ನೀವು ಬೆಳಗಿನ ತಿಂಡಿಗೆ ಇವುಗಳನ್ನು ತಿನ್ನುತ್ತಿಲ್ಲ ತಾನೇ ನೋಡಿದ್ರೆ ಬೆಚ್ಚಿಬೀಳ್ತಿರಾ.. - Karnataka's Best News Portal

ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರವೇ ಮುಖ್ಯ ಅದರಲ್ಲೂ ಬೆಳಗಿನ ಉಪಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದರೆ ತಪ್ಪಾಗಲಾರದು ಏಕೆಂದರೆ ಮೊದಲ ಉಪಹಾರ ಆರೋಗ್ಯಕರವಾಗಿದ್ದರೆ ಮಾತ್ರ ಇಡೀ ದಿನ ಚೆನ್ನಾಗಿರುತ್ತದೆ ಆದರೆ ಬೆಳಗಿನ ಉಪಹಾರ ಸೇವನೆ ವೇಳೆ ಅನೇಕ ವಿಷಯಗಳತ್ತ ಗಮನ ಹರಿಸಬೇಕು ಮುಖ್ಯವಾಗಿ ಏನನ್ನು ತಿನ್ನಬೇಕು ಹಾಗೂ ಏನನ್ನು ತಿನ್ನಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಹಾಗಿದ್ದರೆ ಬೆಳಗಿನ ಉಪಹಾರದಲ್ಲಿ ಯಾವ ಆಹಾರವನ್ನು ಸೇವಿಸಬಾರದು ಎಂಬುದರ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ. ಬ್ರೆಡ್ ಅಂಡ್ ಜಾಮ್ ಬೆಳಗಿನ ಉಪಹಾರಕ್ಕೆ ಬ್ರೆಡ್ ಅಂಡ್ ಜಾಮ್ ಸೇವಿಸುತ್ತಾರೆ ಅದರಲ್ಲೂ ಮಕ್ಕಳಿಗೂ ಕೂಡ ನೀಡುತ್ತಾರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಯಾಕೆಂದರೆ ಜಾಮ್ ಗೆ ಬೇಡದ ಹಾನಿಕಾರಕ ಬಣ್ಣ ಹಾಗೂ ರಾಸಾಯನಿಕಗಳನ್ನು ಬಳಸುತ್ತಾರೆ ಅಷ್ಟೇ ಅಲ್ಲದೆ ಸಕ್ಕರೆಯನ್ನು ಉಪಯೋಗಿಸುತ್ತಾರೆ. ಇದರ ಸೇವನೆ ಬೆಳಿಗ್ಗೆ ಮಾಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಮೈದಾದಿಂದ ತಯಾರಿಸಿದ ಬ್ರೆಡ್ ಅನ್ನು ಬೆಳಗಿನ ಉಪಹಾರಕ್ಕೆ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ ಇದರಿಂದ ದೇಹಕ್ಕೆ ಯಾವುದೇ ರೀತಿಯ ಲಾಭ ಇಲ್ಲ ಬದಲಾಗಿ ನಿಶಕ್ತಿ ಹೆಚ್ಚಾಗುತ್ತದೆ. ಮೈದಾದಿಂದ ತಯಾರಿಸಿದ ಆಹಾರಗಳಾದ ಪೂರಿ, ಪರೋಟ ಮೊದಲಾದವುಗಳಿಂದ ದೂರ ಇರುವುದು ಉತ್ತಮ. ಇದು ಆರೋಗ್ಯಕ್ಕೆ ಮಾರಕ ಇದರ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು, ಸಕ್ಕರೆ ಕಾಯಿಲೆ ಮೊದಲಾದವುಗಳು ಎದುರಾಗುತ್ತದೆ ಹಾಗೂ ಮೈದಾದಲ್ಲಿ ದೇಹಕ್ಕೆ ಬೇಕಾದ ಯಾವುದೇ ಪೋಷಕಂಶಗಳು ಇಲ್ಲದ್ದರಿಂದ ಮೈದಾದಿಂದ ತಯಾರಿಸಿದ ಆಹಾರದಿಂದ ಬೆಳಗ್ಗಿನ ಸಮಯ ದೂರ ಇರಿ.

By admin

Leave a Reply

Your email address will not be published. Required fields are marked *