇಳಿಕೊಳ್ಳುವೆ ಎಂದಿದ್ದರು ಇವಾಗ ಇವಾಗ ಆ ದಿನ ಬಂದಿದೆ.


1 ನವೆಂಬರ್ ಮಾದ್ಯಮದ ಮುಂದೆ ಬರಲಿರುವ ಮೇಘನಾ ಅವರು ತಮ್ಮ ಎಲ್ಲಾ ನೋವು ಹಾಗೂ ಪುಟ್ಟ ಕಂದನ ಸಂತೋಷವನ್ನಿ ಹಂಚಿಕೊಳ್ಳಲಿದ್ದಾರೆ. ಚಿರು ಇಲ್ಲವಾದ ದಿನದಿಂದಲೂ ನಾಡಿನ ಲಕ್ಷಾಂತರ ಜನ ಮೇಘನಾರಿಗಾಗಿ ಮಗುವಿಗಾಗಿ ಬೇಡಿಕೆ ಇಟ್ಟರು ಭಗವಂತನ ಬಳಿಯಲ್ಲಿ ಇದೀಗ ಎಲ್ಲಾ ಪ್ರಾರ್ಥನೆಯ ಫಲದಿಂದಾಗಿ ಚಿರು ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ ಎನ್ನುವ ನಂಬಿಕೆಯಲ್ಲಿರುವ ಕುಟುಂಬ ಅದಾಗಲೇ ನಾಡಿನ ಜನರಿಗೆ ಮನದಾಳದಿಂದ ಧನ್ಯವಾದಗಳನ್ನ ವ್ಯಕ್ತಪಡಿಸಿದ್ದಾರೆ. ವಿಜಯದಶಮಿಯ ದಿನ ಮಗುವನ್ನು ಮನೆಗೆ ಕರೆದುಕೊಂಡು ಬಂದ ದಿನವೇ ಮೇಘನಾ ಮಾದ್ಯಮದ ಮುಂದೆ ಬರುವವರಿದ್ದರು ಆದರೆ ಮನೆಯಲ್ಲಿ ಸೂತಕವಿದ್ದ ಕಾರಣ ಹನ್ನೊಂದು ದಿನ ಮೇಘನಾ ಹೊರ ಬರುವ ಹಾಗಿರಲಿಲ್ಲ ಅದೇ ಕಾರಣಕ್ಕೆ ಇನ್ನು 2 ದಿನಗಳ ನಂತರ ನವೆಂಬರ್ 1 ರಂದು ಮೇಘನಾ ಕೂಡ ಮಾತನಾಡಲಿದ್ದಾರೆ ಎಂದು ತಂದೆ ಸುಂದರ್ ರಾಜ್ ಅವರು ತಿಳಿಸಿದ್ದಾರೆ ಜೊತೆಗೆ ಮಗುವಿಗೆ ಮೂರು ತಿಂಗಳ ಬಳಿಕ ನಾಮಕರಣ ಮಾಡುವ ನಿರ್ಧಾರ ಮಾಡಿದ್ದು ಮಗುವಿಗೆ ಯಾವ ಹೆಸರಿಡಬೇಕು ಎಂಬುದನ್ನು‌ ಮೇಘನಾ ಅವರೇ ಖುದ್ದು ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ
ಮಗುವಿಗೆ ಯಾವುದೇ ಹೆಸರನ್ನಿಡಲಿ ನಾನು ಮಾತ್ರ ಅವನನ್ನು ಚಿಂಟು ಎಂದೇ ಕರೆಯುವೆ ನಮ್ಮ ಚಿಂತೆಯನ್ನೆಲ್ಲಾ ದೂರ ಮಾಡಲು ಬಂದಿರುವವನು ಚಿಂಟು ಎಂದರೆ ಚಿರು ಎನ್ನುವಂತೆಯೇ ಅನಿಸುತ್ತದೆ ಅದೇ ಕಾರಣಕ್ಕೆ ನಾನು ಮಗುವನ್ನು ಚಿಂಟೂ ಎನ್ನುವೆ ಎಂದು ಮೇಘನಾ ರಾಜ್ ಅವರ ತಂದೆ ಮಾದ್ಯಮದ ಮುಂದೆ ಮಾತನಾಡುವ ಸಮಯದಲ್ಲಿ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೇ ದೇವರು ನನಗೆ ಸುಂದರವಾದ ಮಗಳನ್ನು ಕೊಟ್ಟ ಆದರೆ ಅವಳಿಗೆ ಸುಂದರವಾದ ಜೀವನ ನೀಡಲಿಲ್ಲ ಅವಳನ್ನು ನೋಡುವಾಗ ಕಣ್ಣೀರು ತಾನಾಗಿಯೇ ಹೊರ ಬಂದು ಬಿಡುತ್ತದೆ ಎಂದು ನೋವು ಹಂಚಿಕೊಂಡರು.
ಆ ಮಗುವಿಗೆ ಹಾಗೂ ಮೇಘನಾರಿಗೆ ಆ ಭಗವಂತ ಶಕ್ತಿ ನೀಡಲಿ ಆ ಮಗುವನ್ನು ಬೆಳೆಸಲು ಕೆಲ ದಿನಗಳು ನನಗೆ ಆಯಸ್ಸು ನೀಡಲಿ ಎಂದಷ್ಟೇ ನಾನು ಪ್ರಾರ್ಥಿಸುವೆ ಎಂದಿದ್ದಾರೆ. ಇನ್ನು ಮಗು ರಾಜಯೋಗದಲ್ಲಿ ಹುಟ್ಟಿದ್ದು ನಾಮಕರಣಕ್ಕಾಗಿ ಸರ್ಜಾ ಕುಟುಂಬವೂ ಸಹ ತಯಾರಿ ಮಾಡಿಕೊಳ್ಳುತ್ತಿದೆ ಎಲ್ಲಾ ಕಾರ್ಯಕ್ರಮಗಳೂ ಸಹ ಸಂಪ್ರದಾಯಬದ್ಧವಾಗಿ ನೆರವೇರಲಿದೆ ಎನ್ನಲಾಗಿದೆ‌ ಒಟ್ಟಿನಲ್ಲಿ ಎರಡೂ ಕುಟುಂಬದ ನೋವು ಮರೆಯಾಗಿ ಸಂತೋಷದ ದಿನಗಳು ಆ ಕಂದನ ಮೂಲಕ ಮರುಕಳಿಸುವಂತಾಗಲಿ‌. ಆಂಜನೇಯ ಸ್ವಾಮಿ ಸಂಪೂರ್ಣವಾದ ಅನುಗ್ರಹ ಮಾಡಲಿ ಅವರ ಕುಟುಂಬ ಚೆನ್ನಾಗಿರಲಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಸ್ನೇಹಿತರೆ.

By admin

Leave a Reply

Your email address will not be published. Required fields are marked *